ನಿಯಮ ಉಲ್ಲಂಘಿಸಿದ ಮೂರು ಬ್ಯಾಂಕ್ ಗಳಿಗೆ RBI 3 ಕೋಟಿ ರೂಪಾಯಿ ದಂಡ ವಿಧಿಸಿದೆ; ಕಾರಣವೇನು?

RBI

ರಿಸರ್ವ್ ಬ್ಯಾಂಕ್ ಭಾರತದ ಹಣದ ಮಾರುಕಟ್ಟೆಯ ಮೂಲವಾಗಿದೆ. ಭಾರತದ ದೊಡ್ಡ ಬ್ಯಾಂಕ್ ಹಾಗೂ ಸಣ್ಣ ಬ್ಯಾಂಕ ಗಳ ನಿಯಂತ್ರಣವನ್ನು ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ. ಬ್ಯಾಂಕ್ ನ ವ್ಯವಹಾರಗಳಿಗೆ ಸಂಬಂಧ ಪಟ್ಟು RBI ಹಲವು ನಿಯಮಗಳನ್ನು ರೂಪಿಸಿದೆ. ನಿಯಮ ಪಾಲನೆ ಮಾಡದವರಿಗೆ ಶಿಕ್ಷೆ ನೀಡುವ ಅಧಿಕಾರವನ್ನು ಆರ್.ಬಿ.ಐ ಹೊಂದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ನಿಯಮವನ್ನು ಉಲ್ಲಂಘಿಸಿದ ಕಾರಣದಿಂದ Paytm bank ರದ್ದು ಮಾಡಲಾಗಿದೆ. ಹಾಗೆಯೇ ನಿಯಮ ಮೀರಿ ವರ್ತಿಸಿದ ಕಾರಣ ಎಸ್ ಬಿ ಐ ಸೇರಿದಂತೆ 3 ಬ್ಯಾಂಕ್ ಗೆ ದಂಡ ವಿಧಿಸಿದೆ ಹಾಗಾದರೆ ಆ ಮೂರು ಬ್ಯಾಂಕ್ ಯಾವುದು ಮತ್ತು ದಂಡ ವಿಧಿಸಿದ ಕಾರಣಗಳನ್ನು ತಿಳಿಯೋಣ.

WhatsApp Group Join Now
Telegram Group Join Now

ದಂಡ ವಿಧಿಸಿದ ಬ್ಯಾಂಕ್ ಗಳು ಯಾವುವು?

ಹಲವು ನಿಯಮಗಳನ್ನು ಉಲ್ಲಂಘನೆ ಮಾಡಿರುವುದರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ಗೆ RBI ದಂಡ ವಿಧಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ:- ಭಾರತದ ಅತಿದೊಡ್ಡ ಮತ್ತು ಅತ್ಯಂತ ಜನಪ್ರಿಯ ಬ್ಯಾಂಕ್‌ ಆಗಿದ್ದು ಭಾರತದಾದ್ಯಂತ ತನ್ನ ಶಾಖೆಗಳನ್ನು ಹೊಂದಿದೆ. ಇದು National bank ಆಗಿರುವುದರಿಂದ ಜನರು ನಂಬಿಕೆಯಿಂದ ಹಣ ಹೂಡಿಕೆ ಮಾಡುತ್ತಾರೆ. ಆದರೆ ಈಗ ಇದು ಆರ್.ಬಿ.ಐ ನ ನಿಯಮವನ್ನು ಉಲ್ಲಂಘಿಸಿದೆ. ಠೇವಣಿದಾರರ ಜಾಗೃತಿ ಫಂಡ್ ಯೋಜನೆ 2014 ಈ ಯೋಜನೆಯಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು ಈಗ RBI 2 ಕೋಟಿ ರೂಪಾಯಿ ದಂಡ ವಿಧಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕೆನರಾ ಬ್ಯಾಂಕ್ :-ಭಾರತದ ಪ್ರಮುಖ ವಾಣಿಜ್ಯ ಬ್ಯಾಂಕ್‌ ಆಗಿದ್ದು ಜನರಿಗೆ ಉತ್ತಮ ಸೇವೆಗಳನ್ನು ನೀಡುತ್ತಿದೆ. ಗ್ರಾಹಕರ ಠೇವಣಿಗೆ ಉತ್ತಮ ರೀತಿಯ ಬಡ್ಡಿದರವನ್ನು ನೀಡುವಲ್ಲಿ ಯಶಸ್ವಿ ಬ್ಯಾಂಕ್ ಆಗಿದೆ. RBI ನ ನಿರ್ದೇಶನಗಳನ್ನು ಪಾಲಿಸಲು ಆಗದೆ ಈಗ 23.30 ಲಕ್ಷ ರೂಪಾಯಿ ದಂಡ ಕಟ್ಟಬೇಕಾಗಿದೆ. 

ಯೂನಿಯನ್ ಬ್ಯಾಂಕ್ :- ಇದು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಆದಾಯ ಪ್ರಮಾಣ ಪತ್ರವನ್ನು ಪರಿಶೀಲನೆ ಮಾಡುವಲ್ಲಿ ಹಾಗೂ ಉತ್ಪಾದನೆಗೆ ಮೀರಿ ಆಸ್ತಿ ಪತ್ತೆಹಚ್ಚುವಲ್ಲಿ ಚ್ಯುತಿ ಬಂದಿರುವುದರ ಜೊತೆಗೆ ಇನ್ನೂ ಹಲವು ನಿಯಮಗಳ ಪಾಲನೆ ಮಾಡದೇ ಇರುವುದರಿಂದ ಬರೋಬ್ಬರಿ 66 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ.

RBI ಯಾವ ಯಾವ ಸಂಸ್ಥೆಗೆ ಈಗಾಗಲೇ ದಂಡ ವಿಧಿಸಿದೆ ?

ಉತ್ಪಾದನೆಗೆ ಮೀರಿ ಆಸ್ತಿ (NPI) ಹಾಗೂ ಬ್ಯಾಂಕ್ ಗಳ ದಿವಾಳಿ ಆಗುವುದನ್ನು ತಡೆಯಲು RBI ಈಗ ಕಠಿಣ ನಿಯಮಗಳನ್ನು ಜಾರಿಮಾಡಿದೆ. ನಿಯಮಗಳ ಪಾಲನೆಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದರೂ ಸಹ ಬ್ಯಾಂಕ್ ಗಳಿಗೆ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತಿದೆ. ಬ್ಯಾಂಕ್ ಗಳು ಹೊರತು ಪಡಿಸಿ ಕೆಲವು ಹಣಕಾಸು ಸಮಸ್ಯೆಗಳಿಗೂ ಸಹ ಈಗಾಗಲೇ ದಂಡ ವಿಧಿಸಲಾಗಿದೆ. ಒಡಿಶಾ ಮೂಲದ ಹಣಕಾಸು ಸಂಸ್ಥೆ ಓಶಿಯನ್ ಕ್ಯಾಪಿಟಲ್ ಮಾರ್ಕೆಟ್ ಲಿಮಿಟೆಡ್ , ರೌರ್ಕೆಲಾ ಗೆ ನಿಯಮ ಉಲ್ಲಂಘನೆಗೆ 16 ಲಕ್ಷ ರೂಪಾಯಿ ದಂಡ ವಿಧಿಸಿದೆ. ಒಂದು pan number ಗೆ ಒಂದು ಸಾವಿರಕ್ಕೂ ಹೆಚ್ಚಿನ ಖಾತೆಗಳು ಇರುವುದನ್ನು ಗಮನಿಸಿದ RBI ಮಾರ್ಚ್15 ರಿಂದ paytm bank ನಿಷ್ಕ್ರಿಯ ಗೊಳಿಸುವುದಾಗಿ ಈಗಾಗಲೇ ತಿಳಿಸಿದೆ.

ಅಕ್ರಮಗಳ ತಡೆಗಟ್ಟಿ ಗ್ರಾಹಕರಿಗೆ ತೊಂದರೆ ಆಗದಂತೆ ಎಚ್ಚರಿಕೆ ಬಹಿಸುವಲ್ಲಿ RBI ಈ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿಯಂತ್ರಿಸುವ ಸಲುವಾಗಿ ಬ್ಯಾಂಕ್ ಗಲನ್ನು ದಿವಳಿಯ ಕಡೆಗೆ ಕೊಂಡೊಯ್ಯದಂತೆ ತಡೆಗಟ್ಟಲು RBI ಪ್ರಯತ್ನಿಸುತ್ತಾ ಇದೆ.

ಇದನ್ನೂ ಓದಿ: ಪ್ರತಿ ತಿಂಗಳ ಯುವನಿಧಿ ಹಣ ಪಡೆಯಲು ಈ ಕೆಲಸ ಕಡ್ಡಾಯವಾಗಿ ಮಾಡಬೇಕು.

ಇದನ್ನೂ ಓದಿ: ತಿಂಗಳಿಗೆ ಲಕ್ಷಗಟ್ಟಲೆ ಗಳಿಸಲು ಮತ್ತು ನಿಮ್ಮ ಕನಸುಗಳನ್ನು ನನಸಾಗಿಸಲು ಈ ವ್ಯಾಪಾರವನ್ನು ಪ್ರಾರಂಭಿಸಿ