RRB Technician Recruitment 2024: ರೈಲ್ವೆ ಇಲಾಖೆಯು ಕಳೆದ ಜನವರಿ ತಿಂಗಳಲ್ಲಿ ರೈಲ್ವೆ ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗಳಗೆ ಅರ್ಜಿ ಆಹ್ವಾನ ಮಾಡಿತ್ತು. ಈಗ ದೇಶದ ಎಲ್ಲ ರೈಲ್ವೆ ವಲಯಗಳಲ್ಲಿ ಅಂದಾಜು 9,000 ಟೆಕ್ನೀಷಿಯನ್ ಹುದ್ದೆಗಳನ್ನು ನೇಮಕ ಮಾಡಲು ಶಾರ್ಟ್ ನೋಟಿಫಿಕೇಶನ್ ಬಿಟ್ಟಿದೆ.
ಉದ್ಯೋಗದ ಬಗ್ಗೆ ಮಾಹಿತಿ:- ಭಾರತೀಯ ರೈಲ್ವೆ ಇಲಾಖೆಯಿಂದ ರೈಲ್ವೆ ಟೆಕ್ನೀಷಿಯನ್ ಹುದ್ದೆಗೆ ಅಧಿಸೂಚನೆ ಹೊರಡಿಸಿದೆ. ಸಂಭಾವ್ಯ ಹುದ್ದೆಗಳ ಸಂಖ್ಯೆ 9,000. ಎಂಪ್ಲಾಯ್‌ಮೆಂಟ್ ನ್ಯೂಸ್‌ನಲ್ಲಿ ಅಧಿಸೂಚನೆ ಬಿಡುಗಡೆ ಮಾಡಿದ್ದು ಫೆಬ್ರುವರಿ 2024 ರಿಂದ ಏಪ್ರಿಲ್ 2024ರ ವರೆಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ. ಎಸ್‌ಎಸ್‌ಎಲ್‌ಸಿ ಪಾಸ್ ಆದ ಬಳಿಕ ಐಟಿಐ ಮುಗಿಸಿ ಎನ್‌ಸಿವಿಟಿ ಅಥವಾ ಎಸ್‌ಸಿವಿಟಿ ಪ್ರಮಾಣ ಪತ್ರ ಹೊಂದಿರುವ ಅಥವಾ ಡಿಪ್ಲೊಮ ಇನ್ ಇಂಜಿನಿಯರಿಂಗ್ ಅಥವಾ ತಾಂತ್ರಿಕ ವಿಷಯಗಳಲ್ಲಿ ಇಂಜಿನಿಯರಿಂಗ್ ಓದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸಾಮಾನ್ಯ ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸು ಹಾಗೂ ಗರಿಷ್ಠ 28ವರ್ಷ ಆಗಿರಬಹುದು. ಹಾಗೂ ಪ್ರವರ್ಗ 2ಎ ಅಥವಾ 2ಬಿ ಅಥವಾ 3ಬಿ- 3 ವರುಷ ಸಡಿಲಿಕೆ SC/ST- 5 ವರುಷ ವಯಸ್ಸಿನ ಸಡಿಲಿಕೆ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅಭ್ಯರ್ಥಿಯ ಆಯ್ಕೆ ಮಾಡುವ ವಿಧಾನ:-
- ಅಭ್ಯರ್ಥಿಯು ಸಲ್ಲಿಸಿದ ಅರ್ಜಿಯನ್ನು ಪರಿಶೀಲನೆ ಮಾಡುತ್ತಾರೆ.
- ಕಂಪ್ಯೂಟರ ಆಧಾರಿತ ಪರೀಕ್ಷೆ ನಡೆಸುತ್ತಾರೆ. ಅದರಲ್ಲಿ ಉತ್ತೀರ್ಣ ಆದವರಿಗೆ ವೈದ್ಯಕೀಯ ಪರೀಕ್ಷೆ ನಡೆಸುತ್ತಾರೆ.
- ಮೂಲ ದಾಖಲಾತಿಯನ್ನು verification ಮಾಡುತ್ತಾರೆ.
- ನಂತರ ನಿಮ್ಮ ಇಂಟರ್ವ್ಯೂ ನಡೆಸಿ ನಿಮ್ಮ ಆಯ್ಕೆಯ ಬಗ್ಗೆ ಮಾಹಿತಿಯನ್ನು ನಿಮ್ಮ ಮೇಲ್ ಐಡಿ ಗೆ ಅಥವಾ ಪೋಸ್ಟ್ ಮೂಲಕ ತಲುಪಿಸುತ್ತಾರೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಭಾರತದ ಯಾವ ಯಾವ ಪ್ರದೇಶಗಳಲ್ಲಿ ಹುದ್ದೆಗಳ ನೇಮಕಾತಿ ನಡೆಯುತ್ತದೆ?
ಭಾರತದ ಹಲವು ರಾಜ್ಯಗಳಲ್ಲಿ ನೇಮಕಾತಿಯ ನಡೆಯುತ್ತದೆ. ಅಹಮದಾಬಾದ್, ಬಿಲಾಶ್‌ಪುರ್, ಅಲಹಾಬಾದ್, ಬೆಂಗಳೂರು, ಭೂಪಾಲ್, ರಾಂಚಿ, ಭುವನೇಶ್ವರ್, ಅಜ್ಮೀರ್, ಛಂಡೀಘಡ, ಚೆನ್ನೈ, ಗೋರಖ್‌ಪುರ್, ಗುವಾಹಟಿ, ಜಮ್ಮು, ಮಾಲ್ದಾ, ಮುಂಬೈ, ಮುಜಾಫರ್‌ಪುರ್, ಪಾಟ್ನಾ, , ಸಿಕಂದರಾಬಾದ್, ಸಿಲಿಗುರಿ, ತ್ರಿವೇಂಡ್ರಮ್ ರೈಲ್ವೆ ಆರ್‌ಆರ್‌ಬಿಗಳಲ್ಲಿ ಹುದ್ದೆಗಳ ನೇಮಕಾತಿ ನಡೆಯುತ್ತದೆ.
ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಯ ಬಗ್ಗೆ ಮಾಹಿತಿ :-
5,696 ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗಳಿಗೆ ಅಪ್ಲಿಕೇಶನ್ ಫಾರ್ಮ್ ಬಿಡುಗಡೆ ಮಾಡಿದ್ದು, ಫೆಬ್ರುವರಿ 19 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಎಸ್‌ಎಸ್‌ಎಲ್‌ಸಿ , ಐಟಿಐ ಪೂರ್ಣ ಗೊಳಿಸಿ ಎನ್‌ಸಿವಿಟಿ ಅಥವಾ ಎಸ್‌ಸಿವಿಟಿ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆಗೆ ಅರ್ಜಿ ಸಲ್ಲಿಸುವವರು ಸಾಮಾನ್ಯ ಹಾಗೂ ಹಿಂದುಳಿದ ವರ್ಗದವರಾದರೆ 500 ರೂಪಾಯಿ ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಅಥವಾ ಪ್ರವರ್ಗ-1 ಮತ್ತು ಮಾಜಿ ಸೈನಿಕರಾಗಿದ್ದರೆ 25 ರೂಪಾಯಿ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು. ಯಾವುದೇ ಅನುಭವದ ಅಗತ್ಯವಿಲ್ಲ. ಅರ್ಜಿ ಸಲ್ಲಿಸುವವರು www.rrbbnc.gov.in ಹೋಗಿ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಬಹುದು. ಅರ್ಜಿ ಸಲ್ಲಿಸುವವರು ದೇಶದ ಯಾವುದೇ ಭಾಗದಲ್ಲಿ ಆದರೂ ಕೆಲಸ ಮಾಡಲು ಸಿದ್ಧತೆ ಮಾಡಿಕೊಂಡಿರಬೇಕು. ಲಿಖಿತ ಪರೀಕ್ಷೆ ಮತ್ತು ಇಂಟರ್ವ್ಯೂ ನಡೆಸಿ ನಿಮ್ಮ ಎಜುಕೇಷನ್ ಸರ್ಟಿಫಿಕೇಟ್ ಗಳನ್ನು ಮಾಡುತ್ತಾರೆ. ಪರೀಕ್ಷೆಯ ದಿನವನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.
ಇದನ್ನೂ ಓದಿ: ಜನಸಾಮಾನ್ಯರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ, ಇನ್ನು ಮುಂದೆ ಅಕ್ಕಿ ಮತ್ತು ಗೋಧಿಯನ್ನು ಬಹಳ ರಿಯಾಯಿತಿಯಲ್ಲಿ ಪಡೆಯಬಹುದು