Rishab Shetty: ಹುಟ್ಟಿ ಬೆಳೆದ ಮನೆಯಲ್ಲೇ ಮಗಳಿಗೆ ಕಿವಿ ಚುಚ್ಚುವ ಶಾಸ್ತ್ರ, ರಾಧ್ಯಾಳ ಕಿವಿ ಚುಚ್ಚುವ ಸಂಭ್ರಮದಲ್ಲಿ ರಿಷಬ್ ಶೆಟ್ಟಿ ಫ್ಯಾಮಿಲಿ..

Rishab Shetty: ರಿಷಬ್ ಶೆಟ್ಟಿ ಅಂದ ತಕ್ಷಣ ನಮಗೆ ಥಟ್ ಅಂತ ನೆನಪಿಗೆ ಬರೋದು ಹಿಟ್ ಮೂವಿ, ಬಾಕ್ಸ್ ಅಫೀಸ್ ಕಲೆಕ್ಷನ್ ನಲ್ಲಿ ಕಾಮಾಲ್ ಮಾಡಿದ್ದ ಕಾಂತರಾ ಚಿತ್ರ. ಕನ್ನಡ ಚಿತ್ರರಂಗದಲ್ಲಿ ತನ್ನ ಹೆಜ್ಜೆ ಗುರುತುಗಳನ್ನ ಉಳಿಸುವಲ್ಲಿ ಯಶಶ್ವಿಯಾದ ಕಾಂತರ ಸಿನಿಮಾ ರಿಷಿಬ್ ಶೆಟ್ಟಿ ಅವ್ರ ಸಿನಿ ಕೇರಿಯರ್ ಅನ್ನೆ ಬದಲಾಯಿಸಿಬಿಡ್ತು. ಹೌದು ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದ ಕಾಂತಾರ ಸಿನಿಮಾ ಎಲ್ಲರನ್ನು ಮೋಡಿ ಮಾಡಿತ್ತು. ಇನ್ನು ಈ ಮೂಲಕ ಜನರ ಅಭಿಮಾನಿ ಪ್ರೀತಿ ಒಂದು ರೀತಿಯ ಕ್ರೇಜ್ ಸೃಷ್ಟಿಸಿದ್ದ ರಿಷಿಬ್ ಶೆಟ್ಟಿ ಮತ್ತೊಮ್ಮೆ ಜನರ ಮನ ಗೆಲ್ಲಲ್ಲು ಕಾಂತಾರ 2 ಸಿನಿಮಾ ಮೂಲಕ ತೆರೆ ಮೇಲೆ ಬರಲು ಸಜ್ಜಾಗುತ್ತಿದ್ದಾರೆ.

WhatsApp Group Join Now
Telegram Group Join Now

ಕಾಂತಾರ ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ಬಳಿಕ ಪಾರ್ಟ್-2 ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಕಾರಣ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿತ್ತು. ಜೊತೆಗೆ ಎಲ್ಲರ ಮನಸ್ಸನ್ನು ಕದ್ದಿತ್ತು. ಹೀಗಾಗಿ ಮತ್ತೊಮ್ಮೆ ಎಲ್ಲರ ಮನಸ್ಸನ್ನು ಕದಿಯಲು ನಟ ರಿಷಬ್‌ ಶೆಟ್ಟಿ ಕಾಂತಾರ 2 ಸಿನಿಮಾ ಮೂಲಕ ಬರಲು ರೆಡಿಯಾಗುತ್ತಿದ್ದಾರೆ. ಹೌದು ಕಾಂತಾರ ಸಿನಿಮಾ ಚಿತ್ರರಂಗದಲ್ಲಿ ದೊಡ್ಡ ಯಶಸ್ಸನ್ನ ಗಳಿಸಿತು. ಇದರಿಂದಾಗಿ ಕಾಂತಾರ ಪಾರ್ಟ್‌ 2 ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಹೀಗಾಗಿ ಸಿನಿಮಾವನ್ನ ನಿರೀಕ್ಷೆಗೂ ಮೀರಿ ತಯಾರು ಮಾಡಲು ರಿಷಿಬ್ ಸಿದ್ಧತೆ ನಡೆಸುತ್ತಿದ್ದಾರೆ. ಇದರ ಮಧ್ಯೆ ಕುಟುಂಬದವರಿಗೂ ಸಮಯ ಕೊಡುವ ರಿಷಿಬ್, ಮನೆಯಲ್ಲಿ ಒಳ್ಳೆ ಕಾರ್ಯವನ್ನ ಮಾಡಿ ಅದರ ವಿಡಿಯೋವನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ನಾನು ಹುಟ್ಟಿಬೆಳೆದ ಮನೆ ನನ್ನ ಬಾಲ್ಯದ ನೆನಪುಗಳ ಖಜಾನೆ ಅಂತ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪತ್ನಿಯನ್ನ ಓದಿಸಿ ಸರ್ಕಾರಿ ನೌಕರಿ ಕೊಡಿಸಿದ ಪತಿ, ನೌಕರಿ ಸಿಕ್ಕ ಮೇಲೆ ಪತ್ನಿ ಶುರು ಮಾಡುದ್ಲು ನವರಂಗಿ ಆಟ

ನಾ ಹುಟ್ಟಿ ಬೆಳೆದ ಮನೆ ಬಾಲ್ಯದ ನೆನಪುಗಳ ಖಜಾನೆ

ಹೌದು ಕಾಂತಾರ ಸಿನಿಮಾ ಮೂಲಕ ಎಲ್ಲರ ಮನೆಮಾತಾದ ನಟ ರಿಷಬ್‌ ಶೆಟ್ಟಿ(Rishab Shetty). ಇದೀಗ ಕಾಂತಾರ 2 ಸಿನಿಮಾ ಮೇಕಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಅಲ್ಲದೇ ಇದರ ಜೊತೆಗೆ ಮನೆಯ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ತಮ್ಮ ಖುಷಿಯ ಕ್ಷಣಗಳನ್ನ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ, ಅಲ್ಲದೇ ತಮ್ಮ ಬಾಲ್ಯದ ಕ್ಷಣಗಳನ್ನ ಮೆಲುಕು ಹಾಕಿದ್ದಾರೆ. ಕೆಲಸದ ಒತ್ತಡದ ನಡುವೆ ತಮ್ಮ ಪುತ್ರಿಯ ಕಿವಿ ಚುಚ್ಚುವ ಶಾಸ್ತ್ರ ಮಾಡಿ ಅದನ್ನ ನಟ ರಿಷಬ್‌ ಸಂಭ್ರಮಿಸಿದ್ದಾರೆ. ಹೌದು ನಟ ರಿಷಬ್‌ ಶೆಟ್ಟಿ ತಾವು ಹುಟ್ಟಿ ಬೆಳೆದ ಮನೆಯಲ್ಲಿ ಮಗಳು ರಾಧ್ಯಾಳ ಕಿವಿ ಚುಚ್ಚುವ ಕಾರ್ಯಕ್ರಮವನ್ನು ಮಾಡಿದ್ದಾರೆ. ಸದ್ಯ ನಟ ರಿಷಬ್‌ ಶೆಟ್ಟಿ ಆ ಸಂಭ್ರಮದ ವಿಡಿಯೋ ಒಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದ ಕೆಳಗೆ ನಾನು ಹುಟ್ಟಿ ಬೆಳೆದ ಮನೆ ನನ್ನ ಬಾಲ್ಯದ ನೆನಪುಗಳ ಖಜಾನೆ, ಅದಕ್ಕಿಗಾ ರಾಧ್ಯಾಳ ಕಿವಿ ಚುಚ್ಚುವ ಸಂಭ್ರಮವೊಂದು ಹೊಸತಾಗಿ ಆ ನೆನಪುಗಳ ಖಜಾನೆಯಲ್ಲಿ ಸೇರಿಕೊಳ್ಳುತ್ತಿವೆ” ಎಂದು ಬರೆದುಕೊಂಡಿದ್ದಾರೆ.

ಇನ್ನು ರಿಷಿಬ್ ಶೆಟ್ಟಿ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ರಾಧ್ಯಳನ್ನ ನೋಡಿ ಹರಸಿ ಆರೈಸಿದ್ದಾರೆ. ಅಲ್ಲದೇ ರಿಷಿಬ್ ಅವ್ರ ಮುಂದಿನ ಸಿನಿಮಾಗೆ ಒಳ್ಳೆಯದಾಗ್ಲಿ ಅಂದಿದ್ದು ಆದಷ್ಟು ಬೇಗ ಕಾಂತರ 2 ಬರಲಿ ತಾವೆಲ್ಲರೂ ಕಾಯುತ್ತಿರೋದಾಗಿ ತಿಳಿಸಿದ್ದಾರೆ. ಆದರೆ ರಿಷಿಬ್ ಅವ್ರ ಕಾಂತರ 2 ಯಾವಾಗ ಸೆಟ್ಟೆರುತ್ತೋ ದೊಡ್ಡ ಪರದೆಯಲ್ಲಿ ಯಾವಾಗ ರಿಲೀಸ್ ಆಗುತ್ತೋ ಗೊತ್ತಿಲ್ಲ ಆದ್ರೆ ಅಭಿಮಾನಿಗಳ ಕುತೂಹಲಕ್ಕಂತು ಕೊರತೆಯಿಂಲ್ಲದಂತೆ ಬಹಳ ನಿರೀಕ್ಷೆಇಟ್ಟುಕೊಂಡು ಕಾಯುತ್ತಿದ್ದಾರೆ.

ಇದನ್ನೂ ಓದಿ: ಭೀಕರ ಅಪಘಾತ!ಕಾಲು ಕಳೆದುಕೊಂಡ ದೊಡ್ಮನೆ ಕುಡಿ; ರಸ್ತೆ ಅಪಘಾತದಲ್ಲಿ ಯುವ ನಟ ಸೂರಜ್ ಗೆ ಆಘಾತ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram