ಇನ್ಮುಂದೆ ರೇಷನ್ ಕಾರ್ಡ್ ವಿಭಜನೆ ಸಾಧ್ಯವಿಲ್ಲ; ಅತ್ತೆಗೊಂದು ಸೊಸೆಗೊಂದು ರೇಷನ್ ಕಾರ್ಡ್ ಸಿಗಲ್ಲ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ಬಿಜೆಪಿ ಅಲೆಯಿದ್ದ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಎಬ್ಬಿಸೋದು ನಿಜಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಅತೀ ದೊಡ್ಡ ಟಾಸ್ಕ್ ಆಗಿತ್ತು. ಹಾಗೂ ಹೀಗೋ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿತು. ಇನ್ನು ಅಧಿಕಾರಕ್ಕೆ ಬಂದಿದ್ದು ಒಂದು ಪ್ರಹಸನವಾದ್ರೆ ಅಧಿಕಾರಕ್ಕೆ ಬರೋಕು ಮೊದಲು ಮತದಾರರಿಗೆ ಕೊಟ್ಟ ಅಶ್ವಾಸನೆಗಳನ್ನ ಈಡೇರಿಸೋದು ಮತ್ತೊಂದು ದೊಡ್ಡ ಸವಾಲಾಗಿ ಹೋಗಿತ್ತು. ಹೌದು ರಾಜ್ಯ ಕಾಂಗ್ರೆಸ್ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ.

WhatsApp Group Join Now
Telegram Group Join Now

ಈ ನಡುವೆ ಸುಳ್ಳು ಮಾಹಿತಿ ನೀಡಿ ಯೋಜನೆಗಳ ಲಾಭ ಪಡೆಯುತ್ತಿರುವ ಅನರ್ಹರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಅದರಲ್ಲೂ ಗೃಹಲಕ್ಷ್ಮೀ ಯೋಜನೆಯ(Gruha Lakshmi Scheme) ಲಾಭ ಪಡೆಯಲು ಇಲ್ಲಸಲ್ಲದ ಸರ್ಕಸ್ ಗೆ ಜನ ಕೈ ಹಾಕುದ್ರು, ಅದರಲ್ಲೂ ಒಂದೇ ಇದ್ದ ಪಡಿತರ ಚೀಟಿ ಒಬೊಬ್ಬರಿಗೆ ಒಂದಾಗಲು ಶುರುವಾಯ್ತು. ನಾವು ಬೇರೆ ನಮ್ಮ ಅತ್ತೆ ಬೇರೆ ಅಂತ ಒಬ್ಬೊಬ್ಬರು ಒಂದೊಂದು ಪಡಿತರ ಮಾಡಿಸೋಕೆ ಶುರು ಮಾಡುದ್ರು.. ಸದ್ಯ ಅಂತವರಿಗೆ ಸರ್ಕಾರ ಬಿಸಿ ಮುಟ್ಟಿಸಲು ಮುಂದಾಗಿದೆ.

ಹೌದು ರಾಜ್ಯ ಸರ್ಕಾರದ ಗ್ಯಾರಂಟಿಗಳಿಗೆ ಈಗ ಸಾಕಷ್ಟು ಬೇಡಿಕೆ ಇದೆ ಅನ್ನಬಹುದು. ಈ ಯೋಜನೆಗೆ ಹೆಚ್ಚಿನ ಜನರು ನೋಂದಾಯಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಹೌದು ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಗೆ ಹೆಚ್ಚಾಗಿ ಸೇರ್ಪಡೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಒಂದೇ ಕುಟುಂಬದಲ್ಲಿ ಎರಡು, ಮೂರು ರೇಷನ್ ಕಾರ್ಡ್ ವಿಭಜನೆಗೆ ಅವಕಾಶ ನೀಡದಂತೆ ಹಣಕಾಸು ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು ಒತ್ತಾಯಿಸಿದೆ. ಈ ಮೂಲಕ ಅತ್ತೆಗೊಂದು ರೇಷನ್ ಕಾರ್ಡ್, ಸೊಸೆಗೊಂದು ರೇಷನ್ ಕಾರ್ಡ್ ಪ್ರತ್ಯೇಕ ಮಾಡಿಸಿ ಸೌಲಭ್ಯ ಪಡೆಯುವ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ ಎದುರಾಗಿದೆ.

ಈ ಯೋಜನೆಗಳ ಪೈಕಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆಗೆ ರೇಷನ್ ಕಾರ್ಡ್(Ration Card) ಮುಖ್ಯವಾಗಿ ಅವಶ್ಯವಾಗಿದೆ. ಹೀಗಾಗಿ ಯೋಜನೆಯ ಲಾಭ ಪಡೆಯಲು ಒಂದೇ ಕುಟುಂಬದಲ್ಲಿ ರೇಷನ್ ಕಾರ್ಡ್ ಬೇರೆ ಬೇರೆ ಮಾಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅನರ್ಹ ಪಡಿತರ ಚೀಟಿದಾರರ ಪಟ್ಟಿ ಮಾಡಿ ಕಾರ್ಡ್ ಗಳನ್ನು ರದ್ದು ಮಾಡಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಮುಖ್ಯವಾದ ಮನೆಯ ಯಜಮಾನಿಯರಿಗೆ 2,000 ರೂ. ನೀಡುವ ಗೃಹಲಕ್ಷ್ಮೀ ಯೋಜನೆಗೆ ಈಗಾಗಲೇ ಸರ್ಕಾರದಿಂದ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಅನರ್ಹ ಪಡಿತರರನ್ನ ಗುರುತಿಸಲು ಸರ್ಕಾರದಿಂದ ಹೊಸ ರೂಲ್ಸ್

ಹೌದು ಈಗಾಗ್ಲೇ 1.26 ಕೋಟಿ ಮಹಿಳೆಯರಿಗೆ ಗೃಹಲಕ್ಷೀ ಯೊಜನೆ ಜಾರಿ ಮಾಡಲಾಗಿದೆ. ಇದರಲ್ಲಿ 1.10 ಕೋಟಿ ಜನರಿಗೆ ತಲಾ ರೂ.2000 ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಇನ್ನೂ 16 ಲಕ್ಷ ಜನರಿಗೆ ಬ್ಯಾಂಕ್ ಖಾತೆ ಹಾಗೂ ಆಧಾರ್ ಜೋಡಣೆ ತೊಂದರೆಯಿಂದ ಹಣ ಜಮೆ ಆಗಿರುವುದಿಲ್ಲ. ಶಕ್ತಿ ಯೋಜನೆಯಡಿ 50 ರಿಂದ 60 ಲಕ್ಷ ಮಹಿಳೆಯರು ಪ್ರತಿನಿತ್ಯ ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರ ಕುಟುಂಬದ ಸದಸ್ಯರಿಗೆ ತಲಾ ಒಂದು 10 ಕೆ.ಜಿ. ಅಕ್ಕಿ ನೀಡಲು ತೀರ್ಮಾನಿಸಲಾಗಿದೆ. ಸದ್ಯ 5 ಕೆ.ಜಿ. ಅಕ್ಕಿ ನೀಡುತ್ತಿದ್ದು, ಉಳಿದ 5 ಕೆ.ಜಿ. ಅಕ್ಕಿ ಬದಲಿಗೆ ಹಣ ನೀಡಲಾಗುತ್ತಿದೆ. ಹೀಗಾಗಿ ಈ ಎಲ್ಲ ಯೋಜನೆಗಳಿಗೆ ಫಲಾನುಭವಿಗಳ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ಈ ಮಧ್ಯೆ ಅನರ್ಹರು ಕೂಡ ನಾವು ಅರ್ಹರು ಅಂತ ಬಿಂಬಿಸಿಕೊಂಡು ಯೋಜನೆಯ ಲಾಭ ಪಡೆಯಲು ಮುಂದಾಗುತ್ತಿದ್ದಾರೆ ಹೀಗಾಗಿ ಅಂತವರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇದೀಗ ಹೊಸ ರೂಲ್ಸ್ ಮಾಡಿದ್ದು ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: ಪೊರಕೆಯ ಕೆಳಗಡೆ ಇದನ್ನ ಬಚ್ಚಿಡಿ ಪವಾಡ ನೋಡಿ; ಮನೆಗೆ ಅಪಾರ ಹಣ ಹರಿದು ಬರುತ್ತೆ

ಇದನ್ನೂ ಓದಿ: ಗೃಹಲಕ್ಷ್ಮೀ 2ನೇ ಕಂತಿ ಹಣ ಯಾವಾಗ ಬರುತ್ತೆ ಗೊತ್ತಾ? ಮೊದಲ ಕಂತಿನ ಹಣ ಬರೆದೆ ಇರೋರು ಏನ್ ಮಾಡಬೇಕು?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram