ಆರ್ ಡಿ ಪಿ ಆರ್ ಇಲಾಖೆಯ ಕರ್ನಾಟಕ ಸರ್ಕಾರವು ಶೀಘ್ರದಲ್ಲೇ ಖಾಲಿ ಇರುವ ಪಿಡಿಒ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಹೌದು ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಬಿಜೆಪಿ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದರೆ ಕಳೆದ ಮಾರ್ಚ್‌ನಲ್ಲಿ ನೇಮಕ ವಿಧಾನದ ಅಂತಿಮ 326 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕ ಮಾಡಲು ಆದೇಶ ಹೊರಡಿಸಲಾಗಿತ್ತು. ಇದರ ಜೊತೆಗೆ ಕೆಲವೊಂದು ಪಂಚಾಯಿತಿಗಳಲ್ಲಿ 2-3 ಪಂಚಾಯಿತಿಗಳಿಗೆ ಒಬ್ಬರೇ ಪಿಡಿ ಒ ಇದ್ದು, ಪಂಚಾಯಿತಿ ಅಭಿವೃದ್ಧಿ ಕೆಲ್ಸಗಳು ಕುಂಟಿತವಾಗುತ್ತೆ ಅನ್ನೋ ಮಾತುಗಳು ಕೇಳಿ ಬರುತ್ತಿತ್ತು. ಈಗಾಗಿ ಖಾಲಿಯಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರೇಡ್ ಮತ್ತು ಗ್ರೇಡ್ 2 ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆ ಸೇರಿ ಒಟ್ಟು 733ಹುದ್ದೆಗಳ ಭರ್ತಿಗೆ ಆರ್ಥಿಕವಾಗಿ ಇಲಾಖೆ ಸೂಚನೆ ನೀಡಿದೆ. ಹೌದು ಕೆಪಿಎಸ್ಸಿ ಮೂಲಕ ಖಾಲಿ ಇರುವ ಭರ್ತಿಗೆ ಇಲಾಖೆ ಆದೇಶ ಹೊರಡಿಸಿದೆ. ಹಲವು ವರ್ಷಗಳಿಂದ ಖಾಲಿಯಿರುವ ಪಂಚಾಯಿತಿ ಅಭಿವೃದ್ಧಿ ಇಲಾಖೆ ಅಧಿಕಾರಿ ಹುದ್ದೆಗೆ ಇದೀಗ ಅಧಿಕಾರಿಗಳನ್ನ ಆಯ್ಕೆ ಮಾಡಲು ಇಲಾಖೆ ಮುಂದಾಗಿದ್ದು, 2-3 ಇಲಾಖೆಗಳಿಗೆ ಒಬ್ಬರೇ ಪಿ ಡಿ ಒ ಅಧಿಕಾರಿಯಿರೋದ್ರಿಂದ ಸರ್ಕಾರಿ ಕೆಲ್ಸಗಳು ನಿಧಾನವಾಗುತ್ತಿದ್ದೂ, ಸರ್ಕಾರಿ ಕೆಲಸಕ್ಕೂ ಒಡೆತ ಬೀಳುತ್ತಿದೆ. ಹೀಗಾಗಿ ಇಲಾಖೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಹೌದು ಹೊಸದಾಗಿ ಇದೀಗ ಅಧಿಕಾರಿಗಳ ನೇಮಕಾತಿಗೆ ಆದೇಶ ಹೋರಾಡಿಸಿರೋದ್ರಿಂದ ಸರ್ಕಾರಿ ಕೆಲಸದ ಆಕಾಂಕ್ಷಿ ಗಳಿಗೆ ಒಂದು ರೀತಿಯಲ್ಲಿ ಖುಷಿಯ ವಿಚಾರ ಅಂತ ಹೇಳಬಹುದು. ಹೌದು ಖಾಲಿಯಿರುವ ಹುದ್ದೆಗಳಿಗೆ ಈಗಾಗ್ಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡು ಕೆಪಿಎಸ್ ಸಿ ಗೆ ಕಳುಹಿಸಿದೆ. ಇನ್ನು ಕೆಪಿಎಸ್ ಸಿ ಯೊಂದ ಸಿದ್ದಪಡಿಸಿರುವ ಅಥವಾ ಅಭಿವೃದ್ಧಿ ಪಡಿಸಿರುವ ಕೆಪಿಸಿಸಿ ಎಸ್ ಸ್ಸಿ ಉದ್ಯೋಗ ನೇಮಕಾತಿ ಮೂಲಕ ಆನ್ಲೈನ್ ನಲ್ಲಿ ಹೊಸ ಉದ್ಯೋಗಗಳ ನೇಮಕಾತಿಗೆ ಲೆವೆಲ್ -1, ಲೆವಲ್ -2ಅಧಿಕಾರಿಗಳನ್ನ ನೇಮಿಸಲು ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕ್ರಮವಹಿಸಲಾಗುತ್ತದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಯಾವೆಲ್ಲ ಹುದ್ದೆಗಳು ಖಾಲಿ ಇವೆ? ನೇಮಕಾತಿ ಪ್ರಕ್ರಿಯೆ ಹೇಗೆ?
ಇನ್ನು ಈ ಹುದ್ದೆಗಳ ನೇಮಕಾತಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿದ್ದತೆ ಮಾಡಿಕೊಂಡು ಕೆಪಿಎಸ್ ಸಿ ಗೆ ಕಳುಹಿಸಿದ್ದು, ಕಲ್ಯಾಣ ಕರ್ನಾಟಕದಲ್ಲಿ ಖಾಲಿಯಿರುವ ಪಿಡಿ ಒ ಮತ್ತು ಕಾರ್ಯದರ್ಶಿಗಳ ಮೀಸಲಾತಿ ಬಗ್ಗೆ ರೋಸ್ಟರ್ ಬಿಂದು ಸಿದ್ದಪಡಿಸಿ ಈ ಹುದ್ದೆಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಸಹಮತಿಯನ್ನ ಸಹ ಪಡೆಯಲಾಗಿದೆ. ಹುದ್ದೆಗಳ ಕುರಿತು ಯಾವುದೇ ರೀತಿಯ ಮರು ನಾಮಕಾರಣವಾಗಲಿ ಅಥವಾ ಪ್ರಸ್ತಾವನೆಗಳಗಲಿ ಸರ್ಕಾರದ ಮುಂದೆ ಇಲ್ಲ. ಹೀಗಾಗಿ ಯಾವುದೇ ರೀತಿಯ ಬದಲಾವಣೆಗಳು ಇರೋದಿಲ್ಲ. ಬದಲಿಗೆ ನಿಯಮಗಳ ಪ್ರಕಾರ ಆಯಾ ಹುದ್ದೆಗಳಿಗೆ ವೇತನ ಶ್ರೇಣಿಯನ್ನ ನಿಗಧಿ ಪಡಿಸಲಾಗಿದೆ.
ನೆರನೇಮಕಾತಿ ಮೂಲಕ ಆರ್ ಡಿಪಿ ಆರ್ ಇಲಾಖೆಯ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡು ಖಾಲಿಯಿರುವ ಅಭಿವೃದ್ಧಿ ಅಧಿಕಾರಿ, ಗ್ರೇಡ್ 1, ಗ್ರೇಡ್ 2 ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆ ಸೇರಿ ಒಟ್ಟು 733 ಹುದ್ದೆಗಳಿಗೆ ಇದೆ ತಿಂಗಳು ಅಂದ್ರೆ ನವಂಬರ್ ಕೊನೆ ವಾರದಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದ ಮೂಲಕ ನೇಮಕಾತಿ ಆದೇಶಕ್ಕೆ ಅಧಿಸೂಚನೆ ಹೊರಡಿಸಲು ತಯಾರಿ ನಡೆಸಿದೆ.
ಹೌದು ರಾಜ್ಯದಲ್ಲಿ ಖಾಲಿಯಿರುವ ಪಿಡಿ ಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯ ಸೇರಿ ವಿವಿಧ ಹುದ್ದೆಗಳ ನೇಮಕಾತಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು ಅನುಮೋದನೆ ಸಿಕ್ಕಿದೆ. ನವಂಬರ್ ಅಂತ್ಯ ಅಥವಾ ಡಿಸೇಂಬರ್ ಮೊದಲ ವಾರ ಅಧಿಸೂಚನೆ ಹೊರಬೀಳಲಿದೆ. ಹುದ್ದೆ ಖಾಲಿಯಿರುವ ಕಚೇರಿಗಳಲ್ಲಿ ಸಿಬ್ಬಂದಿಗಳಿಗೆ ಹೆಚ್ಚಿನ ಕೆಲ್ಸದ ಒತ್ತಡ ಬೀಳಲಿದ್ದು, ಸರ್ಕಾರಿ ಕೆಲಸದಲ್ಲಿಯೂ ತ್ವರಿತವಾಗಿ ಕೆಲ್ಸಗಳು ಆಗ್ತಾಯಿಲ್ಲ ಹೀಗಾಗಿ ಹುದ್ದೆಗಳಿಗೆ ಅಭ್ಯರ್ಥಿಗಳು ಆಯ್ಕೆ ಯಾದ್ರೆ ಒತ್ತಡ ಕಡಿಮೆ ಆಗಲಿದೆ.
ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿಯಿರುವ ಪಿಡಿ ಒ 106 ಮತ್ತು ಗ್ರೇಡ್ 1 ಕಾರ್ಯದರ್ಶಿಯ 85 ಹುದ್ದೆಗಳಿದ್ದು, ಇದಕ್ಕೆ ಸಂಬಂಧಿಸಿದಂತೆ ರೋಸ್ಟರ್ ಬಿಂದು ಸಿದ್ದಪಡಿಸಿ ಸಂಬಂಧಿಸಿದ ಇಲಾಖೆಗಳಿಂದ ಸಹಮತಿಯು ಸಿಕ್ಕಿದೆ. 371 ಜೆ ಅಡಿಯಲ್ಲಿ ಸ್ಥಳೀಯ ಯುವಕರಿಗೆ ಹೆಚ್ಚು ಉದ್ಯೋಗವಕಾಶಗಳು ಸಿಗಲಿವೆ. ಇನ್ನು ಪಿಡಿ ಒ ಗೆ 150, ಕಾರ್ಯದರ್ಶಿ ಗ್ರೇಡ್ 1 ಹುದ್ದೆಗೆ 135, ಗ್ರೇಡ್ 2 ಹುದ್ದೆಗೆ 343, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ 105 ಹುದ್ದೆಗಳು ಖಾಲಿಯಿವೆ. ಇವುಗಳಿಗೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗುತ್ತೆ ಅಂತ ತಿಳಿಸಲಾಗಿದೆ.
ಇದನ್ನೂ ಓದಿ: ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಹಣ ಜಮೆ; ಒಮ್ಮೆ ಚೆಕ್ ಮಾಡಿಕೊಳ್ಳಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram