Saregamapa kannada winners: ಸರಿಗಮಪ ಸೀಸನ್ 1 ರಿಂದ 19 ರವರೆಗೂ ಯಾರೆಲ್ಲಾ ವಿನ್ನರ್ ಗಳು ಆಗಿದ್ರು ಗೋತ್ತ? ಈಗ ಅವರೆಲ್ಲ ಹೇಗಿದ್ದಾರೆ?

Saregamapa kannada winners: ಸಂಗೀತ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ ಶೋ ಅಂದರೆ ಅದು ಸರಿಗಮಪ ಎನ್ನಬಹುದು ಈ ಶೋ ಈಗಾಗಲೇ 19 ಸೀಸನ್ ಗಳನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಿದೆ ಮೊದಲ ಸೀಸನ್ ಇಂದಲೇ ಯಶಸ್ವಿಯಾಗಿ ಮೂಡಿ ಬರುತ್ತಿದ್ದ ಈ ಶೋ ಮುಂದೆ ಹೋಗುತ್ತಾ ಇನ್ನೂ ಯಶಸ್ವಿಯಾಗಿ 19 ಸೀಸನ್ ಗಳನ್ನು ಕೂಡ ಈಗಾಗಲೇ ಮುಗಿಸಿದ್ದು. ಕರ್ನಾಟಕದಲ್ಲಿ ನಂಬರ್ ಒನ್ ಸಂಗೀತ ಕಾರ್ಯಕ್ರಮವಾಗಿದೆ. ಈ ಶೋನಲ್ಲಿ ಪಾಲ್ಗೊಂಡ ಹಲವರು ಪ್ರತಿಭೆಗಳು ಇಂದು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಶೋ ಶುರುವಾದ ದಿನಗಳಿಂದ ಇಲ್ಲಿಯವರೆಗೂ ಕೂಡ ಕರ್ನಾಟಕದ ಜನರ ಮನಸ್ಸಿನಲ್ಲಿ ಇದೆ.

WhatsApp Group Join Now
Telegram Group Join Now
Image Credit : Zee Kannada

ಈ ಶೋ ಇಷ್ಟೊಂದು ಜನಪ್ರಿಯತೆ ಪಡೆಯುವುದಕ್ಕೆ ಹಲವು ಕಾರಣಗಳಿದ್ದಾವೆ ಅದರಲ್ಲಿ ಒಂದು ಕಡೆ ಸ್ಪರ್ಧಿಗಳಾದರೆ ಇನ್ನೊಂದು ಕಡೆ ಕಾರ್ಯಕ್ರಮ ನಡೆಸಿಕೊಡುವ ನಿರೂಪಕಿ ಅನುಶ್ರೀ ಹಾಗೂ ತೀರ್ಪುಗಾರರಾದ ಅರ್ಜುನ್ ಜನ್ಯ, ವಿಜಯ ಪ್ರಕಾಶ್ ಮತ್ತು ಮಹಾ ಗುರುಗಳಾದ ಹಂಸಲೇಖ ರವರು ಹಾಗೂ ಇಂದಿನ ಸೀಸನ್ ಗಳಲ್ಲಿ ತೀರ್ಪುಗಾರರಾದ ರಾಜೇಶ್ ಕೃಷ್ಣನ್ ಅವರು ಮತ್ತು ಈ ಕಾರ್ಯಕ್ರಮ ಯಶಸ್ವಿಯಾಗಲು ಇವರ ಜೊತೆ ಸರಿಗಮಪ ಸೀಸನ್ ಒಂದರಿಂದ ಸಾಕಷ್ಟು ನಿರೂಪಕರು ಮತ್ತು ತೀರ್ಪುಗಾರರು ಈ ಶೋನಲ್ಲಿ ಪಾಲ್ಗೊಂಡಿದ್ದರು. ಇನ್ನು ಈ ಶೋನಲ್ಲಿ ನಿರೂಪಕರಾಗಿ ಅರ್ಚನ ಉಡುಪ, ಎಂ.ಡಿ ಪಲ್ಲವಿ, ನಕುಲ್, ವಿನಾಯಕ್ ಜೋಶಿ, ವರ್ಷ ಇವರೆಲ್ಲರೂ 2012 ವರೆಗೂ ನಿರೂಪಕರಾಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಇನ್ನೂ ಉಳಿದ ಸೀಸನ್ ನಲ್ಲಿ ಅನುಶ್ರೀ ಅವರೇ ನಿರೂಪಕಿ ಕೆಲಸವನ್ನು ವಹಿಸಿಕೊಂಡಿದ್ದಾರೆ. ಒಂದರಿಂದ 19ನೇ ಸೀಸನ್ ವರೆಗೂ ಯಾರು ಯಾರು ವಿನ್ನರ್ ಆಗಿದ್ದಾರೆ ನೋಡೋಣ ಬನ್ನಿ ಮುಂದೆ ಓದಿ.

ಸೀಸನ್ 1 ರಿಂದ 19 ವರೆಗಿನ ವಿನ್ನರ್ ಗಳ ಪಟ್ಟಿ

  • 2006ರಲ್ಲಿ ನಡೆದ ಸರಿಗಮಪ ಸೀಸನ್ 1ರಲ್ಲಿ ಚಿನ್ಮಯ್ ಅವರು ವಿನ್ನರ್ ಆಗಿದ್ದರು.
  • ಸರಿಗಮಪ ಸೀಸನ್ 2 ರಲ್ಲಿ ಸುಪ್ರಿಯ ರಾಮ್ ಅವರು ವಿನ್ನರ್ ಆಗಿದ್ದರು.
  • ಸರಿಗಮಪ ಸೀಸನ್ 3 ರಲ್ಲಿ ಓಹಿಲೇಶ್ವರಿ ಅವರು ವಿನ್ನರ್ ಆಗಿದ್ದರು.
  • ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 4ರಲ್ಲಿ ಮನೋಜವಂ ಆತ್ರೇಯ ಅವರು ವಿನ್ನರ್ ಆಗಿದ್ದರು.
  • ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 5ರಲ್ಲಿ ಅಶ್ವಿನ್ ಶರ್ಮ ಅವರು ವಿನ್ನರ್ ಆಗಿದ್ದರು.
  • ಸರಿಗಮಪ ಸವಾಲು ಸೀಸನ್ 6 ರಲ್ಲಿ ನಕುಲ್ ಅಭ್ಯಂಕರ್ ಅವರು ವಿನ್ನರ್ ಆಗಿದ್ದರು.
  • ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 7ರಲ್ಲಿ ಯೋಗೇಂದ್ರ ಎಚ್ ಅವರು ವಿನ್ನರ್ ಆಗಿದ್ದರು
  • ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 8ರಲ್ಲಿ ಅಖಿಲ ಅವರು ವಿನ್ನರ್ ಆಗಿದ್ದರು.
  • ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 9ರಲ್ಲಿ ಗಗನ್ ಅವರು ವಿನ್ನರ್ ಆಗಿದ್ದರು.
  • ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 10ರಲ್ಲಿ ಸುಪ್ರಿಯ ಜೋಶಿ ಅವರು ವಿನ್ನರ್ ಆಗಿದ್ದರು.
  • ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 11 ರಲ್ಲಿಚನ್ನಪ್ಪ ಹುದ್ದಾರ ಅವರು ವಿನ್ನರ್ ಆಗಿದ್ದರು.
  • ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 12 ರಲ್ಲಿ ಅನ್ವಿತಾ ಅವರು ವಿನ್ನರ್ ಆಗಿದ್ದರು.
  • ಸರಿಗಮಪ ಸೀಸನ್ 13 ರಲ್ಲಿ ಸುನಿಲ್ ಅವರು ವಿನ್ನರ್ ಆಗಿದ್ದರು.
  • ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್14ರಲ್ಲಿ ವಿಶ್ವ ಪ್ರಸಾದ್ ಅವರು ವಿನ್ನರ್ ಆಗಿದ್ದರು.
  • ಸರಿಗಮಪ ಸೀಸನ್ 15 ರಲ್ಲಿ ಕೀರ್ತನ್ ಹೊಳ್ಳ ಅವರು ವಿನ್ನರ್ ಆಗಿದ್ದರು.
  • ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 16ರಲ್ಲಿ ಓಂಕಾರ್ ಪತ್ತಾರ್ ಅವರು ವಿನ್ನರ್ ಆಗಿದ್ದರು.
  • ಸರಿಗಮಪ ಸೀಸನ್ 17ರಲ್ಲಿ ಶ್ರೀನಿಧಿ ಶಾಸ್ತ್ರಿ ಅವರು ವಿನ್ನರ್ ಆಗಿದ್ದರು.
  • ಸರಿಗಮಪ ಚಾಂಪಿಯನ್ ಶಿಪ್ ಸೀಸನ್ 18ರಲ್ಲಿ ನಂದಿತಾ ಮತ್ತು ಅವರ ತಂಡ ವಿನ್ನರ್ ಆಗಿದ್ದರು.
  • ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19ರಲ್ಲಿ ಪ್ರಗತಿ ಬಿ ಬಡಿಗೀರ್ ಅವರು ವಿನ್ನರ್ ಆಗಿದ್ದರು.

ಇದನ್ನೂ ಓದಿ: ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ರ ವಿನ್ನರ್ ಮತ್ತು ರನ್ನರ್ ಗೆ ಸಿಕ್ಕ ಬಹುಮಾನ ಹಾಗೂ ಹಣ ಎಷ್ಟು ಗೊತ್ತಾ?

ಇದನ್ನೂ ಓದಿ: ಹಿರಿಯ ನಟಿ ಮಾಧವಿ ಅವರು ಈಗ ಹೇಗಿದ್ದಾರೆ ಮತ್ತು ಎಲ್ಲಿದ್ದಾರೆ? ಅವರ ಪತಿ ಮತ್ತು ಮಕ್ಕಳು ಹೇಗಿದ್ದಾರೆ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram