ಸರ್ಕಾರಿ ನೌಕರಿ ಸಿಗುವವರೆಗೆ ನಾಳಿನ ಭವಿಷ್ಯದ ಬಗ್ಗೆ ಅಭಧ್ರತೆ ಇರುವುದಿಲ್ಲ. ದುಡಿದ ಹಣವೂ ತಿಂಗಳ ಮೊದಲು ಖಾಲಿಯಾಗುತ್ತದೆ ಮುಂದಿನ ನಮ್ಮ ಭವಿಷ್ಯಕ್ಕೆ ಹಣವೇ ಇಲ್ಲದಂತೆ ಆಗುತ್ತದೆ. ಆದರೆ ಸರ್ಕಾರಿ ಕೆಲಸದಲ್ಲಿ ಹಾಗೆ ಆಗುವುದಿಲ್ಲ. ಪ್ರತಿ ತಿಂಗಳು ಪಿಂಚಣಿ ಹಣ ಕಡಿತವಾಗಿ ನಿಮಗೆ ಸಂಬಳ ಬರುತ್ತದೆ. ಅದಕ್ಕೆ ಸರ್ಕಾರಿ ಕೆಲಸ ಬೇಕು ಎಂದು ಎಲ್ಲರೂ ಆಸೆ ಪಡುತ್ತಾರೆ. ನಿತ್ಯದ ಬದುಕಿನ ಜೊತೆಗೆ ರಿಟೈರ್ಮೆಂಟ್ ಲೈಫ್ ನಲ್ಲಿ ನಾವು ಬದುಕಲು ಈ ಹಣ ಸಹಾಯ ಆಗುತ್ತದೆ.
ಈ ಹಿಂದೆ 2006 ನಂತರ ನೇಮಕಗೊಂಡ ಕೆಲಸಗಾರರಿಗೆ ಪಿಂಚಣಿ ವ್ಯವಸ್ತೆಯಲ್ಲಿ ಕೇಂದ್ರ ಸರ್ಕಾರವು ಬದಲಾವಣೆ ಮಾಡಿದೆ. ಆದರೆ ಈ ಬದಲಾವಣೆಯನ್ನು ವಿರೋಧಿಸಿ ಸರ್ಕಾರಿ ನೌಕರರು ಸರ್ಕಾರದ ಮುಂದೆ ಮತ್ತೆ ಹಳೆಯ ಪಿಂಚಣಿ ವ್ಯವಸ್ಥೆ(old pension scheme) ನೀಡುವಂತೆ ಕೋರಿದ್ದರು. ಅವರುಗಳ ಕೋರಿಕೆಯನ್ನು ಪರಿಗಣಿಸಿ ಕೆಲವು ಮಾನದಂಡಗಳೊಂದಿಗೆ ಈ ಯೋಜನೆ ಮತ್ತೆ ಜಾರಿಯಾಗಲಿದೆ. ಆದರೆ ಅದಕ್ಕೆ ಸರ್ಕಾರ ಕೆಲವು conditions ( ನಿಯಮಗಳು ) ಹಾಕಿದೆ. ಅವುಗಳ ಬಗ್ಗೆ ತಿಳಿಯಿರಿ. ರಾಜ್ಯ ಸರ್ಕಾರವು ಇದರ ಬಗ್ಗೆ ಜನವರಿ 24 ರಂದು ಆದೇಶ ನೀಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮಾನದಂಡಗಳು ಏನೇನು?
- 01.04.2006 ರ ಒಳಗೆ ಸರಕಾರಿ ನೌಕರಿ ಪಡೆದು ನಂತರದಲ್ಲಿ ಕೆಲ್ಸಕ್ಕೆ ಜಾಯಿನ್ ಆದವರಿಗೆ ಹಿಂದಿನ ಪಿಂಚಣಿ ಯೋಜನೆ ಬೇಕೆಂದು ಬಯಸುವವರು 30.06.2024 ರ ಒಳಗಾಗಿ ನೇಮಕಾತಿ ಪ್ರಾಧಿಕಾರಕ್ಕೆ ತಮ್ಮ ಅಭಿಪ್ರಾಯವನ್ನು ತಿಳಿಸಬೇಕು. ಕೆಲವ ಒಂದು ಬಾರಿ ಮಾತ್ರ ಈ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು.
- ಒಂದು ಬಾರಿ ನೀಡಿದ ಅಭಿಪ್ರಾಯವನ್ನು ಬದಲಾಯಿಸಲು ಸಾಧ್ಯವಿಲ್ಲ.
- ಇದು ಕೆಲವ ರಾಜ್ಯ ಸರ್ಕಾರಿ ನೌಕರಿಗೆ ಮಾತ್ರ ಲಭ್ಯವಿದೆ.
- ಮೇಲೆ ಹೇಳಿದಂತೆ ಜೂನ್ 2024 ರ ಒಳಗೆ ಯಾವುದೇ ರೀತಿಯ ಅಭಿಪ್ರಾಯ ಮಂಡನೆಯ ಅರ್ಜಿ ಸಲ್ಲಿಸಿದೆ ಇದ್ದಲಿ ರಾಷ್ಟೀಯ ಪಿಂಚಣಿ ಆಯೋಗದ ನಿಯಮದಂತೆ ನಿಮಗೆ ಪಿಂಚಣಿ ಸಿಗಲಿದೆ.
- ಅಭಿಪ್ರಾಯ ಮಂಡನೆಯ ಅರ್ಜಿಗಳನ್ನು ಪರಿಶೀಲನೆ ಮಾಡಿ ಅರ್ಹರ ಪಟ್ಟಿಯನ್ನು ಇಲಾಖೆ ಬಿಡುಗಡೆ ಮಾಡಲಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಡಿರುವ ಟ್ವಿಟ್ (tweet ) ಹೀಗಿದೆ:-
ಹಳೆಯ ಪಿಂಚಣಿ ಯೋಜನೆಯ(old pension scheme) ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಮಾಡಿರುವ ಟ್ವೀಟ್ ನಲ್ಲಿ ” 2006 ಏಪ್ರಿಲ್ ಕ್ಕು ಮೊದಲು ನೇಮಕಾತಿ ಆಗಿ 2006 ರ ನಂತರದಲ್ಲಿ ಜಾಬ್ ಗೆ ಜಾಯಿನ್ ಆಗಿರುವ ರಾಜ್ಯ ಸರ್ಕಾರದ ಸುಮಾರು 13,000 ಸರ್ಕಾರಿ ಕೆಲಸಗಾರರಿಗೆ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಲು ನಿರ್ಣಯಿಸಲಾಗಿದೆ.. ಎಲೆಕ್ಷನ್ ಗೆ ಮೊದಲು ಎನ್.ಪಿ.ಎಸ್ ಕೆಲಸಗಾರರು ಮುಷ್ಕರು ಮಾಡುವ ವೇಳೆ ಪ್ರದೇಶಕ್ಕೆ ಹೋಗಿ ನಾವು ಗೆದ್ದು ಬಂದರೆ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದೆವು. ಅವರಿಗೆ ನೀಡಿದ ಮಾತಿನ ಪ್ರಕಾರ ಹಳೆಯ ಪಿಂಚಣಿ ಯೋಜನೆಗೆ ಅವರನ್ನು ಸೇರಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಸುದ್ದಿಯಿಂದ 13,000 ಎನ್.ಪಿ.ಎಸ್ ನೌಕರರ ಕುಟುಂಬಗಳಿಗೆ ಸಂತಸವಾಗಿದೆ ಎಂದು ರಾಜ್ಯ ಸರ್ಕಾರ ಭಾವಿಸಿದೆ ” ಎಂಬುದಾಗಿ ಸಿದ್ಧರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ. ಈ ಆದೇಶಕ್ಕೆ ರಾಜ್ಯ ಸರಕಾರಿ ನೌಕರರ ಸಂಘ ಹರ್ಷ ವ್ಯಕ್ತಪಡಿಸಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಜಾರಿಯಾಗಲಿದೆ. ಸೂರ್ಯೋದಯ ಯೋಜನೆಯ ಲಾಭಗಳು ಏನೇನು?
ಇದನ್ನೂ ಓದಿ: ಹೆಣ್ಣು ಮಕ್ಕಳ ಬದುಕಿನ ಆಶಾಕಿರಣ ಸುಕನ್ಯಾ ಸಮೃದ್ಧಿ ಯೋಜನೆಯ ಹಣವನ್ನು ಅವಧಿಗೂ ಮುನ್ನ ಹಿಂಪಡೆಯುವುದು ಹೇಗೆ?