ರೇಷನ್ ಕಾರ್ಡ್ ತಿದ್ದಿಪಡಿಗೆ ಈ ತಿಂಗಳು ಇಲ್ಲ ಅವಕಾಶ; ಎಪಿಎಲ್, ಬಿಪಿಎಲ್ ಕಾರ್ಡುದಾರರಿಗೆ ಬ್ಯಾಡ್ ನ್ಯೂಸ್

ಈ ತಿಂಗಳು ಎಪಿಎಲ್​ ಹಾಗೂ ಬಿಪಿಎಲ್ ಕಾರ್ಡ್​ ತಿದ್ದುಪಡಿಗೆ ಅವಕಾಶ ನೀಡುತ್ತಾರೆ, ಒಂದೊಂದು ವಿಭಾಗಗಕ್ಕೆ ಒಂದು ವಾರ ಅವಕಾಶ ನೀಡಲಾಗುತ್ತದೆ. ಈ ಬಾರಿ ಯಾವುದೇ ಸರ್ವರ್ ಸಮಸ್ಯೆ ಇರೋದಿಲ್ಲ ಅಂತ ಹೇಳಾಗಿತ್ತು. ಆದರೆ ವಾಸ್ತವ ನೋಡುವುದಾದರೆ ಈ ತಿಂಗಳು ರೇಷನ್ ಕಾರ್ಡ್(Ration)​​ ತಿದ್ದುಪಡಿಗೆ ಅವಕಾಶ ಇಲ್ಲ ಎಂಬ ಮಾಹಿತಿ ಆಹಾರ ಇಲಾಖೆಯಿಂದ ಲಭ್ಯವಾಗುತ್ತಿದೆ. ಹಾಗಾದರೆ ಯಾವಾಗ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗುತ್ತದೆ ಎಂಬ ಪ್ರಶ್ನೆ ಸಿಕ್ಕಿದ್ದು, ಈ ತಿಂಗಳು ಯಾಕೆ ತಿದ್ದುಪಡಿಗೆ ಅವಕಾಶ ನೀಡಿಲ್ಲ ಅನ್ನೋದಕ್ಕೂ ಉತ್ತರ ಸಿಕ್ಕಿದೆ. ಹೌದು ರಾಜ್ಯ ಸರ್ಕಾರ ಕೊಟ್ಟ ಗ್ಯಾರಂಟಿಗಳನ್ನ ಒಂದಾದಾಗಿ ಈಡೇರಿಸುತ್ತಿದೆ ಆದ್ರೆ ಇದರ ಹಿಂದೆ ಸಾಕಷ್ಟು ಸರ್ಕಸ್ ಗಳನ್ನ ಸರ್ಕಾರ ಮಾಡ್ತಿದ್ದು, ರಾಜ್ಯದ ಜನರು ಸಹ ಗೊಂದಲದಲ್ಲಿದ್ದು ಸಾಕಪ್ಪ ಸಹವಾಸ ಅಂತಿದ್ದಾರೆ.

WhatsApp Group Join Now
Telegram Group Join Now

ಹೌದು ಮೊನ್ನೆಯಷ್ಟೇ ಆಹಾರ ಮತ್ತು ಅರೋಗ್ಯ ಸಚಿವ ಕೆ. ಎಚ್ ಮುನಿಯಪ್ಪ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ತಿದ್ದುಪಡಿ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಕೆಗೆ ಶೀಘ್ರದಲ್ಲೇ ಅವಕಾಶ ಮಾಡಿಕೊಡೋದಾಗಿ ತಿಳಿಸಿದ್ರು. ಆದ್ರೆ ಇದೀಗ ಅದು ಸಾಧ್ಯವಿಲ್ಲ ಅಂತ ಬಲ್ಲ ಮೂಲಗಳಿಂದ ಮಾಹಿತಿ ಬಂದಿದ್ದು, ಮುಂದಿನ ತಿಂಗಳು 15ದಿನಗಳ ಕಾಲ 3ವಿಭಾಗಗಳನ್ನ ಮಾಡಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಳ್ಳಲಾಗುವುದು ಅಂತ ಹೇಳಲಾಗುತ್ತಿದೆ. ಯಾಕೆ ಈ ರೀತಿಯಲ್ಲಿ ಮತ್ತೆ ಬದಲಾವಣೆ ಮಾಡಲಾಯಿತು ಮತ್ತೇನು ಸಮಸ್ಯೆ ಆಗಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಯಾಕೆ ಕರೆಕ್ಷನ್ ಗೆ ಅವಕಾಶ ಇಲ್ಲ? ಮತ್ಯಾವಾಗ ಸಿಗಲಿದೆ ಅವಕಾಶ!

ಆಹಾರ ಇಲಾಖೆ ನೀಡಿರುವ ಮಾಹಿತಿಯ ಅನ್ವಯ ಮುಂದಿನ ತಿಂಗಳು ಅಂದರೇ ಡಿಸೆಂಬರ್​ನಲ್ಲಿ ಮತ್ತೆ ರೇಷನ್​ ಕಾರ್ಡ್(Ration card) ತಿದ್ದುಪಡಿಗೆ ಅವಕಾಶ ನೀಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ ತಿಂಗಳು ಆಹಾರ ಇಲಾಖೆ ರೇಷನ್ ಕಾರ್ಡ್​ ತಿದ್ದುಪಡಿಗೆ ಅವಕಾಶ ನೀಡಿತ್ತು. ಆದರೆ ಈ ವೇಳೆ ಸರ್ವರ್ ಸಮಸ್ಯೆ ಬಹುದೊಡ್ಡದಾಗಿ ಜನರನ್ನು ಕಾಡಿತ್ತು. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಹೊಸ ಸರ್ವರ್ ತೆಗೆದುಕೊಳ್ಳಲು ಮುಂದಾಗಿದೆ. ಈ ಪ್ರಕ್ರಿಯೆ ಚಾಲ್ತಿಯಲ್ಲಿ ಇರುವ ಕಾರಣ ಈ ತಿಂಗಳು ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡುವುದಿಲ್ಲ ಅಂತ ಇಲಾಖೆ ತಿಳಿಸಿದೆ. ಯಾವಾಗ ರೇಷನ್ ಕಾರ್ಡ್​ ತಿದ್ದುಪಡಿಗೆ ಅವಕಾಶ ನೀಡುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ಡಿಸೆಂಬರ್ 15ರ ಬಳಿಕ 15 ದಿನ ರೇಷನ್ ಕಾರ್ಡ್​ ತಿದ್ದುಪಡಿಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ನವೆಂಬರ್ ತಿಂಗಳಿನಲ್ಲಿ ರೇಷನ್ ಕಾರ್ಡ್​(Ration card) ತಿದ್ದುಪಡಿಗೆ ಅವಕಾಶ ಇರೋದಿಲ್ಲ ಎಂಬುವುದು ಸ್ಪಷ್ಟವಾಗಿದೆ. ಜೊತೆಗೆ ವಿಭಾಗಗಳನ್ನ ಮಾಡಿ ರೇಷನ್ ಕಾರ್ಡ್ ತಿದ್ದುಪಡಿಗೆ ಇಲಾಖೆ ಮುಂದಾಗಿದ್ದು, ಮುಂದೆ ಯಾವುದೇ ರೀತಿಯ ಸರ್ವರ್ ಸಮಸ್ಯೆ ಹಾಗೂ ಬೇರೆ ರೀತಿಯ ಸಮಸ್ಯೆಗಳು ಎದುರಾಗೋದಿಲ್ಲ, ತಿದ್ದುಪಡಿಯನ್ನ ಅತಿಶೀಘ್ರದಲ್ಲೇ ಮಾಡಲಾಗುವುದು ಅಂತ ಇಲಾಖೆ ಹೇಳ್ತಿದೆ.

ಗೃಹಲಕ್ಷ್ಮಿ, ಅನ್ನ ಭಾಗ್ಯ ಸೇರಿ ವಿವಿಧ ಸರ್ಕಾರಿ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಹಣ ಜಮೆ ಆಗುವಲ್ಲಿ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡ್‌ನಲ್ಲಿ ಫಲಾನುಭವಿ ಹೆಸರು ಸೇರ್ಪಡೆ, ತಿದ್ದುಪಡಿಗಾಗಿ ಜನರು ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ನಿಂತು ನಿಂತು ಸುಸ್ತಾಗಿ ಹೋಗಿದ್ರು. ಹೌದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಲುವಾಗಿ ಫಲಾನುಭವಿಗಳು ರೇಷನ್ ಕಾರ್ಡ್ ನಲ್ಲಿರುವ ದೋಷಗಳ ತಿದ್ದುಪಡಿಗೆ ಮುಂದಾಗಿದ್ರು. ಹೌದು ಫಲಾನುಭವಿ ಹೆಸರು ಬದಲಾವಣೆ, ಪಡಿತರ ಕೇಂದ್ರ ಬದಲಾವಣೆ,
ಕಾರ್ಡ್ ಸದಸ್ಯರ ಹೆಸರು ರದ್ದು, ಸೇರ್ಪಡೆ, ಕಾರ್ಡ್ ಮುಖ್ಯಸ್ಥರ ಹೆಸರು ಬದಲಾವಣೆ, ಕುಟುಂಬದ ಮುಖ್ಯಸ್ಥರ ಹೆಸರು ಬದಲಾವಣೆ, ಹೊಸದಾಗಿ ಸೇರ್ಪಡೆ, ಅನಗತ್ಯ ಹೆಸರುಗಳನ್ನೂ ಪಡಿತರದಿಂದ ತೆಗೆಸಲು ಮುಂದಾಗಿದ್ರು.

ಆದ್ರೆ ಅಂತವರಿಗೆ ಆಹಾರ ಇಲಾಖೆ ಸ್ವಲ್ಪ ದಿನಗಳವರೆಗೆ ತಿದ್ದುಪಡಿಗೆ ಅವಕಾಶ ನೀಡಿ ನಂತರ ಅದನ್ನ ಹಿಂಪಡೆದಿತ್ತು, ತಿಂಗಳ ನಂತರ ಮತ್ತೆ ಕಾರ್ಡ್ ತಿದ್ದುಪಡಿಗೆ ಅವಕಾಶ ಕೊಡೋದಾಗಿ ಹೇಳಿದ್ದ ಸಚಿವ ಕೆ. ಎಚ್ ಮುನಿಯಪ್ಪ, ಮತ್ತಿಗೇ ಮತ್ತೆ ತಿದ್ದುಪಡಿಗೆ ಅವಕಾಶವನ ಮುಂದೂಡಲಾಗಿದೆ ಅಂತ ಹೇಳಿದ್ದಾರೆ. ಹೌದು 3ರೀತಿಯ ವಿಭಾಗಗಳನ್ನ ಮಾಡಿ ತ್ವರಿತ ಗತಿಯಲ್ಲಿ ತಿದ್ದುಪಡಿಗೆ ಅವಕಾಶ ನೀಡೋದಾಗಿ ತಿಳಿಸಿದ್ದಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ಇತರೆ ಅಂತ 3ವಿಭಾಗಗಳನ್ನ ಮಾಡಿ ಮತ್ತೆ ಡಿಸೆಂಬರ್ 15 ರಿಂದ 15ದಿನಗಳ ಕಾಲಾವಕಾಶ ನೀಡೋದಾಗಿ ಆಹಾರ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಅಂಚೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ; 1899 ಹುದ್ದೆಗಳಿಗೆ 81000 ರೂಪಾಯಿಗಳವರೆಗೂ ಸಿಗಲಿದೆ ಸಂಬಳ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram