Rinku singh: ಸೀಟಿನ ಮನೆಯಲ್ಲಿ ವಾಸಿಸುತ್ತಿದ್ದ ರಿಂಕು ಸಿಂಗ್ ಇಂದು ಸ್ಟಾರ್ ಕ್ರಿಕೆಟರ್! ಇಂದಿಗೂ ಅದೇ ಮನೆಯಲ್ಲಿ ತಂದೆ ತಾಯಿ ವಾಸ

Rinku singh: ರಿಂಕು ಸಿಂಗ್ ಈ ಹೆಸರು 2023 ನೇ ಐಪಿಎಲ್ ನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಅದರಲ್ಲೂ GT ವಿರುದ್ಧದ ಪಂದ್ಯದ ನಂತರ ಅವರ ಆಟಕ್ಕೆ ಮನಸೋಲದವರೆ ಇಲ್ಲ. ಆ ಪಂದ್ಯದಲ್ಲಿ ಗುಜರಾತ್ ತಂಡದವರು ಅವರು ಕೊಲ್ಕತ್ತಾ ತಂಡದವರಿಗೆ 205 ಗುರಿಯನ್ನು ನೀಡಿದ್ದರು.ಆ ಗುರಿಯನ್ನು ಬೆನ್ನಟ್ಟಿದ ಕೊಲ್ಕತ್ತಾ ತಂಡ ದವರು 19 ಓವರ್ ಗೆ ಒಟ್ಟು 176 ರನ್ ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತ್ತು . ಆದರೆ ಕೊಲ್ಕತ್ತಾ ತಂಡ ಗೆಲ್ಲಲು ಇನ್ನು 1 ಓವರ್ ಗೆ ಇನ್ನೂ 29 ರನ್ ಗಳು ಬೇಕಾಗಿದ್ದವು ಆಗ ಉಮೇಶ್ ಯಾದವ್ ಅವರು ಮೊದಲನೇ ಬಾಲ್ ನಲ್ಲಿ 1 ರನ್ ಯನ್ನು ಗಳಿಸಿ ರಿಂಕು ಸಿಂಗ್ ಗೆ ಸ್ಟ್ರೈಕ್ ಯನ್ನು ನೀಡಿದರು ಆಗ ರಿಂಕು ಸಿಂಗ್ 5 ಬಾರಿಗೆ 5 ಸಿಕ್ಸರನ್ನು ಒಡೆದು ಭರ್ಜರಿ ಜಯ ವನ್ನು ತಂದು ಕೊಟ್ಟರು.ಕೊಲ್ಕತ್ತಾ ತಂಡ ಗೆಲ್ಲುವುದಕ್ಕೂ ಮುನ್ನ ಹಲವಾರು ಕೊಲ್ಕತ್ತಾ ತಂಡದ ಅಭಿಮಾನಿಗಳು ನಮ್ಮ ತಂಡ ಸೋತಿತೆಂದು ಬೇಜಾರಾಗಿದ್ದರೆ ಅದೇ ರೀತಿಯಲ್ಲಿ ಗುಜರಾತ್ ತಂಡದ ಅಭಿಮಾನಿಗಳು ನಮ್ಮ ತಂಡ ಗೆದ್ದು ತಂದು ಖುಷಿಯಾಗಿದ್ದರು ಆದರೆ ರಿಂಕು ಸಿಂಗ್ ಬಂದು ಎಲ್ಲಾದನ್ನು ಉಲ್ಟಾ ಮಾಡಿದರು ಅವತ್ತು ರಿಂಕು ಸಿಂಗ್ ಆಡಿದ ಆಟವನ್ನು ನೋಡಿ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.

WhatsApp Group Join Now
Telegram Group Join Now

ರಿಂಕು ಸಿಂಗ್ ಕ್ರಿಕೆಟ್ ಗೆ ಬರುವುದಕ್ಕೂ ಮುನ್ನ ಅವರ ಜೀವನ ಹೇಗಿತ್ತು?

ರಿಂಕು ಸಿಂಗ್ ಹುಟ್ಟಿದ್ದು ಉತ್ತರ ಪ್ರದೇಶದ ಅಲಿಗಢ್ ನಲ್ಲಿ 1997 ರಲ್ಲಿ ಜನಿಸಿದರು. ಇವರಿಗೆ ಸುಮಾರು ಈಗ 26 ವರ್ಷ. ರಿಂಕು ಸಿಂಗ್ ತಂದೆ ಮನೆ ಮನೆಗೆ ಹೋಗಿ ಗ್ಯಾಸ್ ಸಿಲೆಂಡರ್ ವಿತರಣೆ ಮಾಡುವ ಕೆಲಸ ಮಾಡುತ್ತಿದ್ದರು. ರಿಂಕು ಸಿಂಗ್ ತಂದೆಗೆ ಒಟ್ಟು ಐದು ಜನ ಮಕ್ಕಳು ಅವರದ್ದು ಒಂದು ಸಣ್ಣ ಬಡ ಕುಟುಂಬ. ಆ ಕುಟುಂಬ ವನ್ನು ಸಾಕಲು ರಿಂಕು ಸಿಂಗ್ ತಂದೆ ತುಂಬಾ ಕಷ್ಟ ಪಡುತ್ತಿದ್ದರು.ರಿಂಕು ಸಿಂಗ್ ಅವರ ಅಣ್ಣ ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ಅವರ ತಂದೆಗೆ ಸಹಾಯ ಮಾಡಲು ಮತ್ತು ಕುಟುಂಬ ವನ್ನು ಸಾಕುವುದಕ್ಕೆ ಆಟೋ ಡ್ರೈವರ್ ಆಗಿ ಕೆಲಸಕ್ಕೆ ಸೇರಿ ಕೊಂಡರು. ಮತ್ತು ರಿಂಕು ಸಿಂಗ್ ಅವರ ಇನ್ನೊಬ್ಬ ಅಣ್ಣ ಕೂಡ ಕೋಚಿಂಗ್ ಸೆಂಟರ್ ಗೆ ಕೆಲಸಕ್ಕೆ ಸೇರಿಕೊಂಡರು. ಈ ಮೂಲಕ ಚಿಕ್ಕ ಚಿಕ್ಕ ವಯಸ್ಸಿಗೆ ಎಲ್ಲಾ ದುಡಿಯಲು ಪ್ರಾರಂಭಿಸಿದರು. ಮನೆಯಲ್ಲಿ ಕಷ್ಟ ಇದ್ದರಿಂದ ಮತ್ತು ರಿಂಕು ಸಿಂಗ್ ಅವರಿಗೆ ಓದಿ ನಲ್ಲಿ ಅಷ್ಟೊಂದು ಆಸಕ್ತಿ ಇಲ್ಲದಿದ್ದರಿಂದ ಅವರು ಕೂಡ 9ನೇ ತರಗತಿ ಮಾತ್ರ ಓದಿ ಅವರ ಅಣ್ಣನ ಜೊತೆ ಕೋಚಿಂಗ್ ಸೆಂಟರ್ ನಲ್ಲಿ ಕಸ ಹೊಡೆಯುವ ಮತ್ತು ನೆಲ ಒರೆಸುವ ಕೆಲಸಕ್ಕೆ ಸೇರಿ ಕೊಂಡರು.

ಆದರೆ ರಿಂಕು ಸಿಂಗ್ ಅವರಿಗೆ ಚಿಕ್ಕ ವಯಸ್ಸಿ ನಿಂದಲೇ ಕ್ರಿಕೆಟ್ ನಲ್ಲಿ ತುಂಬಾ ಅಸಕ್ತಿ ಇರುತ್ತದೆ. ಈ ವಿಚಾರ ವನ್ನು ತಂದೆಗೆ ಹೇಳಿದಾಗ ಅವರ ತಂದೆ ಬೇಡವೆಂದು ಮತ್ತು ನೀನು ಕ್ರಿಕೆಟನ್ನು ಯಾವುದೇ ಕಾರಣಕ್ಕೂ ಕೂಡ ಆಡ ಬಾರದೆಂದು ಹೇಳುತ್ತಾರೆ. ಆದರೂ ಕೂಡ ರಿಂಕು ಸಿಂಗ್ ಗೆ ಕ್ರಿಕೆಟ್ ಮೇಲಿರುವ ಆಸಕ್ತಿ ಕಡಿಮೆ ಯಾಗುವುದಿಲ್ಲ. ಆದುದ್ದರಿಂದ ಅವರು ಕದ್ದು ಮುಚ್ಚಿ ಕೋಚಿಂಗ್ ಪಡೆಯಲು ಪ್ರಾರಂಭಿಸುತ್ತಾರೆ. ರಿಂಕು ಸಿಂಗ್ ಅವರು ಕ್ರಿಕೆಟ್ ನಲ್ಲಿ ತುಂಬಾ ಪ್ರತಿಭಾವಂತರಾಗಿರುತ್ತಾರೆ.

ಇದನ್ನು ಓದಿ: ಯಾರಿದು ಈ ಮಲ್ಲಿಕಾರ್ಜುನ ಮುತ್ಯ ಇವರು ದೇವರಂತೆ ನಿಜಾನಾ!?

ಇದೇ ಕಾರಣಕ್ಕೆ ಅವರು ನಿಧಾನ ವಾಗಿ ಕ್ರಿಕೆಟ್ ನಲ್ಲಿ ಬೆಳೆಯಲು ಪ್ರಾರಂಭಿಸುತ್ತಾರೆ.ಕ್ರಿಕೆಟ್ ನಲ್ಲಿ ದುಡ್ಡು ಸಿಗಲು ಶುರುವಾದಾಗ ಅವರ ತಂದೆ ಕೂಡ ಸ್ವಲ್ಪ ಮಟ್ಟಿಗೆ ಸೈಲೆಂಟ್ ಆಗುತ್ತಾರೆ. ರಿಂಕು ಸಿಂಗ್ ಅವರ ತಂದೆ ಅನ್ಕೊಂಡಿದ್ರು ಕ್ರಿಕೆಟ್ ಅಂದರೆ ಸುಖ ಸುಮ್ಮನೆ ಆಡುವುದು ಅದರಿಂದ ಏನು ಪ್ರಯೋಜನವಿಲ್ಲ ಅಂತ ಆದರೆ ಕ್ರಿಕೆಟ್ ನಿಂದ ಸ್ವಲ್ಪ ಮಟ್ಟಿಗೆ ಕುಟುಂಬಕ್ಕೆ ಸಹಾಯವಾದಾಗ ಅವರ ತಂದೆ ಸ್ವಲ್ಪಮಟ್ಟಿಗೆ ಬೆಂಬಲ ನೀಡಲು ಶುರು ಮಾಡುತ್ತಾರೆ. ಆಗ ರಿಂಕು ಸಿಂಗ್ ನೆಲವರೆಸುವ ಕೆಲಸ ವನ್ನು ಪೂರ್ತಿಯಾಗಿ ಬಿಟ್ಟು ಬಿಡುತ್ತಾರೆ ಮತ್ತು ಕ್ರಿಕೆಟ್ ಕಡೆಗೆ ಹೆಚ್ಚು ಗಮನ ಕೊಡಲು ಪ್ರಾರಂಭಿಸುತ್ತಾರೆ. ನಂತರ ಅಂಡರ್ 16 ಮತ್ತು ಅಂಡರ್ 19 ನಲ್ಲೂ ಕೂಡ ಆಡುತ್ತಾರೆ. ನಂತರ ಉತ್ತರ ಪ್ರದೇಶದ ರಣಜಿ ಟ್ರೋಫಿ ಯನ್ನು ಆಡಲು ಪ್ರಾರಂಭಿಸುತ್ತಾರೆ. ಅಲ್ಲಿಂದ ರಿಂಕು ಸಿಂಗ್ ಅವರ ಬದುಕು ಅಂತಂತವಾಗಿ ಬದಲಾಗಲು ಶುರು ವಾಗುತ್ತದೆ ಮತ್ತು ರಣಜಿ ಟ್ರೋಫಿ ಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ.

ಮೊದಲನೇ ಬಾರಿ ಪಂಜಾಬ್ ತಂಡ ದವರು ಅವರನ್ನು 10 ಲಕ್ಷ ಕೊಟ್ಟು ಖರೀದಿ ಮಾಡುತ್ತಾರೆ. ಪಂಜಾಬ್ ತಂಡ ದಲ್ಲಿದ್ದಾಗ ರಿಂಕು ಸಿಂಗ್ ಅವರಿಗೆ ಹೆಚ್ಚು ಅವಕಾಶ ಸಿಗುವುದಿಲ್ಲ. ನಂತರ 2018ರಲ್ಲಿ KKR ಅವರನ್ನು 80 ಲಕ್ಷಕ್ಕೆ ಖರೀದಿ ಮಾಡುತ್ತಾರೆ. 80 ಲಕ್ಷ ಅದು ರಿಂಕು ಸಿಂಗ್ ಕಂಡ ಮೊದಲನೇ ದೊಡ್ಡ ಮೊತ್ತ ವಾಗಿತ್ತು. ಆನಂತರ ರಿಂಕು ಸಿಂಗ್ ಒಂದು ಒಳ್ಳೆ ಮನೆ ಯನ್ನು ಕಟ್ಟಿಸುತ್ತಾರೆ.

ಇದನ್ನು ಓದಿ: ಮೇ 5ಕ್ಕೆ ದ್ವಿತೀಯ ಪಿ.ಯು.ಸಿ ಫಲಿತಾಂಶ ಬರುತ್ತಾ!? ರಿಸೆಲ್ಟ್ ಚೆಕ್ ಮಾಡೋದು ಹೇಗೆ?

ರಿಂಕು ಸಿಂಗ್ ಅವರ ತಂದೆ ತಾಯಿ ರಿಂಕು ಸಿಂಗ್ ಹೊಸ ಮನೆಗೆ ಬರಲು ಏಕೆ ನಿರಾಕರಿಸಿದರು?

ರಿಂಕು ಸಿಂಗ್ ಅವರ ತಂದೆ ತಾಯಿಗೆ ತನ್ನ ಹೊಸ ಮನೆಗೆ ಬನ್ನಿ ಎಂದು ಕರೆಯುತ್ತಾರೆ. ಆದರೆ ಅವರ ತಂದೆ ತಾಯಿ ಅದನ್ನು ನಿರಾಕರಿಸಿ ಈಗ ಇರುವ ಮನೆಯ ಚೆನ್ನಾಗಿದೆ ನಾವು ಇಲ್ಲೇ ಇರುತ್ತೇವೆ ಎಂದು ಹೇಳುತ್ತಾರೆ. ಮತ್ತು ನೀನು ಕ್ರಿಕೆಟ್ ನಲ್ಲಿ ಏನೇ ಸಾಧನೆ ಮಾಡಿದರೂ ಅದು ನಿನ್ನ ಶ್ರಮ ನಮ್ಮ ಕೊಡುಗೆ ಏನು ಇಲ್ಲ ನಾನು ನಿನಗೆ ಬೈದಿದ್ದೆ ಕ್ರಿಕೆಟ್ ಆಡಬೇಡ ಎಂದು ಹೇಳಿದ್ದೆ. ಅದಕ್ಕೋಸ್ಕರ ನಿನ್ನ ಪರಿ ಶ್ರಮದಲ್ಲಿ ನಾವು ಪಾಲುದಾರರಾಗುವುದಿಲ್ಲ ಎಂದು ಅವರ ತಂದೆ ಹೇಳಿದಂತೆ.

ರಿಂಕು ಸಿಂಗ್ ಅವರ ತಾಯಿಗೆ ಕೊಟ್ಟ ಭಾಷೆಯೇನು?

ಅಮ್ಮ ಈ ನನಗೆ ಕೆಲಸ ಮಾಡಲು ತುಂಬಾ ಕಷ್ಟ ವಾಗುತ್ತಿದೆ ನಾನು ಕ್ರಿಕೆಟ್ ಆಡುತ್ತಿನಿ ಅಮ್ಮ! ದೊಡ್ಡ ಕ್ರಿಕೆಟರ್ ಆಗಿ ನಿಮ್ಮನ್ನೆಲ್ಲ ಸಾಕುತ್ತೀನಿ ಅಮ್ಮ ಎಂದು ಹೇಳಿದ್ದರಂತೆ.

BCCI ರಿಂಕು ಸಿಂಗ್ ಅವರನ್ನು ಏತಕ್ಕಾಗಿ ಬ್ಯಾನ್ ಮಾಡಿತ್ತು?

ರಿಂಕು ಸಿಂಗ್ ಅವರಿಗೆ ಅತಿ ಯಾದ ದುಡ್ಡಿನ ಅವಶ್ಯಕತೆ ಇದ್ದಿದ್ದರಿಂದ ವಿದೇಶಿ ಲೀಗನ್ನು ಆಡಲು ಒಪ್ಪಿ ಕೊಂಡಿದ್ದರಂತೆ BCCIನ ಒಪ್ಪಿಗೆ ಪಡೆಯದೆ ರಿಂಕು ಸಿಂಗ್ ಅವರು ವಿದೇಶಿ ಲೀಗನ್ನು ಆಡಲು ಒಪ್ಪಿ ಕೊಂಡಿದ್ದರಿಂದ BCCI ರಿಂಕು ಸಿಂಗ್ ಅವರನ್ನು ಮೂರು ತಿಂಗಳು ಬ್ಯಾನ್ ಮಾಡಿತ್ತು. ಮೂರು ತಿಂಗಳು ನಂತರ ರಿಂಕು ಸಿಂಗ್ ಅವರಿಗೆ ಕ್ರಿಕೆಟ್ ಆಡಲು ಅನುಮತಿ ನೀಡಿತ್ತು.