ನಾವು ನಿತ್ಯ ಸೇವಿಸುವ ತರಕಾರಿಯಲ್ಲಿ ಹಿರೇಕಾಯಿ ಸಹ ಒಂದು. ಹಿರೇಕಾಯಿಯಯಲ್ಲಿ ಹಲವು ಆಹಾರ ಪದಾರ್ಥಗಳನ್ನು ಮಾಡಲಾಗುತ್ತದೆ. ಆದರೆ ನಾವು ನಿತ್ಯ ಸೇವಿಸುವ ಹಿರೇಕಾಯಿಯಲ್ಲಿ ಇರುವ ಆರೋಗ್ಯಕರ ಗುಣಗಳ ಬಗ್ಗೆ ನಮಗೆ ಅರಿವಿಲ್ಲ. ಹಿರೇಕಾಯಿಯಲ್ಲಿ ಅಡಗಿರುವ ಆರೋಗ್ಯಕರ ಗುಣಗಳು ಹಾಗೂ ನಮ್ಮ ಆರೋಗ್ಯಕ್ಕೆ ಏಷ್ಟು ಒಳ್ಳೆಯದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಹೀರೆಕಾಯಿಯ ಉಪಯೋಗಗಳು :-
ಕಣ್ಣಿನ ದೃಷ್ಟಿಗೆ ಬಹಳ ಉತ್ತಮ ತರಕಾರಿ:- ಹೀರೆಕಾಯಿಯಲ್ಲಿ ಉತ್ಪನ್ನವಾಗಿದೆ ‘ಎ’ ಅಂಶ ಹೆಚ್ಚಾಗಿರುವ ಕಾರಣದಿಂದ ಕಣ್ಣಿನ ದೃಷ್ಟಿಗೆ ಅತ್ಯಂತ ಉಪಯೋಗ ಎಂದು ಕಣ್ಣಿನ ಅಧ್ಯಯನ ತಜ್ಞರ ಅಭಿಪ್ರಾಯವಾಗಿದೆ. ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಣ್ಣಿನ ಪೊರೆ ಸಮಸ್ಯೆಗೆ ಇದು ಸಹಾಯ ಮಾಡುತ್ತದೆ. ಇದರ ಜೊತೆಗೆ ಕಣ್ಣಿನ ಹಲವಾರು ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ಹೀರೆಕಾಯಿ ಒಂದು ಉತ್ತಮವಾದ ಆಂಟಿ-ಆಕ್ಸಿಡೆಂಟ್ ಆಗಿದ್ದು, ಇದರಲ್ಲಿರುವ ಬೀಟಾ-ಕ್ಯಾರೋಟಿನ್ ಕಣ್ಣಿನ ನರಗಳು ಮತ್ತು ಕಣ್ಣಿಗೆ ಸಂಪರ್ಕಿಸುವ ರಕ್ತನಾಳಗಳನ್ನು ಫ್ರೀ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮಲಬದ್ಧತೆ ಗೆ ರಾಮಬಾಣ:- ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಬಳಸುವುದರಿಂದ ಮಲಬದ್ಧತೆಯಂತಹ ರೋಗದಿಂದ ಮುಕ್ತಿ ಸಿಗುತ್ತದೆ. ಹೀರೆಕಾಯಿಯಲ್ಲಿ ಇರುವ ಉತ್ತಮ ಪ್ರಮಾಣದ ಫೈಬರ್ ಅಂಶವು ಫೈಬರ್ ಜೀರ್ಣಕ್ರಿಯೆಯ ತಡೆಗಟ್ಟುವಿಕೆ ಮತ್ತು ಹೊಟ್ಟೆಯು ತುಂಬಿರುವಂತೆ ಮಾಡುತ್ತದೆ.
ತಲೆನೋವು ನಿವಾರಣೆ :- ತಲೆನೋವಿನಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿ ಹೀರೆಕಾಯಿ ಸೇರಿಸುವುದರಿಂದ ತಲೆನೋವನ್ನು ನಿವಾರಿಸಲು ಸಹಾಯ ಮಾಡುತ್ತವೆ. ವಾರಕ್ಕೆ ಎರಡು ಬಾರಿ ಈ ತರಕಾರಿಯನ್ನು ಸೇವಿಸುವುದರಿಂದ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಬಹುದು.
ಅನಿಮಿಯ ಸಮಸ್ಯೆಗೆ ಉತ್ತಮ ಪರಿಹಾರ :- ಹೀರೆಕಾಯಿ ಕಬ್ಬಿಣದ ಅಂಶ ಹೆಚ್ಚಾಗಿರುವುದರಿಂದ ಹೀರೆಕಾಯಿ ಬಳಸುವುದರಿಂದ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಲ್ಲಿ ಕಬ್ಬಿಣದ ಕೊರತೆ ಉಂಟಾಗದಂತೆ ತಡೆಗಟ್ಟಬಹುದು. ಹಾಗೂ ಹೀರೆಕಾಯಿಯಲ್ಲಿ ವಿಟಮಿನ್ ಬಿ6 ಅಂಶವೂ ಜಾಸ್ತಿ ಇದೆ. ಇದು ಕೆಂಪು ರಕ್ತ ಕಣಗಳ ಆರೋಗ್ಯವನ್ನು ಕಾಪಾಡುತ್ತದೆ, ದೇಹದ ಎಲ್ಲಾ ಅಂಗಾಂಗಗಳಿಗೆ ಸರಿಯಾಗಿ ರಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಮತ್ತು ದೇಹದ ನೋವು ಮತ್ತು ಆಯಾಸವನ್ನು ನಿವಾರಿಸಲು ಸಹಾಯಕ.
ತೂಕ ಇಳಿಸಲು :- ಹೀರೇಕಾಯಿ ತೂಕ ಇಳಿಸಲು ಬಹಳ ಸಹಾಯಕ. ತೂಕ ಇಳಿಸುವ ಹಲವು ಜನರು ಹೀರೇಕಾಯಿ ಜ್ಯೂಸ್ ಕುಡಿಯುತ್ತಾರೆ. ಹೀರೆಕಾಯಿಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿಗಳು ಹಾಗೂ ಕೊಬ್ಬಿನ ಅಂಶಗಳು ಹಾಗೂ ಕೊಲೆಸ್ಟ್ರಾಲ್ ಅಂಶ ಕಡಿಮೆ ಇರುವ ಕಾರಣ ನಿಮ್ಮ ದೇಹದ ತೂಕ ಇಳಿಸಲು ಬಹಳ ಸಹಕಾರಿ ಆಗಿದೆ. ಹೀರೆಕಾಯಿ ಸೇವನೆಯನ್ನು ಮಾಡಿದರೆ ಪ್ರೊಟೀನ್, ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಅಂಶಗಳನ್ನು ಸರಿಯಾಗಿ ಜೀರ್ಣ ಮಾಡುವ ಜೊತೆಗೆ ವಿಪರೀತ ಕೊಬ್ಬಿನ ಅಂಶಗಳು ಕಡಿಮೆ ಮಾಡುತ್ತದೆ. ಹಾಗೂ ಸೊಂಟದ ಸುತ್ತ ಮುತ್ತ ಅಡಗಿರುವ ಬೊಜ್ಜಿನ ಅಂಶಗಳನ್ನು ಕಡಿಮೆ ಮಾಡುತ್ತದೆ. ಹಾಗೂ ದೇಹದಲ್ಲಿ ಇನ್ಸುಲಿನ್ ಪ್ರಮಾಣದ ಉತ್ಪತ್ತಿಯನ್ನೂ ಹೆಚ್ಚು ಮಾಡಲು ಇದು ಸಹಕಾರಿ.
ಸಕ್ಕರೆ ಖಾಯಿಲೆಗೆ ರಾಮಬಾಣ :- ರಕ್ತದಲ್ಲಿ ಇರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿ ನಿಮ್ಮ ಮಧುಮೇಹ ಸಮಸ್ಯೆಗೆ ಪರಿಹಾರ ನೀಡುತ್ತದೆ. ಹಾಗೂ ದೇಹದ ತೂಕವನ್ನು ನಿಯಂತ್ರಣ ಮಾಡುತ್ತದೆ. ಹಾಗೂ ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆಯನ್ನು ಹೆಚ್ಚು ಮಾಡಲು ಹೀರೇಕಾಯಿ ಸಹಕಾರಿ ಆಗಿದೆ. ಮಧುಮೇಹ ಇರುವವರು ಹಿರಕಾಯಿಯನ್ನು ನಿಯಮಿತವಾಗಿ ಸೇವಿಸಬೇಕು.
ಇದನ್ನೂ ಓದಿ: ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಗೆ ಯಾವ ಯಾವ ಬ್ಯಾಂಕ್ ಗಳು ಸಾಲ ನೀಡುತ್ತವೆ ಎಂಬ ಮಾಹಿತಿ ಇಲ್ಲಿದೆ.