ಸರ್ಕಾರಿ ಹುದ್ದೆಗೆ ಅರ್ಜಿ ಹಾಕುವ ಆಸಕ್ತ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯು 9144 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಿದೆ. ಹುದ್ದೆಗಳು ದೇಶಾದ್ಯಂತ ಇವೆ. ಯಾವುದೇ ಪ್ರದೇಶದಲ್ಲಿ ಹುದ್ದೆ ಮಾಡಲು ಬಯಸುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ. ಹುದ್ದೆಗಳ ಪೂರ್ಣ ವಿವರ ಇಲ್ಲಿದೆ.
ರೈಲ್ವೆ ಇಲಾಖೆಯ ಖಾಲಿ ಇರುವ ಹುದ್ದೆಗಳ ವಿವರ :- ಭಾರತೀಯ ರೈಲ್ವೆ ಇಲಾಖೆಯು ಒಟ್ಟು 1092 ಟೆಕ್ನೀಷಿಯನ್ ಗ್ರೇಡ್ -1 ಸಿಗ್ನಲ್ ಹುದ್ದೆ, 8052 ಟೆಕ್ನೀಷಿಯನ್ ಗ್ರೇಡ್ -3 ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಟೆಕ್ನೀಷಿಯನ್ ಗ್ರೇಡ್ -1 ಸಿಗ್ನಲ್ ಹುದ್ದೆಗೆ ಶೈಕ್ಷಣಿಕ ಅರ್ಹತೆ ಬಿಎಸ್ಸಿ ಅಥವಾ ಡಿಪ್ಲೊಮ ಅಥವಾ ಇಂಜಿನಿಯರಿಂಗ್ ಪಾಸ್ ಆಗಿರಬೇಕು. ಹಾಗೂ ಟೆಕ್ನೀಷಿಯನ್ ಗ್ರೇಡ್ -3 ಹುದ್ದೆಯ ಶೈಕ್ಷಣಿಕ ಅರ್ಹತೆ ಮೆಟ್ರಿಕ್ಯೂಲೇಷನ್ ಜತೆಗೆ ಐಟಿಐ ಪಾಸ್ ಮಾಡಿರಬೇಕು ಹಾಗೂ ಎನ್‌ಸಿವಿಟಿ ಅಥವಾ ಎಸ್‌ಸಿವಿಟಿ ಪ್ರಮಾಣ ಪತ್ರ ಪಡೆದಿರಬೇಕು.
ಹುದ್ದೆಗಳ ತಿಂಗಳ ವೇತನದ ವಿವರ:-
- ಟೆಕ್ನೀಷಿಯನ್ ಗ್ರೇಡ್ -1 ಸಿಗ್ನಲ್ ಹುದ್ದೆಗೆ 29,200 ರೂಪಾಯಿ.
- ಟೆಕ್ನೀಷಿಯನ್ ಗ್ರೇಡ್ -3 ಹುದ್ದೆಗೆ 19,900 ರೂಪಾಯಿ.
ಹುದ್ದೆಗೆ ಅರ್ಜಿ ಸಲ್ಲಿಸುವವರ ವಯಸ್ಸಿನ ಮಿತಿ ಹೀಗಿದೆ:- ಟೆಕ್ನೀಷಿಯನ್ ಗ್ರೇಡ್ -1 ಸಿಗ್ನಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ವಯಸ್ಸು 01-07-2024 ಕ್ಕೆ ಕನಿಷ್ಠ 18 ಹಾಗೂ ಗರಿಷ್ಠ 36. ಹಾಗೂ ಟೆಕ್ನೀಷಿಯನ್ ಗ್ರೇಡ್ -3 ಕನಿಷ್ಠ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ವಯಸ್ಸು 18 ಹಾಗೂ ಗರಿಷ್ಠ 33. ಮೀಸಲಾತಿ ನಿಯಮದಂತೆ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ -ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಸುವಾಗ ನೀಡಬೇಕಾದ ಮಾಹಿತಿಗಳು: ಆಧಾರ್ ಕಾರ್ಡ್ ನಲ್ಲಿ ಇರುವಂತೆ ನಿಮ್ಮ ಪೂರ್ಣ ಹೆಸರು ಹಾಗೂ ವಿಳಾಸದ ವಿವರ. ನಿಮ್ಮ ಶೈಕ್ಷಣಿಕ ವಿದ್ಯಾರ್ಹತೆಯ ಮಾಹಿತಿಗಳು, ನಿಮ್ಮ ಮೊಬೈಲ್ ಸಂಖ್ಯೆ, ವಯಸ್ಸಿನ ಮಾಹಿತಿ, ಹಾಗೂ ಮೀಸಲಾತಿ ವಿವರಗಳನ್ನು ನೋಡಬೇಕು.
ಹುದ್ದೆಗೆ ಅರ್ಜಿ ಸಲ್ಲಿಸುವಾಗ ನೀಡಬೇಕಾದ ಶುಲ್ಕದ ವಿವರ :- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500 ರೂಪಾಯಿ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 400 ರೂಪಾಯಿ ಶುಲ್ಕ ಇರುತ್ತದೆ. ಒಬಿಸಿ ಅಭ್ಯರ್ಥಿಗಳಿಗೆ ಶುಲ್ಕದ ಮೊತ್ತವನ್ನು ವಾಪಸ್ ನೀಡುತ್ತಾರೆ. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 250 ರೂಪಾಯಿ ಶುಲ್ಕ.
ಇದನ್ನೂ ಓದಿ: ನಿಮ್ಮ ಚಾಲನೆಗೆ ಒಂದು ಹೊಸ ಉತ್ಸಾಹ ನೀಡುವ ಹುಂಡೈ ಕ್ರೆಟಾ N’ ಲೈನ್ ನ ಎಕ್ಸ್ ಶೋರೂಮ್ ಬೆಲೆ ಎಷ್ಟು ಗೊತ್ತಾ?
ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ:-
ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ https://www.rrbbnc.gov.in/ ಭೇಟಿ ನೀಡಿ. ವೆಬ್ಸೈಟ್ ನ ಮುಖ ಪುಟದಲ್ಲಿ ಕಾಣುವ Technician Categories Detailed CEN NEW notification ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೆ Click to Submit Online Application ಎಂಬ ಆಪ್ಷನ್ ಕ್ಲಿಕ್ ಮಾಡಿ. ನಂತರ ಅಪ್ಲೈ ಬಟನ್ ಕ್ಲಿಕ್ ಮಾಡಿ. Create An Account’ ಮೇಲೆ ಕ್ಲಿಕ್ ಮಾಡಿ ಅಕೌಂಟ್ ಓಪನ್ ಮಾಡಿ. ಅಕೌಂಟ್ ಕ್ರಿಯೇಟ್ ಮಾಡಿದ ನಂತರ ಅಪ್ಲಿಕೇಶನ್ ನಲ್ಲಿ ನಿಮ್ಮ ಹೆಸರು, ವಿದ್ಯಾರ್ಹತೆ , ಮೀಸಲಾತಿ ದಾಖಲೆ, ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ ನಂಬರ್ ಎಲ್ಲವನ್ನೂ ತುಂಬಿ. ನಂತರ ವಿದ್ಯಾರ್ಹತೆ ಮತ್ತು ಜಾತಿ ಪ್ರಮಾಣಪತ್ರವನ್ನು ಸ್ಕ್ಯಾನ್ ಮಾಡಿ upload ಮಾಡಿ. ಆನ್ಲೈನ್ ಮೂಲಕ ಅರ್ಜಿಯ ಶುಲ್ಕ ತುಂಬಿ.ಅಪ್ಲೈ ಬಟನ್ ಕ್ಲಿಕ್ ಮಾಡಿ. ಅರ್ಜಿ ತುಂಬಿದ ನಂತರ ಪ್ರತಿಯನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ.
- ಅರ್ಜಿ ಸಲ್ಲಿಸುವ ದಿನಾಂಕ 09-03-2024.
- 08-04-2024 ರ ರಾತ್ರಿ 11-59 ಗಂಟೆ ವರೆಗೆ.
ಅರ್ಜಿ ತಿದ್ದುಪಡಿ ಮಾಡುವುದಾದರೆ ದಿನಾಂಕ 09-04-2024 ರಿಂದ 18-04-2024 ರ ವರೆಗೆ ಅರ್ಜಿಯನ್ನು ತಿದ್ದುಪಡಿ ಮಾಡಬಹುದು.
ಇದನ್ನೂ ಓದಿ: ಉತ್ತಮ ಮೈಲೇಜ್ ಹಾಗೂ ಶಕ್ತಿಯುತ ಎಂಜಿನ್ ಹೊಂದಿರುವ ಹೋಂಡಾ ಶೈನ್ 125 ಯ ನಿರ್ವಹಣೆ ಈಗ ಬಹಳ ಸುಲಭ