Sampath Jayaram: ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟಿಸಿದ್ದ ಯುವ ಪ್ರತಿಭೆ ಸಂಪತ್ ಜಯರಾಮ್ ಇಹಲೋಕ ತ್ಯಜಿಸಿದ್ದಾರೆ. ಹೌದು ನೆಲಮಂಗಲ ದಲ್ಲಿ ವಾಸವಿದ್ದ ಸಂಪತ್, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತಹ ಕೆಟ್ಟ ಪ್ರಯತ್ನಕ್ಕೆ ಕೈ ಹಾಕಿ ಆತ್ಮಹತ್ಯೆಯಂತಹ ನಿರ್ಧಾರ ವನ್ನು ಸಂಪತ್ ಯಾಕೆ ಮಾಡಿದರು ಅಂತ ಎಲ್ಲರು ಕೇಳ್ತಿದ್ದಾರೆ, ಯಾಕಂದ್ರೆ ಸಂಪತ್ ಹೀಗಷ್ಟೇ ಅರಳುತ್ತಿದ್ದ ಹೊಸ ಪ್ರತಿಭೆ. ಆದ್ರೆ ಸಂಪತ್ ಸಾವಿನ ಕುರಿತು ಎಲ್ಲಿಲ್ಲದ ಉಹಾಪೋಹಗಳು ಎಲ್ಲಕಡೆ ಹರಿದಾಡುತ್ತಿದ್ದೂ ಇದೀಗ ಅವ್ರ ಮನೆಯವರು ಹಾಗೂ ಸ್ನೇಹಿತರಿಗೆ ಸಂಪತ್ ಸಾವಿನ ಜೊತೆಗೆ ಇಂತಹ ಉಹಾಪೋಹಗಳ ಸುದ್ದಿ ಗಳು ವೈರಲ್ ಆಗ್ತಿರೋದು ಮತ್ತಷ್ಟು ನೋವಿಗೆ ಕಾರಣವಾಗಿದೆ. ಅಸಲಿಗೆ ಸಂಪತ್ ಆತ್ಮಹತ್ಯೆಯ ಹಿಂದಿನ ವಿಷಯ ಹಾಗೂ ಸತ್ಯವೇ ಬೇರೆ. ಅದನ್ನ ತಿಳಿಯದವರು ಈ ರೀತಿಯ ಇಲ್ಲಸಲ್ಲದ ಸುದ್ದಿ ಗಳನ್ನ ಹರಿಬಿಡ್ತಿದ್ದಾರೆ. ಹೀಗಾಗಿ ಸಂಪತ್ ಅವ್ರ ಪ್ರಾಣಾ ಸ್ನೇಹಿತ ನಟ ರಾಜೇಶ್ ಧ್ರುವ ಅಸಲಿ ಸತ್ಯವನ್ನು ವಿಡಿಯೋ ಮಾಡಿ ಹೇಳಿಕೊಂಡಿದ್ದು, ಸುಳ್ಳು ಸುದ್ದಿ ಹಬ್ಬಿಸುವವರಿಗೆ ಏನ್ ಹೇಳಿದ್ದಾರೆ ನೋಡೋಣ ಬನ್ನಿ.
ಇನ್ನು ನಾಲ್ಕು ತಿಂಗಳಲ್ಲಿ ತಂದೆ ಆಗುತ್ತಿದ್ದು ಸಂಪತ್
ಕಿರುತೆರೆಯ ಜನಪ್ರಿಯ ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ನಟಿಸಿ ಫೇಮಸ್ ಆಗಿದ್ರು ನಟ ಸಂಪತ್ ಅಷ್ಟೇ ಅಲ್ಲ ಸಾಕಷ್ಟು ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದ ಸಂಪತ್ ಜಯರಾಮ್ ಅವರು ನಟಿಸಿದ್ದ ಮೊನ್ನೆ ಮೊನ್ನೆಯಷ್ಟೇ ತೆರೆಕಂಡ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಸಿನಿಮಾ ಕೂಡ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಸಣ್ಣಪುಟ್ಟ ಕೆಲಸಗಳು, ತಮ್ನ ಸ್ನೇಹಿತರ ಜೊತೆಗೂಡಿ ಯೌಟ್ಯೂಬ್ ಚಾನೆಲ್ ಸಾಲದಕ್ಕೆ 12ವರ್ಷಗಳ ಪ್ರೀತಿಸಿದವರನ್ನೇ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಬೇರೆ ಜಾತಿಯವರಾಗಿದ್ರು ಮನೆಯವರನ್ನ ಒಪ್ಪಿಸಿ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ರು, ಇನ್ನೊಂದು ಮನಕಲಕುವ ವಿಷಯ ಗೊತ್ತಾ ಸ್ನೇಹಿತರೆ ಇನ್ನು 4 ತಿಂಗಳಲ್ಲಿ ಸಂಪತ್ ಅಪ್ಪ ಆಗ್ತಿದ್ರು ಹೌದು ಸಂಪತ್ ಮಡದಿ ಚೈತನ್ಯ 5ತಿಂಗಳ ಗರ್ಭಿಣಿ, ಇಷ್ಟೆಲ್ಲ ಸರಿ ಇದ್ದು ಸಂಪತ್ ಆತ್ಮಹತ್ಯೆ ದಾರಿ ಹಿಡಿದಿದ್ದು ಯಾಕೆ ಅಂದಾಗ ಅವಕಾಶಗಳು ಕಡಿಮೆಯಾಗಿ ಸಂಪತ್ ಮಾನಸಿಕ ಅರೋಗ್ಯ ಸರಿ ಇಲ್ದೆ ಹೀಗೆ ಮಾಡಿಕೊಂಡ್ರು ಸಂಸಾರ ದಲ್ಲಿ ತೊಂದ್ರೆ ಅದು ಇದು ಅಂತ ಏನೇನೋ ಸುದ್ದಿ ಗಳು ವೈರಲ್ ಆಗಿದ್ವು. ಆದ್ರೆ ಅಂತಹ ಎಲ್ಲ ಸುದ್ದಿಗಳು ಸುಳ್ಳು ಅದನ್ನ ಯಾರು ನಂಬೇಡಿ, ಇನ್ನೊಬ್ಬರ ಜೀವನದ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ ಅಂತ ನಟ ರಾಜೇಶ್ ಧ್ರುವ ಮನಬಿಚ್ಚಿ ಅಗಲಿದ ಸ್ನೇಹಿತನ ನೆನೆದು ಮಾತನಾಡಿದ್ದಾರೆ.
ಹೌದು ಸಂಪತ್ ಕೇವಲ 35ವರ್ಷಕ್ಕೆ ಇಂಥಹ ದುಡುಕು ನಿರ್ಧಾರ ತೆಗೆದುಕೊಂಡಿದ್ದಾರೆ ಅಂದ್ರೆ ಅವ್ರ ಬಗ್ಗೆ ಏನು ತಿಳಿಯದ ನಮಗೆ ನಂಬಲು ಆಗಲ್ಲ ಅಂದಾಗ ಅವ್ರ ಕುಟುಂಬ ಹಾಗೂ ಸ್ನೇಹಿತರಿಗಾಗಿರೋ ಆತಂಕ ಅಷ್ಟಿಷ್ಟಲ್ಲ. ಹೌದು ನಟ ರಾಜೇಶ್ ಧ್ರುವ ಕೂಡ ಈ ಬಗ್ಗೆ ಪೋಸ್ಟ್ ಒಂದನ್ನ ಹಂಚಿಕೊಂಡಿದ್ರು ಅದೇನಪ್ಪ ಅಂದ್ರೆ ಸ್ನೇಹಿತನ ದುರಂತ ಅಂತ್ಯಕ್ಕೆ ಕಂಬನಿ ಮಿಡಿದಿರುವ ರಾಜೇಶ್ ಧ್ರುವ ‘ಲೋ ನಿನ್ನ ಅಗಲಿಕೆ ತಡ್ಕೊಳೋ ಶಕ್ತಿ ನಮಗಿಲ್ಲ ಮಗ.. ಅದೆಷ್ಟೋ ಸಿನಿಮಾ ಮಾಡೋದಿದೆ, ಅದೆಷ್ಟೋ ಜಗಳ ಬಾಕಿ ಇದೆ, ಕಂಡ ಕನಸು ನನಸು ಮಾಡ್ಕೋಳೋಕೆ ಇನ್ನೂ ಸಾಕಷ್ಟು ಸಮಯ ಇದೆ ಲೋ, ಇನ್ನೂ ನಿನ್ನ ದೊಡ್ಡ್ ದೊಡ್ಡ್ ಸ್ಟೇಜ್ ನಲ್ಲಿ ನೋಡೋದ್ ಇದೆ ಕಣೋ, ಮುಚ್ಕೊಂಡು ಬಾರೋ ವಾಪಾಸ್ ಪ್ಲೀಸ್..’ ಎಂದು ಭಾವುಕರಾಗಿ ಪೋಸ್ಟ್ ಹಾಕಿದ್ರು. ಆದ್ರೆ ಸಾವಿಗೆ ಕಾರಣ ಏನು ಅನ್ನೋದನ್ನ ಧ್ರುವ ಎಲ್ಲಿಯೂ ಹೇಳಿರಲಿಲ್ಲ. ಆದ್ರೆ ಕೆಲವೊಂದಿಷ್ಟು ಸಾಮಾಜಿಕ ಮಾಧ್ಯಮಗಳಲ್ಲಿ ಸಂಪತ್ ಸಾವಿನ ಬಗ್ಗೆ ಇಲ್ಲ ಸಲ್ಲದ ಸುಳ್ಳು ಸುದ್ದಿ ಗಳು ಹರಿದಾಡಿದ್ದನ್ನ ನೋಡಿ ರಾಜೇಶ್ ಅವ್ರಿಗೆ ದುಃಖ ಸಹಿಸಲಾಗದೆ ಕೊನೆಗೆ ವಿಡಿಯೋ ಒಂದನ್ನ ಮಾಡಿ ಶೇರ್ ಮಾಡಿದ್ದು, ಸಂಪತ್ ಹೇಗೆ ಏನು, ಸಂಸಾರ, ಮನೆ, ಪ್ರೀತಿ, ಸ್ನೇಹಿತರು, ಕೆಲಸ ಕಾರ್ಯ ಎಲ್ಲದರ ಬಗ್ಗೆಯೂ ಕೂಡ ಮನಬಿಚ್ಚಿ ಮಾತನಾಡಿ ಸುಳ್ಳು ಸುದ್ದಿ ಹಬ್ಬಿಸ್ತಿರೋರಿಗೆ ಸರಿಯಾಗಿಯೇ ಮನ ಮುಟ್ಟುವ ಆಗೇ ಹೇಳಿದ್ದಾರೆ.
ಇದನ್ನು ಓದಿ: ದೇವರ ಮನೆಯಲ್ಲಿ ವಿಷ್ಣುವರ್ಧನ್ ಅವರ ಫೋಟೋ ಹಿಂದಿರೋ ಕಥೆ ಹೇಳಿದ ಮಾಳವಿಕಾ ಅವಿನಾಶ್
ಆದ್ರೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿ ಅಲ್ಲಾ-ನಟ ರಾಜೇಶ್ ಧ್ರುವ..
ಹೌದು ಸಂಪತ್ ಅವ್ರು ನೆನ್ನೆ ನೆಲಮಂಗಲದ ತಮ್ಮ ಮನೆ ಯಲ್ಲಿ ನೇಣಿಗೆ ಶರಣಾಗಿದ್ರು, ಈ ಸುದ್ದಿ ಅತಿಬೇಗ ಎಲ್ಲ ಕಡೆ ವೈರಲ್ ಆಗಿ ಚಿತ್ರರಂಗದಲ್ಲಿ ಅವಕಾಶ ಸಿಗದೆ ಖಿನ್ನತೆಯಿಂದ ಹೀಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಹೇಳಲಾಗಿತ್ತು. ಆದರೆ ಅಸಲಿಗೆ ಇದೆಲ್ಲವೂ ಅಪ್ಪಟ್ಟ ಸುಳ್ಳು ಸುದ್ದಿ ಇದರ ಬಗ್ಗೆ ರಾಜೇಶ್ ಮಾತನಾಡಿದ್ದು, ದಯವಿಟ್ಟು ಈ ರೀತಿ ನಿಮ್ಮ ಪಬ್ಲಿಸಿಟಿ ಅಥವಾ ಟಿ ಆರ್ ಪಿ ಹೆಚ್ಚಿಸೋದೋಕ್ಕೋಸ್ಕರ ಒಬ್ಬರ ಬಗ್ಗೆ ಗೊತ್ತಿಲ್ಲದೇ ಇಂತಹ ಸುಳ್ಳು ಸುದ್ದಿಗಳನ್ನ ಹಬ್ಬಿಸಬೇಡ, ಅವ್ನಿಗೆ ಅಂತ ಫ್ಯಾಮಿಲಿ ಇದೆ, ಪ್ರೆಂಡ್ಸ್ ನಾವಿದೀವಿ ನಮ್ಮ ಮನಸ್ಸಿಗೆ ನೀವು ಇತರಹದ ಸುದ್ದಿ ಗಳನ್ನ ಹಾಕ್ತಿದ್ರೆ ನೋಡ್ಕೊಂಡು ಇರೋಕೆ ತುಂಬಾ ನೋವಾಗುತ್ತೆ. ಸಂಪತ್ ಅತರಹದ ಹುಡುಗ ಅಲ್ಲಾ. ಅವ್ನು ತುಂಬಾ ಬ್ರಾಡ್ ಮೈಂಡೆಡ್, ನಮ್ಮಲ್ಲಿ ಯಾರಾದ್ರೂ ಒಬ್ರು ಸಮಸ್ಯೆ ಅಂದ್ರೆ ಅವ್ನು ಇಷ್ಟು ಚೆನ್ನಾಗಿ ಅರ್ಥ ಮಾಡ್ಸ್ತೀದ್ದ ಅಂದ್ರೆ ದಡ್ಡ ಕೂಡ ಅರ್ಥ ಮಾಡ್ಕೊಳೋ ತರ ಅಷ್ಟು ಚೆನ್ನಾಗಿ ಅರ್ಥ ಮಾಡ್ಸೋನು. ಇಂಡಸ್ಟ್ರಿಲಿ ಜಾಸ್ತಿ ಟ್ಯಾಲೆಂಟ್ ಇದ್ರೂ ಕಷ್ಟ ಕಡಿಮೆ ಟ್ಯಾಲೆಂಟ್ ಇದ್ರೂ ಕಷ್ಟ. ಹೌದು ಅವಕಾಶ ಕಡಿಮೆ ಆಗಿತ್ತು ಆದ್ರೆ ಅದೇ ಅವ್ನು ಆತ್ಮಹತ್ಯೆ ಮಾಡ್ಕೋಳೋಕೆ ಕಾರಣ ಅಲ್ಲಾ, ಅವ್ನು ಅಂತ ಹೇಡಿನು ಅಲ್ಲಾ ಅಂತ ಕೆಟ್ಟ ಪ್ರಯತ್ನನ ಈ ಕಾರಣ ಇಟ್ಟುಕೊಂಡು ಅವ್ನು ಮಾಡೋಕೆ ಸಾಧ್ಯನೇ ಇಲ್ಲ. ಅವಕಾಶ ಇಲ್ಲ ಅಂತ ನಾವು ಸುಮ್ನೆ ಕೂರ್ತಿದ್ವಾ ಖಂಡಿತಾ ಇಲ್ಲ ನಾವೇ ಅವಕಾಶನ ಕ್ರಿಯೇಟ್ ಮಾಡ್ಕೋತಿದ್ವಿ.
ತಪ್ಪಾಗಿ ಮಾಹಿತಿ ಕೊಟ್ಟು ನೋವು ಕೊಡಬೇಡಿ
ಹೌದು ಶ್ರೀ ಬಾಲಜಿ ಫೋಟೋ ಸ್ಟುಡಿಯೋ ಸಿನಿಮಾ ನಮ್ಮದೇ ಪ್ರಯತ್ನ ಅದ್ರಲ್ಲಿ ಸಂಪತ್ ಗೆದಿದ್ದ, ತುಂಬಾ ಫೇಮಸ್ ಕೂಡ ಆದ. ನಮ್ದೇ ಯೂಟ್ಯೂಬ್ ಚಾನೆಲ್ ಗೆ ಅವ್ನೆ ಆಂಕರ್. ನಾವು ಅವಕಾಶ ಇಲ್ಲ ಅಂತ ದುಡಿದೆ ಸುಮ್ನೆ ಇಲ್ಲ. ನಾವೇ ಅವುಗಳನ್ನ ಸೃಷ್ಟಿ ಮಾಡಿ ಬದುಕುತಿದ್ದ್ವಿ. ಆದ್ರೆ ಮನೆ ಯಲ್ಲಿ ಗಂಡ ಹೆಂಡತಿ ನಡುವೆ ನಡೆದ ಒಂದು ಚಿಕ್ಕ ಗಲಾಟೆ ನಂತರ ಸಂಪತ್ ಸಾಯ್ತಿನಿ ಅಂತ ಭಯ ಪಡ್ಸೋಕೆ ಹೋಗಿದಾನೆ ಅದು ಹ್ಯಾಂಗ್ ಆಗ್ಬಿಟ್ಟಿದೆ ಅಷ್ಟೇ ಅದ್ಬಿಟ್ಟು ಅವ್ನು ಹೇಡಿ ಥರ ಆತ್ಮಹತ್ಯೆ ಮಾಡಿಕೊಂಡಿಲ್ಲ.
ಸಂಪತ್ ಮತ್ತೆ ಚೈತನ್ಯ ಅವ್ರದ್ದು 12ವರ್ಷದ ಪ್ರೀತಿ, ಬೇರೆ ಜಾತಿ ಆದ್ರೂ ಮನೆಯವರ್ನ ಒಪ್ಪಿಸಿ ಹೋದ ವರ್ಷದ ಆಗಸ್ಟ್ ಲಿ ಮದ್ವೆ ಆದ್ರೂ ಒಂದ್ ವರ್ಷ ಕೂಡ ಆಗಿಲ್ಲ, ಚೈತನ್ಯ 5ತಿಂಗಳ ಗರ್ಭಿಣಿ, ಮಗು ನೋಡೋ ನಿರೀಕ್ಷೆಲ್ಲಿದ್ದ, ಆದ್ರೆ ವಿಧಿ ಆಟ ಬೇರೇನೇ ಆಗಿತ್ತು. ತಮಾಷೆ ನಿಜಾನೆ ಆಗೋಯ್ತು. ಆಗಂತ ಗಂಡ ಹೆಂಡತಿ ಮಧ್ಯೆ ಏನೋ ಸರಿ ಇಲ್ಲ ಅಂತಲ್ಲ. ಇಬ್ಬರು ತುಂಬಾ ಒಳ್ಳೇವ್ರು, ಒಳ್ಳೆ ಹೊಂದಾಣಿಕೆ ಇತ್ತು, ಇಷ್ಟು ವರ್ಷದ ಕಾದು ಮದುವೆ ಆಗಿದ್ರು ಸಣ್ಣ ಕಪ್ಪು ಚುಕ್ಕಿನು ಅವ್ರ ಜೀವನ ದಲ್ಲಿ ಇರ್ಲಿಲ್ಲ. ಚಿಕ್ಕ ಜಗಳ ಅಷ್ಟೇ ಸಂಪತ್ ಆಟ ಆಡ್ಸೋಕೆ ಹೋಗಿ ಹಿಂಗಾಗೋಗಿದೆ. ದಯವಿಟ್ಟು ಸಂಪತ್ ಸಾವಿಗೆ ಬೇರೆ ಬಣ್ಣ ಹಚ್ಬೇಡಿ. ಇಷ್ಟೇ ಆಗಿದ್ದು, ಅವ್ನ ಹೇಡಿ, ಮಾನಸಿಕವಾಗಿ ಸರಿ ಇರಲಿಲ್ಲ ಅಂತೆಲ್ಲ ಹೇಳಿ ನೋವು ಕೊಡ ಬೇಡಿ ಅಂತ ನಟ ರಾಜೇಶ್ ಧ್ರುವ ಹೇಳಿದ್ದಾರೆ.
ಒಟ್ಟಿನಲ್ಲಿ ಸಾವು ಹೇಗೆ ಆಗಿದ್ರು ಇದು ನಿಜಕ್ಕೂ ಅನ್ಯಾಯ. 5ತಿಂಗಳ ಗರ್ಭಿಣಿ ಚೈತನ್ಯಗೆ ದೇವರು ದುಃಖ ಭರಿಸೋ ಶಕ್ತಿ ಕೊಟ್ಟು, ಗರ್ಭದಲ್ಲಿರೋ ಮಗುಗೆ ಆಯಸ್ಸು ಹೆಚ್ಚಿಸಲಿ ಅನ್ನೋದು ನಮ್ಮ ಆಶಯ.
ಇದನ್ನು ಓದಿ: ಕ್ರಾಂತಿ ಸಿನಿಮಾ ಪ್ರಚಾರ ಮಾಡಿ ಕೆಲಸ ಕಳೆದುಕೊಂಡಿದ್ದ ದರ್ಶನ್ ಅಭಿಮಾನಿ! ಇದೀಗ ವಿದೇಶದಲ್ಲಿ ಕಾಟೇರ ಪ್ರಚಾರ