ಎಲ್ಲೆಲ್ಲಿಯೂ ಮೊಳಗುತ್ತದೆ ರಾಮ ನಾಮ! ರಾಮ ಮಂದಿರ ಪ್ರತಿಷ್ಠಾಪನಾ ಮಹೋತ್ಸವದ ಸಂಭ್ರಮ

Ram Mandir Inauguration Celebration

ರಾಮ ಮಂದಿರ 500 ವರುಷಗಳ ಭಾರತೀಯರ ಕನಸು. ಸಾವಿರಾರು ಜನರ ಪ್ರಾಣ ತ್ಯಾಗ, ಉಪವಾಸ, ಹೋರಾಟಗಳ ಶ್ರಮದ ಫಲ ಜನವರಿ 22 ರ ರಾಮ ಮಂದಿರ ಉದ್ಘಾಟನೆ. ಭಾರತದ ಮಹಾಕಾವ್ಯ ರಾಮಾಯಣದ ಪ್ರತಿ ಪಾತ್ರಕ್ಕೂ ಜೀವ ತುಂಬುತ್ತಿದೆ ರಾಮ ಮಂದಿರ. ಸೀತೆಯ ಪಾವಿತ್ರ್ಯತೆಯನ್ನು ಸಾರಿದ ರಾಮ ಗುಣಗಾನ ಎಲ್ಲೆಲ್ಲಿಯೂ ಮೊಳಗುತ್ತಿದೆ. ಕಂಡ ಕನಸು ನನಸಾದ ಘಳಿಗೆಯಲ್ಲಿ ಭಾರತೀಯರು ತಮ್ಮದೇ ರೀತಿಯಲ್ಲಿ ಸಂತಸ ಪಡುತ್ತಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಅಂತೆಯೇ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸಡಗರದಿಂದ ನಡೆಯುತ್ತಿದೆ ರಾಮ ಮಂದಿರ ಪ್ರತಿಷ್ಠಾಪನಾ ಮಹೋತ್ಸವದ ಸಂಭ್ರಮ.

WhatsApp Group Join Now
Telegram Group Join Now

ಹೇಗೆ ಸಿದ್ಧವಾಗಿದೆ ಬೆಂಗಳೂರು?

ರಾಜ್ಯ ರಾಜಧಾನಿ ಬೆಂಗಳೂರು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಜನವರಿ 22ರಂದು ರಾಮ ಪ್ರಾಣಪ್ರತಿಷ್ಠಾಪನೆ ಸಂಭ್ರಮದಲ್ಲಿ ಸಿಟಿಯ ಪ್ರಮುಖ ರಸ್ತೆ, ಜಂಕ್ಷನ್ಗಳಲ್ಲಿ ರಾಮನ (Lord Rama) ಬೃಹತ್ ಕಟೌಟ್, ಪ್ಲೆಕ್ಸ್ ಹಾಕಲಾಗಿದೆ. ಖಾಸಗಿ ಶಾಲೆಗಳು ರಾಮಮಂದಿರ ಉದ್ಘಾಟನೆಯನ್ನ ಲೈವ್ ತೋರಿಸಲು ಮುಂದಾಗಿದ್ದಾರೆ. ರಾಮ ಮಂದಿರದಲ್ಲಿ ಭಜನಾ ಕಾರ್ಯಕ್ರಮ ಪೂಜೆ ಹವನಗಳು ನಡೆಯುತ್ತಲಿವೆ. ರಾಮ ನಾಮವು ಎಲ್ಲೆಲ್ಲಿಯೂ ಮೊಳಗುತ್ತಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯದ ಹಳ್ಳಿ ಹಳ್ಳಿಯಲ್ಲಿ ಸಂಭ್ರಮ:-

ಹಳ್ಳಿ ಹಳ್ಳಿಗಳ ಬೀದಿಯಲ್ಲಿ ತಳಿರು ತೋರಣಗಳಂದ ಸಿಂಗರವಾಗಿದೆ. ಈಗಾಗಲೇ ರಾಮ ಮಂದಿರದ ಅಕ್ಷತೆ ಮತ್ತು ಕರೆಯೋಲೆ ತಲುಪಿದ್ದು ಜನರು ಸಂಭ್ರಮ ಪಟ್ಟಿದ್ದಾರೆ. ಇನ್ನೇನು ಕೇವಲ ಒಂದು ದಿನ ಬಾಕಿ ಇರುವ ಪ್ರತಿಷ್ಟಾಪನೆ ಮುಹೂರ್ತಕ್ಕೆ ಈಗ ಭಾರತ ಒಂದಾಗಿರುವುದು ನಿಜಕ್ಕೂ ಸಂಭ್ರಮ. ಹಳ್ಳಿಗಳಲ್ಲಿ ಮನೆಯ ಮುಂದೆ ರಂಗೋಲಿ ಹಾಕಿ ಪ್ರತಿ ಮನೆಯಲ್ಲಿ ದೀಪ ಬೆಳಗುತ್ತಾರೆ. ಮಂದಿರಗಳಲ್ಲಿ ರಾಮ ತಾರಕ ಜಪ, ಹವನ ನಡೆಯುತ್ತದೆ. ಮನೆಯಲ್ಲಿ ತುಪ್ಪದ ದೀಪಾ ಹಚ್ಚಿ ರಾಮನ ಪೂಜೆ ಮಾಡಲಾಗುತ್ತದೆ.

ಕೋಟ್ಯಂತರ ಭಾರತೀಯರು ದೇಣಿಗೆಯನ್ನು ನೀಡಿದ್ದಾರೆ. ಅಯೋಧ್ಯೆಗೆ ತೆರಳಿ ರಾಮನ ದರುಶನ ಪಡೆಯಲು ಎಲ್ಲರು ತೆರಳುತ್ತ ಇದ್ದರೆ. ರಾಮನ ಜಪ ಪ್ರತಿ ದಿನ ಮನೆಯಲ್ಲಿ ಈಗಾಗಲೇ ಮೊಳಗುತ್ತ ಇದೆ. ರಾಮ ಮಂದಿರ ಕೇವಲ ಹಿಂದೂಗಳು ಮಾತ್ರ ಅಲ್ಲ ಇಡೀ ವಿಶ್ವದ ಜನರು ಕಾಯುತ್ತಾ ಇದ್ದರೆ. ಈಗಾಗಲೇ ವಿಶ್ವದ ಹಲವು ಭಾಗಗಳಿಂದ ಅಯೋಧ್ಯೆಗೆ ಭಕ್ತರ ದಂಡು ಹರಿದು ಬಂದಿದೆ. ವಿಶ್ವದ ಹಲವು ಪ್ರತಿಷ್ಠಿತ ವ್ಯಕ್ತಿಗಳಿಗೆ ಆಹ್ವಾನ ನೀಡಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಸಂತರು ಮಹಾನ್ ಪುರುಷರು ಬಂದಿದ್ದಾರೆ. ಪ್ರಧಾನಿ ಮೋದಿ ಅವರಿಂದ ಪ್ರಾಣ ಪ್ರತಿಷ್ಠೆಯಾಗಲಿದೆ. ಹಲವು ಅಡೆತಡೆಗಳ ದಾಟಿ ರಾಮ ಬರುವ ಸಂಭ್ರಮದಲ್ಲಿ ಈಗಾಗಲೇ ಹಲವು ಸ್ಪರ್ಧೆಗಳು ನಡೆಯುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಶಾಲೆಗಳಲ್ಲಿ ರಜೆ ಘೋಷಣೆ ಮಾಡುವ ಸಾಧ್ಯತೆ ಇದೆ. ಹಲವು ಸಂಘ ಸಂಸ್ಥೆಗಳು ಲೇಖನ ಸ್ಪರ್ಧೆ ಕವನ ಸ್ಪರ್ಧೆಗಳನ್ನು ಇಟ್ಟಿವೆ. ಟಿವಿ ಮಾಧ್ಯಮದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ದೇವರ ನಾಮಗಳನ್ನು ಎಲ್ಲರೂ ಹಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾ ಇದ್ದರೆ. ಹಲವಾರು ತಮ್ಮದೇ ರೀತಿಯಲ್ಲಿ ರಾಮನ ಪೋಸ್ಟ್ ಗಳನ್ನೂ ಹಾಕಿ ಸಂಭ್ರಮ ಮಾಡುತ್ತಾ ಇದ್ದಾರೆ. ವರುಷಗಳಿಂದ ರಾಮ ಮಂದಿರಕ್ಕೆ ಚಪ್ಪಲಿ ಹಾಕದೆ ಊಟ ಮಾಡದೇ ಇರುವ ಏಷ್ಟೋ ಮಂದಿ ತಮ್ಮ ವ್ರತವನ್ನು ಪೂರ್ಣ ಗೊಳಿಸುವ ಕಾಲ ಸಮೀಪವಾಗಿದೆ. ರಾಮ ನಾಮವ ಭಾಜಿಸೋಣ ಎಂದು ಎಲ್ಲರೂ ತಾವಾಗಿಯೇ ಪ್ರೇರಿತರಾಗಿ ರಾಮ ನಾಮವನ್ನು ಪಠಿಸುತ್ತಾ ಇದ್ದಾರೆ.

ಇದನ್ನೂ ಓದಿ: ಸ್ವಂತ ಉದ್ಯಮ ಆರಂಭಿಸುವ ಮಹಿಳೆಯರಿಗೆ ಸರಕಾರ ನೀಡುತ್ತಿದೆ ಸಿಹಿ ಸುದ್ದಿ. 

ಇದನ್ನೂ ಓದಿ: 6000 ಗಳ ರಿಯಾಯಿತಿಯಲ್ಲಿ ಹೊಸ Vivo T2X 5G ನಲ್ಲಿ ದೊಡ್ಡ ಮೊತ್ತವನ್ನು ಉಳಿಸಲು ಸಿದ್ಧರಾಗಿ, ನಂಬಲಾಗದ ಬೆಲೆಯೊಂದಿಗೆ