ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಆಗಿ ರಾಯಲ್ ಎನ್ ಫೀಲ್ಡ್ ಬೈಕ್ ಕೊಟ್ಟ ಉದ್ಯಮಿ..

ಇನ್ನೇನು ದೀಪಾವಳಿ ಹಬ್ಬ ಹತ್ತಿರ ಬರುತ್ತಿದೆ ಈಗಾಗಲೇ ಅದರ ತಯಾರಿಯೂ ಶುರುವಾಗಿದೆ ಎಲ್ಲ ಕಡೆಗಳಲ್ಲಿ ತಮ್ಮ ಪ್ರೀತಿಪಾತ್ರರಿಗೆ ಹಾಗೂ ಸಂಬಂಧಿಕರಿಗೆ ಉಡುಗೊರೆಗಳನ್ನು ಕೊಡಲು ಶುರು ಮಾಡಿದ್ದಾರೆ ಅಂತೆಯೇ ಕೆಲವು ಆಫೀಸ್ ಗಳಲ್ಲೂ ಕೂಡ ತಮ್ಮ ಉದ್ಯೋಗಗಳಿಗೆ ಸಿಹಿ ತಿಂಡಿ ಹಾಗೂ ಬೋನಸ್(bonus) ಗಳನ್ನು ಕೊಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ತಮಿಳುನಾಡಿನ ಟೀ ಎಸ್ಟೇಟ್ ಮಾಲೀಕರಾದ ಶಿವಕುಮಾರ್ ಅವರು ತಮ್ಮ ಉದ್ಯೋಗಿಗಳಿಗೆ ರಾಯಲ್ ಎನ್ಫೀಲ್ಡ್ ಬೈಕ್(Royal Enfield bike) ಅನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ.

WhatsApp Group Join Now
Telegram Group Join Now

ದೀಪಾವಳಿಯ ಸಂದರ್ಭದಲ್ಲಿ ಎಲ್ಲರೂ ತಮ್ಮ ಇಚ್ಛೆಯ ಅನುಗುಣವಾಗಿ ಏನಾದರೂ ಒಂದು ಉಡುಗೊರೆಯನ್ನು ಕೊಡುವ ಪದ್ಧತಿ ಇದೆ. ಕೆಲವರು ಗಿಫ್ಟ್ ವೋಚರ್ಗಳು ಏನಾದರೂ ಸಿಹಿ ತಿಂಡಿಗಳು ಹಾಗೆ ಬೆಳ್ಳಿ(Silver), ಚಿನ್ನ(Gold) ಹೀಗೆ ಹಲವಾರು ರೀತಿಯಲ್ಲಿ ಉಡುಗೊರೆಗಳನ್ನು(Gift) ಕೊಡುತ್ತಾರೆ ಆದರೆ ತಮಿಳುನಾಡಿನ ಟೀ ಎಸ್ಟೇಟ್ ಮಾಲೀಕರ ಉಡುಗೊರೆಯನ್ನು ನೋಡಿ ಎಲ್ಲರೂ ಅಚ್ಚರಿಯಾಗಿದ್ದಾರೆ. ಕೆಲಸ ಮಾಡಿದರೆ ಇಂತಹ ಮಾಲೀಕರ ಬಳಿ ಕೆಲಸ ಮಾಡಬೇಕು ಎನ್ನುವ ಯೋಚನೆಯಲ್ಲಿದ್ದಾರೆ ಅಂತಹ ಉಡುಗೊರೆಯನ್ನು ಶಿವಕುಮಾರ್ ತನ್ನ ಉದ್ಯೋಗಿಗಳಿಗೆ ಕೊಟ್ಟಿದ್ದಾರೆ. 190 ಎಕರೆ ಟೀ ಎಸ್ಟೇಟ್ ಅನ್ನು ಹೊಂದಿರುವ ಶಿವಕುಮಾರ್ ಅವರು ಉದ್ಯೋಗಿಗಳ ಭಾಗ್ಯ ವಿಧಾತ ಅಂತಾನೇ ಹೇಳಬಹುದು.

ಶಿವಕುಮಾರ್ ಅವರ ಜೊತೆ 627 ಜನ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಇವರು ಉದ್ಯೋಗಿಗಳನ್ನು ತುಂಬಾ ಹೃದಯವಂತಿಕೆಯಿಂದ ನೋಡುತ್ತಾರೆ ಒಂದು ದಿನವೂ ಕೂಡ ಇವರನ್ನು ಹೊರಗಿನವರತೆ ಕಂಡಿಲ್ಲ ತಮ್ಮ ಕುಟುಂಬ ಸದಸ್ಯರನ್ನು ಯಾವ ರೀತಿ ನೋಡಿಕೊಳ್ಳುತ್ತಾರೋ ಅದೇ ರೀತಿ ಇವರನ್ನು ಕೂಡ ನೋಡಿಕೊಳ್ಳುತ್ತಿದ್ದಾರೆ ಪ್ರತಿ ವರ್ಷ ಬೋನಸ್ ಕೊಡುವುದರೊಂದಿಗೆ ಇನ್ನೂ ಹಲವಾರು ಬೆಲೆಬಾಳುವ ವಸ್ತುಗಳನ್ನು ಕೊಡುತ್ತಾರೆ ಅಂತೆಯೇ ಈ ವರ್ಷ ಎರಡು ಲಕ್ಷ ರೂಪಾಯಿ ಮೌಲ್ಯದ ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ಕೊಟ್ಟಿದ್ದಾರೆ. ಒಂದಲ್ಲ ಎರಡಲ್ಲ ಒಟ್ಟು ಸುಮಾರು ಹದಿನೈದಕ್ಕೂ ಮೇಲ್ಪಟ್ಟ ಉದ್ಯೋಗಿಗಳಿಗೆ ಈ ರೀತಿಯಾದಂತಹ ಉಡುಗೊರೆಯನ್ನು ನೀಡಿದ್ದಾರೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ರಾಯಲ್ ಎನ್ಫೀಲ್ಡ್ ಬೈಕ್(Royal Enfield bike)ನ ಸೌಭಾಗ್ಯ ಯಾರ್ಯಾರಿಗೆ ಒದಗಿ ಬಂದಿದೆ?

ಮ್ಯಾನೇಜರ್, ಕ್ಯಾಶಿಯರ್ ಸೇರಿದಂತೆ ಸೂಪರ್ ವೈಸರ್, ಸ್ಟೋರ್ ಕೀಪರ್ ಹಾಗೂ ಡ್ರೈವರ್ ಗಳಿಗೆ ಈ ಬೈಕ್ ಗಳ ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ. ಈ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ ನಮಗೆ ಇಂತಹ ಮಾಲೀಕರು ಸಿಕ್ಕಿರುವುದು ನಮ್ಮ ಪುಣ್ಯ ಅಂತ ಒಬ್ಬ ಉದ್ಯೋಗಿ ಹೇಳಿಕೊಂಡಿದ್ದಾರೆ. ನಿಜವಾಗಲೂ ಶಿವಕುಮಾರ್ ಅಂತಹ ಮಾಲೀಕ ಸಿಗುವುದು ತುಂಬಾ ಅಪರೂಪ ಸಿಕ್ಕಿದರೂ ಸಹಿತ ಅಷ್ಟು ಹೃದಯವಂತಿಕೆ ದೊಡ್ಡ ಮನಸ್ಸುಳ್ಳವರು ಸಿಗುವುದಂತೂ ಬಲು ಅಪರೂಪ.

ಇದನ್ನೂ ಓದಿ: ಮಹಿಂದ್ರ xuv 400 ಉತ್ತಮ ಮೈಲೇಜ್ ನೊಂದಿಗೆ ದೀಪಾವಳಿಯ ವಿಶೇಷ ರಿಯಾಯಿತಿಯಲ್ಲಿ ಲಭ್ಯವಿದೆ. ಶೋ ರೂಮ್ ಮುಂದೆ ಸಾಲುಗಟ್ಟಿ ನಿಂತ ಜನ.

ಓದಿ: ದೀಪಾವಳಿಗೆ ಸಿಕ್ತು ಊಹಿಸಲಾರದ ಭರ್ಜರಿ ಗಿಫ್ಟ್; ಆಫೀಸ್ ಬಾಯ್ ಗು ಬಂಪರ್ ಕಾರ್ ಗಿಫ್ಟ್

ಇದನ್ನೂ ಓದಿ: ಹೊಸ ವೈಶಿಷ್ಟ್ಯಗಳ ಜೊತೆಗೆ ಯಮಹ ಎಂಟಿ 15 ವಿ 2 ವಿಶೇಷ ದೀಪಾವಳಿ ಆಫರ್ ನೊಂದಿಗೆ ನಿಮ್ಮ ಮನೆಗೆ ಬರುತ್ತಿದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram