ಕರ್ನಾಟಕದಲ್ಲಿ ಮಾರ್ಚ್ 31 ರಿಂದ ಈ ಜಿಲ್ಲೆಗಳಲ್ಲಿ ಮಳೆ; ಯಾವ ಯಾವ ಜಿಲ್ಲೆಗಳೂ?

Karnataka Rain

ಬರಗಾಲದಿಂದ ಜನರು ತತ್ತರಿಸಿ ಹೋಗುತ್ತಾ ಇದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರು ಸಿಗದ ಸ್ಥಿತಿ ಎದುರಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆಯ ಮಾಡಿದರು ಸಹ. ಅದು ಏಷ್ಟು ದಿನಗಳ ಕಾಲ ನೀರು ಸಿಗುತ್ತದೆ ಎಂಬ ಪ್ರಶ್ನೆ ಮೂಡುತ್ತದೆ. ಹೀಗೆ ಬರಗಾಲ ಮುಂದುವರೆದರೆ ಕುಡಿಯುವ ನೀರು ಸಿಗದೆ ಪ್ರಾಣಿಗಳು ಮನುಷ್ಯರು ಪ್ರಾಣ ಕಳೆದುಕೊಳ್ಳಬಹುದು. ಅಂತಹ ಸ್ಥಿತಿ ನಿರ್ಮಾಣ ಆಗುವ ಸಾಧ್ಯತೆ ಇದೆ ಎಂಬ ಭಯದಲ್ಲಿ ಇರುವ ಜನತೆಗೆ ಈಗ ಹವಾಮಾನ ಇಲಾಖೆ ಶುಭ ಸುದ್ದಿ ನೀಡಿದೆ. ಹವಾಮಾನ ಇಲಾಖೆಯು ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರುವ ಮಾರ್ಚ್ 31 ರಿಂದ ಮಳೆ ಆಗುವ ಸೂಚನೆಯನ್ನು ನೀಡಿದೆ.

WhatsApp Group Join Now
Telegram Group Join Now

ಯಾವ ಜಿಲ್ಲೆಗಳಲ್ಲಿ ಏಷ್ಟು ದಿನ ಮೇಲೆ ಬೀಳುವ ಸಾಧ್ಯತೆ ಇದೆ.?: ಹವಾಮಾನ ಇಲಾಖೆಯ ವರದಿಯ ಪ್ರಕಾರ ಇದೆ ಬರುವ ಮಾರ್ಚ್ 31 ರಿಂದ ಸತತವಾಗಿ ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯು ರಾಜ್ಯದ ಕೆಲವು ಜಿಲ್ಲೆಗಳ ಹೆಸರನು ತಿಳಿಸಿದ್ದು, ಮೈಸೂರು, ದಕ್ಷಿಣ ಕನ್ನಡ, ಹಾಸನ, ಉಡುಪಿ, ಚಿಕ್ಕಮಗಳೂರು, ಕೋಲಾರ, ಕೊಡಗು, ಮಂಡ್ಯ, ಜಿಲ್ಲೆಗಳಲ್ಲಿ ಮಳೆ ಆಗಲಿದೆ ಎಂಬ ಮಾಹಿತಿಯನ್ನು ನೀಡಿದೆ.

ಈ ರಾಜ್ಯಗಳಲ್ಲಿ ಒಣ ಹವೆ ಮುಂದುವರೆಯಲಿದೆ :-

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಬೀಳುತ್ತದೆ ಎಂದು ಸಂತಸ ಪಟ್ಟರೆ ಕೆಲವು ಜಿಲ್ಲೆಗಳಲ್ಲಿ ಈಗ ಇರುವಂತೆ ಒಣ ಹವೆ ಮುಂದುವರೆಯಲಿದೆ. ವಣ ಹವೆ ಇರುವ ಜಿಲ್ಲೆಗಳ ಹೆಸರು ಹೀಗಿದೆ, ಯಾದಗಿರಿ, ಚಿತ್ರದುರ್ಗ, ಉತ್ತರ ಕನ್ನಡ, ಧಾರವಾಡ, ರಾಮನಗರ, ಬಾಗಲಕೋಟೆ, ಬೆಂಗಳೂರು ನಗರ, ಬೆಳಗಾವಿ, ಬೀದರ್, ಗದಗ, ಹಾವೇರಿ, ತುಮಕೂರು, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯನಗರ, ವಿಜಯಪುರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದ ಪ್ರಮುಖ ನಗರಗಳಲ್ಲಿ ಉಷ್ಣಾಂಶ ದಾಖಲೆ:

  • ಬಾಗಲಕೋಟೆ: ಗರಿಷ್ಠ ಉಷ್ಣಾಂಶ 39.9 ಡಿಗ್ರಿ ಸೆಲ್ಸಿಯಸ್ (ಅತ್ಯಂತ ಗರಿಷ್ಠ).
  • ಚಾಮರಾಜನಗರ: ಗರಿಷ್ಠ ಉಷ್ಣಾಂಶ 18.0 ಡಿಗ್ರಿ ಸೆಲ್ಸಿಯಸ್ (ಅತ್ಯಂತ ಕನಿಷ್ಠ).
  • ಬೆಂಗಳೂರು ಎಚ್‌ಎಎಲ್: ಗರಿಷ್ಠ 34.9 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20.3 ಡಿಗ್ರಿ ಸೆಲ್ಸಿಯಸ್.
  • ಬೆಂಗಳೂರು ನಗರ: ಗರಿಷ್ಠ 35.2 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21.0 ಡಿಗ್ರಿ ಸೆಲ್ಸಿಯಸ್.
  • ಕೆಐಎಎಲ್: ಗರಿಷ್ಠ 35.1 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20.4 ಡಿಗ್ರಿ ಸೆಲ್ಸಿಯಸ್
  • ಜಿಕೆವಿ: ಗರಿಷ್ಠ 35.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21.2 ಡಿಗ್ರಿ ಸೆಲ್ಸಿಯಸ್
  • ಹೊನ್ನಾವರ: ಗರಿಷ್ಠ 33.7 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23.6 ಡಿಗ್ರಿ ಸೆಲ್ಸಿಯಸ್
  • ಕಾರವಾರ: ಗರಿಷ್ಠ 35.8 ಡಿಗ್ರಿ ಸೆಲ್ಸಿಯಸ್, ಕನಿಷ್ಠ 25.6 ಡಿಗ್ರಿ ಸೆಲ್ಸಿಯಸ್
  • ಶಿರಾಲಿ: ಗರಿಷ್ಠ 35.3 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21.4 ಡಿಗ್ರಿ ಸೆಲ್ಸಿಯಸ್
  • ಬೆಳಗಾವಿ: ಗರಿಷ್ಠ 36.0 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.0 ಡಿಗ್ರಿ ಸೆಲ್ಸಿಯಸ್
  • ವಿಜಯಪುರ: ಗರಿಷ್ಠ 38.0 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21.5 ಡಿಗ್ರಿ ಸೆಲ್ಸಿಯಸ್
  • ಗದಗ: ಗರಿಷ್ಠ ಉಷ್ಣಾಂಶ 38.5 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 21.6 ಡಿಗ್ರಿ ಸೆಲ್ಸಿಯಸ್
  • ಹಾವೇರಿ: ಗರಿಷ್ಠ ಉಷ್ಣಾಂಶ 37.0 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 21.4 ಡಿಗ್ರಿ ಸೆಲ್ಸಿಯಸ್.
  • ಚಿತ್ರದುರ್ಗ:ಗರಿಷ್ಠ ಉಷ್ಣಾಂಶ 37.0 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 22.6 ಡಿಗ್ರಿ ಸೆಲ್ಸಿಯಸ್
  • ದಾವಣಗೆರೆ: ಗರಿಷ್ಠ ಉಷ್ಣಾಂಶ 38.5 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 22.5 ಡಿಗ್ರಿ ಸೆಲ್ಸಿಯಸ್

ಇದನ್ನೂ ಓದಿ: ಕೇವಲ ಒಂದೇ ಒಂದು ಷರತ್ತಿನೊಂದಿಗೆ ಮಹಿಳೆಯರಿಗೆ 5 ಲಕ್ಷ ರೂ. ಸಾಲ ಸೌಲಭ್ಯ, ಇದಕ್ಕೆ ನೀವೇನು ಗ್ಯಾರಂಟಿ ಕೊಡಬೇಕಾಗಿಲ್ಲ!