ಭಾರತೀಯ ರೈಲ್ವೆ ಇಲಾಖೆಯಲ್ಲಿ ಅಸಿಸ್ಟಂಟ್‌ ಲೋಕೋ ಪೈಲಟ್‌ ಹುದ್ದೆಗೆ ಅರ್ಜಿ ಆಹ್ವಾನ..

RRB ALP Recruitment 2024

ಸರ್ಕಾರಿ ಹುದ್ದೆ ಬೇಕು ಎಂದು ಆಸೆ ಪಡುವವರಿಗೆ ಒಂದು ಸಿಹಿ ಸುದ್ದಿ ಭಾರತೀಯ ರೈಲ್ವೆ ಇಲಾಖೆಯು ಹೊಸದಾಗಿ ಅಸಿಸ್ಟಂಟ್‌ ಲೋಕೋ ಪೈಲಟ್‌ ಜಾಬ್ ಗೆ 5669 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಿದೆ. ಉದ್ಯೋಗದ ಕೆಲಸದ ಬಗ್ಗೆ ಸಂಪೂರ್ಣ ಈ ಮಾಹಿತಿಯನ್ನು ಈ ನೋಡಬಹುದು. 

WhatsApp Group Join Now
Telegram Group Join Now

ಹುದ್ದೆಯ ವಿವರ:-  ಇಲಾಖೆಯ ಹೆಸರು : ಭಾರತೀಯ ರೈಲ್ವೆ ಇಲಾಖೆ, ಕೆಲಸದ ಹೆಸರು : ಅಸಿಸ್ಟಂಟ್‌ ಲೋಕೋ ಪೈಲಟ್, ಅಪ್ಲಿಕೇಶನ್ ಕರೆದಿರುವ ಹುದ್ದೆಗಳ ಸಂಖ್ಯೆ : 5696, ಸಂಬಳದ ವಿವರ: ಜಾಬ್ ಗೆ ಸೇರಿದಾಗ ನೀಡುವ ಮೊತ್ತ 19,900 ರೂಪಾಯಿಗಳು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಎಜುಕೇಷನ್ ಕ್ವಾಲಿಫಿಕೇಷನ್ (education qualification) :- ಹುದ್ದೆಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು ಹತ್ತನೇ ತರಗತಿ(sslc) ಜೊತೆಗೆ ಅಧಿಕೃತ ವಿಶ್ವವಿದ್ಯಾಲಯದಿಂದ ಐಟಿಐ ಮಾಡಿ ವಿವಿಧ ಟ್ರೇಡ್‌ಗಳಲ್ಲಿ ಎನ್‌ಸಿವಿಟಿ/ಎಸ್‌ಸಿವಿಟಿ ಪ್ರಮಾಣ ಪತ್ರ ಹೊಂದಿರಬೇಕು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

Age Limit:-

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ :- 18 ರಿಂದ 30 ವಯಸ್ಸಿನವರು ಅರ್ಜಿ ಸಲ್ಲಿಸಬಹುದು.
  • ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ : 3 ವರ್ಷಗಳ ಸಡಿಲಿಕೆ ಇದೆ.
  • ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ:- 5 ವರ್ಷಗಳ ಸಡಿಲಿಕೆ ಇದೆ.

ಫೀಸ್(Fees) ವಿವರ:-

  • ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು :- 500 ರೂಪಾಯಿಗಳು.
  • 2. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಮಾಜಿ ಸೈನಿಕ ಅರ್ಜಿದಾರರಿಗೆ – 250 ರೂಪಾಯಿ.

ಉದ್ಯೋಗ ಮಾಡಬೇಕದ ಸ್ಥಳ:- ಭಾರತದ ರೈಲ್ವೆ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಯಾವುದೇ ರೈಲ್ವೆ ವಲಯದಲ್ಲಿ ಕೆಲಸ ಮಾಡಲು ರೆಡಿ ಇರಬೇಕು. ಬೆಂಗಳೂರಿನಲ್ಲಿ 219+65 ಹುದ್ದೆಗಳಿವೆ. ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: ನೀವು 10 ನೇ ತರಗತಿ ಪಾಸಾದರೆ ಸಾಕು ಮಂಡ್ಯ ಡಿಸಿಸಿ ಬ್ಯಾಂಕ್ ನಲ್ಲಿ 93 ಖಾಲಿ ಹುದ್ದೆಗಳು, ಇಂದೇ ಅರ್ಜಿಯನ್ನು ಸಲ್ಲಿಸಿ

ಅರ್ಜಿ ಸಲ್ಲಿಸಲು ನೀಡಬೇಕಾದ ಡಾಕ್ಯುಮೆಂಟ್ಸ್(Documents):-

  1. ಅರ್ಜಿದಾರನ ಆಧಾರ್ ಕಾರ್ಡ್ ಜೆರಾಕ್ಸ್.
  2. ಪಾಸ್ಪೋರ್ಟ್ ಸೈಜ್ (passport size) ಫೋಟೋ.
  3. ಮೊಬೈಲ್ ಸಂಖ್ಯೆ.
  4. ಎಸೆಸೆಲ್ಸಿ ಮಾರ್ಕ್ಸ್ ಕಾರ್ಡ್(sslc marks card).
  5. ಅಧಿಕೃತ ವಿಶ್ವ ವಿದ್ಯಾಲಯದಿಂದ ನೀಡಿದ ಐಟಿಐ ಪ್ರಮಾಣಪತ್ರ.
  6. ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
  7. ರೇಶನ್ ಕಾರ್ಡ್ ಜೆರಾಕ್ಸ್.
  8. ಮಾಜಿ ಸೈನಿಕ ಆಗಿದ್ದಲ್ಲಿ ಅದರ ಬಗ್ಗೆ ದಾಖಲೆ.

ಅಪ್ಲಿಕೇಶನ್ ಹಾಕುವ ವಿಧಾನ:-

  • ಇಲ್ಲಿ ಕ್ಲಿಕ್ ಮಾಡಿ ವೆಬ್ ಸೈಟ್ ಗೆ ಹೋಗಿ.
  • ಹುದ್ದೆಗಳ ನೇಮಕಾತಿಯನ್ನು ಆಯ್ಕೆ ಮಾಡಿ.
  • ನಿಮ್ಮ ಪೂರ್ಣ ಹೆಸರು(full name) ಮತ್ತು ನಿಮ್ಮ ಲಿಂಗ(gender), ವಿಳಾಸವನ್ನು ಭರ್ತಿ ಮಾಡಿ( ಆಧಾರ್ ಕಾರ್ಡ್ ನಲ್ಲಿ ಇದ್ದಂತೆ).
  • ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
  • ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
  • ಮೊಬೈಲ್ ಸಂಖ್ಯೆಗೆ ಬಂದಿರುವ ಓಟಿಪಿ(otp)ಯನ್ನು ಹಾಕಿ.
  • ನಿಮ್ಮ ಹತ್ತನೇ ತರಗತಿಯ ಮಾರ್ಕ್ಸ್ ಕಾರ್ಡ್ ಮತ್ತು ಐಟಿಐ ಮಾರ್ಕ್ಸ್ ಕಾರ್ಡ್ ಸ್ಕ್ಯಾನ್ ಮಾಡಿ.
  • ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಇದ್ದಲ್ಲಿ ಅದನ್ನು ಸ್ಕ್ಯಾನ್ ಮಾಡಿ ಹಾಕಿ.
  • ಕೊನೆಯದಾಗಿ ಫೀಸ್ ಅನ್ನು ಆನ್ಲೈನ್ ನಲ್ಲಿ ಪೇ(pay) ಮಾಡಿ ನಿಮ್ಮ ಅರ್ಜಿಯನ್ನು ಸಲ್ಲಿಸಿ.

ಇದನ್ನೂ ಓದಿ: 421 KM ಮೈಲೇಜ್ ನೊಂದಿಗೆ ಕೇವಲ 10.99 ಲಕ್ಷಕ್ಕೆ ಹೊಸ ಟಾಟಾ ಪಂಚ್ ಇವಿಯನ್ನು ಖರೀದಿಸಬಹುದು

ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಾವೇರಿ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನ..