ನಿಮ್ಮ ಹಣ ಯಾವ ಬ್ಯಾಂಕ್ ನಲ್ಲಿದ್ದರೆ ಸುರಕ್ಷಿತ ಗೊತ್ತಾ; ಆರ್ ಬಿ ಐ ಪ್ರಕಾರ ಈ 3 ಬ್ಯಾಂಕ್ ಅತ್ಯಂತ ಸೇಫ್

Safest Bank In India Rbi Gave Big Information

ದೇಶದಲ್ಲಿ ಅನೇಕ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳಿವೆ, ಆದರೆ ಯಾವ ಬ್ಯಾಂಕ್ ಸುರಕ್ಷಿತವಾಗಿದೆ ಎಂದು ನಿಮಗೆ ತಿಳಿದಿದೆಯೇ? ಹೌದು ಮನುಷ್ಯನನ್ನ ಮನುಷ್ಯನೇ ನಂಬದೆ ಬ್ಯಾಂಕ್ ಒಂದನ್ನ ನಂಬಿ ನಾವು ಅಲ್ಲಿ ಹಣ ಇಡುತ್ತೇವೆ ಅಂದ್ರೆ ಅದು ಎಷ್ಟು ಸೇಫ್ ಅನ್ನೋದು ಮುಖ್ಯವಾಗುತ್ತೆ ಅಲ್ವಾ. ಸದ್ಯ ಇಂಥ ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್‌ಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ. ಇದರಿಂದ ನಿಮ್ಮ ಖಾತೆ ಯಾವ ಬ್ಯಾಂಕ್‌ನಲ್ಲಿದೆ ಮತ್ತು ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ನೀವೇ ಪರಿಶೀಲಿಸಿಕೊಳ್ಳಬಹುದು. ಹೌದು ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ದೇಶೀಯ ಮಟ್ಟದಲ್ಲಿ ಹಣಕಾಸು ವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರಮುಖ ಬ್ಯಾಂಕ್‌ಗಳಾಗಿ ಉಳಿದಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

WhatsApp Group Join Now
Telegram Group Join Now

ಇನ್ನು ದೇಶದ ಹಣಕಾಸು ವ್ಯವಸ್ಥೆಯ ಮಟ್ಟದಲ್ಲಿ, ಈ ಬ್ಯಾಂಕುಗಳು ಎಷ್ಟು ದೊಡ್ಡದಾಗಿದೆ ಎಂದರೆ ಅವುಗಳು ಕೆಳಗಿಳಿಯುವುದಿಲ್ಲ ಅಂತ ಹೇಳಿದೆ. ಅಲ್ದೇ ಆಗಸ್ಟ್ 2015 ರಿಂದ, ರಿಸರ್ವ್ ಬ್ಯಾಂಕ್ ಪ್ರತಿ ವರ್ಷ ಅದೇ ತಿಂಗಳಲ್ಲಿ ಹಣಕಾಸು ವ್ಯವಸ್ಥೆಗೆ ಪ್ರಮುಖವಾದ ಬ್ಯಾಂಕ್‌ಗಳ ಹೆಸರುಗಳ ಮಾಹಿತಿಯನ್ನು ಒದಗಿಸುವ ಅಗತ್ಯವಿದೆ. ಹೀಗಾಗಿ ಇದೀಗ ಆರ್ ಬಿ ಐ ಸೇಫೇಸ್ಟ್ ಬ್ಯಾಂಕ್ ಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್ ನಲ್ಲಿ ನಿಮ್ಮ ಹಣ ಇದ್ಯಾ?

ನಿಯಮಗಳ ಪ್ರಕಾರ, ಸಿಸ್ಟಮ್ ಮಟ್ಟದಲ್ಲಿ ಪ್ರಾಮುಖ್ಯತೆಯ ಆಧಾರದ ಮೇಲೆ ಅಂತಹ ಸಂಸ್ಥೆಗಳನ್ನು ನಾಲ್ಕು ವಿಭಾಗಗಳಲ್ಲಿ ಇರಿಸಬಹುದು. ಐಸಿಐಸಿಐ ಬ್ಯಾಂಕ್ ಕಳೆದ ವರ್ಷದಂತೆ ಅದೇ ವರ್ಗ ಆಧಾರಿತ ರಚನೆಯಲ್ಲಿ ಉಳಿದಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಉನ್ನತ ವರ್ಗಕ್ಕೆ ತೆರಳಿವೆ. ಎಸ್‌ಬಿಐ ವರ್ಗ ಮೂರರಿಂದ ವರ್ಗ ನಾಲ್ಕಕ್ಕೆ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ವರ್ಗ ಒಂದರಿಂದ ಎರಡನೇ ವರ್ಗಕ್ಕೆ ಸ್ಥಳಾಂತರಗೊಂಡಿದೆ. ಇದರರ್ಥ ಬ್ಯಾಂಕ್‌ಗಳು ಅಪಾಯದ ತೂಕದ ಆಸ್ತಿಗಳ ಶೇಕಡಾವಾರು ಹೆಚ್ಚುವರಿ ಸಾಮಾನ್ಯ ಇಕ್ವಿಟಿ ಷೇರು ಬಂಡವಾಳವನ್ನು ಪೂರೈಸಬೇಕಾಗುತ್ತದೆ. ಇನ್ನು ಏಪ್ರಿಲ್ 1, 2025 ರಿಂದ ದೇಶೀಯವಾಗಿ ಪ್ರಮುಖ ಬ್ಯಾಂಕ್‌ಗಳು ಎಸ್‌ಬಿಐಗೆ ಹೆಚ್ಚುವರಿ ಶುಲ್ಕವು ಶೇಕಡಾ 0.8 ಆಗಿರುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಇದು ಶೇಕಡಾ 0.4 ಆಗಿರುತ್ತದೆ. ಆದ್ದರಿಂದ ಮಾರ್ಚ್ 31, 2025 ರವರೆಗೆ, ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಡಿ-ಎಸ್‌ಐಬಿ ಸರ್‌ಚಾರ್ಜ್ ಕ್ರಮವಾಗಿ ಶೇಕಡಾ 0.6 ಮತ್ತು ಶೇಕಡಾ 0.20 ಆಗಿರುತ್ತದೆ ಎಂದು ಆರ್‌ಬಿಐ ಹೇಳಿದೆ.

ಹೌದು 2015 ರಿಂದಲೇ ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಹಣಕಾಸು ವ್ಯವಸ್ಥೆ ಮತ್ತು ಆರ್ಥಿಕತೆಯಲ್ಲಿ ನಿರ್ಣಾಯಕ ಬ್ಯಾಂಕ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಾ ಬಂದಿದೆ. ವಾರ್ಷಿಕವಾಗಿ ಆಗಸ್ಟ್‌ನಲ್ಲಿ ಆರ್‌ಬಿಐ ಆಯಾ ಬ್ಯಾಂಕ್‌ಗಳ ವ್ಯಾಪ್ತಿಯನ್ನು ಆಧರಿಸಿ ಮೌಲ್ಯಮಾಪನ ನಡೆಸುತ್ತದೆ. ಸದ್ಯ ಪಟ್ಟಿಯಲ್ಲಿ ಕೇವಲ ಮೂರು ಹಣಕಾಸು ಸಂಸ್ಥೆಗಳನ್ನು ಉಲ್ಲೇಖಿಸಲಾಗಿದೆ. ಈ ಮೂರು ಬ್ಯಾಂಕ್‌ಗಳು ದಿವಾಳಿತನದಿಂದ ಸುರಕ್ಷಿತವಾಗಿವೆ. ಒಂದು ವೇಳೆ ಇವುಗಳಿಗೆ ಸಂಕಷ್ಟ ಎದುರಾದರೆ ಸರ್ಕಾರವೇ ನೆರವಿಗೆ ಬರಲಿದೆ. ಇನ್ನು ಗ್ರಾಹಕರು ಸೇರಿದಂತೆ ಭಾರತೀಯ ಆರ್ಥಿಕತೆಯು ಬ್ಯಾಂಕಿಂಗ್ ಸಂಸ್ಥೆಗಳ ಮೇಲೆ ಮೇಲೆ ಹೆಚ್ಚು ಅವಲಂಬಿತವಾಗಿದೆ. ಗ್ರಾಹಕರು ನಷ್ಟ ಅನುಭವಿಸಿದರೆ ಅದು ಇಡೀ ರಾಷ್ಟ್ರದ ಆರ್ಥಿಕತೆಗೆ ಹೊಡೆತ ಬಿದ್ದಂತೆ. ಹೀಗಾಗಿ ಭಾರತದಲ್ಲಿ ಅನೇಕ ಬ್ಯಾಂಕುಗಳಿವೆ. ಆ ಬ್ಯಾಂಕುಗಳಲ್ಲಿ ಕೋಟ್ಯಂತರ ಗ್ರಾಹಕರು ಖಾತೆಗಳನ್ನು ಹೊಂದಿದ್ದಾರೆ.

ಸರ್ಕಾರಿ ಬ್ಯಾಂಕ್ ಗಳಿಂದ ಹಿಡಿದು, ಖಾಸಗಿ ಬ್ಯಾಂಕ್ ಗಳವರೆಗಿನ ದೊಡ್ಡ ಪಟ್ಟಿಯೇ ಇದರಲ್ಲಿದೆ. ಆದರೆ ಈಗ ಬ್ಯಾಂಕ್ ಗಳ ಬಗ್ಗೆ ರಿಸರ್ವ್ ಬ್ಯಾಂಕ್ ನಿಂದ ಕೆಲವೊಂದು ಮಾಹಿತಿ ಹೊರ ಹಾಕಿದ್ದು, ಯಾವ ಬ್ಯಾಂಕ್‌ನಲ್ಲಿ ನಿಮ್ಮ ಹಣ ಸುರಕ್ಷಿತವಾಗಿದೆ ಮತ್ತು ಯಾವ ಬ್ಯಾಂಕ್‌ನಲ್ಲಿ ನಿಮ್ಮ ಹಣ ಸುರಕ್ಷಿತವಾಗಿಲ್ಲ ಎನ್ನುವುದನ್ನು ಆರ್ ಬಿಐ ಹೇಳಿದೆ. ಹೀಗಾಗಿ ದೇಶದಲ್ಲಿನ ಯಾವ ಬ್ಯಾಂಕ್‌ಗಳಲ್ಲಿ ಖಾತೆ ಹೊಂದುವುದು ಅತ್ಯಂತ ಸೇಫ್ ಅಂತ ಇದೀಗ ಬಹಿರಂಗವಾಗಿದೆ ಅಂತಲೇ ಹೇಳಬಹುದು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Xiaomi ಯು ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಆದ SU7 ಅನ್ನು ಪರಿಚಯಿಸುತ್ತಿದೆ. ಇದರ ವಿನ್ಯಾಸದ ಬಗ್ಗೆ ಕೇಳಿದರೆ ಬೆರಗಾಗುತ್ತೀರಾ