ಈ ಎರಡು ರಾಶಿಯವರಿಗೆ ರಾಹುವಿನ ಕೃಪೆಯಿಂದ ರಾಜಯೋಗ ಪ್ರಾಪ್ತಿ. ಇದರಲ್ಲಿ ನಿಮ್ಮ ರಾಶಿಯು ಇದೆಯಾ ಅಂತ ಚೆಕ್ ಮಾಡಿಕೊಳ್ಳಿ

Rahu

ರಾಹು ಕೇತುವಿಗೆ ಕೆಟ್ಟ ಗ್ರಹಗಳು ಅಂತ ಕರೀತಾರೆ. ಈ ಎರಡು ಗ್ರಹ ಗಳು ರಾಹು ಕೇತು ಅಂದ್ರೆ ಯಾವಾಗಲೂ ಕೂಡ ಕೆಟ್ಟದನ್ನೇ ಮಾಡ್ತಾರೆ. ಕೆಟ್ಟದನ್ನೇ ಕೊಡ್ತಾರೆ ಅನ್ನುವಂತದ್ದು ಒಂದು ವಾಡಿಕೆ ಅಲ್ಲದೆ ಇವುಗಳಿಂದ ಬರೀ ಕೆಟ್ಟದ್ದೇ ಆಗುತ್ತೆ ಅಂತ ಜನ ಯಾವಾಗಲೂ ರಾಹು ಕೇತುವನ್ನು ಬದಿಯಲ್ಲಿ ಇಟ್ಟಿದ್ದಾರೆ. ಆದರೆ ಕೆಲವೊಮ್ಮೆ ರಾಹು ಕೇತು ರಾಶಿಯವರ ಮೇಲೆ ಅನುಗ್ರಹವನ್ನು ತೋರುತ್ತಾರೆ. ಇದು ಕೆಲವರಿಗೆ ಗೊತ್ತಿಲ್ಲ. ರಾಹು ಕೇತುವಿನಿಂದ ಎಷ್ಟು ಒಳ್ಳೆದಾಗುತ್ತೆ ಅನ್ನೋದು ಯಾರು ಕೂಡ ಅರ್ಥ ಮಾಡಿಕೊಳ್ಳುವುದಿಲ್ಲ.

WhatsApp Group Join Now
Telegram Group Join Now

ಇನ್ನು ಇದರಿಂದಾಗಿ ಸದಾ ಈ ರಾಶಿಯವರಿಗೆ ಸದಾ ಒಳಿತು ಆಗುತ್ತೆ. ಯಾರಿಗೆಲ್ಲ ಒಳಿತಾಗುತ್ತೆ ಅನ್ನೋದನ್ನ ನೋಡ್ತಾ ಹೋಗೋಣ. ರಾಹುವನ್ನು ಅಶುಭ ಅಂತ ಪರಿಗಣಿಸಲಾಗುತ್ತೆ. ಅದಕ್ಕಾಗಿ ಇದನ್ನು ಎರಡು ಗ್ರಹ ಅಂತ ಕರೀತಾರೆ. ಈ ರಾಹು ಗ್ರಹ ಅಪ್ರದಕ್ಷಿಣಾಕಾರವಾಗಿ ಸುತ್ತತ್ತೆ ಅಂದ್ರೆ ಉಲ್ಟಾ ಸುತ್ತುವಂತದ್ದು ಅಂದ್ರೆ ಹಿಮ್ಮುಖವಾಗಿ ಚಲನೆ ಮಾಡುತ್ತದೆ ಶನಿಯ ನಂತರ ರಾಹುನ ಅತ್ಯಂತ ತೊಂದರೆದಾಯಕ ಅಂತ ಪರಿಗಣಿಸಲಾಗುತ್ತೆ. ಯಾಕಂದ್ರೆ ಶನಿ ಅಂತ ಹೇಳಿದ್ರು ಕೂಡ ಒಂದು ರಾಶಿಯಲ್ಲಿ ನಿಮ್ಮ ರಾಶಿಯಲ್ಲಿ ಶನಿ ಇದ್ದಾನೆ ಅಂತ ಅಂದರೆ ಅಲ್ಲಿ ಏನೋ ಕೆಟ್ಟದ್ದಾಗುತ್ತೆ ಅಂತ ಜನರು ನಂಬುತ್ತಾರೆ. ಶನಿ ಇರೋದ್ರಿಂದ ಬರಿ ಕೆಟ್ಟದ್ದೇ ಮಾಡುತ್ತಾನೆ ಅನ್ನುವಂತಹ ಒಂದಷ್ಟು ನಂಬಿಕೆ ಜನರಲ್ಲಿದೆ. ಅದು ನಿಜವಾಗಲೂ ತಪ್ಪು ತಿಳುವಳಿಕೆ ಅಂತ ಹೇಳಬಹುದು. ಯಾಕಂದ್ರೆ ಪ್ರತಿಯೊಂದು ಗ್ರಹ ಒಳ್ಳೆಯದು ಮತ್ತು ಕೆಟ್ಟದ್ದು ಎರಡನ್ನು ಕೂಡ ಕೊಡುತ್ತದೆ ಇರುತ್ತೆ. ಆದರೆ ಶನಿ ಪ್ರತಿಯೊಬ್ಬ ವ್ಯಕ್ತಿಯ ಕೆಲಸ ಕಾರ್ಯಗಳಿಗೆ ಫಲಕ್ಕೆ ಅನುಗುಣವಾಗಿ ಫಲವನ್ನು ಕೊಡುತ್ತಾನೆ. ಕೆಲಸ ಕಾರ್ಯಗಳಿಗೆ ಆತನ ನಡತೆ ಹೇಗಿರುತ್ತೆ, ಇದೆಲ್ಲದರ ಮೇಲೆ ಶನಿಯ ಪ್ರಭಾವ ಅವಲಂಬಿತವಾಗಿರುತ್ತದೆ.

ಮನುಷ್ಯನೊಬ್ಬ ಯಾವ ರೀತಿ ತನ್ನ ಜೀವನ ನಡೆಸಬೇಕು ಅಂತ ರಾಹು ಕಲಿಸ್ತಾನೆ. ನಾವು ತೊಂದರೆ ಕೊಡ್ತಾರೆ ಈ ಗ್ರಹಗಳು ಅಂತ ಹೇಳ ಬಹುದು. ಆದರೆ ನಮ್ಮ ಜೀವನವನ್ನು ಕಲಿಸುವಂತಹ ಗುರುಗಳು ಅಂತ ಹೇಳಬೇಕು ರಾಹು ಹಣ ಸೌಂದರ್ಯ, ಖ್ಯಾತಿ ಬಗ್ಗೆ ಅಹಂಕಾರ ಹೊಂದಿರುವ ಜನರ ಜೀವನದಲ್ಲಿ ಅವನು ಕೆಟ್ಟ ಪರಿಸ್ಥಿತಿಯನ್ನ ಸೃಷ್ಟಿ ಮಾಡ್ತಾನೆ. ಯಾರ್ಯಾರಿಗೆ ಹಣದ ಅಹಂಕಾರ ಇರುತ್ತೋ ಸೌಂದರ್ಯದ ಅಹಂಕಾರ ಇರುತ್ತೋ ಖ್ಯಾತಿ ನನ್ನ ಹೆಸರು ಇದೆ ಅಂತ ಹೇಳಿ ಅಹಂಕಾರ ಪಡುತ್ತಾರೋ ಅಂಥವರಿಗೆ ಕೆಟ್ಟ ಪರಿಸ್ಥಿತಿಯನ್ನು ಸೃಷ್ಟಿ ಮಾಡ್ತಾನೆ ಅಂತವರಿಗೆ ಆರೋಗ್ಯ ಸಮಸ್ಯೆಗಳನ್ನ ಕೊಡ್ತಾನೆ. ಆದ್ರೆ ರಾಹು ಬರೀ ಕೆಟ್ಟದ್ದನ್ನೇ ಮಾಡುವುದಿಲ್ಲ. ಒಳ್ಳೆಯದನ್ನು ಕೂಡ ಮಾಡುತ್ತಾನೆ. ವ್ಯಕ್ತಿಯೊಬ್ಬನ ಜೀವನದಲ್ಲಿ ನಾವು ಹಣ, ಕೀರ್ತಿ, ಸಂಪತ್ತು, ಸಂತೋಷ, ಮತ್ತೆ ಉದ್ಯೋಗದ ವಿಚಾರದಲ್ಲಿ ಉತ್ತಮ ಸ್ಥಾನವನ್ನು ತಲುಪಿಸುತ್ತಾನೆ ಕೂಡ. ಜ್ಯೋತಿಷ್ಯದ ಪ್ರಕಾರ ರಾಹು ಕೆಲವು ರಾಶಿಯವರಿಗೆ ಹಿತ ಚಿಂತಕನಾಗಿರುತ್ತಾನೆ. ಜ್ಯೋತಿಷ್ಯದ ಪ್ರಕಾರ ರಾಹು ಕೆಲವು ರಾಶಿಗಳಿಗೆ ಬಹಳ ಒಳಿತನ್ನು ಮಾಡುತ್ತಾನೆ ಹಾಗಾದರೆ ಆ ರಾಶಿಗಳು ಯಾವುದು? ರಾಹುವಿಗೆ ಇಷ್ಟ ಆಗುವಂತಹ ರಾಶಿಗಳು ಯಾವುದು ಅನ್ನೋದನ್ನ ನೋಡೋಣ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರಾಹುವಿನ ನೆಚ್ಚಿನ ರಾಶಿಗಳಿವು

ರಾಹುಗೆ ವೃಶ್ಚಿಕ ರಾಶಿ ಅಂದ್ರೆ ಬಹಳ ಇಷ್ಟ. ರಾಹುವಿನ ಮೆಚ್ಚಿನ ರಾಶಿ ಇದು ವೃಶ್ಚಿಕ ರಾಶಿ ಈ ರಾಶಿಯವರು ರಾಹುವಿನ ಆಶೀರ್ವಾದವನ್ನು ಪಡೆಯುತ್ತಾರೆ. ಯಾವಾಗ್ಲೂ ಕೂಡ ರಾಹುವಿನ ಆಶೀರ್ವಾದ ಈ ವೃಶ್ಚಿಕ ರಾಶಿಯವರಿಗೆ ಸಿಗ್ತಾನೆ ಇರುತ್ತೆ. ರಾಹು ಈ ವೃಶ್ಚಿಕ ರಾಶಿಯವರ ಕೆಲಸ ಮತ್ತು ವೈಯಕ್ತಿಕ ಜೀವನ ಅಂದ್ರೆ ನಿಮ್ಮ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನ ಎರಡರಲ್ಲೂ ಕೂಡ ಸದಾ ಸಂತೋಷವನ್ನ ಕೊಡುತ್ತಾನೆ. ಈ ವೃಶ್ಚಿಕ ರಾಶಿಯವರಿಗೆ ರಾಹುವಿನ ಕಾರಣದಿಂದಾಗಿ ಹಠಾತ್ ಆರ್ಥಿಕ ಲಾಭವಾಗುವಂತಹ ಹಲವಾರು ಅವಕಾಶಗಳು ಒದಗಿ ಬರುತ್ತವೆ. ಅಂದ್ರೆ ಪದೇ ಪದೇ ನಿಮಗೆ ಧನ ಲಾಭಾವಾಗುವಂತಹ ಅವಕಾಶವನ್ನು ಕೊಡುತ್ತಾನೆ. ಈ ವೃಶ್ಚಿಕ ರಾಶಿಯವರು ವ್ಯಾಪಾರ ಮತ್ತು ವ್ಯವಹಾರದಲ್ಲಿ ತೊಡಗಿಕೊಂಡಿದ್ದರೆ, ಸ್ಥಿರವಾದ ಲಾಭವನ್ನ ಪಡೀತಾರೆ ಯಾವಾಗಲೂ ಕೂಡ ನಿಮ್ಮ ವ್ಯವಹಾರದಲ್ಲಿ ಲಾಭವನ್ನು ಗಳಿಸಲು ಸಹಾಯ ಮಾಡುತ್ತಾನೆ. ಸಮಾಜದಲ್ಲಿ ಗೌರವ ಕೀರ್ತಿಗಳು ಹೆಚ್ಚಾಗುತ್ತೆ. ವೃಶ್ಚಿಕ ರಾಶಿಯವರಿಗೆ ಹೊಸ ಆದಾಯದ ಮೂಲಗಳು ದೊರೆಯುತ್ತವೆ. ಸಂಗಾತಿಯೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಾರೆ. ವೃತ್ತಿ ಜೀವನದಲ್ಲಿ ನೀವು ಅದ್ಭುತ ಅನಿರೀಕ್ಷಿತವಾದಂತಹ ಯಶಸ್ಸನ್ನ ನೀವು ಅಂದುಕೊಂಡ ಇರೋದಿಲ್ಲ. ಅಂತಹ ಒಂದು ಯಶಸ್ಸನ್ನು ಪಡೆಯುವುದು ಕೂಡ ವೃಶ್ಚಿಕ ರಾಶಿಯವರಿಗೆ ಸಾಧ್ಯವಾಗುತ್ತೆ.

ಇನ್ನು ಸಿಂಹ ರಾಶಿಯವರಿಗೂ ಕೂಡ, ಸಿಂಹ ರಾಶಿ ಅಂದ್ರೆ ರಾಹುಗೆ ನೆಚ್ಚಿನ ರಾಶಿ. ಈ ರಾಶಿಯವರು ಗುರುವಿನ ತುಂಬಾ ಅನುಕೂಲಕರ ಆಗಿರುತ್ತೆ. ರಾಹುವಿನ ಕೃಪೆಯಿಂದಾಗಿ ಸಿಂಹ ರಾಶಿ ಇವರಿಗೆ ಪ್ರಮುಖವಾಗಿ ಆರೋಗ್ಯ ಚೆನ್ನಾಗಿರುತ್ತೆ. ಆರೋಗ್ಯ ಚೆನ್ನಾಗಿದ್ದರೆ ಎಲ್ಲವೂ ಸಿಕ್ಕಿದ ಹಾಗೆ ಅಂತ ಹೇಳ್ತೀವಿ. ಹಾಗಾಗಿ ಆರೋಗ್ಯ ಮುಖ್ಯ. ಪ್ರತಿಯೊಬ್ಬ ಮನುಷ್ಯನೂ ಕೂಡ ಆರೋಗ್ಯವನ್ನ ಬಯಸುತ್ತಾರೆ ರಾಹು ಇಲ್ಲಿ ಸಿಂಹ ರಾಶಿಯವರಿಗೆ ರಾಜಯೋಗವನ್ನು ಕೊಡುತ್ತಾನೆ. ಮಾನಸಿಕ ಒತ್ತಡಗಳು ಕಡಿಮೆ ಆಗುತ್ತವೆ. ರಾಹುವಿನಿಂದ, ಪೂರ್ವರಿಂದ ಪಿತ್ರಾರ್ಜಿತ ಆಸ್ತಿಯ ಲಾಭ ಕೂಡ ನಿಮಗೆ ಸಿಗುವಂತಹ ಯೋಗ ಇರುತ್ತೆ. ಹಠಾತ್ ಆರ್ಥಿಕ ಲಾಭವನ್ನು ಕೂಡ ರಾಹು ನಿಮಗೆ ಕೊಡ್ತಾನೆ. ಯಶಸ್ಸು ಸದಾ ನಿಮ್ಮನ್ನ ಹಿಂಬಾಲಿಸುತ್ತದೆ.

ಯಾವ ಕೆಲಸಕ್ಕೆ ಕೈ ಹಾಕಿ ಅಲ್ಲಿ ನಿವೇಶನ ಕಾಣ್ತೀರಿ. ಜೀವನದಲ್ಲಿ ಕಷ್ಟ ಗಳು ಕಡಿಮೆ ಆಗುತ್ತವೆ. ಸಿಂಹ ರಾಶಿಯವರಿಗೆ ರಾಹು ಸಿಂಹ ರಾಶಿಯಲ್ಲಿದ್ದರೆ ರಾಜಯೋಗ ಖಂಡಿತವಾಗ್ಲೂ ಪ್ರಾಪ್ತಿಯಾಗುತ್ತೆ. ಯಾಕಂದ್ರೆ ತನಗಿಷ್ಟವಾದ ರಾಶಿಯಲ್ಲೇ ಬಂದು ರಾಹು ಕುಳಿತುಕೊಂಡ ಅಂತ ಅಂದ್ರೆ ಸಿಂಹ ರಾಶಿ ಅವರಿಗೆ ಒಂದು ಸುಂದರವಾದ ಜೀವನವನ್ನು ಕೊಡುತ್ತಾನೆ. ಜೀವನದ ವಿವಿಧ ಕ್ಷೇತ್ರಗಳಲ್ಲಿರುವವರಿಗೆ ರಾಹುವಿನ ಒಲವಿನ ಕಾರಣದಿಂದ ಯಾವುದೇ ಸಮಸ್ಯೆಗಳಿಲ್ಲದೆ ಸಂತೋಷದ ಜೀವನ ನಡೆಸುವುದಕ್ಕೆ ಕೂಡ ಸಾಧ್ಯವಾಗುತ್ತೆ.

ಜೊತೆಗೆ ಸಿಂಹ ರಾಶಿಯವರಿಗೆ ರಾಹುವಿನ ಕೃಪೆಯಿಂದ ವಿದೇಶ ಪ್ರಯಾಣ ಮಾಡುವಂತಹ ಸಾಧ್ಯತೆಗಳು ಕೂಡ ಹೆಚ್ಚಾಗಿದೆ. ಒಟ್ಟಾರೆಯಾಗಿ ಈ ಎರಡು ರಾಶಿಯವರು ವೃಶ್ಚಿಕ ರಾಶಿ ಮತ್ತು ಸಿಂಹ ರಾಶಿ ಎರಡು ರಾಶಿಯವರು ಕೂಡ ರಾಹುವಿನ ನೆಚ್ಚಿನ ರಾಶಿಗಳು ಹಾಗಾಗಿ ರಾಹುವಿನ ಅನುಗ್ರಹದಿಂದ ಈ ಎರಡು ರಾಶಿಯವರಿಗೆ ವೃಶ್ಚಿಕ ರಾಶಿ ಮತ್ತು ಸಿಂಹ ರಾಶಿ ಇವರಿಗೆ ಸದಾ ಜೀವನದಲ್ಲಿ ಒಳಿತು ಆಗ್ತಾನೆ ಇರುತ್ತೆ. ಒಳ್ಳೆ ಅವಕಾಶಗಳನ್ನ ರಾಹು ನಿಮಗೆ ಒದಗಿಸುತ್ತಾನೆ. ಅವಕಾಶವನ್ನ ಸದುಪಯೋಗಪಡಿಸಿಕೊಳ್ಳಬೇಕು ಅಷ್ಟೇ.

ಇದನ್ನೂ ಓದಿ:  ಬಿಗ್ ಬಾಸ್ TRP ಏರಿಕೆ; ಕನ್ನಡದ ಟಾಪ್ 10 ಧಾರಾವಾಹಿಗಳು ಯಾವುವು?