Saregamapa season 19 kannada winner: ಸರಿಗಮಪ ಸೀಸನ್ 19 ವಿನ್ನರ್ ಮತ್ತು ರನ್ನರ್ ಗೆ ಸಿಕ್ಕ ಬಹುಮಾನ ಹಾಗೂ ಹಣ ಎಷ್ಟು ಗೊತ್ತಾ?

Saregamapa season 19 kannada winner: ಸರಿಗಮಪ ಸೀಸನ್ 19 ಗ್ರಾಂಡ್ ಫಿನಾಲೆ ಎಪಿಸೋಡ್ ಇದೇ ಶನಿವಾರ ಮತ್ತು ಭಾನುವಾರ ದಂದು ಪ್ರಸಾರವಾಯಿತ್ತು. ಕನ್ನಡದ ಜನಪ್ರಿಯ Singing ಶೋ ಎಂದರೆ ಅದು ಜೀ ಕನ್ನಡದ ಸರಿಗಮಪ ಶೋ, ಈ ಶೋ ಈಗಾಗಲೇ ಸಾಕಷ್ಟು ಸೀಸನ್ ಗಳನ್ನು ಮುಗಿಸಿದ್ದು ಕಳೆದ ವರ್ಷ ಅಂದರೆ 2022 ಅಕ್ಟೋಬರ್ ನಲ್ಲಿ ಸರಿಗಮಪ ಲಿಟಲ್ ಚಾಂಪ್ ಸೀಸನ್ 19 ಶುರು ಮಾಡಿದ್ದು ಕರ್ನಾಟಕದ ಮೂಲೆ ಮೂಲೆ ಗಳಿಂದ ಪ್ರತಿಭೆಗಳನ್ನು ಹುಡುಕಿ ಒಳ್ಳೆ ಒಳ್ಳೆಯ ಹಾಡುಗಾರರನ್ನು ಸೆಲೆಕ್ಟ್ ಮಾಡಿದ ಜೀ ಕನ್ನಡ.

WhatsApp Group Join Now
Telegram Group Join Now

ಕಳೆದ ಸೀಸನ್ ಅಂತೆ ಈ ಸೀಸನ್ ಕೂಡ ಅದ್ದೂರಿ ಯಾಗಿ ಶುರು ಆಯ್ತು ಹಾಗೆ ಎಲ್ಲಾ ಪ್ರತಿಭೆಗಳು ಕೂಡ ತುಂಬಾ ಅತ್ಯದ್ಭುತ ಪ್ರತಿಭೆಗಳಾಗಿದ್ರು. ಈಗಾಗಲೇ ಐದು ತಿಂಗಳು ನಡೆದಿರುವ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ಇದೀಗ ಫೈನಲ್ ಕೂಡ ಮುಗಿದಿದ್ದು ಈ ಫೈನಲ್ ಕಾರ್ಯಕ್ರಮ ಎರಡು ವಾರಗಳ ಹಿಂದೇನೆ ಕೊಪ್ಪಳ ದಲ್ಲಿ ನಡೆದಿತ್ತು ಆಗಾಗಿ ಮೊದಲೇ ವಿನ್ನರ್ ಗಳ ಹೆಸರು ಕೂಡ ಲೀಕ್ ಆಗಿತ್ತು.

ಪ್ರಗತಿ ಬಿ ಬಡಗೀರ್, ತನುಶ್ರೀ, ಕುಶಿಕ್, ಶಿವಾನಿ, ರೇವಣ್ಣ ಸಿದ್ಧಿ ಮತ್ತು ಗುರುಪ್ರಸಾದ್ ಈ ಆರು ಜನರು ಅಂತಿಮ ಫೈನಲ್ ಅಂತಕ್ಕೆ ಆಯ್ಕೆ ಆಗಿದ್ದರು ಈ ಆರು ಸ್ಪರ್ಧಿ ಗಳು ಕೂಡ ಫೈನಲ್ ವೇದಿಕೆ ಯಲ್ಲಿ ಸಖತ್ Performance ಮಾಡಿ ಒಬ್ಬರಿ ಗಿಂತ ಒಬ್ಬರು ಎನ್ನುವ ಹಾಗೆ ಆರು ಜನ ಕೂಡ ಯಾರಿಗೂ ಕಡಿಮೆ ಇಲ್ಲ ಎನ್ನುವ ಹಾಗೆ ಹಾಡಿದ್ದರು. ಇನ್ನೂ ಇವರಲ್ಲಿ ಎರಡನೇ ಹಂತಕ್ಕೆ ಶಿವಾನಿ, ಪ್ರಗತಿ ಬಿ ಬಡಗೀರ್ ಮತ್ತು ತನುಶ್ರೀ ಅವರು ಆಯ್ಕೆಯಾದರು. ಮೊದಲ ಹಂತದಲ್ಲಿ ರೇವಣ್ಣ ಸಿದ್ಧಿ, ಕುಶಿಕ್ ಮತ್ತು ಗುರುಪ್ರಸಾದ್ ಅವರು ಹೊರಬಂದರು.

ಇದನ್ನೂ ಓದಿ: ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿದರೂ ಉಳಿಯಲಿಲ್ಲ ನಟಿ ಮಾನ್ವಿತಾ ತಾಯಿ! ಅನಾಥೆ ಆದ ಮಾನ್ವಿತಾ

ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ವಿನ್ನರ್ ಯಾರು? ಸಿಕ್ಕ ಬಹುಮಾನ ಹಾಗೂ ಹಣ ಎಷ್ಟು ಗೊತ್ತಾ?

ಎರಡನೇ ಹಂತಕ್ಕೆ ಆಯ್ಕೆಯಾಗಿದ್ದ ಶಿವಾನಿ ಪ್ರಗತಿ ತನುಶ್ರೀ ಅವರಲ್ಲಿ ಮೂರನೇ ಸ್ಥಾನ ವನ್ನು ಅಂದರೆ ಎರಡನೇ ರನ್ನರ್ ಅಪ್ ಆಗಿ ಮಂಗಳೂರಿನ ತನುಶ್ರೀ ಅವರು ಹೊರಹೊಮ್ಮಿದರು. ಇವರಿಗೆ ಮಾರುತಿ ಕಂಪನಿ ಯಿಂದ 5 ಲಕ್ಷದ ಎಲೆಕ್ಟ್ರಿಕಲ್ Vehicle ಹಾಗೂ 5 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ದೊರೆತಿದೆ. ಜೊತೆಗೆ ಸೆಕೆಂಡ್ ರನ್ನರ್ ಟ್ರೋಪಿ ಕೂಡ ತನುಶ್ರೀ ಅವರು ಪಡೆದರು.

ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19ರ ವಿನ್ನರ್ ಆಗಿ ಪ್ರಗತಿ ಬಿ ಬಡಿಗೀರ್ ಅವರು ಹೊರ ಹೊಮ್ಮಿದರು ಶಿವಾನಿ ರನ್ನರ್ ಆಫ್ ಆದರು, ಕುಶಲನಗರದಿಂದ ಬಂದಿದ್ದ ಪ್ರಗತಿ ಅವರು ತಮ್ಮ ಪ್ರತಿಭೆ ಯಿಂದ ಕನ್ನಡಿಗರ ಮೆಚ್ಚುಗೆಯನ್ನು ಪಡೆದಿದ್ದರೂ ಪ್ರಗತಿ ಅವರೇ ವಿನ್ನರ್ ಆಗಬೇಕು ಎಂದು ಕರ್ನಾಟಕದ ಜನರ ಆಸೆ ಕೂಡ ಆಗಿತ್ತು. ಇನ್ನೂ ರನ್ನರ್ ಶಿವಾನಿ ಕೂಡ ಒಳ್ಳೆ ಪ್ರತಿಭೆ ಇವರ ಹಾಡುಗಳು ಕೂಡ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದ್ದವು ವಿನ್ನರ್ ಆದ ಪ್ರಗತಿ ಬಿ ಬಡಿಗೀರ್ ಅವರಿಗೆ 21 ಲಕ್ಷದ 30×40 ಸೈಟನ್ನು ಪ್ರಗತಿಯವರಿಗೆ ದೊರೆತಿದೆ. ನೆಲಮಂಗಲದ ಹತ್ತಿರ ಇರುವ ಸೈಟನ್ನು ಪ್ರಗತಿ ಯವರಿಗೆ ಬಹುಮಾನವಾಗಿ ಬಂದಿದೆ. ಈ ಸೈಟನ್ನು Sponsor ಮೂಲಕ ಕೊಟ್ಟ ಅಶ್ವ ಸೂರ್ಯ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆದ ರಂಜಿತ್ ಅವರು ಪ್ರಗತಿ ಅವರಿಗೆ ನೀವು 18 ವರ್ಷ ಬರುವುದರಲ್ಲಿ ಈ ಸೈಟ್ ಬೆಲೆ 60 ಲಕ್ಷ ಆಗುತ್ತದೆ ನಿಮ್ಮ ಮುಂದಿನ Education ಗೆ ಇದು ಸಹಾಯವಾಗುತ್ತೆ. ಅಂತ ಹೇಳಿದರು ಇದರ ಜೊತೆಗೆ 4 ಲಕ್ಷ ಚೆಕ್ ಕೂಡ ಪ್ರಗತಿಗೆ ದೊರೆತಿದೆ ಮತ್ತು ಜೀ ಕನ್ನಡ ವಾಹಿನಿಯ ವತಿಯಿಂದ ಪ್ರಗತಿಗೆ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19ರ ವಿನ್ನರ್ ಟ್ರೋಪಿ ಕೊಟ್ಟರು. ರನ್ನರ್ ಅಪ್ ಆದ ಶಿವನಿಗೆ ದರ್ಶನ್ ಅಗರಬತ್ತಿ ವತಿ ಯಿಂದ 20 ಲಕ್ಷ ರೂಪಾಯಿ ಚೆಕ್ ಅನ್ನು ಕೊಡಲಾಯಿತ್ತು. ಜೊತೆಗೆ ರನರ್ ಆಫ್ ಟ್ರೋಫಿ ಕೂಡ ಶಿವಾನಿಗೆ ದೊರೆಯಿತ್ತು.

ಇದನ್ನೂ ಓದಿ: ತಂಗಿಯ ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಟ್ಟ ನಟಿ ಕವಿತಾ ಗೌಡ.! ಮದುವೆ ಸುಂದರ ಕ್ಷಣಗಳು!