ಜನ ನಾವು ಚೆನ್ನಾಗಿದ್ದರು ಕಾಲು ಎಳೆಯುತ್ತಾರೆ ನಾವು ಹೆಸಲಾಗೋದ್ರು ಮಾತಾಡ್ತಾರೆ ಅನ್ನೋದು ಕೆಲವೊಂದು ವಿಚಾರಗಳಲ್ಲಿ ಪದೇ ಪದೇ ನಿಜ ಆಗ್ತಾನೆ ಇರುತ್ತೆ. ಬಾರೋ ಸಂದರ್ಭದಲ್ಲಿ ಸನ್ನಿವೇಶಗಳನ್ನ ನಾವು ಅರ್ಥ ಮಾಡಿ ಅರಿತುಕೊಂಡು ಹೊಂದುಕೊಂಡು ಹೋದರು ಕೂಡ ಜನ ಸುಮ್ನೆ ಇರಲ್ಲ. ಬಿದ್ರು ನಗ್ತಾರೆ ಇದ್ರು ನಗ್ತಾರೆ ಆದ್ರೆ ಆದುಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಮುಂದೆ ಬರಬೇಕು ಅನ್ನೋದಕ್ಕೆ ಕಿರುತೆರೆ ಕಲಾವಿದ ಸಂಜು ಬಸಯ್ಯ ಹಾಗೂ ರಂಗಭೂಮಿ ಕಲಾವಿದೆ ಪಲ್ಲವಿ ಅವ್ರೆ ಸಾಕ್ಷಿ.
ಹೌದು ಜೋಡಿ ನಂ 1 ವೇದಿಕೆ ಮೇಲೆ ಸಂಜು ಬಸಯ್ಯ ಹಾಗೂ ಪಲ್ಲವಿ ಗಮನ ಸೆಳೆಯುತ್ತಿದ್ದಾರೆ. ಹೌದು ಈಗ ರಿಲೀಸ್ ಆಗಿರೋ ಪ್ರೋಮೊ ಎಲ್ಲರ ಗಮನ ಸೆಳೆಯುತ್ತಿದೆ. ಇನ್ನು ಸಿಂಗಪೂರ್‌ನಲ್ಲಿ ರಾಜಾ ಕುಳ್ಳ ಚಿತ್ರದ ಬೆಳ್ಳಿಯ ರಾಜಾ ಬಾರೋ.. ಕುಳ್ಳರ ರಾಜಾ ಬಾ ಹಾಡಿಗೆ ಹೆಜ್ಜೆ ಹಾಕಿದ್ದು, ವೇದಿಕೆಗೆ ಬಂದ ಸಮಯದಲ್ಲಿ ತಾವಿಬ್ಬರೂ ಪ್ರೀತಿಯಲ್ಲಿದ್ದಾಗ ಅನುಭವಿಸಿದ ನೋವನ್ನು ಈ ಅಪರೂಪದ ಜೋಡಿ ಹಂಚಿಕೊಂಡಿದೆ. ಹೌದು ಸಂಜು ಬಸಯ್ಯ(Sanju Basayya) ಹಾಗೂ ಪಲ್ಲವಿ ಜೋಡಿ ನೋಡಿ ಶುಭ ಕೋರಿದವರು ಕೆಲವೇ ಕೆಲವು ಮಂದಿ ಆದ್ರೆ ಉಳಿದವರು ಅವರ ಕಾಲೆಳೆದವರೇ ಹೆಚ್ಚು.
ಹೌದು ನಿಮ್ಮೆಲ್ಲರಿಗೂ ಗೊತ್ತಿರುವಂತೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಂಗಭೂಮಿ ಕಲಾವಿದೆ ಪಲ್ಲವಿ ಬಳ್ಳಾರಿ ಅವರನ್ನು 7 ವರ್ಷಗಳಿಂದ ಪ್ರೀತಿಸುತ್ತಿದ್ದ ಸಂಜು ಬಸಯ್ಯ ಆಪ್ತರ ಸಮ್ಮುಖದಲ್ಲಿ ಮದುವೆ ಆಗಿ ನಂತರ ಆ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಇತ್ತೀಚೆಗೆ ಹಂಚಿಕೊಂಡಿದ್ದರು. ಈಗ ಈ ಸ್ಪೆಷಲ್ ಜೋಡಿ, ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ತಮ್ಮನ್ನು ಆಡಿಕೊಂಡವರಿಗೆ ಸರಿಯಾದ ಉತ್ತರ ಕೊಟ್ಟಿದ್ದಾರೆ. ಇನ್ನು ಪಲ್ಲವಿ ಅವರ ತಾಯಿಯ ಆಸೆಯೂ ಸಹ ಪಲ್ಲವಿಯನ್ನು ದೊಡ್ಡ ವೇದಿಕೆಯಲ್ಲಿ ನೋಡುವುದಾಗಿತ್ತಂತೆ. ಇದನ್ನು ಸಂಜು ಅವರು ನನಗೆ ಗಿಫ್ಟ್ ಆಗಿ ನೀಡಿದ್ದಾರೆ, ನನ್ನ ಮೂಲಕ ನನ್ನ ತಾಯಿಯ ಆಸೆಯನ್ನ ಈಡೇರಿಸಿದ್ದಾರೆ ಎಂದು ಪಲ್ಲವಿ ಹೆಮ್ಮೆಯಿಂದ ಗಂಡನ ಬಗ್ಗೆ ಹೊಗಳಿದ್ದಾರೆ.
ಇದನ್ನೂ ಓದಿ: ವಿಜಯ್ ಸೂರ್ಯ ಮನೆಯಲ್ಲಿ ಲಕ್ಷ್ಮೀ ಪೂಜೆ; ಪೂಜೆಯಲ್ಲಿ ಭಾಗಿಯಾಯ್ತು ನಮ್ಮ ಲಚ್ಚಿ ಸೀರಿಯಲ್ ತಂಡ
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಬ್ರೇಕಪ್ ಮಾಡಿಕೊಳ್ಳಬೇಕು ಅಂದುಕೊಂಡವರು ಮದುವೆ ಆಗಿದ್ದೆ ವಿಶೇಷ
ಇನ್ನು ಇವರು ಪ್ರೀತಿ ಮಾಡುವಾಗ ಮುಂದೆ ಚೆನ್ನಾಗಿ ಇದ್ದವರೇ ಹಿಂದೆ ಬೇಡ ಎಂದು ಅಂದಿದ್ದರಂತೆ. ಕೊನೆಗೆ ಸಂಜು ಸಹ ಪಲ್ಲವಿಗೆ ನೀನು ನನ್ನಿಂದ ಯಾವುದೇ ಸುಖವನ್ನ ಪಡಯಲಾರೆ. ಎಲ್ಲರೂ ನಮ್ಮಿಬ್ಬರನ್ನ ನೋಡಿ ಆಡಿಕೊಳ್ಳುತ್ತಿದ್ದಾರೆ. ದಯವಿಟ್ಟು ನೀನು ನಿನ್ನ ಜೀವನವನ್ನು ರೂಪಿಸಿಕೋ ಎಂದಿದ್ದರಂತೆ. ಆದರೂ ಸಹ ಪಲ್ಲವಿ ಮೂರು ದಿನ ಬ್ರೇಕ್ ಅಪ್ ಮಾಡಿಕೊಂಡಿದ್ದರು. ಮತ್ತೆ ನನಗೆ ನೀನೇ ಬೇಕು ಎಂದು ಬಂದು ಮನೆಯವರೆಲ್ಲರನ್ನು ಒಪ್ಪಿಸಿ ಮದುವೆಯಾಗಿ ಈಗ ಸುಖವಾಗಿ ಬಾಳುತ್ತಾ ಇದ್ದಾರೆ. ಇನ್ನು ವೇದಿಕೆಯ ಮೇಲೆ ಸಂಜು ಬಸಯ್ಯ ತಮ್ಮ ಬೆನ್ನ ಹಿಂದೆ ಆಡಿಕೊಂಡವರ ಬಗ್ಗೆ ಹೇಳುತ್ತಾ ಕಣ್ಣೀರನ್ನು ಹಾಕಿದ್ದಾರೆ.
ಇನ್ನು ತಮ್ಮ ಲವ್‌ಸ್ಟೋರಿಯನ್ನು ವೇದಿಕೆಯ ಮೇಲೆ ಹೇಳಿಕೊಂಡ ಸಂಜು(Sanju Basayya) ಹಾಗೂ ಪಲ್ಲವಿ ಅಕ್ಷರಶ ಭಾವುಕರಾದ್ರೂ. ನಾವಿಬ್ಬರೂ ಪ್ರೀತಿ ಮಾಡುತ್ತಿದ್ದ ಸಂದರ್ಭದಲ್ಲಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ, ನಮ್ಮನ್ನ ನೋಡಿ ಆಡಿಕೊಂಡವರೇ ಹೆಚ್ಚು ಎಂದು ಪಲ್ಲವಿ ಕಣ್ಣೀರಾಕಿದ್ದಾರೆ. ಸಂಜು ಹೈಟ್ ಮತ್ತು ನನ್ನ ಹೈಟ್ ನೋಡಿ ಆಡಿಕೊಳ್ಳುತ್ತಾ ಇದ್ದರು. ಇವಳು ಅವನನ್ನ ದುಡ್ಡಿಗೋಸ್ಕರ ಮದುವೆಯಾಗುತ್ತಿದ್ದಾಳೆ ಎಂದೆಲ್ಲ ಅನ್ನುತ್ತಿದ್ದರು, ಎಂದು ಪಲ್ಲವಿ ಭಾವುಕರಾಗಿದ್ದಾರೆ. ಇನ್ನು ಇದೆ ಸಂದರ್ಭದಲ್ಲಿ ಸಂಜು ಬಸಯ್ಯ ತನ್ನ ಮಡದಿಯ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಎಷ್ಟೋ ಸಲ ನಾನೇ ನಿನ್ನ ಹೈಟ್‌ಗೆ ತಕ್ಕ ಹುಡುಗನನ್ನು ಆರಿಸಿಕೋ ಎಂದೆಲ್ಲ ಹೇಳಿದ್ದೆ. ಆದರೆ ಇವಳು ಕೇಳಲಿಲ್ಲ,
ಇನ್ನೂ ಕೆಲವರು ನಿಮ್ಮದು ಪ್ರೀತಿಯ ನಾಟಕ ಅಷ್ಟೇ ಅಂತ ಹೇಳಿದ್ದರು. ಇವಳು ನನಗೆ ಸಿಗುತ್ತಾಳೋ ಇಲ್ಲವೋ ಎನ್ನುವ ಭಯ ಇತ್ತು. ಹೇಗೋ ಇಬ್ಬರು ಮೆಚ್ಚಿ ಮದುವೆಯಾಗಿದ್ದೇವೆ ಎಂದು ಸಂಜು ಕಣ್ಣೀರು ಹಾಕಿದ್ದಾರೆ. ಅಲ್ದೇ ಇಂದು ನಾನೇನಾದರೂ ಸಾಧನೆ ಮಾಡಿದ್ದೇನೆ ಎಂದರೆ ಅದಕ್ಕೆ ನನ್ನ ತಂದೆ ಹಾಗೂ ಪಲ್ಲವಿಯೇ ಕಾರಣ ಎಂದು ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡರು. ಒಟ್ಟಿನಲ್ಲಿ ಆಡಿ ಕೊಳ್ಳುವವರು ಬೆನ್ನ ಹಿಂದೆ ಮಾತ್ರ ಇರ್ತಾರೆ ಬೆಳೆಯುವವರು ಮುಂದೆ ಸಾಗ್ತಾನೆ ಇರ್ತಾರೆ ಅನ್ನೋದಕ್ಕೆ ಸಂಜು ಬಸಯ್ಯ ಹಾಗೂ ಪಲ್ಲವಿ ಜೋಡಿಯೇ ಪ್ರತ್ಯಕ್ಷ ಉದಾಹರಣೆ.
ಇದನ್ನೂ ಓದಿ: ಕಷ್ಟದಲ್ಲಿರುವವರಿಗೆ ಸದಾ ಮಿಡಿಯುತ್ತೆ ದಾಸನ ಹೃದಯ; ಕಿಡ್ನಿ ವೈಫಲ್ಯದಿಂದ ಬಳಳುತ್ತಿದ್ದ ಅಭಿಮಾನಿ ಕೈ ಹಿಡಿದ ಡಿ. ಬಾಸ್
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram