Rajesh Nataranga: ಪೋಷಕನಟನಾಗಿ, ಖಳನಟನಾಗಿ ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಕೂಡ ತಮ್ಮದೇ ಆದ ಛಾಪನ್ನ ಮೂಡಿಸಿದ ನಟ ರಾಜೇಶ್ ನಟರಂಗ ಪ್ರಭುದ್ದ ನಟ. ತಮ್ಮ ಅತ್ಯದ್ಭುತ ನಟನ ಶೈಲಿಯಿಂದಲೇ ಎಲ್ಲರ ಮನಸ್ಸನ್ನ ಗೆದ್ದವರು. ರಾಜೇಶ್ ನಟರಂಗ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು, ಹೌದು ಬಸವನ ಗುಡಿಯ ಕಾಲೇಜಿನಲ್ಲಿ ತಮ್ಮ ಪದವಿಯನ್ನು ಮಾಡಿದ್ರು, ಈ ಸಮಯದಲ್ಲಿ ಇವರಿಗೆ ಅಭಿನಯದ ಮೇಲೆ ತುಂಬಾ ಆಸಕ್ತಿ ಇದ್ದ ಕಾರಣ ನಟರಂಗ ಎಂಬ ರಂಗಸಂಸ್ಥೆ ಒಂದನ್ನು ಸೇರುತ್ತಾರೆ ಆಗ ಮೊದ ಮೊದಲು ಸಿಕ್ಕಂತಹ ಚಿಕ್ಕ ಚಿಕ್ಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡು ಈಗ ಇವರು ಚಲನಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಇನ್ನು ರಾಜೇಶ್ ಅವರು ಥಿಯೇಟರ್ ಗ್ರೂಪ್ನಲ್ಲಿ ಕಲಿತು ಬಿ ಎಸ್ ಸಿ ಪದವಿಯನ್ನು ಮುಗಿಸಿ ನಂತರ ಆರು ತಿಂಗಳು ಕಂಪ್ಯೂಟರ್ ಕೋರ್ಸ್ಗೆ ಸೇರಿದರು. ಆದರೆ ಕೆಲ ಕಾರಣಗಳಿಂದ ಅದನ್ನು ಬೇಗನೆ ಬಿಟ್ಟು ದೆಹಲಿಗೆ ಹೋಗಿ ಅಲ್ಲಿ ತೆರೆಮರೆಯ ಚಟುವಟಿಕೆಗಳ ಬಗ್ಗೆ ನಿರ್ವಹಣೆಯನ್ನು ಮಾಡುವುದಕ್ಕೆ ಪ್ರಾರಂಭ ಮಾಡಿಕೊಂಡರು. ಅದರಲ್ಲಿ ಅವರಿಗೆ ಆಸಕ್ತಿ ಹೆಚ್ಚಾಯ್ತು ಮತ್ತು ಉತ್ತಮ ಕೆಲಸಗಳನ್ನು ಕೂಡ ಮಾಡಿದರು. ಇನ್ನು ರಾಜೇಶ್ ಅವರು ಕನ್ನಡದ ಜನಪ್ರಿಯ ಚಾನಲ್ ಆಗಿರುವ ಉದಯ ಟಿವಿಯಲ್ಲಿ ಮೂರುವರೆ ವರ್ಷಗಳ ಕಾಲ ನಿರ್ಮಾಪಕರಾಗಿ ಕೆಲಸ ಮಾಡಿದರು. ಇದಾದ ಮೇಲೆ ಇವರು ಟಿವಿ ಶೋಗಳಲ್ಲಿ ನಟನೆ ಮಾಡುವುದಕ್ಕೆ ಶುರು ಮಾಡಿಕೊಂಡರು. ಇನ್ನು ಮಾಯಾ ಮೃಗ ಇವರಿಗೆ ದೊಡ್ಡ ಬ್ರೇಕ್ ನೀಡಿತು.
ನಂತರ ನಟ ರಾಜೇಶ್ ಅವರು ಚಂದನವನಕ್ಕೂ ಕಾಲಿಟ್ಟು ಅಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದ್ರು. ಹೌದು ತಾವು ನೋಡಲು ಯಾವ ಹೀರೊಗು ಕಡಿಮೆ ಇಲ್ಲವಾದ್ರೂ ಯಾವತ್ತೂ ಹೀರೊ ಆಗಬೇಕು ಅಂತ ಅಂದುಕೊಂಡವರಲ್ಲ. ಸಿಗುವ ಪಾತ್ರಗಳಿಗೆ ಪ್ರಮುಖ್ಯತೆ ಇರೋದನ್ನ ಮಾತ್ರ ನೋಡಿ ಸಿಕ್ಕಪಾತ್ರಗಳಿಗೆ ಜೀವತುಂಬಿ ನಟನೆ ಮಾಡುತ್ತಿದ್ದ ಅತ್ಯದ್ಭುತ ಕಲಾವಿದ. ಇನ್ನು ರಾಜೇಶ್ ಅವ್ರು ಚದುರಂಗ, ಯದ್ವಾ ತದ್ವಾ, ಮುಕ್ತ, ಬದುಕು, ಶಕ್ತಿ ಹೀಗೆ ನಾನಾ ಧಾರಾವಾಹಿಗಳಲ್ಲಿ ಅಭಿನಯ ಮಾಡಿ ಯಶಸ್ಸನ್ನು ಗಳಿಸಿದ್ದಾರೆ. ಅಲ್ಲದೇ ರಾಜೇಶ್ ಅವರು ಟಪೋರಿ, ಆನಂದ ನಿಲಯ, ಮೊಗ್ಗಿನ ಮನಸು, ಜಸ್ಟ್ ಮಾತ್ ಮಾತಲ್ಲಿ, ಆಪ್ತರಕ್ಷಕ, ನಾನು ನನ್ನ ಕನಸು, ಆರಕ್ಷಕ, ಕಡ್ಡಿಪುಡಿ, ಗಜಕೇಸರಿ, ಕಿಲ್ಲಿಂಗ್ ವೀರಪ್ಪನ್, ಹ್ಯಾಪಿ ಬರ್ತಡೇ, ಕವಚ, ಫಾರ್ಚುನರ್, ಆಯುಷ್ಮಾನ್ ಭವ, ಕಟ್ಟು ಕಥೆ, ಆಪರೇಷನ್ ಅಲಮೇಲಮ್ಮ, ಕಾಫಿ ತೋಟ, ನೂರೊಂದು ನೆನಪು ಹೀಗೆ ಇನ್ನೂ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿ ಕನ್ನಡಿಗರ ಮನಸ್ಸು ಗೆದಿದ್ದಾರೆ.
ಇದನ್ನೂ ಓದಿ: ನಿರ್ಮಾಪಕ ರವೀಂದರ್ ಮತ್ತು ನಟಿ ಮಹಾಲಕ್ಷ್ಮೀ ಡೈವೋರ್ಸ್ ನಿಜಾನಾ!
ರಾಜೇಶ್ ಅವರ ಫ್ಯಾಮಿಲಿ ಹೇಗಿದೆ ನೋಡಿ?
ಇನ್ನು ರಾಜೇಶ್ ನಟರಂಗ(Rajesh Nataranga) ಅವರು ತೂಕವಿರುವ ಪಾತ್ರಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದ್ದ ಕಾರಣ ಅಂತಹ ಪಾತ್ರಗಳಲ್ಲಿ ನಟಿಸಿ ಸಹಿ ಅನಿಸಿಕೊಂಡವರು. ಯಾವತ್ತೂ ಕೂಡ ಹೀರೋ ಆಗಬೇಕು, ಹೀರೋಗಳ ಸರಿ ಸಮಾನವಾಗಿ ನಿಂತು ಖಡಕ್ ವಿಲನ್ ಆಗಿ ತಾನು ಡೈಲಾಗನ್ನು ಹೊಡಿಬೇಕು ಅಂತ ಅಂದುಕೊಂಡಿಲ್ಲ. ಆದರೂ ಕೂಡ ತೂಕವಿರುವ ಪಾತ್ರಗಳು ಸಿಕ್ಕಾಗ ಅದ್ಬುತವಾಗಿ ನಟಿಸುತ್ತಿದ್ದರು. ಇಂತಹ ನಟನ ಮಗಳು ಕೂಡ ಅದ್ಭುತ ಕಲಾವಿದೆ ಅನ್ನೋದು ಎಷ್ಟು ಜನರಿಗೆ ಗೊತ್ತಿಲ್ಲ. ನಟ ರಾಜೇಶ್ ನಟರಂಗ ಮಗಳು ಕೂಡ ಅತ್ಯದ್ಭುತ ಬಾಲ ಕಲಾವಿದೆಯಾಗಿ ಮಿಂಚಿದವರು. ಹೌದು ಬಾಲ ಕಲಾವಿದೆಯಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಬಾಲಿವುಡ್ ನಲ್ಲಿ ಬಿಹೈಂಡ್ ದಿ ಕ್ಲೌಡ್ ಸಿನಿಮಾದಲ್ಲೂ ಕೂಡ ನಾಯಕಿ ಪಾತ್ರ ನಿಭಾಯಿಸಿದ್ದಾರೆ. ಈ ಸಿನಿಮಾ ನೋಡಿದ ಅನೇಕ ಗಣ್ಯ ವ್ಯಕ್ತಿಗಳು ಕೂಡ ನಟ ರಾಜೇಶ್ ನಟರಂಗ ಹಾಡಿ ಹೋಗಳಿದ್ದಾರೆ. ಇನ್ನು ನಟ ರಾಜೇಶ್ ಅವರ ಮಗಳ ಹೆಸರು ಧ್ವನಿ ಅಂತ. ನಮ್ಮ ಸ್ಯಾಂಡಲ್ ವುಡ್ ನಲ್ಲಿ ಇವರಿಗೆ ಅವಕಾಶಗಳು ಸಿಗದ ಕಾರಣ ಇದೀಗ ಬಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಬಾಲಿವುಡ್ನಲ್ಲಿ ಗುರುತಿಸಿಕೊಳ್ಳುತ್ತಿರುವ ನಟಿ ಧ್ವನಿ ಅವರಿಗೆ ನಮ್ಮ ಕನ್ನಡ ಚಿತ್ರರಂಗದಲ್ಲೂ ಕೂಡ ಗುರುತಿಸಿಕೊಳ್ಳುವ ಆಸೆಯಂತೆ. ಹೀಗಾಗಿ ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಿದ್ರೆ ಖಂಡಿತವಾಗಿಯೂ ನಮ್ಮ ಚಂದನವನಕ್ಕೂ ಕೂಡ ನಟ ರಾಜೇಶ್ ನಟರಂಗ ಅವ್ರ ಮಗಳು ಎಂಟ್ರಿ ಕೊಡ್ಲಿದ್ದಾರೆ ಅಂತ ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಕೆಲವರು ತಮ್ಮ ನಟನೆಗಿಂತ ವೈಯಕ್ತಿಕ ವಿಚಾರಗಳಿಗೆ ಸುದ್ದಿಯಾಗೋದು ನಮ್ಮ ಇಂಡಸ್ಟ್ರಿಯಲ್ಲಿ ಕಾಮನ್ ಆಗ್ಬಿಟ್ಟಿದ್ದೆ ಆದ್ರೆ ನಟ ರಾಜೇಶ್ ನಟರಂಗ ಎಲ್ಲರಂತಲ್ಲ ಎಲ್ಲಿಯೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬಿಟ್ಟುಕೊಡದೆ ಗೌಪ್ಯತೆ ಕಾಪಾಡಿಕೊಂಡು ಬಂದಿದ್ದಾರೆ. ಮಗಳು ಸಹ ಕಲಾವಿದೆಯಾದ್ರೂ ಎಲ್ಲಿಯೂ ಈ ಬಗ್ಗೆ ಹೇಳಿಕೊಂಡಿಲ್ಲ ಮಾತಾನಾಡಿಲ್ಲ ಅನ್ನೋದು ವಿಶೇಷ.. ಒಟ್ಟಿನಲ್ಲಿ ನಟ ರಾಜೇಶ್ ನಟರಂಗ ಹಾಗೂ ಅವ್ರ ಮಗಳು ನಟಿ ಧ್ವನಿ ಅವ್ರಿಗೆ ಒಳ್ಳೆಯದಾಗಲಿ ಅಂತ ಆಶೀಸೋಣ..
ಇದನ್ನೂ ಓದಿ: ಜೂನ್ 1ರಿಂದ ರೇಷನ್ ಕಾರ್ಡ್ ಇದ್ದವರಿಗೆ 10 ಕೆಜಿ ಅಕ್ಕಿ. ಹೊಸ ಲಿಸ್ಟ್ ಬಿಡುಗಡೆ, ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರಬೇಕು!
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram