ಜೂನ್ 1ರಿಂದ ರೇಷನ್ ಕಾರ್ಡ್ ಇದ್ದವರಿಗೆ 10 ಕೆಜಿ ಅಕ್ಕಿ. ಹೊಸ ಲಿಸ್ಟ್ ಬಿಡುಗಡೆ, ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರಬೇಕು!

ದೇಶದಲ್ಲಿನ ಬಡವರನ್ನ ಗಮನದಲ್ಲಿಟ್ಟುಕೊಂಡು ಮೂರು ಹೊತ್ತಿನ ಊಟವನ್ನಾದರೂ ಹೊಟ್ಟೆ ತುಂಬಾ ಮಾಡಲಿ ಅನ್ನೋ ಉದ್ದೇಶದಿಂದ ಉಚಿತ ರೇಷನ್ ನೀಡುವ ಪಡಿತರ ಯೋಜನೆಯನ್ನ ಜಾರಿಗೊಳಿಸಲಾಯಿತು. ಹೌದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪಡಿತರ ಚೀಟಿದಾರರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನ ನೀಡುತ್ತಿದೆ. ಅದರಲ್ಲಿ BPL, APL ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಸೇರಿದಂತೆ ಬೇರೆ ಬೇರೆ ವರ್ಗದ ಜನರಿಗೆ ಅಂದರೆ ಆದಾಯವನ್ನ ಪ್ರಮುಖ ವಿಷಯವನ್ನಾಗಿಟ್ಟುಕೊಂಡು ಈ ಒಂದು ಯೋಜನೆಯ ಲಾಭವನ್ನ ನೀಡಲು ಸರ್ಕಾರ ಉಚಿತರ ಪಡಿತರ ವಿತರಣಾ ಕಾರ್ಯಕ್ರಮವನ್ನ ಜಾರಿಗೊಳಿಸಿತು. ಆದರೆ ಈ ರೀತಿಯ ಉಚಿತ ಪಡಿತರ ಪಡೆಯುವಲ್ಲು ಕೂಡ ಕೆಲವೊಂದಷ್ಟು ಗೋಲ್ ಮಾಲ್ ಗಳು ನಡೆಯುತ್ತಿದ್ದೂ ಅರ್ಹರಲ್ಲದವರು ಅಂದ್ರೆ ಅನರ್ಹರು ಕೂಡ ಉಚಿತವಾಗಿ ಈ ಯೋಜನೆಯ ಪಲಾನುಭಾವಿಗಲಾಗುತ್ತಿದ್ದಾರೆ.

WhatsApp Group Join Now
Telegram Group Join Now

ಹೀಗಾಗಿ ಹಲವು ಬಾರಿ ಈ ವಿಚಾರದಲ್ಲಿ ಸರ್ಕಾರಗಳು ಬಹು ಕಟ್ಟುನಿಟಿನ ಕ್ರಮವನ್ನು ತೆಗೆದುಕೊಂಡಿತ್ತು. ಆದರೂ ಕೂಡ ಪೂರ್ಣ ಪ್ರಮಾಣದಲ್ಲಿ ಅನರ್ಹರನ್ನ ಗುರುತಿಸಲು ಸಾಧ್ಯವಿರಲಿಲ್ಲ ಹೀಗಾಗಿ ಇಂತಹ ಅನರ್ಹರನ್ನ ಗುರುತಿಸಿ ಅಂತವರನ್ನ ರೇಷನ್ ಕಾರ್ಡ್ ನಿಂದ ಹೊರಗಿಡಲು ಹೊಸ ಉಪಾಯವನ್ನ ರಾಜ್ಯ ಸರ್ಕಾರ ಮಾಡಿದೆ. ಹೌದು ರಾಜ್ಯದಲ್ಲಿ ಅನೇಕ ಅನರ್ಹರು ಅಕ್ರಮವಾಗಿ ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದಾರೆ. ಅಂತವರನ್ನ ಗುರುತಿಸಿ ಅವರ ಕಾರ್ಡ್ ಗಳನ್ನು ರದ್ದುಪಡಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ರಾಜ್ಯ ಸರ್ಕಾರ ಅನರ್ಹ ಪಲಾನುಭವಿಗಳನ್ನು ಗುರುತಿಸಿ ಅಂತವರ ಹೆಸರನ್ನು ಅಳಿಸಿ ಹಾಕುತ್ತಿದೆ. ಹೀಗಾಗಿ ಈ ತಿಂಗಳ ಅಂದರೆ ಮೇ ತಿಂಗಳ ಪಡಿತರ ಚೀಟಿ ಬಿಡುಗಡೆ ಆಗಿದೆ. ಈ ಪಟ್ಟಿಯಲ್ಲಿ ಸಾಕಷ್ಟು ಅನರ್ಹರ ಹೆಸರನ್ನ ಕೈ ಬಿಡಲಾಗಿದೆ. ಹಾಗಾದ್ರೆ ಅದನ್ನ ತಿಳಿದುಕೊಳ್ಳೋದು ಹೇಗೆ? ಇಂತವರ ರೇಷನ್ ಕಾರ್ಡ್ ರದ್ದಾಗುತ್ತೆ ನೋಡೋಣ ಬನ್ನಿ.

ಇದನ್ನೂ ಓದಿ: ರೈಲ್ವೆ ಇಲಾಖೆಯಿಂದ ಬಂತು ಚಿಕ್ಕ ಮಕ್ಕಳಿರುವ ಪ್ರಯಾಣಿಕರಿಗೆ ಸಿಹಿಸುದ್ದಿ

ರೇಷನ್ ಕಾರ್ಡ್ ಇದ್ದವರು ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ

ಇದೀಗ ರಾಜ್ಯ ಸರ್ಕಾರ ಉಚಿತ 5ಗ್ಯಾರಂಟಿಗಳನ್ನ ಜಾರಿ ಮಾಡಲು ಹೊರಟ್ಟಿದ್ದು ಅದರಲ್ಲೂ ಬಹುಮುಖ್ಯವಾದ ಅನ್ನಭಾಗ್ಯ ಯೋಜನೆಯಡಿಯಲ್ಲಿ 5ಕೆಜಿ ಅಕ್ಕಿಯಿಂದ 10ಕೆಜಿ ಅಕ್ಕಿಗೆ ಉಚಿತ ಪಡಿತರವನ್ನ ಹೆಚ್ಚಿಸಿದೆ. ಹೀಗಾಗಿ ಅನರ್ಹರೆ ಹೆಚ್ಚಾಗಿರುವ ಯೋಜನೆಯಲ್ಲಿ ಅಂತವರನ್ನ ಯೋಜನೆಯಿಂದ ಕೈಬಿಡುವ ಸಲುವಾಗಿ ಇದೀಗ ಈ ಕೆಲ್ಸಕ್ಕೆ ಮುಂದಾಗಿದ್ದು, ತಾವೇ ಖುದ್ದಾಗಿ ಅನರ್ಹರನ್ನ ಗುರುತಿಸಿ ಅವ್ರನ್ನ ಯೋಜನೆಯಿಂದ ಹೊರಗಿಟ್ಟು ಅಂದರೆ ಅಂತವರ ಕಾರ್ಡುಗಳನ್ನ ರದ್ದು ಮಾಡಿ ಇದೀಗ ಅರ್ಹರನ್ನ ಅಂದ್ರೆ ರೇಷನ್ ಕಾರ್ಡ್ ಹೊಂದಲು ಅರ್ಹರಾಗಿರುವವರ ಹೆಸರಿನ ಪಟ್ಟಿಯನ್ನ ಬಿಡುಗಡೆ ಮಾಡಿದೆ.

ಅದನ್ನ ಹೇಗೆ ನೋಡೋದು ಅಥವಾ ತಿಳಿದುಕೊಳ್ಳೋದು ಅಂದ್ರೆ, ಮೊದಲಿಗೆ ಅರ್ಜಿದಾರರು ಉಚಿತ ರೇಷನ್ ಕಾರ್ಡ್ ಪೋರ್ಟಲ್‌ಗೆ ಹೋಗಬೇಕು. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ. ಅಂದ್ರೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿದ ನಂತರ, ಮುಖಪುಟವು ನಿಮ್ಮ ಮುಂದೆ ತೆರೆಯುತ್ತದೆ. ನಂತರ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮಪಂಚಾಯತಿ, ಗ್ರಾಮ ಹಾಗೂ ಕಾರ್ಡ್ ಪ್ರಕಾರ ಅಂದ್ರೆ ನಿಮ್ದು APL ಅಥವಾ BPL ಅಂತಾ ಸೆಲೆಕ್ಟ್ ಮಾಡಿ ಅದಾದ ಮೇಲೆ “ಸಲ್ಲಿಸಿ” ಅಂತ ಒಂದು ಅಪ್ಷನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಕುಟುಂಬ ಮತ್ತು ನಿಮ್ಮ ಹೆಸರನ್ನು ನೀವು ನೋಡಬಹುದು. ಒಂದು ವೇಳೆ ಅಲ್ಲಿ ನಿಮ್ಮ ಹೆಸರಿಲ್ಲ ನಿಮ್ಮ ಮನೆ ಸದಸ್ಯರ ವಿವರ ಇಲ್ಲ ಅಂದ್ರೆ ನಿಮ್ಮನ್ನ ಅನರ್ಹರು ಅಂತ ಸರ್ಕಾರ ಗುರುತಿಸಿ ತೆಗೆದುಹಾಕಿದೆ ಅಂತ ಅರ್ಥ. ಇನ್ನು ಹೊಸ ಪಡಿತರ ಚೀಟಿಗಳಿಗಾಗಿ ಅರ್ಜಿಗಳನ್ನು ರಾಜ್ಯದ ಜಿಲ್ಲಾ ಸರಬರಾಜು ಕಚೇರಿ ಮತ್ತು ತಹಸಿಲ್ ಮಟ್ಟದ ಸರಬರಾಜು ಕಚೇರಿಗೆ ಸಲ್ಲಿಸಲಾಗುತ್ತೆ ಅದಾದ ನಂತರ, ತನಿಖೆಯ ಆಧಾರದ ಮೇಲೆ, ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗುತ್ತದೆ, ಮತ್ತು ಅವರ ಸ್ಥಾನದಲ್ಲಿ ಅರ್ಹರ ಪಡಿತರ ಚೀಟಿಗಳನ್ನು ಮಾಡಲಾಗುತ್ತದೆ.

https://mahitikanaja.karnataka.gov.in/FCS/MyAreaData?ServiceId=1043&Type=TABLE&DepartmentId=1010

 

ಒಟ್ಟಿನಲ್ಲಿ ಬಡವಾರ ಹೊಟ್ಟೆ ತುಂಬಾ ಬೇಕಿದ್ದ ಉಚಿತ ಪಡಿತರವನ್ನ ಶ್ರೀಮಂತರು ಕೂಡ ತಮ್ಮದಾಗಿಸಿಕೊಂಡು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದದ್ದು ಎಷ್ಟೋ ಬಾರಿ ಸರ್ಕಾರದ ಗಮನಕ್ಕೆ ಬಂದರು ಸಹ, ಎಷ್ಟೇ ಕಾನೂನು ಕ್ರಮವನ್ನ ಕೈಗೊಂಡ್ರು ಕೂಡ ಅನರ್ಹರು ತಮ್ಮ ಕೆಲಸವನ್ನ ಮುಂದುವರಿಸಿಕೊಂಡು ಹೋಗುತ್ತಿದ್ದರು. ಹೀಗಾಗಿ ಹೊಸ ರೀತಿಯ ಪ್ರಯತ್ನವನ್ನ ರಾಜ್ಯ ಸರ್ಕಾರ ಮುಂದುವರೆಸಿದ್ದು, ಇದರಾಲ್ಲಾದ್ರೂ ಅನರ್ಹರು ಈ ಯೋಜನೆಯ ಲಾಭ ಪಡೆಯೋದ್ರಿಂದ ದೂರವಾಗುತ್ತರಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಒಟ್ಟಿನಲ್ಲಿ ಸಿಗಬೇಕಾದವರಿಗೆ ಯೋಜನೆಯ ಲಾಭ ಸಿಕ್ಕುವುದರಿಂದ ಯೋಜನೆಯ ಅನುಷ್ಟಾನಕ್ಕೆ ಒಂದು ಅರ್ಥ ಸಿಕ್ಕಂತಾಗುತ್ತದೆ.

ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ದಿಡೀರ್ 490 ರೂಪಾಯಿ ಇಳಿಕೆ ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram