ಶುಭಮನ್ ಗಿಲ್ ಸಿಕ್ಸರ್ ಹೊಡೆತಕ್ಕೆ ಚಪ್ಪಾಳೆ ತಟ್ಟಿ ಕುಣಿದ ಸಚಿನ್ ಮಗಳು ಸಾರಾ ತೆಂಡೂಲ್ಕರ್..

ಭಾರತ ಮತ್ತು ಬಾಂಗ್ಲಾದೇಶ ಪಂದ್ಯ ಈಗಷ್ಟೇ ಮುಗಿದಿದ್ದು, ಇಂಡಿಯನ್ ಬೌಲಿಂಗ್ ನಲ್ಲಿ ಅತ್ಯದ್ಭುತ ಪ್ರದರ್ಶನವನ್ನು ಪ್ರದರ್ಶಿಸಿದೆ. ಹಾಗೆ ಬ್ಯಾಟಿಂಗ್ಗೂ ಕೂಡ ನಾವೇ ಸೈ ಅಂತ ತೋರಿಸಿಕೊಟ್ಟಿದೆ. ಟೀಮ್ ಇಂಡಿಯಾ ಅದ್ಭುತ ಪ್ರದರ್ಶನದಿಂದ ಬಾಂಗ್ಲಾ ವನ್ನು ಸುಲಭವಾಗಿ ಹಿಂದಿಕ್ಕಲು ಸಹಾಯವಾಯಿತು. ಟೀಮ್ ಇಂಡಿಯಾ ಅಭಿಮಾನಿಗಳು ಹಲವರು ಈ ಪ್ರದರ್ಶನವನ್ನು ಟಿವಿಯಲ್ಲಿ ವೀಕ್ಷಿಸಿದರೆ ಇನ್ನೂ ಹಲವರು ಮೈದಾನದಲ್ಲಿ ನೆರೆದಿದ್ದರು. ಟೀಮ್ ಇಂಡಿಯಾ ಆಟಕ್ಕೆ ಮನಸೋತು ಎಲ್ಲರು ಕೇಕೆ ಹಾಕಿ ಕುಣಿದಿದ್ದರು.

WhatsApp Group Join Now
Telegram Group Join Now

ಟೀಮ್ ಇಂಡಿಯಾ ಆಟಗಾರ ಶುಭಮನ್ ಗಿಲ್(Shubman Gill) ಮತ್ತು ರೋಹಿತ್ ಶರ್ಮ ಇವರು ಆರಂಭಿಕ ಬ್ಯಾಟ್ಸ್ಮನ್ ಗಳಾಗಿ ಮಿಂಚಿದ್ದರು. ಇವರ ಬ್ಯಾಟಿಂಗ್ ನೋಡಿ ನೆಟ್ಟಿಗರು ಮನ ಸೋತಿದ್ದರು. ಹಾಗೆ ಎಲ್ಲರ ದೃಷ್ಟಿ ಓರ್ವ ವಿಶೇಷವಾದ ವ್ಯಕ್ತಿಯ ಮೇಲೆ ಬಿದ್ದಿತ್ತು. ವ್ಯಕ್ತಿ ಬೇರೆ ಯಾರು ಅಲ್ಲ ಸಚಿನ್ ತೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್. ಸಾರಾ ಅವರು ಗಿಲ್ ಆಟಕ್ಕೆ ಚಪ್ಪಾಳೆ ತಟ್ಟಿ ಕೇಕೆ ಹಾಕಿ ಕುಣಿದಿದ್ದರು. ಈ ಕ್ಷಣ ಎಲ್ಲರ ಗಮನವನ್ನು ಸೆಳೆದಿತ್ತು. ಅದಷ್ಟೇ ಅಲ್ಲ ಕೆಲವು ದಿನಗಳ ಹಿಂದೆ ಗಿಲ್ ಮತ್ತು ಸಾರಾ ತೆಂಡುಲ್ಕರ್ ಇಬ್ಬರ ಹೆಸರು ಕೂಡ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಆದ ಕಾರಣ ಎಲ್ಲರ ನೋಟವು ಕೂಡ ಇವರಿಬ್ಬರ ಮೇಲಿತ್ತು.

ಗಿಲ್ ಅವರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುವುದರ ಮೂಲಕ ಭಾರತ ಮತ್ತು ಬಾಂಗ್ಲಾದೇಶ ಪಂದ್ಯದಲ್ಲಿ ಅರ್ಧ ಶತಕ ವನ್ನು ಗಿಟ್ಟಿಸಿಕೊಂಡಿದ್ದಾರೆ. 55 ಬಾಲ್ ಗೆ ಐದು ಬೌಂಡ್ರಿ ಹಾಗೂ ಎರಡು ಸಿಕ್ಸ್ ಗಳನ್ನ ಬಾರಿಸಿದ ಇವರು ಜೊತೆಗೆ 53 ರನ್ ಗಳನ್ನ ಗಳಿಸಿಕೊಟ್ಟಿದ್ದಾರೆ. ಎಲ್ಲರ ಕಣ್ಣು ಕೂಡ ಗಿಲ್ ಬ್ಯಾಟಿಂಗ್ ಮೇಲಿದ್ದರೆ ಕ್ಯಾಮರಾ ಕಣ್ಣು ಸಾರಾ ತೆಂಡೂಲ್ಕರ್ ನ ಸಂಭ್ರಮದ ಕ್ಷಣಗಳನ್ನು ಸೆರೆ ಹಿಡಿಯುತ್ತಿತ್ತು.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಶುಭಮನ್ ಗಿಲ್ ಮತ್ತು ಸಾರ ತೆಂಡುಲ್ಕರ್ ಅವರ ಲವ್ ಸ್ಟೋರಿ

ಗಿಲ್ ಆಟಕ್ಕೆ ಸಾರಾ ಸಂಭ್ರಮಿಸಿದ ಕ್ಷಣ ಗಳು ಕ್ಯಾಮೆರಾ ದಲ್ಲಿ ಸೆರೆಯಾಗಿ, ವಿಡಿಯೋದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲಾಗುತ್ತಿದೆ. ಶುಭಮನ್ ಗಿಲ್(Shubman Gill) ಹಾಗೂ ಸಾರಾ ತೆಂಡುಲ್ಕರ್ ಇವರಿಬ್ಬರ ನಡುವೆ ಇದಾಗಲೇ ಪ್ರೇಮಾಂಕುರವಾಗಿದ್ದು, ಹಲವಾರು ವರ್ಷಗಳಿಂದ ಇವರಿಬ್ಬರ ಪ್ರೀತಿ ನಡೆಯುತ್ತಿದೆ ಎಂದು ಸುದ್ದಿ ಗಳು ಹರಡುತ್ತಿವೆ. ಇದಕ್ಕೆ ಇನ್ನು ಕೂಡ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಆದರೂ ಇವರಿಬ್ಬರ ಹೆಸರು ತಳುಕು ಹಾಕಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗಂತೂ ಸಕ್ಕತ್ ವೈರಲ್ ಆಗುತ್ತಿವೆ. 

ಇದನ್ನೂ ಓದಿ: ಗೃಹಲಕ್ಷ್ಮಿ 2ನೇ ಕಂತಿನ ಹಣ ಯಾರಿಗೆಲ್ಲ ಬಂದಿದೆ ಗೊತ್ತಾ? ಹಣ ಬಿಡುಗಡೆ ಆದ್ರೂ ಖಾತೆಗೆ ಯಾಕೆ ಬರುತ್ತಿಲ್ಲ ಗೊತ್ತಾ?

ಇದನ್ನೂ ಓದಿ: ಪುತ್ರಿಗೆ ಗಂಡನಿಂದ ಕಿರುಕುಳ ಹಿನ್ನೆಲೆ ತಂದೆ ಮಾಡಿದ್ದೇನು? ಮೆರವಣಿಗೆ ಮಾಡಿ ಪಟಾಕಿ ಸಿಡಿಸಿ ಮಗಳನ್ನ ಕರೆತಂದ ಅಪ್ಪ

ಇದನ್ನೂ ಓದಿ: ಮ್ಯೂಚುಯಲ್ ಫಂಡ್ ಬಗ್ಗೆ ಸಂಪೂರ್ಣ ಮಾಹಿತಿ ಯನ್ನು ತಿಳಿದುಕೊಳ್ಳಬೇಕಾ? ಇದು ಹೇಗೆ ಕೆಲಸ ಮಾಡುತ್ತೆ ಇದರಿಂದ ಆಗುವ ಲಾಭಗಳೇನು ಎನ್ನುವ ಸಂಪೂರ್ಣ ಮಾಹಿತಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram