State Government: ರಾಜ್ಯ ಸರ್ಕಾರವು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸುತ್ತಿದೆ. ಮೇಲಿನಿಂದ ಮೇಲೆ ಬಂಪರ್ ಆಫರ್ ಗಳನ್ನು ಕೊಡುತ್ತಿದೆ. ಮಹಿಳೆಯರ ಏಳಿಗೆಗಾಗಿ ಮಹಿಳೆಯರು ತಮ್ಮ ಕಾಲು ಮೇಲೆ ನಿಂತುಕೊಳ್ಳಬೇಕು ಎನ್ನುವುದೊಂದೇ ಸರ್ಕಾರದ ಆಶಯವಾಗಿದೆ. ಅದಕ್ಕಾಗಿ ಹೊಸ ಹೊಸ ಯೋಜನೆಗಳನ್ನ ನಿರ್ಮಾಣ ಮಾಡಿ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸುತ್ತಿದೆ ಸರ್ಕಾರ. ಹಾಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಪಣತೊಟ್ಟಾಗಿದೆ ಮಹಿಳೆಯರ ಅಭಿವೃದ್ಧಿ ನಿಶ್ಚಿತ.
ಮಹಿಳೆಯರು ಎಂದರೆ ಕೇವಲ ಮನೆಗಷ್ಟೇ ಸೀಮಿತವಲ್ಲ ಮನೆ ಕೆಲಸಕ್ಕೆ ಸೀಮಿತ ಅಲ್ಲ ಎನ್ನುವುದನ್ನು ಪದೇ ಪದೇ ತೋರಿಸಿಕೊಡುತ್ತಿದೆ ನಮ್ಮ ಸರ್ಕಾರ. ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು. ಪುರುಷರಷ್ಟೇ ಧೈರ್ಯ ಹಾಗೂ ಆತ್ಮವಿಶ್ವಾಸ ಮಹಿಳೆಯರಲ್ಲೂ ಬೆಳೆಯಬೇಕು. ಎನ್ನುವುದು ಈ ಯೋಜನೆಯ ಉದ್ದೇಶವಾಗಿದೆ.
ಇದೇ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಈ ನವರಾತ್ರಿಯ ಸಂದರ್ಭದಲ್ಲಿ ನವ ಶಕ್ತಿಯ ವೈಭವದಲ್ಲಿ ಒಂದು ಹೊಸ ಯೋಜನೆಯನ್ನು ಹೊರಡಿಸಿದೆ. ಅದೇನೆಂದರೆ ಸ್ತ್ರೀ ಶಕ್ತಿ ಸಂಘಕ್ಕೆ ಎರಡು ಲಕ್ಷ ರೂಪಾಯಿಗಳವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ಒದಗಿ ಬರಲಿದೆ. ಇದರ ಉದ್ದೇಶ ಇಷ್ಟೇ ನಮ್ಮಲ್ಲಿರುವ ಸಂಘ ಸಂಸ್ಥೆಗಳು ತಲೆಯೆತ್ತಿ ನಿಲ್ಲಬೇಕು. ಮಹಿಳೆಯರ ಸದೃಢೀಕರಣವಾಗಬೇಕು.
ಅಂದಹಾಗೆ ಈ ವರ್ಷದ ಬಜೆಟ್ ನಲ್ಲಿ ಕೂಡ ಮಹಿಳೆಯರಿಗೆ ಅಂತಾನೆ ಮಹಿಳೆಯರ ಸಬಲೀಕರಣಕ್ಕಾಗಿ 70000 ಕೋಟಿಗೂ ಹೆಚ್ಚು ಹಣವನ್ನು ಸರ್ಕಾರ ಮೀಸಲಿಟ್ಟಿದೆ. ನಮ್ಮ ರಾಜ್ಯದಲ್ಲಿ ಒಟ್ಟು ಒಂದು ಲಕ್ಷಕ್ಕೂ ಮೀರಿದ ಸ್ತ್ರೀಶಕ್ತಿ ಸಂಘಗಳಿವೆ. ಪ್ರತಿಯೊಬ್ಬರಿಗೂ ಕೂಡ 25,000 ನೀಡುವ ಯೋಜನೆಯನ್ನು ಅದು ಮಾಡಿದೆ. ಹಾಗೆ ಸ್ತ್ರೀಶಕ್ತಿ ಸಂಘಗಳಿಗೆ ತಮ್ಮ ವ್ಯಾಪಾರವನ್ನು ಅಭಿವೃದ್ಧಿಪಡಿಸಲು, ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಎರಡು ಲಕ್ಷ ರೂಪಾಯಿಗಳವರೆಗೆ ಬಡ್ಡಿ ರಹಿತ ಸಾಲದ ಸೌಲಭ್ಯವನ್ನು ಒದಗಿಸಿಕೊಡಲಿದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
2 ಲಕ್ಷ ಬಡ್ಡಿ ರಹಿತ ಸಾಲದ ಹಿಂದಿನ ಉದ್ದೇಶ
ಇದರ ಉದ್ದೇಶ ಇಷ್ಟೇ ಆಗಿದೆ, ಮಹಿಳೆಯರು ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವುದರ ಜೊತೆಗೆ ತಮಗೆ ಅನುಕೂಲವಾದ ಸಣ್ಣ ಸಂಸ್ಥೆಗಳನ್ನ ಕೈಗಾರಿಕೆಗಳಿಂದ ಸ್ವಾವಲಂಬಿಗಳಾಗಬೇಕು. ತಮ್ಮ ಕಾಲು ಮೇಲೆ ತಾವು ನಿಂತುಕೊಳ್ಳಬೇಕು. ಇನ್ನೊಬ್ಬರ ಹತ್ತಿರ ಕೈಚಾಚಬಾರದು.
ಮಹಿಳೆಯರಲ್ಲಿ ಆತ್ಮವಿಶ್ವಾಸ ಬರಬೇಕು ಹಾಗೂ ನಮ್ಮ ಸಂಪ್ರದಾಯದ ಗುಡಿ ಕೈಗಾರಿಕೆ ಹಾಗೂ ಕುಶಲ ಕೆಲಸ ಗಳನ್ನು ಉಳಿಸಿ ಬೆಳೆಸುವುದು ಇದರ ಗುರಿಯಾಗಿದೆ. ಕುಟುಂಬದ ನಿರ್ವಹಣೆಯ ಜೊತೆಗೆ ಮಹಿಳೆಯರಲ್ಲಿ ಹೆಚ್ಚು ಆತ್ಮವಿಶ್ವಾಸವನ್ನ ಮೂಡಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ತ್ರೀಯರ ಸಬಲೀಕರಣಕ್ಕಾಗಿ ಮತ್ತು ಸ್ವಾವಲಂಬನೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಸ್ತ್ರೀಶಕ್ತಿ ಆರಾಧನೆಯ ಈ ಒಂಬತ್ತು ದಿನಗಳ ನವರಾತ್ರಿ ಸಂದರ್ಭದಲ್ಲಿ ಮಹಿಳೆಯರಿಗೆ ಬೆನ್ನೆಲುಬಾಗಿ ಒತ್ತು ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ: ಪುತ್ರಿಗೆ ಗಂಡನಿಂದ ಕಿರುಕುಳ ಹಿನ್ನೆಲೆ ತಂದೆ ಮಾಡಿದ್ದೇನು? ಮೆರವಣಿಗೆ ಮಾಡಿ ಪಟಾಕಿ ಸಿಡಿಸಿ ಮಗಳನ್ನ ಕರೆತಂದ ಅಪ್ಪ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram