ಪತ್ರಕರ್ತ ಮತ್ತು ಮಾಧ್ಯಮ ಪ್ರಕಾಶಕ ಇಂದ್ರಜಿತ್ ಲಂಕೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಬರಹಗಾರ, ನಿರ್ದೇಶಕ, ನಿರ್ಮಾಪಕ ಮತ್ತು ನಟರಾಗಿಯೂ ಕೆಲಸ ಮಾಡಿದ್ದಾರೆ. ಇನ್ನು ಸದ್ಯ ಇದೀಗ ಸಿನಿಮಾ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ಅವರು ತಮ್ಮ ತಂದೆಯ ನಿರ್ದೇಶನದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಅದು ಕೂಡ ಕಿರುತೆರೆಯ ಪುಟ್ಟಗೌರಿ ಖ್ಯಾತಿಯ ಸಾನ್ಯ ಅಯ್ಯರ್(Saanya Iyer) ಜೊತೆಗೆ. ಹೌದು ಸೆಪ್ಟೆಂಬರ್ 4ರಂದು ಸಿನಿಮಾದ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಅಲ್ದೆ ಈ ಸಿನಿಮಾ ಸತ್ಯ ಘಟನೆಯಿಂದ ಪ್ರೇರಿತವಾಗಿದೆ ಅಂತಲೂ ಹೇಳಲಾಗಿದ್ದು, ಚಿತ್ರ ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದಂತೆ ಚಿತ್ರದ ಕುರಿತು ಹೆಚ್ಚಿನ ವಿವರಗಳು ಹೊರಬರುವ ನಿರೀಕ್ಷೆಯಿದೆ ಅಂತ ಹೇಳಲಾಗುತ್ತಿದೆ.
ಇನ್ನು ತನ್ನ ಮಗನ ಚೊಚ್ಚಲ ಚಿತ್ರದ ಬಿಡುಗಡೆಯನ್ನು ಗೌಪ್ಯವಾಗಿಟ್ಟಿರುವ ಇಂದ್ರಜಿತ್, ಈ ಯೋಜನೆಯನ್ನು ರೂಪಿಸಲು ಸಾಕಷ್ಟು ಸಮಯವನ್ನು ಮೀಸಲಿಟ್ಟಿದ್ದಾರೆ. ಅಲ್ದೆ ಮಗನ ಎಂಟ್ರಿ ಗ್ರಾಂಡ್ ಆಗಿ ಇರುವಂತೆ ಮಾಡುವ ಪ್ಲಾನ್ ನಲ್ಲಿರುವ ಇಂದ್ರಜಿತ್ ಸಾಕಷ್ಟು ಸಿದ್ಧತೆಯನ್ನ ನಡೆಸಿದ್ದಾರೆ. ಅಲ್ದೆ ಸಮರ್ಜಿತ್ ಕೂಡ ಜಿಮ್, ಡಾನ್ಸ್, ನಟನೆ ಅಂತ ಬಹಳಷ್ಟು ಕಸರತ್ತು ಶುರು ಮಾಡಿದ್ದು ಬಾಡಿಯನ್ನ ಬಹಳ ಫಿಟ್ ಆಗಿ ಇಟ್ಟುಕೊಂಡಿದ್ದಾರೆ.
ಇಂದ್ರಜಿತ್ ಲಂಕೇಶ್ ಅವ್ರು ತುಂಟಾಟ, ಲಂಕೇಶ್ ಪತ್ರಿಕೆ, ಮೊನಾಲಿಸಾ, ಐಶ್ವರ್ಯ ಮತ್ತು ಲವ್ ಯು ಆಲಿಯಾ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅಲ್ಲದೆ 2020ರಲ್ಲಿ ಶಕೀಲಾ ಚಿತ್ರದ ಮೂಲಕ ಬಾಲಿವುಡ್ ಗೂ ಕೂಡ ಎಂಟ್ರಿಕೊಟ್ಟಿದ್ದರು. ಇಂದ್ರಜಿತ್ ಲಂಕೇಶ್ ಅವರನ್ನು ಹೊರತುಪಡಿಸಿ, ಸಮರ್ಜಿತ್ ಅವರ ತಾತ ಪಿ ಲಂಕೇಶ್ ಒಬ್ಬ ನಿಪುಣ ಬರಹಗಾರ ಮತ್ತು ಪ್ರಶಸ್ತಿ ವಿಜೇತ ನಿರ್ದೇಶಕ. ಅವರ ಚಿಕ್ಕಮ್ಮ ಕವಿತಾ ಲಂಕೇಶ್ ಅವರು ಚಲನಚಿತ್ರ ನಿರ್ಮಾಣದಲ್ಲಿ ತಮ್ಮ ಸಾಧನೆಗೆ ಹೆಸರುವಾಸಿಯಾಗಿದ್ದಾರೆ. ಇನ್ನು ಸಮರ್ಜಿತ್ ತನ್ನ ಅಧ್ಯಯನವನ್ನು ಅಂದ್ರೆ ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ, ನಟನೆ, ಸಾಹಸ ಮತ್ತು ನೃತ್ಯದಲ್ಲಿ ತರಬೇತಿಗಾಗಿ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಗೆ ಹೋಗಿದ್ದರು. ಜಾಹೀರಾತು ಪ್ರಚಾರದ ಮೂಲಕ ನಟನಾ ಅನುಭವವನ್ನೂ ಪಡೆದುಕೊಂಡಿದ್ದಾರೆ.
ಸದ್ಯ ಸಿನಿಮಾ ರಂಗಕ್ಕೆ ಮೊದಲ ಚಿತ್ರದಲ್ಲಿಯೇ ಗ್ರಾಂಡ್ ಎಂಟ್ರಿ ನೀಡಲು ಸಮರ್ಜಿತ್ ಸಕಲ ಸಿದ್ಧತೆಯ ಜೊತೆಗೆ ರೆಡಿಯಾಗಿದ್ರೆ, ಇತ್ತ ಕಡೆ ಮಗನ ಪ್ರಥಮ ಸಿನಿಮಾಗೆ ಇಂದ್ರಜಿತ್ ಕೂಡ ಸಾಕಷ್ಟು ಪ್ಲಾನ್ ಮಾಡಿದ್ದು, ನಿರ್ಮಾಣ ಸಿಬ್ಬಂದಿ, ತಾಂತ್ರಿಕ ತಂಡ ಮತ್ತು ಪಾತ್ರವರ್ಗದವರನ್ನ ಈಗಾಗ್ಲೇ ಸೆಲೆಕ್ಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು ಈ ಸಂಬಂದ್ಗ ವಿವರಗಳು ಇನ್ನು ಕೂಡ ಅನಾವರಣವಾಗಿಲ್ಲ. ಆದರೆ, ಸಂಭಾಷಣೆ ರಚನೆಯ ಹೊಣೆಯನ್ನು ಮಾಸ್ತಿ ವಹಿಸಿಕೊಳ್ಳಲಿದ್ದಾರೆ ಅನ್ನೋ ಗುಸುಗುಸು ಇದ್ದು ಚಿತ್ರಕ್ಕೆ ಸಾನಿಯ ಪತ್ರ ಕೂಡ ಮುಖ್ಯವಾಗಿದ್ಯಂತೆ.
ಸಮರ್ಜಿತ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಪುಟ್ಟ ಗೌರಿ
ತಂದೆ ಸಿನಿಮಾ ನಿರ್ದೇಶಕ ಅನ್ನುವ ಕಾರಣಕ್ಕಾಗಿ ಸಮರ್ಜಿತ್ ಚಿತ್ರರಂಗ ಪ್ರವೇಶ ಮಾಡುತ್ತಿಲ್ಲ. ಎಲ್ಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡೇ ಅಖಾಡಕ್ಕೆ ಇಳಿಯುತ್ತಿದ್ದಾರೆ. ಹಾಗಾಗಿ ಎಂಟ್ರಿಯಲ್ಲೇ ಭರವಸೆ ಮೂಡಿಸುತ್ತಾರೆ. ಈಗಾಗಲೇ ರಂಗಭೂಮಿಯಲ್ಲೂ ಕೆಲಸ ಮಾಡಿದ ಅನುಭವವೂ ಅವರ ಜೊತೆಗಿದೆ. ನ್ಯೂಯಾರ್ಕ್ ಅಕಾಡೆಮಿಯಲ್ಲಿ ಸಿನಿಮಾ ಸಂಬಂಧಿಸಿದ ಕೋರ್ಸ್ ಮಾಡಿರುವ ಸಮರ್ಜಿತ್, ಅಲ್ಲಿ ನಟನಾ ತರಬೇತಿಯನ್ನು ಪಡೆದಿದ್ದಾರೆ. ಚೇತನ್ ಡಿಸೋಜಾ ಬಳಿ ಸಾಹಸ ಕಲೆಯನ್ನು ಕಲಿತುಕೊಂಡರೆ, ಮುರಳಿ ಬಳಿ ಡಾನ್ಸ್ ಮತ್ತು ಇಬ್ಬರು ನೀನಾಸಂ ಶಿಕ್ಷಕರು ಸಮರ್ಜಿತ್ ತರಬೇತಿ ನೀಡಿದ್ದಾರೆ. ಜೊತೆಗೆ ಯೋಗರಾಜ್ ಭಟ್ ಅವರ ಬಳಿ ಎರಡು ಸಿನಿಮಾಗಳಿಗೆ ಸಮರ್ಜಿತ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಅನುಭವ ಕೂಡ ಇದೆ.
ಇಷ್ಟೆಲ್ಲ ತರಬೇತಿಯ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಮತ್ತು ಜಾಹೀರಾತು ಕ್ಷೇತ್ರದಲ್ಲೂ ಒಂದಷ್ಟು ಅನುಭವ ಪಡೆದಿದ್ದಾರೆ. ಈ ರೀತಿ ತಯಾರಿ ಮಾಡಿಕೊಂಡು ಸಿನಿಮಾ ರಂಗ ಪ್ರವೇಶ ಮಾಡುತ್ತಿದ್ದಾರೆ. ಇನ್ನು ಇವರೊಂದಿಗೆ ನಟಿ ಸಾನ್ಯಾ ಅಯ್ಯರ್(Saanya Iyer) ಕೂಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಪುಟ್ಟಗೌರಿ ಮದುವೆ ಕಿರುತೆರೆ ಧಾರಾವಾಹಿಯಲ್ಲಿ ಬಾಲ ಕಲಾವಿದೆಯಾಗಿ ಗುರುತಿಸಿಕೊಂಡಿದ್ದ ನಟಿ, ನಂತರ ವಿವಿಧ ರಂಗಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಬಿಗ್ ಬಾಸ್ ಒಟಿಟಿ ಕನ್ನಡದಲ್ಲಿ ಕಂಟೆಸ್ಟೆಂಟ್ ಮತ್ತು ಸೀಸನ್ 9 ರಲ್ಲಿ ಭಾಗವಹಿಸಿದ್ದ ಅವರು ಜನಪ್ರಿಯ ಸ್ಪರ್ಧಿಯಾಗಿ ಹೊರಹೊಮ್ಮಿದರು. ಅಲ್ಲದೆ, ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಇನ್ನು ಚಿತ್ರರಂಗಕ್ಕೆ ಸಾನ್ಯಾ ಅವರ ಪ್ರವೇಶದಿಂದ ನಿರೀಕ್ಷೆಗಳು ಹೆಚ್ಚುತ್ತಿದ್ದು, ಒಳ್ಳೆಯ ಚಿತ್ರತಂಡದೊಂದಿಗೆ ಅವರು ಲಾಂಚ್ ಆಗುತ್ತಿದ್ದಾರೆ.
ಇದನ್ನೂ ಓದಿ: ಪ್ರೇಯಸಿಗೆ ಅಂತ್ಯಕ್ರಿಯೆಗೆ ಬರುವಂತೆ ಹೇಳಿ ಲೈವ್ ನಲ್ಲೆ ಪ್ರಾಣ ಬಿಟ್ಟ ಯುವಕ; ಪೂರ್ತಿ ವಿಡಿಯೋ ಇಲ್ಲಿದೆ ನೋಡಿ
ಇದನ್ನೂ ಓದಿ: ನಟಿ ಜಯಪ್ರದಾ ಅರೆಸ್ಟ್! 6 ತಿಂಗಳು ಜೈಲು ಶಿಕ್ಷೆ! ಕಾರಣವೇನು ಗೊತ್ತಾ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram