ರಾಜ್ಯ ಸರ್ಕಾರವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಸ್ಥಾಪನೆ ಮಾಡಿದೆ. ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಒಳಪಟ್ಟಿರುವ ಜಿಲ್ಲೆಗಳಲ್ಲಿನ ಸ್ಥಳೀಯ ಆಡಳಿತವನ್ನು ಇನ್ನಷ್ಟು ಹತೋಟಿಗೆ ತರುವ ನಿಟ್ಟಿನಲ್ಲಿ ಈ ಫೆಲೋಶಿಪ್ ಆರಂಭಿಸಲಾಗಿದೆ. ಕಲ್ಯಾಣ ಕರ್ನಾಟಕದ ಅಡಿಯಲ್ಲಿ ಬರುವ ತಾಲೂಕಿಗೆ ಒಬ್ಬರನ್ನು ಫೆಲೋಗಳೆಂದು ಎರಡು ವರ್ಷಗಳ ಕಾಂಟ್ರಾಕ್ಟ್ ಮೂಲಕ ನೇಮಕ ಮಾಡಿಕೊಳ್ಳಲಾಗುವುದು. ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. ಅದರ ಬಗ್ಗೆ ಮಾಹಿತಿ ಇಲ್ಲಿದೆ. ರಾಜ್ಯದ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಯಲ್ಲಿನ ಆರ್ಥಿಕ ಸಾಮಾಜಿಕ ಅಭಿವ್ಯದ್ಧಿಯನ್ನು ಇನ್ನಷ್ಟು ಬಲಪಡಿಸಿ ಅಲ್ಲಿನ ಕಾರ್ಯವ್ಯಾಪ್ತಿ ಅಧ್ಯಯನ ಮಾಡುವುದು ಈ ಫೆಲೋಶಿಪ್ ಗಳ ಕೆಲಸ ಆಗಿರುತ್ತದೆ. ಆಯ್ಕೆಯಾದ ಫೆಲೋಶಿಪ್ ಗಳ ತಿಂಗಳ ಸಂಬಳ 60,000 ರೂಪಾಯಿ.
ಅಭ್ಯರ್ಥಿಯ ಎಜುಕೇಷನ್ ಕ್ವಾಲಿಫಿಕೇಷನ್:- ಅರ್ಜಿ ಸಲ್ಲಿಸಲು Social Science, Sociology or Economics or Rural Development or Social Work or Public Policy ಇಂತಹ ವಿಷಯಗಳಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಗ್ರೀ ಅಥವಾ ಅದಕ್ಕೂ ಹೆಚ್ಚಿನ ವಿದ್ಯಾರ್ಹತೆ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಇಲಾಖೆ ಸೂಚಿಸಿರುವ ನಿಯಮಗಳು:-
- ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಕನ್ನಡ ಭಾಷೆಯ ಬಗ್ಗೆ ಅರಿವಿರಬೇಕು.
- 1 ರಿಂದ 2 ವರ್ಷಗಳ ಕಾಲ ಮೇಲಿನ ವಿಭಾಗದಲ್ಲಿ ಕೆಲಸ ಮಾಡಿರುವ ಅನುಭವ ಇರಬೇಕು.
- ಅರ್ಜಿ ದಾರರ ಗರಿಷ್ಠ ವಯಸ್ಸು 32 ವರ್ಷ.
- ಕರ್ನಾಟಕ ರಾಜ್ಯದ ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಬರುವ 51 ತಾಲೂಕಿನಲ್ಲಿ ಕೆಲಸ ಮಾಡಲು ರೆಡಿ ಇರಬೇಕು.
- ಕಡ್ಡಾಯವಾಗಿ 2 ವರ್ಷ ಕೆಲಸ ಮಾಡಬೇಕು.
ಅರ್ಜಿಯನ್ನು ಸಲ್ಲಿಸಲು ನಿಗದಿ ಪಡಿಸಿದ ದಿನಾಂಕ ಜನವರಿ 22, 2024 ರಿಂದ ಫೆಬ್ರವರಿ 05, 2024 ರ ವರೆಗೆ ಅರ್ಜಿ ಸಲ್ಲಿಸಬಹುದು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:-
- ಅರ್ಜಿದಾರರ ಆಧಾರ್ ಕಾರ್ಡ್ ಜೆರಾಕ್ಸ್.
- ಅರ್ಜಿದಾರರ ಮೊಬೈಲ್ ಸಂಖ್ಯೆ.
- ಅರ್ಜಿದಾರರ ವಿದ್ಯಾರ್ಹತೆಯ ಸರ್ಟಿಫಿಕೇಟ್ ಗಳು.
- ಅರ್ಜಿದಾರರ ವಿಳಾಸದ ಮಾಹಿತಿ.
- ಅರ್ಜಿದಾರರ ಅನುಭವ ಇರುವ ಬಗ್ಗೆ ಸರ್ಟಿಫಿಕೇಟ್.
ಅರ್ಜಿ ಸಲ್ಲಿಸುವ ವಿಧಾನ :-
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಸೈಟ್ ಗೆ ಹೋದರೆ ಡೈರೆಕ್ಟ್ ಆಗಿ ಅಪ್ಲಿಕೇಶನ್ ಫಾರ್ಮ್ ಓಪನ್ ಆಗುತ್ತದೆ.
- ಅಪ್ಲಿಕೇಶನ್ ಹಾಕಬೇಕಾದ ಪೋಸ್ಟ್ ಹೆಸರು, profix,( mr. ms, dr, misses) , ಪೂರ್ಣ ಹೆಸರು, ಹುಟ್ಟಿದ ದಿನಾಂಕ, ನಿಮ್ಮ gender , ಎಲ್ಲವನ್ನೂ ಭರ್ತಿ ಮಾಡಿ .
- ನಂತರ ನಿಮ್ಮ email id ಮತ್ತು phone numbar ನಮೂದಿಸಿ
- ಯಾವುದೇ ಸ್ಪೇಸ್ ಕೊಡದೆ ನಿಮ್ಮ ಆಧಾರ್ ಕಾರ್ಡ್ ಅಂಕೆಯನ್ನು ಹಾಕಿ
- ಕನ್ನಡ ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಅರಿವಿನ ಬಗ್ಗೆ (read, write, speak) ನಿಖರ ಮಾಹಿತಿ ನೀಡಿ.
- ನಿಮ್ಮ ಖಾಯಂ ಹಾಗೂ ಈಗಿನ ವಿಳಾಸವನ್ನು ನಮೂದಿಸಿ ರಿಜಿಸ್ಟರ್ ಆಗಿ.
- ನಂತರ ನಿಮ್ಮ ಎಜುಕೇಷನ್ ಬಗ್ಗೆ ( ಎಸೆಸೆಲ್ಸಿ , ಪಿಯುಸಿ, ಡಿಗ್ರೀ ) ಮಾಹಿತಿಯನ್ನು ತುಂಬಿ.
- ನಿಮ್ಮ ಎಜುಕೇಷನ್ ಸರ್ಟಿಫಿಕೇಟ್ ಹಾಗೂ experience ಸರ್ಟಿಫಿಕೇಟ್ ಸ್ಕ್ಯಾನ್ ಮಾಡಿ ನಿಮ್ಮ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ ಅಪ್ಲೈ ಬಟನ್ ಮೇಲೆ ಕ್ಲಿಕ್ ಮಾಡಿ.
ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳ ಸ್ಥಳೀಯ ಆಡಳಿತವನ್ನು ಬಲಪಡಿಸುವ ಸಲುವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ʼರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ʼ ಸ್ಥಾಪಿಸಿದ್ದು, ರಾಜ್ಯದ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳ 51 ತಾಲೂಕುಗಳಲ್ಲಿ ಪ್ರತಿ ತಾಲೂಕಿಗೆ ಒಬ್ಬರಂತೆ ‘ಫೆಲೋಗಳನ್ನು ಎರಡು… pic.twitter.com/YjqzYj8Zvh
— DIPR Karnataka (@KarnatakaVarthe) January 27, 2024
ಇದನ್ನೂ ಓದಿ: ಭಾರಿ ಬೇಡಿಕೆಯುಳ್ಳ ಹೊಸ ಹುಂಡೈ ವೆನ್ಯೂ ಇದರ ವೈಶಿಷ್ಟ್ಯಗಳನ್ನು ನೀವೇ ನೋಡಿ
ಇದನ್ನೂ ಓದಿ: 10 ಲಕ್ಷದವರೆಗಿನ ಸಾಲದ ಮೇಲಿನ ಬಡ್ಡಿ ದರ ನಂಬಲಾಗದಷ್ಟು ಕಡಿಮೆ! ಸರ್ಕಾರದ ಬೃಹತ್ ಪ್ರಯೋಜನಗಳನ್ನು ಪಡೆದುಕೊಳ್ಳಿ