ರೈತ ವಿದ್ಯಾನಿಧಿ ವೇತನಕ್ಕೆ ಅರ್ಜಿ ಸಲ್ಲಿಸುವಾಗ ನೀಡಬೇಕಾದ ದಾಖಲೆಗಳ ಬಗ್ಗೆ ಪೂರ್ಣ ಮಾಹಿತಿ

Raita Vidya Nidhi Scholarship Documents

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಹಲವು ವಿದ್ಯಾರ್ಥಿ ಸ್ಕಾಲರ್ಶಿಪ್ ಗಳನ್ನ ನೀಡಲಾಗುತ್ತದೆ. ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರಕಾರ ದ ಜೊತೆ ಹಲವು ಖಾಸಗಿ ಸಂಸ್ಥೆಗಳು ಸಹ ಸ್ಕಾಲರ್ಶಿಪ್ ನೀಡುತ್ತದೆ. ಕರ್ನಾಟಕ ಸರ್ಕಾರವು 2023-24ನೇ ಸಾಲಿನ ಮುಖ್ಯಮಂತ್ರಿ ರೈತ ವಿದ್ಯಾನಿಧಿ(Raita Vidya Nidhi Scholarship) ಮತ್ತು ಭೂರಹಿತ ಕೃಷಿ ಕಾರ್ಮಿಕರ ವಿದ್ಯಾನಿಧಿಯ ಬಗ್ಗೆ ಮಾರ್ಗಸೂಚಿ ನೀಡಿದೆ.

WhatsApp Group Join Now
Telegram Group Join Now

ರೈತ ನಿಧಿ ಅರ್ಜಿ ಸಲ್ಲಿಸಲು ವಿಧಿಸಿರುವ ಷರತ್ತು ಏನೇನು?

  • ಸಾಮಾನ್ಯ ವರ್ಗದ ಪೋಷಕರ ಒಟ್ಟು ವಾರ್ಷಿಕ ಆದಾಯ 2.5 ಲಕ್ಷ ಮೀರಿರಬಾರದು.
  • ಫೆಬ್ರುವರಿ 29 ರ ಒಳಗೆ ವೆಬ್ಸೈಟ್ ಗೆ ಆದಾಯ ಪ್ರಮಾಣ ಪತ್ರವನ್ನು ನೀಡಬೇಕು.
  • 2023-24 ನೇ ಸಾಲಿನಲ್ಲಿ ಸರ್ಕಾರದ ಬೇರೆ ಬೇರೆ ಇಲಾಖೆಗಳಿಂದ ಈಗಾಗಲೇ ವಿದ್ಯಾರ್ಥಿ ವೇತನ ಪಡೆದಿರುವ ವಿದ್ಯಾರ್ಥಿಗಳು ಈ ಯೋಜನೆ ಅರ್ಜಿ ಸಲ್ಲಿಸುವಂತಿಲ್ಲ.
  • ಅರ್ಜಿ ಸಲ್ಲಿಸಲು ಕೇವಲ ಕರ್ನಾಟಕದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇದೆ. ಅರ್ಜಿ ಸಲ್ಲಿಸುವಾಗ ವಿಳಾಸ ದಾಖಲೆಯನ್ನು ನೀಡಬೇಕು.
  • ರೈತ ಕುಟುಂಬದ ಮಕ್ಕಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ.
  • ಹತ್ತನೇ ತರಗತಿ ಬಳಿಕ ಉನ್ನತ ಶಿಕ್ಷಣ ಪಡೆಯುವ ರೈತ ಮಕ್ಕಳು ಅರ್ಜಿ ಸಲ್ಲಿಸಬಹುದು.

ರೈತ ವಿದ್ಯಾರ್ಥಿ ವೇತನಕ್ಕೆ ನೀಡಬೇಕಾದ ದಾಖಲೆಗಳು :-

  • ಆಧಾರ್ ಕಾರ್ಡ್
  • ವಿಳಾಸದ ಮಾಹಿತಿ ಹೊಂದಿರುವ ಯಾವುದೇ ಗುರುತಿನ ಚೀಟಿ ( ಪಡಿತರ ಚೀಟಿ, ಎಲೆಕ್ಷನ್ ಕಾರ್ಡ್)
  • ಪಾಸ್ಪೋರ್ಟ್ ಅಳತೆಯ ಫೋಟೋ
  • ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
  • ಬ್ಯಾಂಕ್ ಪಾಸ್ ಬುಕ್ ನ ಜೆರಾಕ್ಸ್
  • ಪಾಲಕರ ರೈತ ಗುರುತಿನ ಚೀಟಿ
  • 10ನೇ ತರಗತಿ ಅಂಕಪಟ್ಟಿಯ ಜೆರಾಕ್ಸ್
  • ಆದಾಯ ಪ್ರಮಾಣ ಪತ್ರ
  • * ಉನ್ನತ ವ್ಯಾಸಂಗ ಮಾಡುತ್ತಿರುವ ದಾಖಲೆ

ಯಾವ ಯಾವ ಕೋರ್ಸ್ ಗಳಿಗೆ ಏಷ್ಟು ಶಿಷ್ಯವೇತನ ಸಿಗುತ್ತದೆ?

ಪಿಯುಸಿ ಅಥವಾ ಐಟಿಐ ವಿದ್ಯಾರ್ಥಿಗಳಿಗೆ ಹುಡುಗರಿಗೆ ₹2500/- ಹೆಣ್ಣು ಮಕ್ಕಳಿಗೆ ₹3000/- ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
BA, BSC, BCOM, MBBS, BE, ಮತ್ತು ಇತರ ವೃತ್ತಿಪರ ಕೋರ್ಸ್‌ಗಳಲ್ಲಿ ಓದುತ್ತಿರುವವರಿಗೆ ಹುಡುಗರಿಗೆ ₹5000/- ಹಾಗೂ ಹೆಣ್ಣು ಮಕ್ಕಳಿಗೆ ₹5500/- ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಕಾನೂನು, ಅರೆವೈದ್ಯಕೀಯ, ನರ್ಸಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್‌ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಹುಡುಗರಿಗೆ ₹7500/- ಹಾಗೂ ಹೆಣ್ಣು ಮಕ್ಕಳಿಗೆ ₹8000/- ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಸ್ನಾತಕೋತ್ತರ ಪದವಿ
ಹುಡುಗರಿಗೆ ₹10000/- ಹಾಗೂ ಹೆಣ್ಣು ಮಕ್ಕಳಿಗೆ ₹11000/- ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸಿ

ಈ ಯೋಜನೆಯ ಲಾಭಗಳು ಏನು?

  • ಆರ್ಥಿಕ ಅಡೆತಡೆಗಳ ನಡುವೆಯೂ ಅವರು ತಮ್ಮ ಉನ್ನತ ಶಿಕ್ಷಣದ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯ.
  • ಈ ಯೋಜನೆಯು ರೈತರ ಮಕ್ಕಳಲ್ಲಿ ಉನ್ನತ ಶಿಕ್ಷಣವನ್ನು ಉತ್ತೇಜಿಸುತ್ತದೆ.
  • ಈ ಯೋಜನೆಯಿಂದ ರಾಜ್ಯದ ಸಾಕ್ಷರತೆಯ ಪ್ರಮಾಣ ಹೆಚ್ಚಾಗುತ್ತದೆ.
  • ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವುದರಿಂದ ಯಾವುದೇ ರೀತಿಯ ಮಧ್ಯವರ್ತಿ ಗಳ ಕಾಟ ಇರುವುದಲ್ಲ.
  • ಮಧ್ಯಮ ವರ್ಗದ ರೈತ ವರ್ಗದ ಜನರ ಆರ್ಥಿಕ ಹೊರೆಯನ್ನು ಇಳಿಸುತ್ತದೆ.
  • ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸಲು ಇದು ಬಹಳ ಅನುಕೂಲ ಆಗಲಿದೆ.
  • ಶಿಕ್ಷಣದ ಮೂಲಕ ರೈತ ಕುಟುಂಬಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೆರವಾಗುತ್ತದೆ.

ಇದನ್ನೂ ಓದಿ: ಭಾಗ್ಯಲಕ್ಷ್ಮಿ ಯೋಜನೆಯ ಹಣವನ್ನು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಠೇವಣಿ ಮಾಡಲಾಗುತ್ತದೆ.