ಕಾರ್ತಿಕ್ ಅಂದ್ರೆ ಆಗೋಲ್ಲ ಅಂತಿದ್ದ ಸಂಗೀತ ಪ್ಯಾಚ್ ಅಪ್ ಮಾಡಿಕೊಂಡ್ರಾ; ಮತ್ತೆ ಒಂದಾದ ಸಂಗೀತಾ-ಕಾರ್ತಿಕ್

ಬಿಗ್ ಬಾಸ್ ನಲ್ಲಿ ಕಾರ್ತಿಕ್ ಮತ್ತು ಸಂಗೀತ ಬೆಸ್ಟ್ ಜೋಡಿ ಎಂದು ಗುರುತಿಸಿಕೊಂಡಿದ್ದರು. ಆದರೆ ಇದೀಗ ಇವರಿಬ್ಬರ ನಡುವೆ ಮನಸ್ತಾಪ ಸೃಷ್ಟಿಯಾಗಿ ಒಂದು ವಾರ ವಿನಯ್ ಟೀಮ್ ನಲ್ಲಿ ಸಂಗೀತ ಇದ್ದು ಆಟವಾಡಿದ್ದು ಇವರಿಬ್ಬರ ನಡುವಿನ ಮುಸುಕಿನ ಗುದ್ದಾಟ ಜಾಸ್ತಿಯಾಗುವಂತೆ ಮಾಡ್ತು. ಹೌದು ಕಳೆದ ವಾರ ಕ್ಯಾಪ್ಟನ್ಸಿ ವಿಚಾರದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಇಬ್ಬರು ದೂರವಾಗುವ ಹಂತಕ್ಕೆ ಬಂದ್ರು. ಹೌದು ಸಂಗೀತಾ, ತಾನು ಲೀಡರ್ ಆಗಬೇಕು ಅಂತ ಹೇಳ್ದಾಗ ಕಾರ್ತಿಕ್ ನಮ್ರತಾ ಮತ್ತು ತನಿಷಾ ಅವರನ್ನು ಕ್ಯಾಪ್ಟನ್ ಆಗಲು ಅರ್ಹರು ಅಂತ ಹೇಳ್ತಾರೆ. ಈ ಮಾತು ಸಂಗೀತಾ ರವರಿಗೆ ಸರಿ ಎನಿಸಿಲ್ಲ. ತನ್ನ ಮನಸಿನಲ್ಲಿ ಇರುವ ವಿಷಯವನ್ನು ನೇರವಾಗಿ ಹೇಳಿಬಿಡುವ ಸಂಗೀತಾ ಈ ವಿಷಯವನ್ನು ಕಾರ್ತಿಕ್ ಬಳಿ ನೇರವಾಗಿಯೇ ಹೇಳ್ತಾರೆ, ಬಿಗ್ ಬಾಸ್ ಗೆ ನಾನು ಯಾರ ಮೇಲೂ ಡಿಫೆಂಡ್ ಆಗಿ ಬಂದಿಲ್ಲ , ಜೊತೆಗಿದ್ದೋರೇ ಬೆನ್ನಿಗೆ ಚೂರಿ ಹಾಕ್ತಾರೆ ಅಂತ ಹೇಳಿ ಕೊನೆಗೆ ‘ಯು ಆರ್ ಫೇಕ್‌’ ಅಂತ ಕಾರ್ತಿಕ್ ಗೆ ಹೇಳ್ತಾರೆ, ಇದನ್ನು ಕೇಳಿದ ಕಾರ್ತಿಕ್ ಬೇಸರಗೊಂಡು ಅಲ್ಲಿಂದ ಎದ್ದು ಹೊರಟುಹೋಗ್ತಾರೆ. ಅದಾದ ಮೇಲೆ ಒಬ್ಬರಿಗೊಬ್ಬರು ಮಾತು ಆಡಲ್ಲ, ನೋಡೋದು ಇಲ್ಲ ದೂರವೇ ಇದ್ದು ಬಿಡ್ತಾರೆ. ನಂತರ ಸಂಗೀತ ವಿನಯ್ ಟೀಮ್ ನಲ್ಲಿ ಸೇರಿಕೊಳ್ತಾರೆ.

WhatsApp Group Join Now
Telegram Group Join Now

ಇನ್ನು ಯಾವಾಗಲೂ ಒಬ್ಬರಿಗೊಬ್ಬರು ಸಪೋರ್ಟ್‌ ಮಾಡುತ್ತ, ಒಬ್ಬರ ಸಲಹೆಯನ್ನು ಇನ್ನೊಬ್ಬರು ಕೇಳುತ್ತ ಬಂದಿದ್ದ ಕಾರ್ತಿಕ್ ಮತ್ತು ಸಂಗೀತಾ ರವರು ಈಗ ಕ್ಯಾಪ್ಟನ್ಸಿ ಟಾಸ್ಕ್ ವಿಚಾರದಲ್ಲಿ ಒಬ್ಬರಿಗೊಬ್ಬರು ದೂರವಾದ ಮೇಲೆ ಹಲವಾರು ಪ್ರಶ್ನೆಗಳು ಬರೋದು ಸಹಜ. ಹೌದು ಯಾವಾಗಲೂ ಖುಷಿಯಿಂದ ಇರುತ್ತಿದ್ದ ಕಾರ್ತಿಕ್ ಮತ್ತು ಸಂಗೀತ ಬೇರೆಯಾಗಿದ್ದಾರೆಯೇ? ಅವರ ನಡುವೆ ಬಿರುಕು ಮೂಡಿದೆಯೇ? ಇವರಿಬ್ಬರು ಈ ವಿಚಾರ ವನ್ನು ಮರೆತು ಒಂದಾಗುತ್ತಾರಾ? ಅಥವಾ ಅವರಿಬ್ಬರ ನಡುವೆ ಈ ಬಿರುಕು ಒಡೆದು ಇನ್ನು ಮುಂದುವರಿಯುತ್ತಾ? ಎಂಬ ಹಲವಾರು ಪ್ರಶ್ನೆಗಳು ಕಾಡ್ತಿತ್ತು, ವೀಕೆಂಡ್ ನಲ್ಲಿ ಕಿಚ್ಚನ ಪಂಚಾಯ್ತಿಯಲ್ಲಿಯೂ ಈ ವಿಷಯ ಪ್ರಸ್ತಾಪ ಆಗುತ್ತೆ ಆಗಲು ತಾನು ರೈಟ್ ಅಂತ ಹೇಳೋ ಸಂಗೀತ, ಕಾರ್ತಿಕ್ ಇಂದ ದೂರವೇ ಉಳ್ದಿದ್ರು ಆದ್ರೆ ಇದೀಗ ಜೋಡಿ ಹಕ್ಕಿ ಮತ್ತೆ ಒಂದಾಗಿರೋ ಪಿಸು ಪಿಸು ಕೇಳಿಬರ್ತಿದೆ.

Sangeetha-Karthik
Image Credit: Original Source

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಜೋಡಿ ಹಕ್ಕಿ ಮತ್ತೆ ಒಂದಾಗಿದ್ದು ಹೇಗೆ ಗೊತ್ತಾ?

ಹೌದು ಕಿಚ್ಚನ ಪಂಚಾಯತಿಯಲ್ಲಿಯೂ ಕೂಡ ಕಿಚ್ಚ ಕಾರ್ತಿಕ್ ಹಾಗೂ ಸಂಗೀತ ನಡುವೆ ಆಗಿರತಕ್ಕಂತ ಮನಸ್ತಾಪದ ಬಗ್ಗೆ ಮಾತನಾಡುತ್ತಾರೆ ಆಗ ಸಂಗೀತ ತಾನೇ ಸರಿ ಅಂತ ಹೇಳುತ್ತಾರೆ ಅದಾದ ನಂತರ ಕಳೆದ ವಾರ ಕಿಚ್ಚ ಕೊಟ್ಟಿದ್ದ ಟಾಸ್ಕ್ನಲ್ಲಿ ಗೆದ್ದಿದಂತಹ ಹುಡುಗರ ಗುಂಪಿಗೆ ಕಿಚ್ಚ ಒಂದು ಗಿಫ್ಟ್ ಅನ್ನು ಕೊಡುತ್ತಾರೆ ಅದೇನಂತಂದ್ರೆ ತಾವು ಬಳಸಿದಂತಹ ಕಾಸ್ಟಿಂಗ್ಸ್ ನ್ನ ಎಲ್ಲಾ ಪುರುಷ ಸ್ಪರ್ಧಿಗಳಿಗೂ ಕೂಡ ಕಿಚ್ಚ ಕೊಡುತ್ತಾರೆ. ಆದರೆ ಕಾರ್ತಿಕಿಗೆ ಕೊಟ್ಟಿದ್ದಂತಹ ಕಾಸ್ಟಿಮನ್ನ ಸಂಗೀತಕ್ಕದ್ದು ಅದನ್ನು ಹಾಕೊಂಡು ಕಾರ್ತಿಕ್ ಮೊದಲು ತೋರಿಸುತ್ತಾರೆ ಅದಾದ ನಂತರ ಮನೆಯವರಿಗೆಲ್ಲ ತೋರಿಸ್ತಾರೆ ಆಗಲೇ ಮನೆಯವರಿಗೆ ಗೊತ್ತಾಗುತ್ತೆ ಕಾರ್ತಿಕ್ ಹಾಗೂ ಸಂಗೀತ ನಡುವೆ ಇದ್ದಂತ ಮನಸ್ತಾಪ ಎಲ್ಲ ಸುಳ್ಳು ಕಾರ್ತಿಕ್ ಜೊತೆ ಸಂಗೀತ ಮಾತನಾಡಲ್ಲ ಮನಸ್ಸ ಪಾಪ ಇದೆ ಅನ್ನೋದನ್ನ ಡ್ರಾಮಾ ಅಂತ ಅದನ್ನ ವಿನಯ್ ಕೂಡ ಹೇಳ್ತಾರೆ ನಾನು ಅವತ್ತೇ ಹೇಳಿರಲಿಲ್ವಾ? ಯಾವ ಮನಸ್ತಾಪನು ಇಲ್ಲ ಏನು ಇಲ್ಲ ಅಂತ ನೋಡು ಈಗ ಎಲ್ಲವೂ ಪ್ಯಾಚ್ ಅಪ್ ಆಗೋಯ್ತು ಅಂತ ವಿನಯ್ ಅವರು ಹೇಳ್ತಾರೆ. ಏನು ಸಂಗೀತ ಕೂಡ ಕಾರ್ತಿಕ್ ಜೊತೆ ತುಂಬಾನೇ ಮಾತಾಡುಕೊಂಡು ಕಿಚನ್ ನಲ್ಲಿ ಬಹಳ ಸಲಗೆಯಿಂದ ಇದ್ದಿದ್ದು ನೆನ್ನೆಯ ಎಪಿಸೋಡ್ ನಲ್ಲಿ ಕೂಡ ಕಂಡು ಬಂದಿದೆ ಇವತ್ತಿನ ಎಪಿಸೋಡ್ ಅಲ್ಲೂ ಕೂಡ ಅವರು ಕಾರ್ತಿಕ್ ಜೊತೆಗೆ ಮಾತನಾಡಿರುವ ಹಲವಾರು ವಿಚಾರಗಳು ಕೂಡ ಹೊರಗಡೆ ಬಂದಿದೆ. ಅಂದ್ರೆ ಇವರ ಜಗಳ ಮನಸ್ತಾಪ ಎಲ್ಲವೂ ಕೂಡ ಮುಗಿದಿದ್ದು ಮತ್ತೆ ಜೋಡಿಹಕ್ಕಿಗಳು ಒಂದಾಗಿದ್ದಾರೆ ಅಂತ ಹೇಳಬಹುದು.

ಹೌದು ಕಾರ್ತಿಕ್ ಗೆ ಕೈ ಪೆಟ್ಟಾಗಿರುತ್ತೆ ಆ ಕೈಗೆ ಔಷದಿ ಹಚ್ಚೋದು ಕಾರ್ತಿಕ್ ನ ಕೇರ್ ಮಾಡೋದು ಎಲ್ಲವನ್ನ ಕೂಡ ಸಂಗೀತ ಇದೀಗ ಮಾಡ್ತಾ ಇದ್ದು ಎಲ್ಲೋ ಒಂದು ಕಡೆ ಮತ್ತೆ ಇವರಿಬ್ಬರೂ ಸರಿ ಹೋಗಿದ್ದಾರೆ ಅನ್ನುವಂತೆ ಮೇಲ್ನೋಟಕ್ಕೆ ಕಾಣ್ತಾ ಇದೆ. ಏನು ತನಿಷಾ ಜೊತೆಗೂ ಕೂಡ ಜಗಳವನ್ನು ಮಾಡಿಕೊಂಡಿರುವ ಸಂಗೀತ ಕಾರ್ತಿಕ್ ಜೊತೆ ಪ್ಯಾಚ್ ಆಫ್ ಮಾಡ್ಕೊಂಡಂಗೆ ತನಿಷ ಅವ್ರ್ ಜೊತೆ ಪಚಪ್ ಮಾಡಿಕೊಳ್ಳುತ್ತಾರೆ ಇಲ್ವಾ ಗೊತ್ತಿಲ್ಲ ಸದ್ಯಕ್ಕಂತೂ ಕಾರ್ತಿಕ್ ಜೊತೆಗೆ ಮೊದಲು ಹೇಗಿದ್ರು ಹಾಗೆ ಇದ್ದಾರೆ. ಇನ್ನೂ ಕಾರ್ತಿಕ್ ಕೂಡ ಏನು ಮಾಡಕ್ಕಾಗಲ್ಲ ವಿಧಿ ಇಲ್ಲ ಅನ್ನುವಂತೆ ಸಂಗೀತ ಜೊತೆ ಮಾತನಾಡಿಕೊಂಡು ಅವರು ಕೂಡ ಕಾಲ ಕಳೆದಿದ್ದಾರೆ. ಆದರೆ ಇವರಿಬ್ರು ಸರಿ ಹೋಗಕ್ಕೂ ಮುಂಚೆ ಇವ್ರಿಬ್ರ ನಡುವೆ ಸಾಕಷ್ಟು ಮಾತುಕತೆ ನಡೆಯುತ್ತೆ ಜಗಳವು ಆಗುತ್ತೆ ಅದಾದ ನಂತರ ಮತ್ತೆ ಒಂದಾಗಿದ್ದಾರೆ.

ಇದೀಗ ಸಂಗೀತ ಮತ್ತು ಕಾರ್ತಿಕ್ ಕಿಚನ್ ನಲ್ಲೂ ಕೂಡ ಸಾಕಷ್ಟು ಮಾತುಕತೆಯನ್ನು ನಡೆಸಿದ್ದು ಮತ್ತೆ ಜೋಡಿ ಹಕ್ಕಿಗಳು ಒಂದಾದ್ರು ಅಂತ ಅಭಿಮಾನಿಗಳು ಹೇಳ್ತಾ ಇದ್ದಾರೆ ಆದ್ರೆ ಎಲ್ಲೋ ಒಂದು ಕಡೆ ಇಬ್ಬರನ್ನ ಬೇರೆ ಮಾಡ್ತೀನಿ ಕಾರ್ತಿಕಗೆ ಉರುಸ್ತೀನಿ ಅಂತ ಹೇಳ್ತಿದ್ದಂತಹ ವಿನಯ್ ಇದೀಗ ಉರ್ಕೊಂಡಂತೆ ಕಾಣಿಸ್ತಾ ಇದೆ ಆದರೆ ಸಂಗೀತ ಎಷ್ಟು ದಿನದ ಮಟ್ಟಿಗೆ ಕಾರ್ತಿಕ್ ಜೊತೆ ಚೆನ್ನಾಗಿರ್ತಾರೋ ಮತ್ತೆ ಖ್ಯಾತೆ ತೆಗಿತಾರೋ ಗೊತ್ತಿಲ್ಲ. ಸದ್ಯ ಕಂತು ಇವರಿಬ್ಬರೂ ಒಂದಾಗಿರೋದು ಕನ್ಫರ್ಮ್.

ಇದನ್ನೂ ಓದಿ: UPI Payment ನಿಯಮದಲ್ಲಿ ಬದಲಾವಣೆ; 2000 ಕ್ಕೂ ಮೀರಿದ ಮೊದಲ ವಹಿವಾಟು 4 ಗಂಟೆ ವಿಳಂಬ ಸಾಧ್ಯತೆ..