ಗಡಿಯಾರವನ್ನ ಮನೆಯಲ್ಲಿ ಹಾಕುವ ಮೊದಲು ಎಚ್ಚರ! ಈ ದಿಕ್ಕಿಗೆ ಗಡಿಯಾರವನ್ನ ಹಾಕಲೇಬೇಡಿ..

ಜೀವನವನ್ನ ನೀರಿನ ಮೇಲಿನ ಗುಳ್ಳೆ ಎನ್ನುತ್ತಾರೆ. ಇರುವಷ್ಟು ಸಮಯ ನಮಗೆ ಬೇಕಾದ ರೀತಿಯಲ್ಲಿ ಬದುಕಿಬಿಡೋಣ ಯಾಕಂದ್ರೆ ಈ ಸಮಯ ಕಳೆದು ಹೋಗುತ್ತದೆ ಅಂತ ಭಗವಾನ್ ಶ್ರೀಕೃಷ್ಣನೆ ಸಮಯದ ಕುರಿತು ಈ ರೀತಿಯಾಗಿ ಹೇಳಿದ್ದಾನೆ. ಹಾಗಾಗಿ ಸಮಯವು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸಮಯ ಹಾಗೂ ಸಮುದ್ರದ ಅಲೆಗಳು ಯಾರನ್ನೂ ಕಾಯುವುದಿಲ್ಲ ಎನ್ನುವ ಮಾತಿದೆ. ಅದರಂತೆ ಸಮಯದ ಹಿಂದೆ ನಾವು ಓಡಬೇಕು ಹೊರತು. ಸಮಯ ಎಂದಿಗೂ ನಮಗಾಗಿ ಕಾದು ನಿಲ್ಲುವುದಿಲ್ಲ. ಈ ಮಹತ್ವವನ್ನು ಅರಿತವರು ಜೀವನದಲ್ಲಿ ಮುಂದೆ ಸಾಗುತ್ತಾರೆ. ಹೀಗೆ ನಮ್ಮ ಜೀವನದಲ್ಲಿ ಜಾಗ ಪಡೆದಿರುವ ಸಮಯ ಹಾಗೂ ಮನೆಯ ಗೋಡೆಯಲ್ಲಿ ನೇತು ಹಾಕುವ ಗಡಿಯಾರವೂ ನಮ್ಮ ಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಹೌದು ಮನೆಯ ಗೋಡೆಯಲ್ಲಿ ನೇತು ಹಾಕುವ ಗಡಿಯಾರವೂ ನಮ್ಮ ಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಯಾಕಂದ್ರೆ ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದಕ್ಕೂ ವಾಸ್ತು ನಿಯಮಗಳಿವೆ. ಸರಿಯಾದ ದಿಕ್ಕು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ.

WhatsApp Group Join Now
Telegram Group Join Now

ಹೌದು ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದಕ್ಕೂ ಕೆಲವೊಂದಷ್ಟು ಶಾಸ್ತ್ರ ಸಂಪ್ರದಾಯ ಹಾಗೂ ವಾಸ್ತು ನಿಯಮಗಳು ಅಂತಿವೆ. ಅಲ್ದೇ ಸರಿಯಾದ ದಿಕ್ಕು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಹೋಗಾಗಿ ಕೆಲವೊಂದಷ್ಟು ನಿಯಮಗಳ ಬಗ್ಗೆ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳೋದ್ರಿಂದ ಒಳ್ಳೇದಾಗುತ್ತೆ ಅಂದ್ರೆ ಅಂತಹ ಪ್ರಯತ್ನಗಳನ್ನ ಯಾಕೆ ಮಾಡಬಾರದು ಅಲ್ವಾ. ಗಡಿಯಾರದ ಈ ವಿಷಯವು ಕೂಡ ಜೀವನದಲ್ಲಿ ಸಾಕಷ್ಟು ಮಹತ್ವವನ್ನ ಪಡೆದಿದ್ದು, ಹಾಗಾದರೆ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇರಿಸಬೇಕು? ಯಾವ ದಿಕ್ಕಿನಲ್ಲಿ ಇರಿಸಿದರೆ ಏನು ಲಾಭ ಇಲ್ದಿದ್ರೆ ಏನಾಗುತ್ತೆ ಇದ್ರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗುವವರೆಗೂ ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಲ್ಲ ಎಂದ ದುನಿಯಾ ವಿಜಯ್

ಇದನ್ನೂ ಓದಿ: ನನ್ನ ಸ್ವಂತದವರೇ ನನ್ನ ಮಧ್ಯರಾತ್ರಿ ಒಂದು ಹೆಣ್ಣುಮಗಳು ಅಂತ ನೋಡದೆ ಆಚೆ ಹಾಕಿದ್ರು ಕಹಿ ಅನುಭವ ಹಂಚಿಕೊಂಡ ನಟಿ ತನ್ವಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಈ ತಪ್ಪು ಮಾಡೊದ್ರೋ ಮನೆಯಲ್ಲಿ ನೆಮ್ಮದಿಯೇ ಇರಲ್ಲ

ಮೊದಲಿಗೆ ಸ್ನೇಹಿತರೆ ಗಡಿಯಾರಕ್ಕೆ ಸಂಬಂಧಿಸಿದಂತೆ ಯಾವ ಕೆಲ್ಸಗಳನ್ನ ಮಾಡಬಾರದು ಅನ್ನೋದು ಕೂಡ ಬಹಳ ಮುಖ್ಯವಾಗುತ್ತದೆ ಹೌದು ನಮ್ಮ ವಾಸ್ತು ನಿಯಮದ ಪ್ರಕಾರ, ಗಡಿಯಾರವನ್ನು ಮನೆಯ ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ಇಡಬಾರದು, ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅಲ್ಲದೇ ಗಡಿಯಾರವನ್ನು ಬಾಗಿಲಿನ ಮೇಲೆ ಕೂಡ ನೇತು ಹಾಕಬಾರದು. ಅದ್ರಲ್ಲೂ ಇನ್ನೊಂದು ಮುಖ್ಯ ಅಂಶ ಏನೆಂದ್ರೆ ಗಡಿಯಾರವು ಸ್ಥಗಿತಗೊಳ್ಳದಂತೆ ನೋಡಿಕೊಳ್ಳಬೇಕು. ಹೌದು ಮನೆಯಲ್ಲಿನ ಎಲ್ಲಾ ಗಡಿಯಾರಗಳು ಕಾರ್ಯನಿರ್ವಹಿಸುತ್ತಿರಬೇಕು. ಸ್ಥಗಿತಗೊಂಡ, ಕೆಟ್ಟು ಹೋದ ಅಥವಾ ನಿಂತು ಹೋಗಿರುವ ಗೋಡೆ ಗಡಿಯಾರಗಳನ್ನು ಎಂದಿಗೂ ಬಳಸಬೇಡಿ. ಅವುಗಳನ್ನ ತಕ್ಷಣವೇ ತೆಗೆದುಬಿಡಬೇಕು ಇಲ ಸರಿಪಡಿಸಿ ಇಡಬೇಕು. ಇನ್ನೊಂದು ಮುಖ್ಯ ಅಂಶವೆಂದರೆ ಗೋಡೆ ಗಡಿಯಾರದ ಸಮಯವು ನೈಜ ಸಮಯಕ್ಕಿಂತ ಹಿಂದಿರಬಾರದು.

ಅಂದ್ರೆ ವಾಸ್ತವವಾಗಿ ಎರಡು ಅಥವಾ ಮೂರು ನಿಮಿಷ ಮುಂದಿದ್ದರೆ ತುಂಬಾ ಒಳ್ಳೆಯದು ಅಂತ ಹೇಳ್ತಾರೆ. ಇನ್ನು ನೀವು ಗಾಜಿನ ಗಡಿಯಾರವನ್ನು ಹೊಂದಿದ್ದರೆ ಗಡಿಯಾರದ ಗಾಜು ಒಡೆದು ಹೋಗದಂತೆ ನೋಡಿಕೊಳ್ಳಬೇಕು, ಒಡೆದು ಹೋಗಿದ್ರೆ ಅಂತಹ ಗಡಿಯಾರಗಳನ್ನು ಯಾವುದೇ ಕಾರಣಲ್ಲೂ ಮನೆಯಲ್ಲಿ ಇಡಬೇಡಿ. ಗಡಿಯಾರಗಳನ್ನು ಆಗಾಗ ಸ್ವಚ್ಛಗೊಳಿಸಬೇಕು. ಅದರ ಮೇಲೆ ಯಾವುದೇ ಕೊಳೆ ಅಥವಾ ಧೂಳು ಇರದಂತೆ ನೋಡಿಕೊಂಡು ಆಗಾಗ ಸ್ವಚ್ಛಗೊಳಿಸೋದು ಉತ್ತಮ. ಇನ್ನು ಮತ್ತೊಂದು ವಿಚಾರ ಗಡಿಯಾರವನ್ನು ಖರೀದಿಸುವಾಗ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ, ಒಂಟಿತನವನ್ನು ಚಿತ್ರಿಸುವ ಗಡಿಯಾರ ಕೊಳ್ಳಬೇಡಿ ಇದರಿಂದ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿ ಮಾನಸಿಕವಾಗಿ ನೆಮ್ಮದಿಯನ್ನ ಕಳೆದುಕೊಳ್ಳುತ್ತಿರ. ಅಲ್ದೇ ಗಡಿಯಾರ ಹಾಗೂ ಕ್ಯಾಲೆಂಡರ್‌ಗಳಂತಹ ವಸ್ತುಗಳನ್ನು ಯಾವಾಗಲೂ ಮನೆಯ ಒಳಗೆಯೇ ಹಾಕಬೇಕು ಎಂದಿಗೂ ಮನೆಯ ಹೊರಗೆ ತೂಗು ಹಾಕಬಾರದು. ಇದು ಮನೆಗೆ ಶುಭವಲ್ಲ.

ಇನ್ನು ಗಡಿಯಾರವನ್ನ ಯಾವ ದಿಕ್ಕಿಗೆ ಹಾಕಿದರೆ ಸೂಕ್ತ ಅನ್ನೋದರ ಬಗ್ಗೆ ನೋಡೋದಾದ್ರೆ ವಾಸ್ತು ಶಾಸ್ತ್ರದಲ್ಲಿ ಗೋಡೆಯ ಗಡಿಯಾರವನ್ನು ಉತ್ತರ, ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೇತು ಹಾಕುವುದು ಶುಭವೆಂದು ಪರಿಗಣಿಸಲಾಗುತ್ತದೆ ಇದರಿಂದ ಕೆಲಸ ಮಾಡುವಾಗ ಗಡಿಯಾರವನ್ನು ನೋಡಲು ಸುಲಭವಾಗುತ್ತದೆ, ಅದಕ್ಕಿಂತ ಹೆಚ್ಚಾಗಿ ಈ ದಿಕ್ಕುಗಳಲ್ಲಿ ಗಡಿಯಾರ ಇಡೋದ್ರಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ನಿರ್ಮಿಸುತ್ತದೆ. ಇನ್ನು ಮುಖ್ಯವಾಗಿ ಗಡಿಯಾರವನ್ನು ಉತ್ತರ ದಿಕ್ಕಿನಲ್ಲಿ ನೇತು ಹಾಕುವುದು ಶುಭ, ಇದು ಸಂಪತ್ತು ಹಾಗೂ ಸಮೃದ್ಧಿಗೆ ಮುನ್ನುಡಿಯನ್ನು ಬರೆಯುತ್ತದೆಂದು ಹೇಳಲಾಗುತ್ತದೆ. ಜೊತೆಗೆ ಉತ್ತರ ದಿಕ್ಕನ್ನು ಕುಬೇರ ಮೂಲೆ ಹಾಗೂ ಗಣೇಶನ ಮೂಲೆಯೆಂದು ಕರೆಯುತ್ತಾರೆ.

ಹಾಗಾಗಿ ಈ ಮೂಲೆಯಲ್ಲಿಡುವುದರಿಂದ ವೃತ್ತಿಜೀವನ ಹಾಗೂ ವ್ಯವಹಾರದಲ್ಲಿ ಅಭಿವೃದ್ಧಿ ಆಗುತ್ತೆ ಅನ್ನೋ ನಂಬಿಕೆ ಇದೆ ಇನ್ನು ಗಡಿಯಾರವನ್ನು ಪೂರ್ವದಿಕ್ಕಿನಲ್ಲಿ ನೇತು ಹಾಕುವುದರಿಂದ ಕೆಲಸ ಹಾಗೂ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಾಗೋದ್ರಾ ಜೊತೆಗೆ ಪೂರ್ವದಿಕ್ಕು ನಾವು ಮಾಡುವ ಕಾರ್ಯಗಳನ್ನು ಉತ್ತಮಗೊಳಿಸುವುದರಿಂದ, ಗಡಿಯಾರವನ್ನಿಡಲು ಪೂರ್ವ ದಿಕ್ಕು ಅತ್ಯಂತ ಸೂಕ್ತ ಅಂತ ನಂಬಲಾಗಿದೆ. ಇನ್ನು ಮಲಗುವ ಕೋಣೆಯಲ್ಲಿ ಗಡಿಯಾರವನ್ನು ಇಡಬೇಕೆಂದು ಬಯಸಿದರೆ, ಗೋಡೆಯ ಗಡಿಯಾರವನ್ನಿಡಲು ಅಲ್ಲೂ ಕೂಡ ಪೂರ್ವ ದಿಕ್ಕುಗಳು ಬಹಳ ಸೂಕ್ತ ಆದರೆ ಪೂರ್ವದಿಕ್ಕಿನಲ್ಲಿ ಸಾಧ್ಯವಾಗದಿದ್ದರೆ ಉತ್ತರ ಮೂಲೆಯಲ್ಲಿ ಇಡಬಹುದು. ಆದ್ರೆ ಎಲ್ಲಕ್ಕಿಂತ ಹೆಚ್ಚಾವಿ ಪೂರ್ವ ದಿಕ್ಕು ಅತ್ಯಂತ ಸೂಕ್ತ. ಸಾಧ್ಯವಾಗದೆ ಇದ್ದಲಿ ನೀವು ಗಡಿಯಾರವನ್ನು ಪಶ್ಚಿಮ ದಿಕ್ಕಿನ ಗೋಡೆಯಲ್ಲಿ ಇರಿಸಬಹುದು ಆದರೆ ಮೊದಲ ಆಯ್ಕೆ ಪೂರ್ವ ಆಗಿದ್ರೆ ಸೂಕ್ತ ಇಲ್ಲವಾದಲ್ಲಿ ಪಶ್ಚಿಮ ದಿಕ್ಕನ್ನು ಕೊನೆಯ ಆಯ್ಕೆಯಾಗಿ ಪರಿಗಣಿಸಿ ಗಡಿಯಾರವನ್ನ ಹಾಕಬೇಕು.