ರಾಜ್ಯದಲ್ಲಿ ಈ ವರ್ಷ ತೀರ್ವವಾಗಿ ಬರಗಾಲ ಎದುರಾಗಿದೆ. ಮಲೆನಾಡಿನಲ್ಲಿ ಸಹ ಈ ಬಾರಿ ನೀರಿನ ಕೊರತೆ ಉಂಟಾಗಿದ್ದು ಮಳೆ ಬರಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡುತ್ತಿದ್ದಾರೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದ ಹಲವೆಡೆ ಮಳೆ ಬೀಳಲಿದೆ.
ಹಲವು ದಿನಗಳಿಂದ ರಾಜ್ಯದ ಕೆಲವೆಡೆ ಮಳೆ ಆಗಿದೆ:- ಕಳೆದ ಒಂದು ವಾರದ ಈಚೆಗೆ ರಾಜ್ಯದ ರಾಜಧಾನಿ ಬೆಂಗಳೂರು ಹಾಗು ಮೈಸೂರು, ದಕ್ಷಿಣ ಒಳನಾಡಿನಲ್ಲಿ ಮಳೆ ಆಗಿದೆ. ಮಳೆ ಆಗಿರುವ ಕಡೆಗಳಲ್ಲಿ ನೀರಿನ ಪ್ರಮಾಣ ಕೊಂಚ ಜಾಸ್ತಿ ಆಗಿದ್ದು ಜನರಿಗೆ ಸಂತಸ ಆಗಿದೆ.
ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ?: ಮುಂದಿನ ಮೂರು ದಿನಗಳಲ್ಲಿ ಕೊಪ್ಪಳ, ರಾಯಚೂರು, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಯಾದಗಿರಿ, ವಿಜಯಪುರ, ಬೀದರ್, ಕಲಬುರ್ಗಿ, ಗದಗ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು , ಚಾಮರಾಜ ನಗರ , ಕೊಡಗು , ಚಿತ್ರದುರ್ಗ , ಹಾಸನ , ಮಂಡ್ಯ , ಮೈಸೂರು , ಕೋಲಾರ , ಶಿವಮೊಗ್ಗ , ರಾಮನಗರ , ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮಳೆ ಆಗಲಿದೆ.
ರಾಜ್ಯದಲ್ಲಿ ಏರಿಕೆ ಆಗುತ್ತಿರುವ ಉಷ್ಣಾಂಶ :- ಕರ್ನಾಟಕದಾದ್ಯಂತ ದಿನೇ ದಿನೇ ಗರಿಷ್ಠ ಮಟ್ಟದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದ್ದು ಇದು ಜನರು ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಜೊತೆಗೆ ರೈತರು ಬೆಳೆಗಳು ಒಣಗುತ್ತಿವೆಭವು ನೀರಿನ ಕೊರತೆ ಹೆಚ್ಚಾಗುತ್ತಿದ್ದು, ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇಲ್ಲಿಯವರೆಗೆ 40 ಡಿಗ್ರಿ ಉಷ್ಣಾಂಶ ಏರಿಕೆ ಆಗಿದ್ದು ಹವಾಮಾನ ಇಲಾಖೆಯು ಹಲವಾರು ಸಲಹೆಗಳನ್ನು ನೀಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಡಿಪ್ಲೊಮಾ ಓದಿದವರಿಗೆ ಕೆಪಿಸಿಸಿ ಯಲ್ಲಿ ಉದ್ಯೋಗ ಖಾಲಿ ಇದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆ ಕೋರಿದೆ.
ಉಷ್ಣಾಂಶ ಏರಿಕೆ ಇರುವುದರಿಂದ ಜನರು ಕೈಗೊಳ್ಳಬೇಕಾದ ಕ್ರಮಗಳು :-
1) ಆರೋಗ್ಯ ರಕ್ಷಣೆಗೆ :- ಸಾಕಷ್ಟು ನೀರು ಕುಡಿಯಬೇಕು. ಸುಡು ಬೇಸಿಗೆಯಲ್ಲಿ ತಂಪಾದ ಮತ್ತು ಗಾಳಿಯಾಡುವ ಬಟ್ಟೆಗಳನ್ನು ಧರಿಸಬೇಕು. ಈ ಸಮಯದಲ್ಲಿ ಹೆಚ್ಚು ವ್ಯಾಯಾಮ ಮಾಡುವುದು ಒಳ್ಳೆಯದು ಅಲ್ಲ. ವಿಶೇಷವಾಗಿ ಮಧ್ಯಾಹ್ನದ ಸಮಯದಲ್ಲಿ ನೀವು ಯಾವುದೇ ಕಾರಣಕ್ಕೂ ವ್ಯಾಯಾಮ ಮಾಡಲೇ ಬಾರದು. ವಯಸ್ಸಾದವರು, ಮಕ್ಕಳು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ. ಯಾವುದೇ ಅನಾರೋಗ್ಯದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಸಹಾಯ ಪಡೆಯಿರಿ.
2) ಜಲ ಸಂರಕ್ಷಣೆ: ದಿನನಿತ್ಯ ಸ್ನಾನ ಮಾಡುವಾಗ ಮತ್ತು ಹಲ್ಲುಜ್ಜುವಾಗ ನೀರನ್ನು ಹೆಚ್ಚಾಗಿ ಉಳಿಸಿ. ತೋಟಕ್ಕೆ ನೀರು ಹಾಕುವಾಗ ಸ್ಪ್ರಿಂಕ್ಲರ್ ಬದಲಿಗೆ ಡ್ರಿಪ್ ಇರಿಗೇಷನ್ ವ್ಯವಸ್ಥೆ ಬಳಸಿ. ಕಾರು ತೊಳೆಯಲು ಮತ್ತು ಮನೆಗೆ ಉಪಯೋಗಿಸಲು ಬಕೆಟ್ ನೀರನ್ನು ಬಳಸಿ. ಆಗಾಗೆ ಬೀಳುವ ಮಳೆನೀರನ್ನು ಸಂಗ್ರಹಿಸಿ ಬಳಸಿ. ಅನಗತ್ಯವಾಗಿ ಎಲ್ಲಿಯೂ ನೀರು ಬಳಸಬೇಡಿ.
3) ಮನೆಯಿಂದ ಹೊರಗೆ ಹೋಗುವಾಗ :- ಆದಷ್ಟು ಮನೆಯಿಂದ ಹೊರಗೆ ಹೋಗುವುದುನ್ನು ತಪ್ಪಿಸಿಕೊಳ್ಳಿ. ಆದಾಗ್ಯೂ ನೀವು ಹೊರಗೆ ಹೋಗಬೇಕು ಎಂದರೆ ಸನ್ ಗ್ಲಾಸ್ ಮತ್ತು ಟೊಪ್ಪಿ ಧರಿಸಿ . ಕಪ್ಪು ಬಣ್ಣದ ಬಟ್ಟೆಯನ್ನು ಹಾಕಿಕೊಳ್ಳಬೇಡಿ. ಹೊರಗಡೆ ಹೋಗುವಾಗ ಛತ್ರಿ ತೆಗೆದುಕೊಂಡು ಹೋಗಿ. ನೀರಿನ ಬಾಟಲ್ ನಿಮ್ಮ ಜೊತೆಯಲ್ಲಿ ಇರಿಸಿಕೊಳ್ಳಿ. ಹೆಚ್ಚು ತಂಪು ಪಾನೀಯ (cold drinks) ಕುಡಿಯುವುದನ್ನು ತಪ್ಪಿಸಿ. ಹಣ್ಣಿನ ಪಾನಕ ಅಥವಾ ಜ್ಯೂಸ್ ಕುಡಿಯಿರಿ . ಹೆಚ್ಚಿನ ಸಮಯ ಬಿಸಿಲಿನಲ್ಲಿ ನಿಲ್ಲಬೇಡಿ. ಸನ್ ಸ್ಕ್ರೀನ್ ಹಚ್ಚಿಕೊಳ್ಳಿ. ಆದಷ್ಟು ಒಬ್ಬರೇ ಹೊರಗೆ ಹೋಗುವುದನ್ನು ತಪ್ಪಿಸಿ ನಿಮ್ಮ ಜೊತೆಗೆ ನಿಮ್ಮ ಮನೆಯ ಅಥವಾ ನಿಮ್ಮ ಸ್ನೇಹಿತರನ್ನು ಕರೆದುಕೊಂಡು ಹೋಗಿ.
ಇದನ್ನೂ ಓದಿ: ಕರ್ನಾಟಕದಲ್ಲಿ 1000 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ವಿಸ್ತರಣೆ ಆಗಿದೆ.