Singer Ashwin Sharma: ಸರಿಗಮಪ ಖ್ಯಾತಿಯ ಅಶ್ವಿನ್ ಶರ್ಮ ಎಂಗೇಜ್ಮೆಂಟ್ ಸಂಭ್ರಮ.. ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡ ಅಶ್ವಿನ್

Singer Ashwin Sharma: ಕನ್ನಡ ಕಿರುತೆರೆ ಹೆಸರಾಂತ ರಿಯಾಲಿಟಿ ಶೋ ಅದರಲ್ಲೂ ಕನ್ನಡಕ್ಕೆ ಸಾಕಷ್ಟು ಸ್ಟಾರ್ ಸಿಂಗರ್ ಗಳನ್ನ ನೀಡಿರುವ ಖ್ಯಾತ ರಿಯಾಲಿಟಿ ಶೋ ಅಂದ್ರೆ ಅದು ಕನ್ನಡದ ಸರಿಗಮಪ ಹೌದು ಕನ್ನಡ ಕಿರುತೆರೆಯಲ್ಲಿ ಸ್ವರ ಮಾಧುರ್ಯದಿಂದಲೇ ಮೋಡಿ ಮಾಡುವ ಈ ಶೋ ಮೂಲಕ ಸಾಕಷ್ಟು ಹೊಸ ಪ್ರತಿಭೆಗಳು ಇಂದು ಚಿತ್ರರಂಗದಲ್ಲಿ ಸ್ಥಾನ ಪಡೆದಿದ್ದಾರೆ. ಅದರಲ್ಲಿ ಸೀಸನ್ 17ರ ರನ್ನರ್ ಅಪ್ ಅಶ್ವಿನ್ ಶರ್ಮ ಕೂಡ ಅಂತದ್ದೇ ಅದ್ಭುತ ಪ್ರತಿಭೆ. ಸೀಸನ್ 17ರಲ್ಲಿ ಎಲ್ಲರ ಹಾಟ್ ಫೇವರೇಟ್ ಸ್ಪರ್ಧಿಯಾಗಿ ತಮ್ಮ ಸಹ ಸ್ಪರ್ಧಿಗಳಿಗೆ ಸರಿಯಾದ ಪೈಪೋಟಿ ನೀಡಿ ಕೊನೆಗೆ ರನ್ನರ್ ಅಪ್ ಆದ್ರು.. ಆ ನಂತರ ಸಾಕಷ್ಟು ವೇದಿಕೆ ಕಾರ್ಯಕ್ರಮಗಳು, ಕನ್ನಡ ಚಲನಚಿತ್ರರಂಗ ಸೇರಿದಂತೆ ಆಲ್ಬಮ್ ಸಾಂಗ್ ಮಾಡುತ್ತಾ ಸಾಕಷ್ಟು ಪ್ರಗತಿಯನ್ನ ಕಾಣುತ್ತಿರುವ ಇವ್ರು ಇದೀಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹೌದು ಸರಿಗಮಪ ಸೀಸನ್ 17ರ ರನ್ನರ್ ಅಪ್ ಹಾಗೂ ಗಾಯಕ ಅಶ್ವಿನ್ ಶರ್ಮ ಅದ್ದೂರಿಯಾಗಿ ನಿಶ್ಚಿತಾರ್ಥವನ್ನ ಮಾಡಿಕೊಂಡಿದ್ದಾರೆ. ಕುಟುಂಬದವರ ಸಮುಖದಲ್ಲಿ ಎಂಗೇಜ್ಮೆಂಟ್ ನಡೆದಿದ್ದು ಎಲ್ಲರು ಬಹಳ ಖುಷಿಯಿಂದ ಅಷ್ಟೆ ಅದ್ದೂರಿಯಾಗಿ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದು, ಈ ಕುರಿತಂತೆ ಅಶ್ವಿನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವೊಂದಷ್ಟು ಫೋಟೋಗಳನ್ನ ಶೇರ್ ಮಾಡಿಕೊಳ್ಳುವ ಮೂಲಕ ಎಂಗೇಜ್ಮೆಂಟ್ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿದ್ದಾರೆ.

WhatsApp Group Join Now
Telegram Group Join Now

ಇದನ್ನೂ ಓದಿ: ಮಾಸ್ಟರ್ ಆನಂದ್ ಮಗಳು ವಂಶಿಕ ಹೆಸರಲ್ಲಿ ದೋಖ! ಫೋಟೋಶೂಟ್, ಟ್ಯಾಲೆಂಟ್ ಶೋ ಹೆಸರಲ್ಲಿ ಲಕ್ಷ ಲಕ್ಷ ಪಿಕಿರೋ ಐನಾತಿ

ನಿಶ್ಚಿತಾರ್ಥ ಸುಂದರ ಕ್ಷಣಗಳನ್ನ ಹಂಚಿಕೊಂಡ ಗಾಯಕ ಹೇಳಿದ್ದೇನು?

ಹೌದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಿಶ್ಚಿತಾರ್ಥ ಸಮಾರಂಭದ ಫೋಟೋ ಹಂಚಿಕೊಂಡಿರುವ ಗಾಯಕ ಅಶ್ವಿನ್ ತಮ್ಮ ಮನದರೆಸಿಯನ್ನ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಹೌದು ಎಂಗೇಜ್ಮೆಂಟ್ ನ ಕೆಲ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದು ನನ್ನ ಪ್ರೀತಿಯ ಲವ್ ಸ್ಟೋರಿ ನನ್ನದೇ ಅಂತ ಬರೆದುಕೊಂಡು ಶೇರ್ ಮಾಡಿದ್ದಾರೆ ಇದನ್ನ ನೋಡಿದ ಅಭಿಮಾನಿಗಳು ಅವ್ರಿಗೆ ವಿಶ್ ಮಾಡ್ತಿದ್ದು ಜೋಡಿ ಚೆನ್ನಾಗಿದೆ ಅಂತ ಶುಭಾ ಆರೈಸುತ್ತಿದ್ದಾರೆ. ಹೌದು ಅಶ್ವಿನ್ ಶರ್ಮ ತಮ್ಮ ಎಂಗೇಜ್ಮೆಂಟ್ ನ ದಿ ಬೆಸ್ಟ್ ಫೋಟೋಗಳನ್ನ ಹಂಚಿಕೊಂಡಿದ್ದು ನಿಜಕ್ಕೂ ಕೂಡ ಪೋಟೊಗಳು ತುಂಬಾ ಕಲರ್ ಫುಲ್ ಆಗಿ ಬಂದಿವೆ. ಇನ್ನು ಅಶ್ವಿನ್ ಶರ್ಮ ಮದುವೆಯಾಗುತ್ತಿರುವ ಹುಡುಗಿ ಹೆಸರು ದೀಪ್ತಿ ಅಂತ. ಆದ್ರೆ ಇವ್ರ ಬ್ಯಾಕ್ಗ್ರೌಂಡ್ ಏನು ಇವ್ರು ಸಿಂಗರ್ ಅಥವಾ ಬೇರೆ ಕ್ಷೇತ್ರದವರ ಅನ್ನೋದರ ಬಗ್ಗೆ ಮಾಹಿತಿ ಇಲ್ಲ. ಜೊತೆಗೆ ಇದು ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್ ಅನ್ನೋದು ಕೂಡ ಸ್ಪಷ್ಟವಾಗಿಲ್ಲ. ಆದ್ರೆ ಅಶ್ವಿನ್ ಶರ್ಮ ಕೊಟ್ಟಿರುವಾ ಆಡಿಬರಹ ಇದು ಲವ್ ಮ್ಯಾರೇಜ್ ಇರಬಹುದು ಅನ್ನುವಂತಿದೆ. ಹೌದು ನನ್ನ ಪ್ರೀತಿಯ ಲವ್ ಸ್ಟೋರಿ ನನ್ನದೇ ಅಂತ ಬರೆದುಕೊಂಡಿದ್ದಾರೆ. ಹೀಗಾಗಿ ಲವ್ ಮ್ಯಾರೇಜ್ ಇರಬಹುದು ಅಂತ ಹೇಳಲಾಗ್ತಿದ್ದು, ಸದ್ಯ ಮನೆಯವರನ್ನೆಲ್ಲ ಒಪ್ಪಿಸಿ ಇದೀಗ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.

ಇನ್ನು ಎಂಗೇಜ್ಮೆಂಟ್ ಕಾರ್ಯಕ್ರಮದಲ್ಲಿ ಅಶ್ವಿನ್ ಶರ್ಮ ತಮ್ನ ಮನದರಸಿ ದೀಪ್ತಿಗೆ ಮಂಡಿಯೂರಿ ಪ್ರೇಮನಿವೇದನೆ ಮಾಡಿದ್ದು ಎಲ್ಲರು ಸಖತ್ ಎಂಜಾಯ್ ಮಾಡಿದ್ದಾರೆ. ಅಲ್ದೇ ಭಾವಿ ಪತ್ನಿಗಾಗಿ ಅಶ್ವಿನ್ ಹಾಡೊಂದನ್ನ ಹಾಡಿದ್ದು ಬಹಳ ವಿಶೇಷವಾಗಿತ್ತು. ಈ ಎಲ್ಲ ಸುಂದರ ಕ್ಷಣಗಳ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದ್ದು ಎಲ್ಲರು ಬೆಸ್ಟ್ ಜೋಡಿ ಅಂತಿದ್ದಾರೆ.ಇನ್ನು ಸದ್ಯ ಅಶ್ವಿನ್ ಅವ್ರ ಮದುವೆ ಯಾವಾಗ ಎಲ್ಲಿ ಅನ್ನೋದು ಗೊತ್ತಾಗಿಲ್ಲ ಆದ್ರೆ ಸದ್ಯದಲ್ಲೇ ಹಸೆಮಣೆ ಏರುತ್ತಾರೆ ಅಂತ ಹೇಳಲಾಗುತ್ತಿದ್ದು, ಅದಕ್ಕೆ ಮುನ್ನುಡಿ ಎಂಬಂತೆ ಇದೀಗ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಹಿನ್ನಲೆ ಗಾಯಕಾರಾಗಿ ಬ್ಯುಸಿಯಾಗಿರುವ ಅಶ್ವಿನ್ ಸಾಕಷ್ಟು ಆಲ್ಬಮ್ ಸಾಂಗ್ ಮಾಡಿದ್ದು ಒಂದಷ್ಟು ಸಾಮಾಜಿಕ ಕಳಕಳಿ ಇರುವಂತಹ ಗಾಯಕನಾಗಿ ಗುರುತಿಸಿಕೊಂಡಿದ್ದಾರೆ. ಮಹಾನಾಯಕ ಡಾ. ಬಿ. ಆರ್ ಅಂಬೇಡ್ಕರ್ ಧಾರವಾಹಿಗೆ ಟೈಟಲ್ ಟ್ರಾಕ್ ಹಾಡಿದ್ದು ಇವ್ರಿಗೆ ಮತ್ತಷ್ಟು ಜನಪ್ರಿಯತೆಯನ್ನ ತಂದುಕೊಟ್ಟಿತ್ತು.. ಇವ್ರ ಹಾಡುಗಳು ಮತ್ತಷ್ಟು ಮೊಗದಷ್ಟು ಹೆಚ್ಚಾಗಲಿ ಇವ್ರ ಕಂಠ ಸಿರಿಯಲ್ಲಿ ಇನ್ನು ಸಾವಿರಾರು ಹಾಡುಗಳು ಬರಲಿ, ವೈವಾಹಿಕ ಜೀವನದಲ್ಲಿ ನೆಮ್ಮದಿ ಸುಖ ಇರಲಿ ಅನ್ನೋದು ಎಲ್ಲರ ಆಶಯ.

ಇದನ್ನೂ ಓದಿ: ತಮ್ಮ ಮದುವೆಯ ಆರತಕ್ಷತೆಗೆ ಅಭಿಮಾನಿಗಳನ್ನು ಅಹ್ವಾನಿಸಿದ ಕಾಮಿಡಿ ಕಿಲಾಡಿಗಳು ಸಂಜು ಬಸಯ್ಯ ಹಾಗೂ ಪಲ್ಲವಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram