ಅಸಿಸ್ಟೆಂಟ್ ಮದುವೆಯಲ್ಲಿ ರಶ್ಮಿಕಾ ಮಂದಣ್ಣ; ರಶ್ಮಿಕಾ ಕಾಲಿಗೆ ಬಿದ್ದ ವಧು ವರರು!? ಕಾಲಿಗೆ ಬಿಳೋ ದೊಡ್ಡ ವ್ಯಕ್ತಿನಾ ಎಂದ ನೆಟ್ಟಿಗರು!

ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಹುಟ್ಟಿಕೊಂಡ ಟ್ರೋಲ್​ಗಳು ಒಂದೆರಡಲ್ಲ. ಒಂದಿಲ್ಲೊಂದು ವಿಚಾರಕ್ಕೆ ಅವರನ್ನು ಟ್ರೋಲ್ ಮಾಡಲಾಗುತ್ತದೆ. ಆಗಂತ ಕೆಟ್ಟ ಸುದ್ದಿಗಳಿಂದ ಮಾತ್ರವಲ್ಲ, ಅದೇ ರೀತಿ ರಶ್ಮಿಕಾ ಮಂದಣ್ಣ ಅವರು ಒಳ್ಳೆಯ ಕೆಲಸಗಳಿಂದಲೂ ಸುದ್ದಿ ಆಗುತ್ತಾರೆ. ಹೌದು ರಶ್ಮಿಕಾ ಎಲ್ಲ ನಟಿಯರಿಗಿಂತ ಸ್ವಲ್ಪ ವಿಭಿನ್ನ ಹೀಗಾಗಿ ಅಭಿಮಾನಿಗಳು ಸೆಲ್ಫಿ ಕೇಳೋಕೆ ಬಂದರೆ ಅವರು ಬೇಸರ ಮಾಡಿಕೊಳ್ಳುವುದಿಲ್ಲ. ಅಭಿಮಾನಿಗಳು ತಳ್ಳಾಡಿದರೂ ಕೋಪ ಮಾಡಿಕೊಳ್ಳುವುದಿಲ್ಲ ಒಂದು ರೀತಿ ಮುಗ್ದವಾಗಿ ನಡೆದುಕೊಳ್ಳುತ್ತಾರೆ. ಸದ್ಯ ರಶ್ಮಿಕಾ ಬಹುನಿರೀಕ್ಷಿತ ಅನಿಮಲ್ ಸಿನಿಮಾ, ತೆಲುಗುವಿನಲ್ಲಿ ಪುಷ್ಪ 2 ಮತ್ತು ರೇನ್ಬೋದಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ಕೆಲವು ದಿನಗಳ ಹಿಂದೆ ವಿಜಯ್ ದೇವರಕೊಂಡ ಕೈ ಹಿಡಿದು ಪೋಸ್ ಕೊಟ್ಟು ಶೀಘ್ರದಲ್ಲಿ ಮತ್ತೊಂದು ವಿಶೇಷ ಸುದ್ದಿ ಅನೌನ್ಸ್ ಮಾಡುವುದಾಗಿ ಹೇಳಿದ್ದರು.

WhatsApp Group Join Now
Telegram Group Join Now

ಹೀಗಾಗಿ ರಶ್ಮಿಕಾ ಮಂದಣ್ಣ ಎಲ್ಲಿರಲಿ ಏನೇ ಮಾಡಲಿ ಸುದ್ದಿಯಲ್ಲಿರುತ್ತಾರೆ. ಸದ್ಯ ಇದೀಗ ಮತ್ತೊಬ್ಬರ ಮದುವೆಗೆ ಹೋಗಿ ಸುದ್ದಿಯಾಗಿದ್ದಾರೆ. ಹೌದು ರಶ್ಮಿಕಾ ಮಂದಣ್ಣ ಅವರು ಸಹಾಯಕ ಸಾಯಿ ಅವರ ಮದುವೆಗೆ ಹಾಜರಿ ಹಾಕಿದ್ದಾರೆ. ಈ ಮದುವೆಯಲ್ಲಿ ಅವರೇ ಕೇಂದ್ರ ಬಿಂದು ಆಗಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೌದು ರಶ್ಮಿಕಾ ಮಂದಣ್ಣ ತಮ್ಮ ತಂಡದ ಸದಸ್ಯರನ್ನು ಕುಟುಂಬದವರಂತೆ ಟ್ರೀಟ್ ಮಾಡುತ್ತಾರೆ. ಈ ಕಾರಣದಿಂದಲೇ ಟೀಂನವರಿಗೆ ರಶ್ಮಿಕಾ ಮಂದಣ್ಣ ಅವರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ.

ಇದನ್ನೂ ಓದಿ: ವಿದೇಶದಲ್ಲಿ ಅರೆಬರೇ ಬಟ್ಟೆಯಲ್ಲಿ ಕಾಣಿಸಿಕೊಂಡ ಸೋನುಗೌಡ; ಒಳ ಉಡುಪಿನಲ್ಲಿ ರೆಸಾರ್ಟ್ ನಲ್ಲಿ ಸೋನುಗೌಡ ಫೋಟೋಶೂಟ್

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಕಾಲಿಗೆ ಬಿಳೋ ದೊಡ್ಡ ವ್ಯಕ್ತಿನಾ ಎಂದ ನೆಟ್ಟಿಗರು!

ಇನ್ನು ರಶ್ಮಿಕಾ ಸಹಾಯಕರಾದ ಸಾಯಿ ಎಂಬುವವರು ಇತ್ತೀಚೆಗೆ ಮದುವೆ ಆಗಿದ್ದಾರೆ. ಹೈದರಾಬಾದ್​ನಲ್ಲಿ ಈ ಮದುವೆ ನಡೆದಿದೆ. ರಶ್ಮಿಕಾ ಮಂದಣ್ಣ ಅವರಿಗೂ ಮದುವೆಗೆ ಆಹ್ವಾನ ಇತ್ತು. ಅವರು ಕೂಡ ವಿವಾಹ ಸಮಾರಂಭಕ್ಕೆ ಹೋಗಿದ್ದಾರೆ. ಹೌದು ರಶ್ಮಿಕಾ ಮಂದಣ್ಣ ಸಖತ್ ಬ್ಯುಸಿ ಇದ್ದಾರೆ. ಆದ್ರೂ ಕೂಡ ಸಾಯಿಗೋಸ್ಕರ ಬಿಡುವು ಮಾಡಿಕೊಂಡು ಮದುವೆಗೆ ಹಾಜರಿ ಹಾಕಿದ್ದಾರೆ. ಇನ್ನು ಇಲ್ಲಿ ಒಂದು ರೀತಿ ಅನಿರೀಕ್ಷಿತಾ ವಾತಾವರಣ ಸೃಷ್ಟಿಯಾಗಿಬಿಡುತ್ತೆ ಹೌದು ನವದಂಪತಿ ಆಶೀರ್ವಾದ ಪಡೆಯಲು ರಶ್ಮಿಕಾ ಮಂದಣ್ಣ ಅವರ ಕಾಲಿಗೆ ನಮಸ್ಕರಿಸಿದ್ದಾರೆ. ಈ ವೇಳೆ ರಶ್ಮಿಕಾ ಮಂದಣ್ಣಗೆ ಏನು ಮಾಡಬೇಕು ಎಂಬುದೇ ತಿಳಿಯಲಿಲ್ಲ.

ಸಾಯಿ ಹಾಗೂ ಅವರ ಪತ್ನಿ ಕಾಲಿಗೆ ನಮಿಸಿದ್ದನ್ನು ನೋಡಿ ರಶ್ಮಿಕಾಗೆ ನಾಚಿಕೆ ಆಗಿದೆ. ಏನ್ ಆಗ್ತಿದೆ ಅಂತ ಗೊತ್ತಾಗೋ ಅಷ್ಟ್ರಲ್ಲಿ ಇಬ್ಬರು ರಶ್ಮಿಕಾ ಕಾಲು ಮುಟ್ಟಿ ನಮಸ್ಕಾರ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಮುಜುಗರ ಪಡುವ ರಶ್ಮಿಕಾ ಮಂದಣ್ಣ ನೀವಿಬ್ಬರು ಖುಷಿಯಾಗಿರಿ ಎಂದು ವಿಶ್ ಮಾಡುತ್ತಾರೆ. ಇನ್ನು ಆಶೀರ್ವಾದ ಮಾಡುವಷ್ಟು ದೊಡ್ಡ ಹುಡುಗಿ ಆಗಿದ್ದಾಳ ರಶ್ಮಿಕಾ ಮಂದಣ್ಣ? ಒಳ್ಳೆಯವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಿರಿ ಏನೂ ಸಾಧನೆ ಮಾಡದವರ ಕಾಲಿಗೆ ಅಲ್ಲ ಅಂತ ನೆಟ್ಟಿಗರು ಬೇರೆ ಬೇರೆ ರೀತಿ ಕಾಮೆಂಟ್ ಮಾಡ್ತಿದ್ದಾರೆ. ಆದ್ರೆ ಇನ್ನು ಕೆಲವರು ಹರ್ಷ ವ್ಯಕ್ತಪಡಿಸಿದ್ದಾರೆ.

ಇನ್ನು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರಶ್ಮಿಕಾ ಮಂದಣ್ಣ ಆರಾಮಾಗಿಯೇ ಇದ್ದಾರೆ. ಹೌದು ಆಶಿರ್ವಾದ ಪಡೆದ ಸ್ವಲ್ಪ ಸಮಯಕ್ಕೆ ರಶ್ಮಿಕಾ ಮಂದಣ್ಣರನ್ನು ಪಕ್ಕಕ್ಕೆ ಕರೆದು ವಧು-ವರ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆದ್ರೆ ಪಾಪ ಅಲ್ಲೂ ಕ್ಯಾಮೆರಾ ನೋಡದೆ ಅಲ್ಲಿ ಇಲ್ಲಿ ಇರುವರನ್ನು ಮಾತನಾಡಿಸಿಕೊಂಡು ಬಹಳ ಸ್ವಭಾವಿಕವಾಗಿ ನಡೆದುಕೊಂಡು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಇನ್ನು ಮದುವೆಗೆ ಬಹಳ ಸಿಂಪಲ್ ಆಗಿಯೇ ಬಂದಿದ್ದ ರಶ್ಮಿಕಾ ಕ್ಯೂಟ್ ಆಗಿ ಕಾಣಿಸುತ್ತಿದ್ದರು. ಹೌದು ಹಳದಿ ಬಣ್ಣದ ಫ್ಯಾನ್ಸಿ ಸೀರೆಗೆ ಸ್ಲೀವ್‌ ಲೆಸ್ ಬ್ಲೌಸ್ ಧರಿಸಿ ರಶ್ಮಿಕಾ ಮಂದಣ್ಣ ಎಂಟ್ರಿ ಕೊಟ್ಟಿದ್ರು. ಸದ್ಯ ಸುಂದರ ನಟಿಯನ್ನು ನೋಡಿ ವಧು-ವರರ ಫ್ಯಾಮಿಲಿ ಸೆಲ್ಫಿ ಪಡೆಯಲು ಮುಗ್ಗಿ ಬಿದ್ದಿದ್ದು, ಯಾವುದಕ್ಕೂ ಬೇಜಾರು ಮಾಡಿಕೊಳ್ಳದೆ ಸಮಾಧಾನದಿಂದಲೇ ರಶ್ಮಿಕಾ ಎಲ್ಲರನ್ನ ನಿಭಾಯಿಸಿಕೊಂಡು ಯಾರ ಮನಸು ನೋಯಿಸದೆ ಅಲ್ಲಿಂದ ಹೊರ ನಡೆದಿದ್ದಾರೆ.

ಇದನ್ನೂ ಓದಿ: ಶಕ್ತಿ ಯೋಜನೆ ಪ್ರಾರಂಭವಾದಾಗ ಮೆಟ್ಟಿಲುಗಳಿಗೆ ನಮಸ್ಕರಿಸಿದ್ದ ಅಜ್ಜಿ; ಅನುಬಂಧ ಅವಾರ್ಡ್ ನಲ್ಲಿ ಸಿಎಂ ಮುಂದೆ ಸಂಗವ್ವ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram