ರಾಜ್ಯ ಸರ್ಕಾರವು ಕೆಲವು ದಿನಗಳ ಹಿಂದೆ ವಿದ್ಯುತ್ ಚಾಲಿತ ಟ್ಯಾಕ್ಸಿ ಸೇವೆಗಳನ್ನು ರಾಜ್ಯದಲ್ಲಿ ಸ್ಥಗಿತ ಗೊಳಿಸಲು ಆದೇಶ ಹೊರಡಿಸಿತ್ತು. ಇದರ ಅನ್ವಯ ಈಗ ಬೆಂಗಳೂರು ನಗರದ rapido ಬೈಕ್ ಟ್ಯಾಕ್ಸಿ ಸೇವೆ ಯು ಸಹ ಬಂದ್ ಆಗಲಿದೆ ಎಂಬ ಜನರ ಪ್ರಶ್ನೆಗಳಿಗೆ rapido ಸಂಸ್ಥೆಯು ಸ್ಪಷ್ಟನೆ ನೀಡಿದೆ.
ಸರ್ಕಾರದ ಆದೇಶ ಏನು?: ವಿದ್ಯುತ್ ಚಾಲಿತ ಬೈಕ್ ಟ್ಯಾಕ್ಸಿ ಯೋಜನೆಯನ್ನು ರದ್ದು ಮಾಡಲಾಗುವುದು ಇದು ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಅನುಕೂಲಕರ ಯೋಜನೆಯಲ್ಲ ಹಾಗೂ ನಿಯಮಗಳ ಉಲ್ಲಂಘನೆಯ ಪ್ರಕರಣಗಳು ಹೆಚ್ಚಾಗಿ ವರದಿ ಆಗಿದ್ದು ಸಾಮಾಜಿಕವಾಗಿ ಹಲವು ಗಲಭೆ ಗಳಿಗೆ ಕಾರಣವಾಗಿರುವುದು ಕಂಡುಬಂದಿದೆ. ಇದರಿಂದ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯನ್ನು ರದ್ದು ಮಾಡಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ.
Rapido ಸಂಸ್ಥೆ ನೀಡಿದ ಸ್ಪಷ್ಟನೆ ಏನು ?
ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯನ್ನು ರದ್ದು ಮಾಡಿರುವುದು rapido ಬೈಕ್ ಟ್ಯಾಕ್ಸಿ ಗೆ ಯವುದೇ ರೀತಿಯ ನಿಯಮಗಳು ಅನ್ವಯ ಆಗುವುದಿಲ್ಲ. ಸರ್ಕಾರದ ಆದೇಶವು ವಿದ್ಯುತ್ ಚಾಲಿತ ಟ್ಯಾಕ್ಸಿ ಸೇವೆಗೆ ಮಾತ್ರ ಅನ್ವಯ ಆಗಲಿದ್ದು. rapido ವಿದ್ಯುತ್ ಚಾಲಿತ ಬೈಕ್ ಟ್ಯಾಕ್ಸಿ ಅಲ್ಲ. ಅದರಿಂದ rapido ಬೈಕ್ ಟ್ಯಾಕ್ಸಿ ಈ ಹಿಂದೆ ಹೇಗೆ ಸೇವೆ ನೀಡುತ್ತಿದೆಯೋ ಹಾಗೆ ಮುಂದೆಯೂ ಸೇವೆ ನೀಡಲಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದರು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸರ್ಕಾರ ಯೋಜನೆಯನ್ನು ರದ್ದು ಮಾಡಲು ನೀಡಿದ ಕಾರಣ :-
- ನಿಯಮಬಾಹಿರ ಚಟುವಟಿಕೆಗಳು: ಯೋಜನೆಯ ನಿಯಮಗಳನ್ನು ಪಾಲಿಸದ ಹಲವಾರು ಘಟನೆಗಳು ಸರ್ಕಾರದ ಗಮನಕ್ಕೆ ಬಂದಿದ್ದು, ಟ್ಯಾಕ್ಸಿ ಚಾಲಕರು ಮತ್ತು ಗ್ರಾಹಕರ ನಡುವೆ ಜಗಳಗಳು ವರದಿಯಾಗಿವೆ.
- ದುರುಪಯೋಗ: ಟ್ಯಾಕ್ಸಿ ಬದಲಿಗೆ ಖಾಸಗಿ ವಾಹನಗಳನ್ನು ಓಡಿಸುತ್ತಿರುವುದು ಕಂಡುಬಂದಿದೆ. ಹಾಗೂ ಮಹಿಳೆಯರ ಸುರಕ್ಷತೆ ನಿಯಮಗಳನ್ನು ಪಾಲಿಸದೆ ಇರುವುದು ಗಮನಕ್ಕೆ ಬಂದಿದೆ.
ಯೋಜನೆಯ ಆರಂಭಿಕ ಉದ್ದೇಶಗಳು:-
- ಹೆಚ್ಚಿನ ಚಲನಶೀಲತೆಯನ್ನು ಹೆಚ್ಚಿಸುವುದು. ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡಿ ನಿರುದ್ಯೋಗ ಕಡಿಮೆ ಮಾಡುವುದು ಯೋಜನೆಯ ಮುಖ್ಯ ಉದ್ದೇಶ ಆಗಿತ್ತು.
- ಮನೆಗಳಿಂದ ಬಸ್ ನಿಲ್ದಾಣ, ಮತ್ತು ಮೆಟ್ರೋ ಸ್ಟೇಷನ್‌ಗಳಿಗೆ ಸುಲಭ ಮತ್ತು ಸರಿಯಾದ ಸಮಯಕ್ಕೆ ಸಂಪರ್ಕ ಒದಗಿಸುವುದು ಇನ್ನೊಂದು ಮುಖ್ಯ ಯೋಜನೆ ಆಗಿತ್ತು.
- ಎಲೆಕ್ಟ್ರಿಕ್ ವಾಹನ ಆದ್ದರಿಂದ ಪರಿಸರಕ್ಕೆ ಹಾನಿಕಾರಕವಾದ ಹೊಗೆ ಅಥವಾ ವಾಯುಮಾಲಿನ್ಯ ಉಂಟುಮಾಡುವುದಿಲ್ಲ.
- ಪೆಟ್ರೋಲ್ ಚಾಲಿತ ವಾಹನಗಳಿಗೆ ಬದಲಾಗಿ ಉಪಯೋಗಿಸುವುದರಿಂದ ಇಂಧನ ಉಳಿತಾಯಕ್ಕೆ ಸಹಾಯ ಆಗುತ್ತದೆ.
- ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
- ವಿಮಾ ರಕ್ಷಣೆ ಇರುವುದರಿಂದ ಸವಾರರಿಗೆ ಹೆಚ್ಚಿನ ಭದ್ರತೆ ಸಿಗುತ್ತದೆ.
ಇದನ್ನೂ ಓದಿ: ಬೈಕ್ ಪ್ರಿಯರಿಗೆ ಸಿಹಿ ಸುದ್ದಿ, ಇನ್ನು ಮುಂದೆ CNG ಬೈಕ್ ಖರೀದಿಸುವ ಮೂಲಕ ಹಣವನ್ನು ಉಳಿತಾಯ ಮಾಡಿ