ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ ಮತ್ತು ಪಲ್ಲವಿ ಮದುವೆ ವೈಬ್ಸ್; ಅದ್ದೂರಿಯಾಗಿ ನಡೀತು ಸಂಜು ವೇಡ್ಸ್ ಪಲ್ಲವಿ ಮದುವೆ

ಸಂಜು ಬಸಯ್ಯ, ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ರಾಜ್ಯದ ಜನತೆಗೆ ಪರಿಚಯವಾದ ಪ್ರತಿಭೆ. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಎಂಬ ಹಾಸ್ಯ ರಿಯಾಲಿಟಿ ಕಾರ್ಯಕ್ರಮದ ಮೂಲಕ ಕರ್ನಾಟಕದ ಜನರಿಗೆ ಪರಿಚಯಗೊಂಡಂತಹ ಹಾಸ್ಯ ಕಲಾವಿದ ಸಂಜು ಬಸಯ್ಯ, ಕಲಾವಿದರಿಗೆ ಮುಖ್ಯವಾದದ್ದು ಯಾವುದೇ ರೀತಿಯ ಬಾಹ್ಯಕಾರ, ಸೌಂದರ್ಯ ಅಲ್ಲ ಅನ್ನೋದನ್ನು ತೋರಿಸಿಕೊಟ್ಟಂತಹ ನಟ. ತಮ್ಮ ಹಾಸ್ಯ ಪ್ರಜ್ಞೆಯ ಮೂಲಕವೇ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಜನಪ್ರಿಯತೆ ಪಡೆದುಕೊಂಡಿರುವ ಇವರು ಇತ್ತೀಚೆಗೆ ಮದುವೆ ವಿಚಾರದಿಂದಲೂ ಸುದ್ದಿಯಲ್ಲಿದ್ದರು. ಹೌದು ತಮ್ಮ ಬಹುಕಾಲದ ಗೆಳತಿ ಪಲ್ಲವಿ ಬಳ್ಳಾರಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅದು ಕೂಡ ಕಾನೂನಿನ ಪ್ರಕಾರ. ಇನ್ನು ತಾವು 7 ವರ್ಷಗಳಿಂದ ಪ್ರೀತಿಸುತ್ತಿದ್ದ ಪಲ್ಲವಿ ಬಳ್ಳಾರಿ ಎಂಬ ಕಲಾವಿದೆಯೊಂದಿಗೆ ಸಂಜು ಬಸಯ್ಯ ಇತ್ತೀಚೆಗೆ ಮದುವೆ ಆಗಿದ್ದರು. ಹೌದು ಸಂಜು ಬಸಯ್ಯ ಯಾರಿಗೂ ಹೇಳದಂತೆ ತಮ್ಮ ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಕೆಲವು ದಿನಗಳ ಹಿಂದಷ್ಟೇ ಮದುವೆ ಆಗಿದ್ದರು.

WhatsApp Group Join Now
Telegram Group Join Now

ಈ ವಿಚಾರವನ್ನು ಅವರು ಸೋಷಿಯಲ್‌ ಮೀಡಿಯಾ ಮೂಲಕ ಅಧಿಕೃತವಾಗಿ ತಿಳಿಸಿದ್ದರು. ಅಲ್ದೇ ಜುಲೈ 30 ರಂದು ಹುಟ್ಟುಹಬ್ಬದ ಜೊತೆ ತಮ್ಮ ಮದುವೆ ಆರತಕ್ಷೆಯನ್ನು ಆಚರಿಸಿಕೊಳ್ಳುತ್ತಿರುವುದಾಗಿ ಸಂಜು ಬಸಯ್ಯ ಹಾಗೂ ಪತ್ನಿ ಪಲ್ಲವಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಅಭಿಮಾನಿಗಳನ್ನು ತಮ್ಮ ಬರ್ತ್‌ಡೇ, ರಿಸೆಪ್ಷನ್‌ ಪಾರ್ಟಿಗೆ ಆಹ್ವಾನಿಸಿದ್ದರು. ತಮ್ಮ ಮದುವೆ ಆರತಕ್ಷತೆಗೆ ಸೆಲೆಬ್ರಿಟಿಗಳನ್ನು ಕೂಡಾ ಸಂಜು ಬಸಯ್ಯ ದಂಪತಿ ಆಹ್ವಾನಿಸಿದ್ದರು. ಶಿವಣ್ಣ ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ ಅವರನ್ನು ಮದುವೆಗೆ ಆಹ್ವಾನಿಸಿದ್ದ ಸಂಜು ಬಸಯ್ಯ ಹಾಗೂ ಪಲ್ಲವಿ ಜುಲೈ 30, ಭಾನುವಾರ ಪತಿ ಸಂಜು ಬಸಯ್ಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಪಲ್ಲವಿ ಬಳ್ಳಾರಿ.

ಇನ್ನು ಮೂಲತಃ ಬೆಳಗಾವಿ ಜಿಲ್ಲೆಯ ಮುರಗೊಂಡದವರಾದ ಸಂಜು ಬಸಯ್ಯ ಅವರಿಗೆ ಕಲೆಯ ಮೇಲೆ ಚಿಕ್ಕಂದಿನಿಂದಲೂ ಅಪಾರ ಆಸಕ್ತಿ ಇದ್ದ ಕಾರಣ ಹಲವಾರು ನಾಟಕಗಳು ಹಾಗೂ ಕಿರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಈ ಮೂಲಕ ಪ್ರಖ್ಯಾತಿ ಪಡೆದು ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋಗೂ ಪಾದಾರ್ಪಣೆ ಮಾಡಿದರು. ಈ ಮಧ್ಯೆ ಪಲ್ಲವಿ ಬಳ್ಳಾರಿ ಅವರೊಂದಿಗಿನ ಪರಿಚಯ ಸ್ನೇಹಕ್ಕೆ ದಾರಿ ಮಾಡಿಕೊಡುತ್ತದೆ.

ಇದನ್ನೂ ಓದಿ: ಶರತ್ ಮಾಬೈಲ್ ನಲ್ಲಿ ಸಿಕ್ತು ಸಾವಿಗೂ ಮುನ್ನ ತೆಗೆದಿದ್ದ ವಿಡಿಯೋ!!

ಸಖತಾಗಿ ಮಿಂಚಿದ ಸಂಜು ಮತ್ತು ಪಲ್ಲವಿ

ಹೌದು ಪಲ್ಲವಿ ಬಳ್ಳಾರಿ ಕೂಡಾ ನಟಿ. ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ, ಜೊತೆಗೆ ಸಂಜು ಬಸಯ್ಯ ಜೊತೆ ಅನೇಕ ನಾಟಕಗಳಲ್ಲಿ ಕೂಡಾ ಜೊತೆಯಾಗಿ ನಟಿಸಿದ್ದಾರೆ. ಇಲ್ಲಿ ಸಿಕ್ಕ ಸಲುಗೆ ಸ್ನೇಹವಾಗಿ ಸ್ನೇಹ ಪ್ರೀತಿಗೆ ತಿರುಗಿ ಕಾನೂನು ಬದ್ಧವಾಗಿ ಕಳೆದ ತಿಂಗಳಷ್ಟೇ ರಿಜಿಸ್ಟರ್ ಮದುವೆ ಆಗಿರೋದಾಗಿ ಅಧಿಕೃತವಾಗಿ ರಿಜಿಸ್ಟರ್ ಮ್ಯಾರೇಜ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು. ಅಲ್ದೇ ಸೋಷಿಯಲ್ ಮೀಡಿಯಾದಲ್ಲಿ ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡ ಸಂಜು ಬಸಯ್ಯ, ‘ಕನ್ನಡದ ಕಲಾಭಿಮಾನಿಗಳಿಗೆ ನಿಮ್ಮ ಪ್ರೀತಿಯ ಸಂಜು ಬಸಯ್ಯ ಮತ್ತು ಪಲ್ಲವಿ ಬಳ್ಳಾರಿ ಮಾಡುವ ಅನಂತ ಕೋಟಿ ನಮಸ್ಕಾರಗಳು ಅಂತ ಶುರು ಮಾಡಿ. ತಮ್ಮ ಲವ್ ಸ್ಟೋರಿಯನ್ನೂ ಕೂಡ ಬಹಿರಂಗಗೊಳಿಸಿದ್ದರು. ಅಲ್ದೇ ಮದುವೆ ಅರತಕ್ಷತೆ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರನ್ನು ಕೂಡ ಆಹ್ವಾನಿಸಿದ್ರು, ಸಣ್ಣ ಪುಟ್ಟ ಕಲಾವಿದರು, ಅಭಿಮಾನಿಗಳಿಂದ ಹಿಡಿದು ದೊಡ್ಡ ದೊಡ್ಡ ಸ್ಟಾರ್ ಹೀರೋಗಳ ವರೆಗೂ ಕೂಡ ಎಲ್ಲರನ್ನು ತಮ್ಮ ಅರತಕ್ಷತೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ರು.

ಇನ್ನು ತಮ್ಮ ಹುಟ್ಟಿದ ಹಬ್ಬದ ದಿನವೇ ತಮ್ಮ ಮದುವೆ ಅರತಕ್ಷತೆ ಇರೋದಾಗಿ ಸಂಜು ಬಸಯ್ಯ ಮೊದಲೇ ತಿಳಿಸಿದ್ರು, ಅಲ್ದೇ ಎರಡು ಕಾರ್ಯಕ್ರಮಕ್ಕು ಎಲ್ಲರು ಬರಬೇಕು ಅಂತ ಹೇಳಿದ್ರು. ಇನ್ನು ನಿನ್ನೆ ಬೆಳಗ್ಗೆ ಮನೆಯಲ್ಲಿ ಬರ್ತ್‌ಡೇ ಆಚರಣೆ ಮಾಡಿದ ನಂತರ ಸಂಜೆ ಆರತಕ್ಷತೆಯಲ್ಲಿ ಮಿಂಚಿದ ಈ ಜೋಡಿ ಮಿಂಚಿದ್ದಾರೆ. ಹೌದು ಸಂಜು ಬಸಯ್ಯ, ಪಲ್ಲವಿ ಇಬ್ಬರು ಕೂಡ ಅರತಕ್ಷತೆ ಕಾರ್ಯಕ್ರಮದಲ್ಲಿ ಸಖತ್ತಾಗಿ ಅಷ್ಟೆ ಕ್ಯೂಟ್ ಆಗಿ ರೆಡಿ ಆಗಿದ್ರು. ಇನ್ನು ಇಬ್ಬರ ಆತ್ಮೀಯರು ಆರತಕ್ಷತೆಗೆ ಆಗಮಿಸಿ ಹೊಸ ಜೋಡಿಗೆ ಗಿಫ್ಟ್‌ ನೀಡಿ ಹಾರೈಸಿದರು. ಅಲ್ದೇ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಸಂಜು ಬಸಯ್ಯ ಸ್ನೇಹಿತರು, ಅನೇಕ ಸಿನಿ ಸೆಲೆಬ್ರಿಟಿಗಳು ಕೂಡಾ ಆರತಕ್ಷತೆಗೆ ಆಗಮಿಸಿ ಮುದ್ದು ಜೋಡಿಗೆ ಶುಭ ಹಾರೈಸಿದರು.

ಇನ್ನು ಬೈಲಹೊಂಗಲದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಸಂಜು ಬಸಯ್ಯ ಹಾಗೂ ಪಲ್ಲವಿ ಬಳ್ಳಾರಿ ಆರತಕ್ಷತೆಯನ್ನು ಏರ್ಪಡಿಸಲಾಗಿತ್ತು. ಮೂಲತ: ಬೆಳಗಾವಿ ಜಿಲ್ಲೆಯ ಮುರುಗೋಡು ಗ್ರಾಮದವರಾದ ಸಂಜು ಬಸಯ್ಯ. ನಾಟಕ ಕಂಪನಿಗಳಲ್ಲಿ ಗುರುತಿಸಿಕೊಂಡಿದ್ದರು, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಸಂಜು ಬಸಯ್ಯ ರಾಜ್ಯದ ಜನರಿಗೆ ಪರಿಚಯವಾಗಿದ್ದರು. ಸದ್ಯ ಇದೀಗ ಮದುವೆ, ಜೀವನ ಇದ್ಯಾವುದಕ್ಕೂ ಎದುರುಕೊಳ್ಳೋದು ಬೇಡ ಅನ್ನೋದನ್ನ ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ. ಹೌದು ಮದುವೆ ಆಗಲು ಆಸ್ತಿ, ಸೌಂದರ್ಯ, ಜಾತಿಯನ್ನು ನೋಡುವ ಜನರ ನಡುವೆ ಪ್ರೀತಿಗೆ ಇದ್ಯಾವುದೂ ಅಡ್ಡಿ ಆಗುವುದಿಲ್ಲ ಅನ್ನೋದನ್ನು ಸಂಜು ಬಸಯ್ಯ ಹಾಗೂ ಪಲ್ಲವಿ ಬಳ್ಳಾರಿ ಸಾಧಿಸಿ ತೋರಿಸಿದ್ದಾರೆ. ನೀವು ಕೂಡ ಈ ಜೋಡಿಯಾಗಿ ಶುಭಾ ಆರೈಸಿ ಕಮೆಂಟ್ಸ್ ಮಾಡ್ತೀನಿ.

ಇದನ್ನೂ ಓದಿ: ವಾರದ ಬಳಿಕ ಪತ್ತೆಯಾಯ್ತು ಯುವಕನ ಶವ; ನಿಜಕ್ಕೂ ರೀಲ್ಸ್ ಮಾಡಲು ಹೋಗಿ ಕಾಲು ಜಾರಿ ಬಿದ್ದಿದ್ದ? ಅಥವಾ ಆಗಿದ್ದು ಬೇರೆನ??

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram