ರೇಷನ್ ಕಾರ್ಡ್ ಹೆಸರು ಸೇರ್ಪಡೆ/ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದ ರಾಜ್ಯ ಸರ್ಕಾರ.

Ration Card: ರೇಷನ್ ಕಾರ್ಡ್ ತಿದ್ದುಪಡಿಗೆ ಹೊಸ ಅವಕಾಶವನ್ನು ಕಲ್ಪಿಸಿಕೊಟ್ಟ ಆಹಾರ ಇಲಾಖೆ, ಅಕ್ಟೋಬರ್ 5 ರಿಂದ 13ರವರೆಗೂ ರೇಷನ್ ಕಾರ್ಡ್ ತಿದ್ದುಪಡಿಯ ಅವಕಾಶವನ್ನು ನೀಡಿತ್ತು . ಅಂದರೆ ಸುಮಾರು ಒಂದು ವಾರಗಳ ಕಾಲ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿತ್ತು. ಆದರೆ ಸರ್ವರ್ (server down) ಸಮಸ್ಯೆಯಿಂದ ಅರ್ಧಕ್ಕೆ ನಿಲ್ಲಿಸಲಾಯಿತು. ಈಗ ಪುನಃ ನವೆಂಬರ್ 1ರಿಂದ ಪುನಹ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿದೆ. ಈ ಹಿಂದೆ ಸೆಪ್ಟೆಂಬರ್ ತಿಂಗಳಿನಲ್ಲಿ ಮೂರು ದಿನಗಳ ಕಾಲ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿತ್ತು. ಆದರೆ ಕೆಲವು ಜನರ ರೇಷನ್ ಕಾರ್ಡುಗಳು ಸಮಯದ ಅಭಾವದಿಂದ ಇನ್ನೂ ತಿದ್ದುಪಡಿಯಾಗಿರಲಿಲ್ಲ. ಅದರಿಂದ ಈಗ ಮತ್ತೆ ಅಕ್ಟೋಬರ್ ನಲ್ಲಿ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿತ್ತು. ಇದರಲ್ಲಿ ಎಪಿಎಲ್ ಕಾರ್ಡ್ ಬಿಪಿಎಲ್ ಕಾರ್ಡ್ ಮತ್ತು ಎ ಎ ವೈ ಕಾರ್ಡಿನವರಿಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

WhatsApp Group Join Now
Telegram Group Join Now

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಅವಕಾಶ ಅವಧಿ ವಿಸ್ತರಣೆ

ಸುಮಾರು ಒಂದು ವಾರಗಳ ಕಾಲ ಅಂದರೆ 9 ದಿನಗಳ ಕಾಲ ಅವಕಾಶವನ್ನು ಕೊಡಲಾಗಿತ್ತು. ಅಕ್ಟೋಬರ್ 5ರಿಂದ 13ನೇ ತಾರೀಖಿನವರೆಗೂ ಕೂಡ ಅವಕಾಶವನ್ನು ಕಲ್ಪಿಸಲಾಗಿತ್ತು. ಈ ಹಿಂದೆ ಯಾರು ತಮ್ಮ ರೇಷನ್ ಕಾರ್ಡನ್ನು(Ration Card) ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲವೋ ಅವರೆಲ್ಲರೂ ಕೂಡ ಈ ಸಮಯದಲ್ಲಿ ಅಂದರೆ ನವೆಂಬರ್ 1 ರಿಂದ ಮಾಡಿಕೊಳ್ಳಬಹುದಾಗಿದೆ. ಈ ಬಾರಿ ಸಾಕಷ್ಟು ಕಾಲಾವಕಾಶವನ್ನು ನೀಡಿದ್ದು ಎಲ್ಲರೂ ತಿದ್ದುಪಡಿ ಮಾಡಿಸಬೇಕು ಎಂದು ಆಹಾರ ಇಲಾಖೆ ಕೇಳಿಕೊಂಡಿದೆ.

ಗೃಹಲಕ್ಷ್ಮಿ ಯೋಜನೆಯ ಹಣ ಕೆಲವು ಯಜಮಾನಿಯರಿಗೆ ಬಂದಿಲ್ಲ. ದಾಖಲಾತಿಗಳನ್ನು ನೋಡಿದಾಗ ಹಲವು ಜನರ ಪಡಿತರ ಚೀಟಿಗಳಲ್ಲಿ ತಿದ್ದುಪಡಿಯಾಗಿರಲಿಲ್ಲ. ಮನೆ ಯಜಮಾನ ಹೆಸರು ಸೇರ್ಪಡೆಯಾಗುವುದಾಗಲಿ ಅಥವಾ ಮರಣ ಹೊಂದಿದವರ ಹೆಸರನ್ನು ರೇಷನ್ ಕಾರ್ಡಿನಿಂದ ತೆಗೆದು ಹಾಕುವುದಾಗಲಿ ಇತರ ಯಾವ ತಿದ್ದುಪಡಿಯೂ ಕೂಡ ಆಗಿರಲಿಲ್ಲ. ಹಾಗೆ ಇಂದು ಕೆಲವು ಜನರಿಗೆ ಅನ್ನಭಾಗ್ಯ ಯೋಜನೆಯ ಹಣವು ಕೂಡ ಸಿಗುತ್ತಿಲ್ಲ. ಎಲ್ಲದಕ್ಕೂ ಕಾರಣ ಅಂದರೆ ರೇಷನ್ ಕಾರ್ಡ್ ತಿದ್ದುಪಡಿ.

ಇದನ್ನೆಲ್ಲಾ ಅರಿತ ರಾಜ್ಯ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ ಸಾಕಷ್ಟು ಸಮಯಾವಕಾಶ ವನ್ನು ನೀಡಿದೆ. ಈ ನಿಟ್ಟಿನಲ್ಲಿ ಎಲ್ಲಾ ಎಪಿಎಲ್ ಬಿಪಿಎಲ್ ಹಾಗೂ ಎ ಎ ವೈ ಕಾರ್ಡ್ ಗಳನ್ನು ಹೊಂದಿರುವವರು ತಿದ್ದುಪಡಿಯನ್ನ ಮಾಡಿಕೊಳ್ಳಬೇಕಿದೆ. ರೇಷನ್ ಕಾರ್ಡ್ ತಿದ್ದುಪಡಿ ಆದರೆ ಮಾತ್ರ ನೀವು ಎಲ್ಲ ಯೋಜನೆಗೂ ಕೂಡ ಬದ್ಧರಾಗಿರುತ್ತೀರಾ. ಸರಕಾರದ ಇದು ಯೋಜನೆಗಳನ್ನು ನೀವು ಪಡೆಯಬೇಕು ಅಂದರೆ ನಿಮ್ಮ ರೇಷನ್ ಕಾರ್ಡ್ ಮೊದಲು ತಿದ್ದುಪಡಿಯಾಗಬೇಕು.

ಬೆಳಿಗ್ಗೆ 10:00 ರಿಂದ ಸಂಜೆ 7:00 ವರೆಗೂ ಕೂಡ ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ನೀವು ನಿಮ್ಮ ಪಡಿತರ ಚೀಟಿಯನ್ನು ತಿದ್ದುಪಡಿಸಿಕೊಳ್ಳಬಹುದಾಗಿದೆ. ಈ ಹಿಂದೆ ಕರ್ನಾಟಕ ಸರ್ಕಾರ ಸಾಕಷ್ಟು ಕಾಲಾವಕಾಶವನ್ನು ನೀಡಿದ್ದು ಕೆಲವೊಂದು ತಾಂತ್ರಿಕ ದೋಷಗಳಿಂದ ( server down) ತಿದ್ದುಪಡಿಯ ಕೆಲಸ ಅರ್ಧಕ್ಕೆ ನಿಂತು ಹೋಗಿತ್ತು. ಆದರೆ ಈಗ ನವೆಂಬರ್ 1ನೇ ತಾರೀಖಿನಿಂದ ಸಾಕಷ್ಟು ಕಾಲಾವಕಾಶವನ್ನು ಒದಗಿಸಲಾಗುತ್ತಿದ್ದು, ಈ ಸಮಯದಲ್ಲಿ ಕೆಲಸವನ್ನು ಮಾಡಿಕೊಳ್ಳಬಹುದಾಗಿದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಹಾಗಾದ್ರೆ ರೇಷನ್ ಕಾರ್ಡ್ ನಲ್ಲಿ ಏನೇನು ತಿದ್ದುಪಡಿ ಮಾಡಬಹುದು?

ಗೃಹಲಕ್ಷ್ಮಿ ಫಲಾನುಭವಿಯ ಹೆಸರನ್ನು ಸೇರ್ಪಡೆ ಮಾಡುವುದು, ಮುಖ್ಯಸ್ಥರ ಹೆಸರನ್ನು ಬದಲಾವಣೆ ಮಾಡುವುದು, ಹಾಗೂ ಯಾರಾದರೂ ಮನೆಯಲ್ಲಿ ಮರಣ ಹೊಂದಿದ್ದರೆ ಅಂತಹವರ ಹೆಸರನ್ನ ರೇಷನ್ ಕಾರ್ಡಿನಿಂದ ತೆಗೆದುಹಾಕುವುದು, ಫಲಾನುಭವಿಗಳ ಹೆಸರನ್ನು ರೇಷನ್ ಕಾರ್ಡ್(Ration Card) ನಲ್ಲಿ ಮನೆಯ ಯಜಮಾನಿ ಎಂದು ತೋರಿಸಬೇಕು.

ರಾಜ್ಯದ ಎಲ್ಲೆಡೆಯೂ ಕೂಡ ಅವಕಾಶವನ್ನು ಪಡೆಯಬಹುದಾಗಿದೆ ಬೆಂಗಳೂರಿನ ನಗರ ಬೆಂಗಳೂರು ಗ್ರಾಮಾಂತರ ಹಾಗೂ ಬೆಳಗಾವಿ ಮತ್ತು ಕಲ್ಬುರ್ಗಿಯಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟಿನಲ್ಲಿ ಕರ್ನಾಟಕ ಸರ್ಕಾರವು ಈ ಬಾರಿ ಪಡಿತರ ಚೀಟಿ ತಿದ್ದುಪಡಿಗೆ ಸಾಕಷ್ಟು ಸಮಯವನ್ನು ನೀಡುತ್ತಿದ್ದು, ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳ.ಬೇಕಾಗಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಸಿಗಲಿದೆ 10ಸಾವಿರ ಸ್ಕಾಲರ್ ಶಿಪ್; ಅರ್ಜಿ ಸಲ್ಲಿಸೋದು ಹೇಗೆ? ಎಲ್ಲಿ?ಸಂಪೂರ್ಣ ಮಾಹಿತಿ ಇಲ್ಲಿದೆ

ಇದನ್ನೂ ಓದಿ: ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಒಂದು ಅದ್ವಿತೀಯ ಶಕ್ತಿಯುತ ವಾಹನವಾಗಿದೆ. ಕಡಿಮೆ ಚಾರ್ಜ್ ನಲ್ಲಿ ಹೆಚ್ಚಿನ ಮೈಲೇಜ್