ರೇಷನ್ ಕಾರ್ಡ್ ಸೇರ್ಪಡೆ/ತಿದ್ದುಪಡಿಗೆ ಅವಕಾಶ, ನಿಮ್ಮ ಜಿಲ್ಲೆಗಳಿಗೆ ಎಷ್ಟು ಸಮಯವನ್ನು ಕೊಡಲಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ.

Ration Card: ಜಿಲ್ಲೆಯ ಹಲವೆಡೆಯಲ್ಲಿ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು ಸಾರ್ವಜನಿಕರು ಇದರ ಬಗ್ಗೆ ಮಾಹಿತಿಯನ್ನು. ಪಡೆದುಕೊಳ್ಳಬೇಕಾಗಿದೆ. ಮೊದಲು ನೀಡಿದ ಅವಕಾಶ ಅರ್ಧದಲ್ಲೇ ನಿಂತು ಹೋದ ಕಾರಣ ಆಗ ಉಳಿದ ಅಭ್ಯರ್ಥಿಗಳಿಗೆ ಈಗ ಅವಕಾಶವನ್ನು ಪುನಃ ಸರ್ಕಾರ ಕಲ್ಪಿಸಿಕೊಟ್ಟಿದೆ. ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಮೂರರಿಂದ ನಾಲ್ಕು ದಿನಗಳ ಅವಕಾಶವನ್ನು ನೀಡಲಿದ್ದು, ಅಷ್ಟರಲ್ಲಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಯನ್ನ ಮಾಡಿಕೊಳ್ಳಬೇಕಾಗಿದೆ. 

WhatsApp Group Join Now
Telegram Group Join Now

ಬಾಗಲಕೋಟೆ, ಬೆಳಗಾವಿ ಸೇರಿದಂತೆ ಚಿಕ್ಕಮಗಳೂರು, ಚಾಮರಾಜನಗರ, ಧಾರವಾಡ, ದಕ್ಷಿಣ ಕನ್ನಡ,ಹಾವೇರಿ, ವಿಜಯಪುರ, ಕೊಡಗು, ಉಡುಪಿ, ಮೈಸೂರು ಮತ್ತು ಉತ್ತರ ಕನ್ನಡ ಈ ಜಿಲ್ಲೆಗಳಲ್ಲಿ ಅಕ್ಟೋಬರ್ 17 ಮತ್ತು 18ರಂದು ರೇಷನ್ ಕಾರ್ಡ್ ಅನ್ನ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಹಾಗೆ ಇನ್ನಿತರ ಜಿಲ್ಲೆಗಳಾದ ಕಲ್ಬುರ್ಗಿ, ಕೋಲಾರ, ಯಾದಗಿರಿ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಶಿವಮೊಗ್ಗ, ಬೀದರ್, ವಿಜಯನಗರ ಜಿಲ್ಲೆಗಳು ಅಕ್ಟೋಬರ್ 19 ಮತ್ತು ಅಕ್ಟೋಬರ್ 21 ರವರೆಗೆ ತಿದ್ದುಪಡಿಯನ್ನ ಮಾಡಿಕೊಳ್ಳಬಹುದು. ಬೆಳಿಗ್ಗೆ 10:00ಯಿಂದ ಸಂಜೆ 7:00 ತನಕ ಕಚೇರಿಯು ತೆರೆಯಲಿದ್ದು ಅಭ್ಯರ್ಥಿಗಳು ಈ ಸಮಯದ ಒಳಗಾಗಿ ರೇಷನ್ ಕಾರ್ಡ್ ತಿದ್ದುಪಡಿಯನ್ನ ಮಾಡಬೇಕಾಗಿದೆ. ಈ ಕೇಂದ್ರಗಳಿಗೆ ಭೇಟಿ ನೀಡಿ ಪಡಿತರ ಚೀಟಿಯ ತಿದ್ದುಪಡಿಯನ್ನ ಮಾಡಿಕೊಳ್ಳಬಹುದು.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ರೇಷನ್ ಕಾರ್ಡ್ ತಿದ್ದುಪಡಿಯ ಪ್ರಯೋಜನಗಳೇನು?

ರೇಷನ್ ಕಾರ್ಡ್(Ration card) ನಲ್ಲಿ ತಿದ್ದುಪಡಿಯ ಮಾಡಿಕೊಳ್ಳುವುದರಿಂದ ನೀವು ಗೃಹಲಕ್ಷ್ಮಿ ಯೋಜನೆಯ ಹಾಗೂ ಅನ್ನಭಾಗ್ಯ ಯೋಜನೆ ಹಾಗೂ ಇತರ ಯೋಜನೆಯ ಉಪಯೋಗಗಳನ್ನು ಪಡೆದುಕೊಳ್ಳಬಹುದು. ಪ್ರಜೆಗಳಿಗಂದೇ ನಿರ್ಮಿಸಲಾದ ಐದು ಯೋಜನೆಗಳಲ್ಲಿ ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳುವುದಕ್ಕೆ ನಿಮಗೆ ಪಡಿತರ ಚೀಟಿ ಎನ್ನುವುದು ಪ್ರಮುಖವಾಗಿದೆ.

ನಿಮ್ಮ ರೇಷನ್ ಕಾರ್ಡ್ ಸರಿಯಾಗಿದ್ದರೇನೇ ನಿಮಗೆ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆ ನೀವು ಈ ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ನಿಮ್ಮ ಮನೆಯ ಯಜಮಾನಿಯರ ಹೆಸರು ಅಂದರೆ ಯಾರು ಈ ಯೋಜನೆಗೆ ಅರ್ಹರಾಗಿದ್ದಾರೆ ಅವರ ಹೆಸರನ್ನ ಮೊದಲನೆಯದಾಗಿ ಎಂಟ್ರಿ ಮಾಡಬೇಕು. ಯಾರಾದರೂ ಮರಣ ಹೊಂದಿದ್ದರೆ ಅಂತ ಅವರ ಹೆಸರನ್ನ ರೇಷನ್ ಕಾರ್ಡಿನಿಂದ ತೆಗೆದು ಹಾಕಬೇಕು ಈ ರೀತಿ ಮಾಡುವುದರಿಂದ ನೀವು ಈ ಯೋಜನೆಗಳಿಗೆ ಅರ್ಹರಾಗುತ್ತೀರಾ.

ಒಂದು ವೇಳೆ ರೇಷನ್ ಕಾರ್ಡನ್ನು ತಿದ್ದುಪಡಿ ಮಾಡದೆ ಇದ್ದಲ್ಲಿ ನೀವು ಯಾವ ಯೋಜನೆಗಳ ಫಲವನ್ನು ಕೂಡ ಪಡೆಯಲು ಸಾಧ್ಯವಾಗುವುದಿಲ್ಲ. ಹಿಂದೆ ನಿರ್ಮಿಸಿದ್ದ ಅವಕಾಶದಲ್ಲಿ ಸರ್ವರ್ ಸಮಸ್ಯೆಯಿಂದ ಬಹಳ ಜನರಿಗೆ ತಿದ್ದುಪಡಿಯನ್ನು ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದಲ್ಲಿ ಸರಕಾರ ಈಗ ಮತ್ತೆ ಮೂರರಿಂದ ನಾಲ್ಕು ದಿನಗಳ ಕಾಲ ಅವಧಿಯನ್ನು ವಿಸ್ತರಿಸಿದೆ. ಫಲಾನುಭವಿಗಳು ಸಂಪೂರ್ಣವಾಗಿ ಅವಧಿಯ ಪ್ರಯೋಜನವನ್ನು ತೆಗೆದುಕೊಳ್ಳಬೇಕು. ಹಾಗೂ ಯೋಜನೆಗಳ ಉಪಯೋಗವನ್ನು ಪಡೆದುಕೊಳ್ಳಲು ಅರ್ಹರಾಗುತ್ತೀರಾ. 

ಇದನ್ನೂ ಓದಿ: ಮ್ಯೂಚುಯಲ್ ಫಂಡ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕಾ? ಇದು ಹೇಗೆ ಕೆಲಸ ಮಾಡುತ್ತೆ ಇದರಿಂದ ಆಗುವ ಲಾಭಗಳೇನು ಎನ್ನುವ ಸಂಪೂರ್ಣ ಮಾಹಿತಿ.

ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರದಿಂದ ನೌಕರರಿಗೆ ಗುಡ್ ನ್ಯೂಸ್; ಬೋನಸ್ ಸಿಹಿಸುದ್ದಿ ಕೊಟ್ಟ ಕೇಂದ್ರ ಸರ್ಕಾರ

ಇದನ್ನೂ ಓದಿ: ರೇಷನ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಉಚಿತ ಉಜ್ಜಲ್ ಸಿಲಿಂಡರ್, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಸಂಪೂರ್ಣ ಮಾಹಿತಿ…

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram