ಮಾರ್ಚ್ 31 ಭಾನುವಾರ ಆದರೂ ಎಲ್ಲಾ ಬ್ಯಾಂಕ್ ಗಳು ಯಾಕೆ ತೆರೆದಿರಲಿವೆ?

RBI

ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲಾ ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳು ಬಂದ್ ಅಗುವುದು ಸಾಮಾನ್ಯ. ಆದರೆ ಇದೇ ಬರುವ ಮಾರ್ಚ್ 31, 2024 ರಂದು ಎಲ್ಲಾ ಬ್ಯಾಂಕ್ ಗಳು ಕಾರ್ಯ ನಿರ್ವಹಿಸಬೇಕು ಎಂದು RBI ತಿಳಿಸಿದೆ. ಮಾರ್ಚ್ 31 ಏನು ವಿಶೇಷ ದಿನ? RBI ಯಾಕೆ ಈ ಆದೇಶ ಹೊರಡಿಸಿದೆ ಎಂಬ ಕುತೂಹಲ ಇದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ.

WhatsApp Group Join Now
Telegram Group Join Now

ಮಾರ್ಚ್ 31 ರ ಭಾನುವಾರದ ವಿಶೇಷ ಏನು?: ಸಾಮಾನ್ಯವಾಗಿ ಪ್ರತಿ ವರ್ಷ ಕ್ಯಾಲೆಂಡರ್ ಎಂಡ್ ಆಗುವುದು ಡಿಸೆಂಬರ್ 31 ಕ್ಕೆ. ಆದರೆ ಪ್ರತಿ ವರ್ಷವೂ ಹಣಕಾಸು ವರ್ಷ ಕೊನೆಯಾಗುವುದು ಮಾರ್ಚ್ 31 ಕ್ಕೆ. ಅದೇ ಕಾರಣದಿಂದ 2023 ರ ಹಣಕಾಸು ವರ್ಷದ ಕೊನೆಯ ದಿನವಾದ್ದರಿಂದ ಭಾನುವಾರವೂ ಸಹ ಬ್ಯಾಂಕ್ ತೆರೆದಿರಲಿದೆ. ಈ ಆದೇಶವು ಸರ್ಕಾರಿ ವ್ಯವಹಾರಗಳೊಂದಿಗೆ ವ್ಯವಹರಿಸುವ ಎಲ್ಲಾ ಬ್ಯಾಂಕ್ ಗಳಿಗೆ ಈ ಆದೇಶ ಅನ್ವಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಭಾನುವಾರ ಬ್ಯಾಂಕ್ ನಲ್ಲಿ ಲಭ್ಯವಿರುವ ಸೇವೆಗಳು?

ಗ್ರಾಹಕರಿಗೆ ಈ ದಿನ ಯಾವುದೇ ಸೇವೆಗಳು ಲಭ್ಯವಿಲ್ಲ. ಆದರೆ ಬ್ಯಾಂಕ್ ನೌಕರರು 2023-24 ಹಣಕಾಸು ವರ್ಷದ ರಸೀದಿಗಳು ಮತ್ತು ಪಾವತಿಗಳಿಗೆ ಸಂಬಂಧಿಸಿದ ಎಲ್ಲಾ ಸರ್ಕಾರಿ ವಹಿವಾಟುಗಳನ್ನು ಲೆಕ್ಕಹಾಕುವ ನಿಟ್ಟಿನಲ್ಲಿ ಬ್ಯಾಂಕ್ ತೆರೆದಿರಲಿದೆ. ಹಳೆಯ ಹಣಕಾಸು ವರ್ಷದ ಲೆಕ್ಕಪತ್ರಗಳನ್ನು ಸರಿಯಾದ ಕ್ರಮದಲ್ಲಿ ಇರಿಸಲು ಭಾನುವಾರ ಕೆಲಸ ಮಾಡುವಂತೆ ಸೂಚಿಸಲಾಗಿದೆ.

ಮಾರ್ಚ್ 29 ರ ಶುಕ್ರವಾರದಂದು ಗುಡ್ ಫ್ರೈಡೇ ಇರುವುದರಿಂದ ಎಲ್ಲಾ ನೌಕರರಿಗೆ ರಜೆ ಇರುತ್ತದೆ. ಆದರಿಂದ ಕೆಲಸಗಳು ಪೆಂಡಿಂಗ್ ಉಳಿಯುತ್ತವೆ. ಈ ವರ್ಷದ ಲೆಕ್ಕಗಳು ಮುಂದಿನ ವರ್ಷಕ್ಕೆ ಸೇರಿಸಬಾರದು ಎಂಬ ಉದ್ದೇಶದಿಂದ ಭಾನುವಾರ ಎಲ್ಲಾ ಸರ್ಕಾರಿ ವಹಿವಾಟಿಗೆ ಸಂಬಂಧಿಸಿದ ಬ್ಯಾಂಕ್ ನೌಕರರು ಕಡ್ಡಾಯವಾಗಿ ಕೆಲಸ ಮಾಡಬೇಕು.

ಇದನ್ನೂ ಓದಿ: ಪೋಸ್ಟ್ ಆಫೀಸ್ ನ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ ಹೆಚ್ಚಿನ ರಿಟರ್ನ್ ಅನ್ನು ಪಡೆಯಿರಿ

ಬ್ಯಾಂಕ್ ನೌಕರರಿಗೆ ಇರುವ ರಜಾ ದಿನಗಳು :- ಎಲ್ಲ ಸರ್ಕಾರಿ ಮತ್ತು ಪ್ರೈವೇಟ್ ಬ್ಯಾಂಕ್ ಗಳಲ್ಲಿ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇರಲಿದೆ ಹಾಗೂ ಪ್ರತಿ ಭಾನುವಾರ ರಜೆ ಇರುತ್ತದೆ. ಹಾಗೆಯೇ ಗಣರಾಜ್ಯೋತ್ಸವ, ಸ್ವಾತ್ರಂತ್ರ್ಯ ದಿನಾಚರಣೆ ಅಂತಹ ರಾಷ್ಟ್ರೀಯ ಹಬ್ಬಗಳಲ್ಲಿ , ವಿಜಯ ದಶಮಿ, ದೀಪಾವಳಿ, ಗಣೇಶ ಚತುರ್ಥಿ, ರಂಜಾನ್, ಗುಡ್ ಫ್ರೈಡೇ, ಹೊಳಿ ಹಬ್ಬ, ಈದ್ ಮಿಲಾದ್, ಕ್ರಿಸ್ಮಸ್, ಹೀಗೆ ಧಾರ್ಮಿಕ ಹಬ್ಬಗಳಿಗೆ ಬ್ಯಾಂಕ್ ನೌಕರಿಗೆ ರಜೆ ಇರುತ್ತದೆ. ಇದನ್ನು ಹೊರತು ಪಡಿಸಿ ಬ್ಯಾಂಕ್ ನೌಕರಿಗೆ ಕೆಲವು ಪೇ ರಜೆಗಳು ಇರುತ್ತವೆ.

ಇದನ್ನೂ ಓದಿ: 2nd ಪಿಯುಸಿ ಪರೀಕ್ಷೆ -1 ರ ಕೀ ಉತ್ತರ ಬಿಡುಗಡೆ ಮಾಡಲಾಗಿದೆ. ಯಾವುದೇ ಆಕ್ಷೇಪಣೆ ಇದ್ದರೆ ದೂರು ನೀಡಲು ಅವಕಾಶ ಕಲ್ಪಿಸಿದೆ.

ಇದನ್ನೂ ಓದಿ: ಇನ್ನು ಮುಂದೆ ಸ್ಮಾರ್ಟ್ಫೋನ್ ಇಲ್ಲದೇ ಪೇಮೆಂಟ್ ಮಾಡುವುದು ಸುಲಭ, ಅದು ಕೂಡ ಸ್ಮಾರ್ಟ್ ವಾಚ್ ನ ಮುಖಾಂತರ!