ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಹೊಂದಿರೋರಿಗೆ ಬಿಗ್ ಶಾಕ್; ಅಂತವರಿಗೆ ಸಿಗಲ್ಲ ಅನ್ನಭಾಗ್ಯ ಗೃಹಲಕ್ಷ್ಮಿ ಸೌಲಭ್ಯ

ಕೆಲವರ ಮನಸ್ಥಿತಿ ಹೇಗೆ ಅಂದ್ರೆ ಬಿಟ್ಟಿ ಸಿಕ್ಕುದ್ರೆ ನಂಗು ಇರಲಿ ನನ್ ಮಕ್ಕಳು ಮೊಮ್ಮಕ್ಕಳಿಗೂ ಇರಲಿ ಅನ್ನುವಂತಿರುತ್ತದೆ. ಅದರಲ್ಲಿ ಸರ್ಕಾರಿ ಸವಲತ್ತು ಅಂದ್ರೆ ಸಾಕು ಬಿಡೋದೇ ಇಲ್ಲ. ಏನಾದ್ರೂ ಮಾಡಿಯಾದ್ರೂ ಸರಿ ಅದ್ರಲ್ಲಿ ದುಪ್ಪಟ್ಟು ಲಾಭ ಮಾಡಿಕೊಳ್ಳೋ ಆಲೋಚನೆಯಲ್ಲಿ ಇರ್ತಾರೆ. ಅದರಲ್ಲಿ ಈಗೀನ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಭಾಗ್ಯ ಪಡೆಯಲು ಜನ ಮಾಡ್ತಿರೋ ಸರ್ಕಸ್ ಅಷ್ಟಿಷ್ಟಲ್ಲ. ಹೌದು ಗೃಹಲಕ್ಷ್ಮಿ ಯೋಜನೆಯ 2,000 ರೂಪಾಯಿಗಳನ್ನು ಪಡೆದುಕೊಳ್ಳಬೇಕು ಅಂದ್ರೆ, ರೇಷನ್ ಕಾರ್ಡ್ ಹೊಂದಿರುವುದು ಕಡ್ಡಾಯ ಎನ್ನುವುದು ಎಲ್ಲರಿಗೂ ಗೊತ್ತು. ಅದರ ಜೊತೆಗೆ ಅನ್ನಭಾಗ್ಯ ಯೋಜನೆಯ ಲಾಭಕ್ಕೂ ಇದು ಮುಖ್ಯ. ಆದರೆ ಈ ರೇಶನ್ ಕಾರ್ಡ್ ನಲ್ಲಿಯೂ ಕೂಡ ಪ್ರಮುಖ ಬದಲಾವಣೆಗಳನ್ನು ನೀವು ಮಾಡಿಕೊಳ್ಳಬೇಕು. ಇಲ್ಲವಾದರೆ ಗೃಹಲಕ್ಷ್ಮಿ ಯೋಜನೆಯ ಹಣ ಬ್ಯಾಂಕ್ ಅಕೌಂಟ್ ಗೆ ಬರುವುದಿಲ್ಲ.

WhatsApp Group Join Now
Telegram Group Join Now

ಇನ್ನು ಕೆಲವು ಕುಟುಂಬಗಳು ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್(Ration Card) ಅನ್ನು ಕೂಡ ಹೊಂದಿರುತ್ತವೆ. ಇಂಥವರಿಗೆ ಸರ್ಕಾರ ಹೊಸ ನಿಯಮ ಜಾರಿಗೆ ತರಲಿದ್ದು ಹಾಗೇನಾದ್ರೂ ಆದರೆ ಒಂದೇ ಕುಟುಂಬದಲ್ಲಿ ಇರುವವರು ಎರಡು ಅಥವಾ ಮೂರು ರೇಷನ್ ಕಾರ್ಡ್ ಹೊಂದಿದ್ದರೆ ಮುಂದೆ ತೊಂದರೆ ಅನುಭವಿಸಬೇಕಾಗಬಹುದು. ಒಂದು ಕುಟುಂಬದಲ್ಲಿ ಅಪ್ಪ-ಅಮ್ಮನ ಹೆಸರಿನಲ್ಲಿ ಒಂದು ರೇಷನ್ ಕಾರ್ಡ್, ಹಿರಿಯ ಮಗನ ಹಾಗೂ ಹೆಂಡತಿಯ ಹೆಸರಿನಲ್ಲಿ ಒಂದು ಕಾರ್ಡ್, ಎರಡನೇ ಮಗನ ಹಾಗೂ ಹೆಂಡತಿಯ ಹೆಸರಿನಲ್ಲಿ ಮತ್ತೊಂದು ಕಾರ್ಡ್ ಹೀಗೆ ಒಂದೇ ಕುಟುಂಬದ ಮೂವರು ಸದಸ್ಯರು ಮೂರು ಕಾರ್ಡ್ ಮಾಡಿಕೊಂಡು ಒಂದೇ ಕುಟುಂಬದಲ್ಲಿ ವಾಸಿಸುವಂತಿಲ್ಲ. ಎಲ್ಲರೂ ಬೇರೆ ಬೇರೆ ವಾಸಿಸುತ್ತಿದ್ದು ವಿಳಾಸವು ಕೂಡ ಬೇರೆ ಆಗಿದ್ದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಹೆಸರಿಗೆ ಮಾತ್ರ ಬೇರೆ ಬೇರೆ ಕುಟುಂಬದಲ್ಲಿ ವಾಸಿಸುತ್ತಿರುವಂತೆ ತೋರಿಸಿ ವಿಳಾಸ ಮಾತ್ರ ಒಂದೇ ಆಗಿದ್ದರೆ ಸಮಸ್ಯೆ ತಪ್ಪಿದ್ದಲ್ಲ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಸೌಲಭ್ಯ ಪಡೆದುಕೊಳ್ಳಲು ಸರ್ಕಾರಕ್ಕೆ ಮೋಸ ಮಾಡ್ತಿದ್ರೆ ಶಿಸ್ತು ಕ್ರಮ

ಹೌದು ರಾಜ್ಯದಲ್ಲಿ ಅದೆಷ್ಟೋ ಜನ ಸಕಲ ಅನುಕೂಲಗಳು ಇದ್ದರೂ ಕೂಡ ಬಿಪಿಎಲ್ ಪಡಿತರ ಕಾರ್ಡ್ ಹೊಂದಿದ್ದಾರೆ. ರಾಜ್ಯ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಯೋಜನೆಯಿಂದಾಗಿ ಈ ತರಹದ ವಂಚನೆಗಳು ಸರ್ಕಾರದ ಗಮನಕ್ಕೆ ಬರುತ್ತಿವೆ. ಒಂದು ಕುಟುಂಬದಲ್ಲಿ ಬೇರೆ ಬೇರೆ ರೇಷನ್ ಕಾರ್ಡ್(Ration Card) ಮಾಡಿಕೊಳ್ಳುವುದರಿಂದ ಹಿಡಿದು, ಮೃತ ಸದಸ್ಯರ ಹೆಸರನ್ನು ರೇಷನ್ ಕಾರ್ಡ್ ನಿಂದ ತೆಗೆಯದೆ ಇರುವ ವಂಚನೆಯವರೆಗೆ ಎಲ್ಲವನ್ನು ಸರ್ಕಾರ ಹಾಗೂ ಆರೋಗ್ಯ ಇಲಾಖೆ ಪತ್ತೆ ಹಚ್ಚುತ್ತಿದ್ದು, ಸದ್ಯದಲ್ಲಿಯೇ ಇಂತಹ ರೇಷನ್ ಕಾರ್ಡ್ ಗಳು ರದ್ದಾಗಲಿವೆ. ಯಾವುದೇ ಕಾರಣಕ್ಕೂ ಈ ರೀತಿ ಮಾಡಿ ಸರ್ಕಾರದ ಕಣ್ಣಿಗೆ ಮಣ್ಣೆರೆಚಲು ಸಾಧ್ಯವಿಲ್ಲ. ರೇಷನ್ ಕಾರ್ಡ್ ಅದರಲ್ಲೂ ಬಿಪಿಎಲ್ ಕಾರ್ಡ್(BPL Card) ನೀಡುವುದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರು ಪ್ರಯೋಜನ ಪಡೆದುಕೊಳ್ಳಲಿ ಅಂತ, ಉಚಿತ ಪಡಿತರ ಅವರಿಗೆ ಸಿಗಲಿ ಎನ್ನುವ ಕಾರಣಕ್ಕೆ ಆದ್ರೆ ಅದನ್ನು ತಪ್ಪಾಗಿ ಬಳಸಿಕೊಂಡಿದ್ದೆ ಆದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ. ಜೊತೆಗೆ ಸರ್ಕಾರದ ಯೋಜನೆಯ ದುರುಪಯೋಗ ಮಾಡಿಕೊಂಡಿರುವುದು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ಬಂದರೆ ಅಂತವರಿಗೆ ಯಾವ ಶಿಕ್ಷೆ ಕಟ್ಟಿಟ್ಟ ಬುತ್ತಿ.

ಹೌದು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆ ಜಾರಿಯಾಗಿದ್ದು ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿ ಜೊತೆಗೆ ಐದು ಕೆಜಿ ಅಕ್ಕಿಯ ಹಣವನ್ನು ಹಾಗೂ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಹಣವನ್ನು ಅವರ ಖಾತೆಗಳಿಗೆ ಜಮೇ ಮಾಡಲಾಗುತ್ತಿದೆ ಈ ನಡುವೆ ಒಂದೇ ಕುಟುಂಬದವರ ಬಳಿ ಹೆಚ್ಚುವರಿ ಎರಡು ಮೂರು ಪಡಿತರ ಚೀಟಿಗಳಿದ್ದು ಅಂತವರಿಗೂ ಕೂಡ ಸರ್ಕಾರ ಹಣವನ್ನು ವರ್ಗಾವಣೆ ಮಾಡುತ್ತಿದೆ. ಇದರಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದ್ದು ಹಣ ಪೋಲಾಗೋದನ್ನ ತಡೆಯಲು ರಾಜ್ಯ ಸರ್ಕಾರ ಈ ಹೊಸ ನಿಯಮವನ್ನು ಜಾರಿಗೆ ತರ್ತಾ ಇದೆ. ಅದು ಒಂದು ಕುಟುಂಬಕ್ಕೆ ಒಂದು ಪಡಿತರ ಚೀಟಿ ನೀಡಲು ಆಹಾರ ಇಲಾಖೆಯ ರಾಜ್ಯ ಸರ್ಕಾರ ಸೂಚಿಸಿದೆ.

ಇನ್ನು ರಾಜ್ಯದಲ್ಲಿ ಒಟ್ಟು 1.2 ಕೋಟಿ, ಕುಟುಂಬಗಳ ಬಳಿ ಬಿಪಿಎಲ್ ಕಾರ್ಡ್ ಇದ್ದು, ಇವುಗಳಲ್ಲಿ ಹೆಚ್ಚಾಗಿ ಒಂದೇ ಕುಟುಂಬದವರು ಎರಡು-ಮೂರು ರೇಷನ್ ಕಾರ್ಡನ್ನು ಹೊಂದಿದ್ದಾರೆ ಹೀಗಾಗಿ ಕುಟುಂಬದಲ್ಲಿ ಒಂದು ಅಥವಾ ಎರಡಕ್ಕಿಂತ ಹೆಚ್ಚಿಗೆ ರೇಷನ್ ಕಾರ್ಡ್ ಹೊಂದಿದ್ರೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಹೀಗಾಗಿ ಒಂದು ಕುಟುಂಬಕ್ಕೆ ಒಂದೇ ರೇಷನ್ ಕಾರ್ಡ್ ವಿತರಣೆ ಮಾಡುವಂತೆ ಈಗಾಗಲೇ ಆಹಾರ ಇಲಾಖೆಗೆ ರಾಜ್ಯ ಸರ್ಕಾರ ಸೂಚನೆಯನ್ನು ಕೊಟ್ಟಿದ್ದು ಮುಂದಿನ ದಿನಗಳಲ್ಲಿ ಇದು ಯಾವ ರೀತಿ ವರ್ಕ್ ಆಗುತ್ತೋ ಕಾದು ನೋಡಬೇಕಿದೆ.

ಇದನ್ನೂ ಓದಿ: ನೀವು ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ಪಾಸ್ ಆಗಿದ್ದೀರಾ? ಹಾಗಾದರೆ ನಿಮಗಿದೋ ಗುಡ್ ನ್ಯೂಸ್!!! ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆಯನ್ನು ತಿಳಿಯೋಣ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram