Sagar Biligowda : ಎರಡು ವರ್ಷಗಳ ಹಿಂದೆ ಅಣ್ಣನನ್ನು ಕಳೆದುಕೊಂಡಿದ್ದ ಸತ್ಯ ಸಿರಿಯಲ್ ನಟ ಸಾಗರ್ ಇದೀಗ ಅಣ್ಣನ ಆಸೆಯನ್ನು ಈಡೇರಿಸಿದ್ದಾರೆ.

Sagar Biligowda : ಸತ್ಯ ಸಿರಿಯಲ್ ನಲ್ಲಿ ಕಾರ್ತಿಕ್ ಪಾತ್ರ ಮಾಡುತ್ತಿರುವ ಸಾಗರ್ ಯಾರಿಗೂ ಗೊತ್ತಿಲ್ಲ ಹೇಳಿ ಸಾಗರ್ ಅವರು ವಿದೇಶದಲ್ಲಿ ಎಂ.ಬಿ.ಎ ಓದಿ ನಂತರ ಬೆಂಗಳೂರಿಗೆ ಬಂದು ಅವರ ಇಷ್ಟದ ಹಾಗೆ ನಟನ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ ಮೊದಲು ಉದಯ ಟಿವಿಯ ಸೀರಿಯಲ್ ನಲ್ಲಿ ಹೀರೋ ಆಗಿ ನಟಿಸಿದ ಸಾಗರ್ ಅವರು ಬಳಿಕ ಸತ್ಯ ಸೀರಿಯಲ್ ಆಫರ್ ಬಂದ ಬಳಿಕ ಸತ್ಯಗೆ ಹೀರೋ ಆಗಿ ಕಾಣಿಸಿಕೊಂಡರು ಇದೇ ವರ್ಷ ಜನವರಿಯಲ್ಲಿ ಸಾಗರ್ ಅವರು ಸಿರಿ ಎಂಬುವವರ ಜೊತೆ ವಿವಾಹವಾದರೂ ಸಿರಿ ಅವರು ಕೂಡ ನಟಿಯಾಗಿ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ.

WhatsApp Group Join Now
Telegram Group Join Now

ಇದನ್ನು ಓದಿ : ದೊಡ್ಮನೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಚಂದವನದಲ್ಲಿ ಅಬ್ಬರಿಸಲು ರೆಡಿ ಆಗಿದ್ದರೆ ಅಪ್ಪು ಉತ್ತರಾಧಿಕಾರಿ 

ಅಣ್ಣನ ಆಸೆಯನ್ನುಈಡೇರಿಸಿದ ಸಾಗರ್

ಸಾಗರ್ ಬಿಳಿ ಗೌಡ ಅವರು ಎರಡು ವರ್ಷಗಳ ಹಿಂದೆ ಅಣ್ಣನನ್ನು ಕಳೆದುಕೊಂಡಿದ್ದರು. ಸಾಗರ್ ಅವರ ಅಣ್ಣನ ಹೆಸರು ಹರ್ಷಿತ್ ರಾಜ್ ಅವರಿಗೆ ಕಾರುಗಳ ಮೇಲೆ ತುಂಬಾ ಕ್ರೇಜ್ ಇದ್ದ ಕಾರಣ ಇದೀಗ ಅಣ್ಣನ ಆಸೆಯನ್ನು ಸಾಗರ್ ಅವರು ಈಡೇರಿಸಿದ್ದಾರೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಕಾರಿನ ವಿಡಿಯೋ ಹಾಕಿ “ನಾನು ಬಹುಮಟ್ಟಿಗೆ ಬೈಕರ್ ಆಗಿದ್ದೇನೆ ಮತ್ತು ಕಾರುಗಳ ಮೇಲಿನ ಈ ಹೊಸ ಪ್ರೀತಿ ನನ್ನ ಪ್ರೀತಿಯ ಸಹೋದರ ಹರ್ಷಿತ್ ರಾಜ್ ಅವರದ್ದು, ಅವರು ಎರಡು ವರ್ಷಗಳ ಹಿಂದೆ ತೀರಿ ಹೋದರು ಈಗ ಅವರು ಕಾರುಗಳನ್ನು ಹೊಂದುವ ಕನಸು ನನಸಾಗುತ್ತಿದೆ ನಾನು ಅವರ ಕನಸನ್ನು ಬದುಕಲು ಮತ್ತು ಅವರ ಬಕೆಟ್ ಪಟ್ಟಿಯನ್ನು ಟಿಕ್ ಮಾಡುತ್ತೇನೆ” ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಾಗರ್ ಅವರು ಬರೆದುಕೊಂಡಿದ್ದಾರೆ ಮರ್ಸಿಡಿಸ್ ಬೆಂಜ್ ಕಾರ್ ಅನ್ನು ಖರೀದಿ ಮಾಡಿ ಅಣ್ಣನ ಮೊದಲ ಆಸೆಯನ್ನು ಈಡೇರಿಸಿದ್ದಾರೆ..

ಇದನ್ನು ಓದಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.