ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್! ಜೂನ್ 30ರ ಒಳಗೆ ಈ ಕೆಲಸ ಕಡ್ಡಾಯ.. ಸರ್ಕಾರದಿಂದ ಹೊಸ ನಿಯಮ ಜಾರಿ

ಈಗಾಗ್ಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತವನ್ನ ಪಡೆದುಕೊಂಡು ಮುಖ್ಯಮಂತ್ರಿ ವಿಚಾರವಾಗಿ ನಾನಾ ಅಥವಾ ನಿನಾ ಅನ್ನೋ ಚರ್ಚೆಗಳು ಜೋರಾಗಿದ್ದು ಕಾಂಗ್ರೆಸ್ ಹೈಕಮಾಂಡ್ ಗೆ ಈ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ. ಈ ಮಧ್ಯೆ ಕೇಂದ್ರ ಸರ್ಕಾರ ರೇಷನ್ ಕಾರ್ಡುದಾರರಿಗೆ ಹೊಸ ರೂಲ್ಸ್ ಮಾಡಿದ್ದು, ಈ ಒಂದು ಕೆಲಸವನ್ನ ತಪ್ಪದೆ ಮಾಡಲೇಬೇಕು ಇಲ್ಲವಾದ್ರೆ ಎಲ್ಲ ತರಹದ ರೇಷನ್ ಕಾರ್ಡ್ ಗಳು ಕೂಡ ರದ್ದಾಗುತ್ತವೆ. ಹೌದು ರಾಜ್ಯದಲ್ಲಿ ಈಗಾಗ್ಲೇ ಸುಳ್ಳು ದಾಖಲೆಗಳನ್ನ ನೀಡಿ ಅರ್ಹರಲ್ಲದವರು ಕೂಡ ಇದೀಗ ಪಡಿತರ ಅಕ್ಕಿಯನ್ನ ಪಡೆದು ಬಡವರ ಹೆಸರಿನಲ್ಲಿ ಮೋಸವನ್ನ ಮಾಡ್ತಿದ್ದಾರೆ ಇಂತವರ ಮೋಸದಾಟಕ್ಕೆ ಸರ್ಕಾರ ಕಡಿವಾಣ ಹಾಕುವ ಸಲುವಾಗಿ ಹೊಸ ರೂಲ್ಸ್ ಕೆಲವೊಂದಷ್ಟು ಬದಲಾವಣೆಗಳನ್ನ ತರುತ್ತಲೇ ಇರುತ್ತದೆ. ಈಗಲೂ ಕೂಡ ಕೇಂದ್ರ ಸರ್ಕಾರ ಪಡಿತರ ಚೀಟಿದಾರರಿಗೆ ಹೊಸ ನಿಯಮವೊಂದನ್ನ ಜಾರಿಗೊಳಿಸಲಾಗುತ್ತಿದ್ದೂ, ಇದೀಗ ಒಂದು ವಿಚಾರವನ್ನ ಮಾಡೋದು ಕಡ್ಡಾಯಗೊಳಿಸಿದೆ. ಹಾಗಿದ್ರೆ ಯಾವ ಹೊಸ ರೂಲ್ಸ್ ನ್ನ ಸರ್ಕಾರ ಜಾರಿಗೋಳಿಸಿದೆ. ಏನೆಲ್ಲಾ ನಿಯಮಗಳಿವೆ ನೋಡೋಣ ಬನ್ನಿ.

WhatsApp Group Join Now
Telegram Group Join Now

ಹೌದು ಬಡವರಿಗೆ ಉಚಿತವಾಗಿ ಪಡಿತರವನ್ನ ಕೊಡೋದರ ಮೂಲಕ ಅವ್ರ ಹಸಿವನ್ನ ನೀಗಿಸಲು ಈಗಾಗ್ಲೇ ಬಿಪಿಎಲ್ ರೇಷನ್ ಕಾರ್ಡುದಾರರಿಗೆ ಉಚಿತವಾಗಿ ಅಕ್ಕಿ ಹಾಗೂ ಕಡಿಮೆ ಬೆಲೆಗೆ ಕೆಲವೊಂದಷ್ಟು ಸಾಮಾಗ್ರಿಗಳನ್ನ ಸರ್ಕಾರ ನೀಡ್ತಿದೆ. ಇನ್ನು ಎಪಿಎಲ್ ಕಾರ್ಡು ಹೊಂದಿರುವವರಿಗೂ ಕೂಡ ಕೆಲವೊಂದು ನಿಯಮಗಳ ಆಧಾರದ ಮೇಲೆ ಅಕ್ಕಿಯನ್ನ ಕಡಿಮೆ ಬೆಲೆಗೆ ನೀಡಲಾಗ್ತಿದೆ. ಆದ್ರೆ ಕೆಲವೊಂದಷ್ಟು ಜನರು ಇದರಲ್ಲೂ ಸರ್ಕಾರಕ್ಕೆ ಮೋಸವನ್ನ ಮಾಡುತ್ತಿದ್ದೂ ತಾವು ಶ್ರೀಮಂತರಾಗಿದ್ರು ಕೂಡ ಬಡವರ ಹೆಸರಿನಲ್ಲಿ ದಾಖಲೆಗಳನ್ನ ಸೃಷ್ಟಿಸಿ ಬಿಟ್ಟಿ ಪಡಿತರವನ್ನ ಪಡೆಯುವಲ್ಲಿ ಸಫಲರಾಗಿದ್ದಾರೆ. ಇನ್ನು ಬಡವರಲ್ಲದ ಅನೇಕ ಜನ ಬಡವರಿಗೆ ಸಿಗಬೇಕಾದ ಯೋಜನೆಯ ಲಾಭ ಪಡೆಯುತ್ತಿರುವುದು ಸಾಕಷ್ಟು ದಿನಗಳ ಹಿಂದೆಯೇ ಸರ್ಕಾರದ ಗಮನಕ್ಕೆ ಬಂದಿತ್ತು ಹೀಗಾಗಿ ಸರ್ಕಾರ ಅಂಥವರಿಗೆ ಒಂದು ಅವಕಾಶವನ್ನ ಕೊಟ್ಟು ನೋಡುವ ಪ್ರಯತ್ನವನ್ನು ಕೂಡ ಮಾಡಿತ್ತು, ಆದರೆ ಯಾರು ಕೂಡ ತಾವು ಬಡವರಲ್ಲ ಅಂತ ಹೇಳಿ ಪಡಿತರ ಕಾರ್ಡುಗಳನ್ನ ವಾಪಸ್ಸು ಮಾಡಿರಲಿಲ್ಲ. ಹೀಗಾಗಿ ಸರ್ಕಾರ ಇದೀಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಇದಕ್ಕೆ ಒಂದು ತಿಂಗಳ ಗಡುವನ್ನ ನೀಡಿ ಜುಲೈ 1ರಿಂದ ಹೊಸ ರೂಲ್ಸ್ ಜಾರಿಗೊಳಿಸಲು ಮುಂದಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ನ 5 ಭಾಗ್ಯಗಳಿಗೆ ದಿನಕ್ಕೆ ತಿಂಗಳಿಗೆ ಆಗುವ ದುಡ್ಡೆಷ್ಟು? ಇಂತ ಯೋಜನೆಗಳಿಗೆ ಹಣ ಎಲ್ಲಿಂದ ಬರುತ್ತೆ? ಸರ್ಕಾರ ಏನ್ ಮಾಡುತ್ತೆ?

ಜೂನ್ 30ರೊಳಗೆ ತಪ್ಪದೆ ಈ ಕೆಲಸ ಮಾಡಿ

ಹೌದು ಬಡವರಲ್ಲದವರು ಬಡವರ ಅಕ್ಕಿಯನ್ನ ಪಡೆದು ಕಾಳಸಂತೆಯಲ್ಲಿ ಅತೀ ಕಡಿಮೆ ಬೆಲೆಗೆ ಅಕ್ಕಿಯನ್ನ ಮಾರಿಕೊಳ್ಳುತ್ತಿದ್ದೂ ಇದನ್ನ ತಡೆಗಟ್ಟಲು ಮತ್ತು ಇಂತವರಿಗೆ ಕಡಿವಾಣ ಹಾಕುವ ಸಲುವಾಗಿ ಇದೀಗ ಕೇಂದ್ರ ಸರ್ಕಾರ ಇದೀಗ ಹೊಸ ಆದೇಶವನ್ನ ಹೊರಡಿಸಿದೆ. ಹೌದು ಎಪಿಎಲ್, ಬಿಪಿಎಲ್, ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವವರು ತಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡೋದು ಅನಿವಾರ್ಯ ಅಂತ ಹೇಳಿದ್ದು ಜೂನ್ ತಿಂಗಳ ಅಂತ್ಯದ ಒಳಗೆ ಈ ಒಂದು ಕೆಲಸವನ್ನ ಮಾಡಿ ಮುಗಿಸಲು ಗಡುವನ್ನ ಕೇಂದ್ರ ಸರ್ಕಾರ ನೀಡಿದೆ. ಹೌದು ಈ ನಿಯಮ ಎಲ್ಲ ರೇಷನ್ ಕಾರ್ಡುದಾರರಿಗೂ ಅನ್ವಯವಾಗಲಿದ್ದು, ಯಾವುದೇ ರೇಷನ್ ಕಾರ್ಡು ಹೊಂದಿದ್ದರು ಕೂಡ ಆಧಾರ ನಂಬರ್ ಜೋಡಣೆ ಮಾಡಿಸುವುದು ಕಡ್ಡಾಯ ಮಾಡಲಾಗಿದೆ. ಜೂನ್ ತಿಂಗಳ 30ನೇ ತಾರೀಖುನ ಒಳಗಾಗಿ ಪ್ರತಿಯೊಬ್ಬ ರೇಷನ್ ಕಾರ್ಡು ಬಳಕೆದಾರನು ಕೂಡ ತಮ್ಮ ರೇಷನ್ ಕಾರ್ಡ್ ಗೆ ಆಧಾರ್ ನಂಬರನ್ನ ಲಿಂಕ್ ಮಾಡಿಸಬೇಕು ಇಲ್ಲವಾದಲ್ಲಿ ಜುಲೈ 1ನೇ ತಾರೀಖುನಿಂದ ಅಂಥವರ ಕಾರ್ಡುಗಳನ್ನ ರದ್ದು ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಹೀಗಾಗಿ ಸರ್ಕಾರ ನೀಡಿರುವ ಈ ದಿನಾಕದ ಒಳಗಾಗಿ ಆಧಾರ್ ಕಾರ್ಡು ಲಿಂಕ್ ಮಾಡಿಸೋದನ್ನ ಮರೆತರೆ ಖಂಡಿತಾವಾಗಿಯೂ ನೀವು ರೇಷನ್ ಕಾರ್ಡ್ ಅನ್ನ ಕಳೆದುಕೊಳ್ಳುತ್ತಿರ. ಇನ್ನು ಹೊಸದಾಗಿ ರೇಷನ್ ಕಾರ್ಡು ಮಾಡಿಸುವವರಿಗೂ ಈ ನಿಯಮ ಅನ್ವಯವಾಗಳಿದ್ದು, ಅರ್ಜಿ ಸಲ್ಲಿಸುವ ಸಮಯದಲ್ಲಿ ಆಧಾರ್ ಸಂಖ್ಯೆಯನ್ನ ಕಡ್ಡಾಯವಾಗಿ ನೀಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ಒಟ್ಟಿನಲ್ಲಿ ಸರ್ಕಾರ ಎಷ್ಟೇ ಕಟ್ಟು ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡ್ರು ಕೆಲವೊಬ್ಬರು ತಮ್ಮ ಕೆಲ್ಸಗಳನ್ನ ಮುಂದುವರಿಸುತ್ತಲ್ಲೆ ಇರುತ್ತಾರೆ. ಆದರೆ ಅಂಥವರಿಗೆ ಒಂದಲ್ಲ ಒಂದು ದಿನ ಶಿಕ್ಷೆ ಕಟ್ಟಿಟ್ಟ ಬುತ್ತಿ ಅನ್ನೋದನ್ನ ಮರೆಯುವಂತಿಲ್ಲ. ಹೀಗಾಗಿ ಸರ್ಕಾರಾದ ನಿಯಮಗಳನ್ನ ಪಾಲಿಸೋದು ಪ್ರಜೆಗಳಾದ ನಮ್ಮ ಕರ್ತವ್ಯ ಹಾಗೂ ಅದು ನಮಗೆ ಒಳಿತು ಕೂಡ ಹೌದು ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಮಿಸ್ ಮಾಡ್ದೆ ನಮಗೆ ತಿಳಿಸಿ.

ಇದನ್ನೂ ಓದಿ: ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್ -5ಗ್ಯಾರಂಟಿಗಳನ್ನ ಈಡೇರಿಸುವ ಭರವಸೆ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram