Rs 75 Coin: 75 ರೂಪಾಯಿ ಹೊಸ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ, ಎಲ್ಲಿ ಸೀಗುತ್ತದೆ, ಬೆಲೆ ಎಷ್ಟು? ಅದರ ವಿಶೇಷತೆ ಏನ್ ಗೊತ್ತಾ?

Rs 75 Coin: ನೂತನ ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥ ₹ 75ರ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಈ ಸ್ಮರಣಾರ್ಥ ನಾಣ್ಯವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವಾರ್ಥವಾಗಿ ಕಾರ್ಯನಿರ್ವಹಿಸುತ್ತದೆ ಅಂತ ಹೇಳಲಾಗಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನದ ಉದ್ಘಾಟನೆಯ ಜೊತೆಗೆ ನಾಣ್ಯವನ್ನ ಅನಾವರಣಗೊಳಿಸಲಿದ್ದಾರೆ. ಹೌದು ಮೇ 28ರ ಭಾನುವಾರವಾದ ಇಂದು ನವ ದೆಹಲಿಯಲ್ಲಿ ನಡೆದಿರುವ ಸಂಸತ್ ಭವನದ ಉದ್ಘಾಟನೆಯ ನೆನಪಿಗಾಗಿ ವಿಶೇಷ 75 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಸಚಿವಾಲಯ ಹೇಳಿಕೆಯನ್ನು ನೀಡಿದೆ. ಇದು ಒಂದು ಸ್ಮರಣಾರ್ಥ ನಾಣ್ಯವಾಗಿದ್ದು, ವಿಶೇಷವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳನ್ನ ಪೂರೈಸಿರುವ ಹಿನ್ನಲೆ ಸ್ವಾತಂತ್ರ್ಯ ಭಾರತಕ್ಕೆ ಗೌರವಾರ್ಥವಾಗಿ ಈ ನಾಣ್ಯವನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅನಾವರಣಗೊಳಿಸಲಾಗುತ್ತದೆ. ಅಲ್ಲದೇ ಎಪ್ಪತ್ತೈದು ರೂಪಾಯಿ ಮುಖಬೆಲೆಯ ನಾಣ್ಯವನ್ನು ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಧಿಕಾರದ ಅಡಿಯಲ್ಲಿ ವಿತರಿಸಲು ನಾಣ್ಯವನ್ನು ರಚಿಸಲಾಗುವುದು” ಎಂದು ಉದ್ಘಾಟನ ಸಮಾರಂಭದ ಸಂದರ್ಭದಲ್ಲಿ ಹಣಕಾಸು ಸಚಿವಾಲಯವು ತಿಳಿಸಿದೆ.

WhatsApp Group Join Now
Telegram Group Join Now

ಇದನ್ನೂ ಓದಿ: ಭಕ್ತರಿಗೆ ದರ್ಶನ ಬೇಗ ನೀಡಲು ಮಹತ್ವದ ನಿರ್ಧಾರ ತೆಗೆದುಕೊಂಡ ತಿರುಪತಿ ದೇವಾಲಯ ಸಮತಿ. ಭಕ್ತಾಧಿಗಳಿಗೆ ಹೊಸ ರೂಲ್ಸ್

75ರೂ. ನಾಣ್ಯದ ವಿಶೇಷತೆ ಏನು ಗೊತ್ತಾ?

ಹೌದು ಇಂದು ಸಂಸತ್ ಭವನವು ಪ್ರಧಾನಿ ನರೇಂದ್ರ ಮೋದಿ ಅವ್ರ ನೇತೃತ್ವದಲ್ಲಿ ಉದ್ಘಾಟನೆಯಾಗಿದ್ದು ಅದರ ಸವಿನೆನಪಿಗಾಗಿ ಕೇಂದ್ರ ಹಣಕಾಸು ಸಚಿವಾಲಯವು ಈ ನಾಣ್ಯವನ್ನು ಸಿದ್ದಪಡಿಸಿದೆ. ಈ ನಾಣ್ಯವೂ ಸಂಪೂರ್ಣ ವಿಶೇಷತೆಯಿಂದ ಕೂಡಿದ್ದು, ನಾಣ್ಯದ ರಚನೆ ಹೇಗಿರಲಿದೆ ನೋಡೋಣ ಬನ್ನಿ.

  • ಮೊದಲಿಗೆ ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ಥಂಭದೊಂದಿಗೆ ಸಿಂಹದ ಮುಖ ಇರಲಿದೆ. ಕೆಳಗಡೆ ಸತ್ಯಮೇವ ಜಯತೆ ಎಂದು ಬರೆಯಲಾಗಿದೆ. ನಾಣ್ಯದ ಎಡ ಭಾಗದಲ್ಲಿ ಭಾರತ್‌ ಎಂದು ದೇವನಗರಿ ಲಿಪಿಯಲ್ಲಿ ಬರೆಯಲಾಗಿದೆ. ಬಲ ಭಾಗದಲ್ಲಿ ಇಂಡಿಯಾ ಎಂದು ಇಂಗ್ಲೀಷ್‌ನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ರೂಪಾಯಿ ಚಿಹ್ನೆಯೂ ದೊಡ್ಡದಾಗಿ ಕಾಣಿಸಲಿದೆ.
  • ಇನ್ನು ನಾಣ್ಯದ ಮತ್ತೊಂದು ಬದಿಯಲ್ಲಿ ನೂತನ ಸಂಸತ್‌ ಸಂಕೀರ್ಣದ ಚಿತ್ರವಿರಲಿದೆ. ಕೆಳ ಭಾಗದಲ್ಲಿ ಸಂಸತ್‌ ಸಂಕಲ್ಪ ಎಂದು ದೇವನಗರಿ ಲಿಪಿಯಲ್ಲಿ ಬರೆಯಲಾಗಿದೆ. ಬಲ ಬದಿಯಲ್ಲಿ ಪಾರ್ಲಿಮೆಂಟ್‌ ಕಾಂಪ್ಲೆಕ್ಸ್‌ ಎಂದು ಇಂಗ್ಲೀಷ್‌ನಲ್ಲಿ ಮುದ್ರಿಸಲಾಗಿದೆ.
  • ಇಡೀ ನಾಣ್ಯದ ತೂಕ 35 ಗ್ರಾಂನಷ್ಟು ಇರಲಿದೆ, ನಾಣ್ಯದ ಸುತ್ತಳತೆ 44 ಮಿಲಿ ಮೀಟರ್‌. ನಾಣ್ಯವು ಶೇಕಡ 50ರಷ್ಟು ಬೆಳ್ಳಿ, ಶೇ. 40ರಷ್ಟು ತಾಮ್ರ, ಶೇ .5ರಷ್ಟು ಸತು ಹಾಗೂ ಶೇ.5ರಷ್ಟು ಮಿಶ್ರ ಲೋಹವನ್ನು ಒಳಗೊಂಡಿದೆ.
  • ಕೇಂದ್ರ ಸರ್ಕಾರಿ ಸ್ವಾಮ್ಯದ ಸೆಕ್ಯುರಿಟಿ ಪ್ರಿಂಟ್‌ ಮಿಂಟ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ ಸಂಸ್ಥೆಯು ನೋಯಿಡಾ, ಕೋಲ್ಕತ್ತಾ, ಮುಂಬೈ ಹಾಗೂ ಹೈದ್ರಾಬಾದ್‌ನಲ್ಲಿರುವ ಘಟಕದಲ್ಲಿ ಈ ವಿಶೇಷ ನಾಣ್ಯಗಳನ್ನು ಮುದ್ರಿಸಿದೆ.

ಇನ್ನು ನಮ್ಮ ದೇಶದಲ್ಲಿ ಈಗಾಗಲೇ 75 ರೂಪಾಯಿ ಮುಖಬೆಲೆಯ ನಾಣ್ಯ ಮುದ್ರಿಸಲಾಗಿದ್ದರೂ ನೂತನ ಸಂಸತ್‌ ಭವನ ಸಂಕೀರ್ಣದ ವಿಶೇಷ ನಾಣ್ಯ ಇದಾಗಲಿದೆ. ಸದ್ಯ 60, 75, 100, 125, 1000 ರೂಪಾಯಿ ಮುಖ ಬೆಲೆಯ ನಾಣ್ಯಗಳು ನಮ್ಮಲ್ಲಿವೆ. ಆದರೆ ಇವೆಲ್ಲವೂ ವಿಶೇಷ ಸ್ಮರಣಾರ್ಥ ಬಿಡುಗಡೆ ಮಾಡಿರುವಂತಹ ವಿಶೇಷ ನಾಣ್ಯಗಳಾಗಿವೆ. ಇನ್ನು ಈ ನಾಣ್ಯಗಳು ಸ್ಮರಣಾರ್ಥವಾಗಿ ಬಿಡುಗಡೆಯಾಗಿದ್ದು ಸಾಮಾನ್ಯ ಚಲಾವಣೆಯಲ್ಲಿ ನೀಡಲಾಗುವುದಿಲ್ಲ, ಕಾನೂನು ಟೆಂಡರ್ ಆಗಿ ಬಿಡುಗಡೆ ಮಾಡಲಾಗುವುದಿಲ್ಲ. ಚಿನ್ನ ಮತ್ತು ಬೆಳ್ಳಿಯಂತಹ ಅಮೂಲ್ಯ ಲೋಹಗಳನ್ನು ಹೊಂದಿರುವ ಈ ಹೆಚ್ಚಿನ ಮುಖಬೆಲೆಯುಳ್ಳ ಸ್ಮರಣಾರ್ಥ ನಾಣ್ಯಗಳನ್ನು ಸಂಗ್ರಹಣೆಗಳಾಗಿ ಮಾತ್ರ ಪರಿಗಣಿಸಲಾಗುತ್ತದೆ. ಸ್ಮರಣಾರ್ಥ ನಾಣ್ಯಗಳನ್ನು ಸಂಗ್ರಹಿಸಲು ಆಸಕ್ತರಾಗಿದ್ದ ನಾಗರಿಕರು ನಿರ್ದಿಷ್ಟ ಏಜೆನ್ಸಿಗಳಿಂದ ಅವುಗಳನ್ನು ಪಡೆಯಬಹುದು ಅಂತ ಆರ್ ಬಿ ಐ ನ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ನಟ ರಾಜೇಶ್ ನಟರಂಗ ಹೆಂಡತಿ ಮತ್ತು ಮಗಳು ಯಾರು ಹೇಗಿದ್ದಾರೆ? ಮಗಳು ಕೂಡ ಫೇಮಸ್ ನಟಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram