ಶಿಕ್ಷಣ ಎಂಬುದು ಮಕ್ಕಳ ಭವಿಷ್ಯವನ್ನು ರೂಪಿಸುವ ಒಂದು ಮಾರ್ಗ. ಪ್ರತಿಯೊಬ್ಬ ತಂದೆ ತಾಯಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ತಮ್ಮ ಮಕ್ಕಳನ್ನು ಉತ್ತಮ ಶಾಲೆಗೆ ಸೇರಿಸಬೇಕು ಎಂಬ ಕನಸು ಪಾಲಕರಿಗೆ ಇದ್ದೆ ಇರುತ್ತದೆ. ಆದರೆ ಪ್ರೈವೇಟ್ ಶಾಲೆಗೆ ಅಥವಾ ಉತ್ತಮ ಶಾಲೆಗೆ ಸೇರಿಸಬೇಕು ಎಂದರೆ ಲಕ್ಷಾಂತರ ರೂಪಾಯಿ ಹಣ ಬೇಕು. ಅದು ಎಲ್ಲಾ ವರ್ಗದವರಿಗೆ ಆಗುವುದಿಲ್ಲ. ಆದರೆ RTE ಯೋಜನೆಯ ಅಡಿಯಲ್ಲಿ ಮಕ್ಕಳಿಗೆ ಉಚಿತವಾಗಿ ಉತ್ತಮ ಶಿಕ್ಷಣ ಸಿಗುತ್ತದೆ. ಯಾರು ಯಾರು ಈ ಯೋಜನೆಗೆ ಅರ್ಹರು. ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿಯೋಣ.
ಆರ್‌ಟಿಇ ಯೋಜನೆ ಎಂದರೇನು?
ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸಹ ಉತ್ತಮ ಗುಣಮಟ್ಟದ ಶಾಲೆಗಳಲ್ಲಿ ಸೀಟು ಸಿಗಬೇಕು. ಅವರು ಮೇಲ್ವರ್ಗದ ಮಕ್ಕಳಂತೆ ಹೆಚ್ಚಿನ ಉತ್ತಮ ಶಿಕ್ಷಣ ಪಡೆಯಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರವು 2009 ರಲ್ಲಿ ಆರ್‌ಟಿಇ ಯೋಜನೆಯನ್ನೂ ಜಾರಿಗೊಳಿಸಿತು. ಇದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಮಕ್ಕಳಿಗೆ ಮಾತ್ರ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಆರ್‌ಟಿಇ ಯೋಜನೆಯ ನಿಯಮಗಳು :-
- ಈ ಯೋಜನೆಯ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಮತ್ತು ಅನುದಾನಿತ 25% ಮೀಸಲಾತಿಯನ್ನು ನೀಡಬೇಕು. ಅವರ ಶಿಕ್ಷಣದ ಖರ್ಚನ್ನು ಪೂರ್ಣವಾಗಿ ಸರ್ಕಾರವು ಭರಿಸುತ್ತದೆ.
- ಈ ಯೋಜನೆಗೆ ಅರ್ಜಿ ಸಲ್ಲಿಸಲು 1 ರಿಂದ 8 ನೇ ತರಗತಿಯಲ್ಲಿ ಓದುವ ಮಕ್ಕಳು ಅರ್ಜಿ ಸಲ್ಲಿಸಬಹುದು.
- ಈ ಯೋಜನೆಗೆ ಅರ್ಜಿ ಸಲ್ಲಿಸುವ ಮಕ್ಕಳ ಕನಿಷ್ಠ ವಯಸ್ಸು 4. ಅರ್ಜಿ ಸಲ್ಲಿಸುವಾಗ ವಯಸ್ಸಿನ ನಿಖರವಾದ ದಾಖಲೆಗಳನ್ನು ನೀಡಬೇಕು.
ಅರ್ಜಿ ಸಲ್ಲಿಸುವಾಗ ನೀಡಲೇಬೇಕಾದ ದಾಖಲೆಗಳು :-
- ಮಗುವಿನ ಹಾಗೂ ತಂದೆ ತಾಯಿಯ ಆಧಾರ್ ಕಾರ್ಡ್ ಕಡ್ಡಾಯವಾಗಿ ನೀಡಬೇಕು.
- ಮಗುವಿನ ಜನನ ಪ್ರಮಾಣಪತ್ರ.
- ಜಾತಿ ಮತ್ತು ಆದಾಯ ಪ್ರಮಾಣಪತ್ರ.
ಇದನ್ನೂ ಓದಿ: ಅಂಗನವಾಡಿ ಟೀಚರ್ ಹಾಗೂ ಸಹಾಯಕಿ ಹುದ್ದೆಗಳ ನೇಮಕಾತಿ; ಇಂದೇ ಅರ್ಜಿ ಸಲ್ಲಿಸಿ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ :-
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪಾಲಕರು ಹತ್ತಿರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಗೆ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು. ಇಲ್ಲವಾದರೆ ಹತ್ತಿರದ ಬೆಂಗಳೂರು-ಒನ್, ಕರ್ನಾಟಕ-ಒನ್, ತಾಲೂಕು ಮತ್ತು ಅಟಲ್-ಜೀ ಜನಸ್ನೇಹಿ ಗ್ರಾಮ್ ಒನ್ ಕೇಂದ್ರಗಳಲ್ಲಿ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. ನೀವೇ ಸ್ವತಃ ಅರ್ಜಿ ಸಲ್ಲಿಸುತ್ತಿರಿ ಎಂದಾದರೆ ಮೊದಲು ನಿಮ್ಮ laptop ಅಥವಾ ಮೊಬೈಲ್ ನಲ್ಲಿ ಗೂಗಲ್ ಕ್ರೋಮ್ open ಮಾಡಿ ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನಿಮ್ಮ ಮಗುವಿನ ಆಧಾರ್ ಕಾರ್ಡ್ ಇದಲ್ಲಿ yes ಇಲ್ಲವಾದರೆ no ಎಂಬ ಆಪ್ಷನ್ ಕ್ಲಿಕ್ ಮಾಡಿ. ನಂತರ ನಿಮ್ಮ ಮಗುವಿನ ಹೆಸರು, ಪಾಲಕರ ಹೆಸರು, ಅಂಗವಿಕಲತೆ ಇದ್ದಲ್ಲಿ ಮಾಹಿತಿ, ನಿಮ್ಮ ಮಗುವಿನ ಪೂರ್ಣ ವಿಳಾಸ, ಹಾಗೂ ನಿಮ್ಮ ಮಗುವಿನ ಪಾಸ್ಪೋರ್ಟ್ ಸೈಜ್ ಫೋಟೋ , ಎಲ್ಲವನ್ನೂ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ.
ಮುಖ್ಯವಾದ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಸಲು ಲಾಸ್ಟ್ ಡೇಟ್: 22-04-2024.
- ಅರ್ಹರ ಪಟ್ಟಿಯನ್ನು ಬಿಡುಗಡೆ: 26-04-2024.
- ಆನ್‌ಲೈನ್ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ದಿನಾಂಕ: 30-04-2024 ಮೊದಲ ಸುತ್ತಿನಲ್ಲಿ ಸೀಟು ಪಡೆದ ಶಾಲೆಗಳಲ್ಲಿ ದಾಖಲಾತಿ ಪಡೆಯಲು ಕೊನೆಯ ದಿನ: 13-05-2024.
- 2ನೇ ಸುತ್ತಿನ ಸೀಟು ಹಂಚಿಕೆ ಬಿಡುಗಡೆ ಆಗುವ ದಿನಾಂಕ: 22-05-2024.
ಇದನ್ನೂ ಓದಿ: LIC ನೇಮಕಾತಿಯ ಅಧಿಸೂಚನೆ ಪ್ರಕಟಿಸಿದೆ.