ಬ್ಯಾಂಕ್ ನಲ್ಲಿ ಈಗ FD ಯೋಜನೆಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ. ದೇಶದ ಅತಿ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆ ಇರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು HDFC ಬ್ಯಾಂಕ್ ನಲ್ಲಿ ಹೂಡಿಕೆ ಮಾಡಲು ಯಾವ ಬ್ಯಾಂಕ್ ಬೆಸ್ಟ್ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಬಡ್ಡಿದರಗಳು ಬದಲಾಗಿವೆ:- ಸ್ವಲ್ಪ ದಿನಗಳ ಹಿಂದೆ ಅಷ್ಟೇ ದೇಶದ ಹಲವು ಬ್ಯಾಂಕ್ ಗಳು FD ಯೋಜನೆಯ ಬಡ್ಡಿದರಗಳನ್ನು ಪರಿಷ್ಕರಣೆ ಮಾಡಿವೆ. ಅದರಲ್ಲೂ ಈಗ ಹೆಚ್ಚಾಗಿ SBI ಮತ್ತು HDFC bank ನಲ್ಲಿ ಹೂಡಿಕೆ ಪ್ರಮಾಣ ಹೆಚ್ಚಾಗಿದ್ದು. ಬಡ್ಡಿದರಗಳು ಸಹ ಹೆಚ್ಚಾಗಿವೆ. ಎಚ್‌ಡಿಎಫ್‌ಸಿ ಬ್ಯಾಂಕ್ ನಲ್ಲಿ 1 ದಿನದಿಂದ 5 ವರ್ಷಗಳವರೆಗೆ ಎಫ್‌ಡಿ ಯೋಜನೆಯ ಹೂಡಿಕೆಗೆ ಬಡ್ಡಿದರವನ್ನು ಶೇಕಡಾ 0.20% ಪ್ರತಿಶತ ಬಡ್ಡಿಯನ್ನು ಹೆಚ್ಚು ಮಾಡಿದೆ . ಹಾಗೆಯೇ ಎಸ್‌ಬಿಐ ಬ್ಯಾಂಕ್ ನ FD ಯೋಜನೆಯಲ್ಲಿ 46 ದಿನಗಳಿಂದ 1 ವರ್ಷದ ಹೂಡಿಕೆಯ ಮೇಲೆ ಬಡ್ಡಿ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಜಾಜ್ CNG ಬೈಕ್ ಜುಲೈ 17ಕ್ಕೆ ಬಿಡುಗಡೆ; ಎಲ್ಲಾ ಬೈಕ್ ಗಳಿಗೆ ನಡುಕ ಹುಟ್ಟಿಸಿದ ಬಜಾಜ್
SBI ಬ್ಯಾಂಕ್ ನಲ್ಲಿ 5 ವರ್ಷಗಳ ಅವಧಿಗೆ 10 ಲಕ್ಷ ರೂಪಾಯಿ FD ಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಸಿಗುವ ಮೊತ್ತ ಎಷ್ಟು?
ಸಾಮಾನ್ಯ ಗ್ರಾಹಕರಿಗೆ 5 ವರ್ಷಗಳ ಅವಧಿಗೆ FD ಯೋಜನೆಯಲ್ಲಿ SBI bank ನಲ್ಲಿ ಹೂಡಿಕೆ ಮಾಡಿದರೆ ನೀವು ಪ್ರತಿಶತ 6.5% ಬಡ್ಡಿ ಪಡೆಯುತ್ತೀರಿ. ಹಿರಿಯ ನಾಗರಿಕರಿಗೆ 7.50% ಬಡ್ಡಿ ಸಿಗುತ್ತದೆ. ಈ ಎಲ್ಲಾ ಬಡ್ಡಿದರಗಳು ಮೇ 15 ರಿಂದ ಜಾರಿಯಲ್ಲಿ ಇವೆ. ಈ ಮೇಲಿನ ಬಡ್ಡಿದರಗಳು 2 ಲಕ್ಷ ರೂಪಾಯಿಗಿಂತಾ ಕಡಿಮೆ ಹೂಡಿಕೆಯ ಮೊತ್ತಕ್ಕೆ ಅನ್ವಯ ಆಗುತ್ತದೆ.
- ಸಾಮಾನ್ಯ ಗ್ರಾಹಕರು 5 ವರ್ಷದ ಅವಧಿಗೆ FD ಯಲ್ಲಿ 10 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ನಿಮಗೆ ಸಿಗುವ ಮೊತ್ತ ಒಟ್ಟು 13,80,419 ರೂಪಾಯಿಗಳು. 5 ವರ್ಷಗಳಲ್ಲಿ ನಿಮಗೆ ಸಿಗುವ ಒಟ್ಟು ಬಡ್ಡಿ ಮೊತ್ತ 3,80,419 ರೂಪಾಯಿ ಆಗಿರುತ್ತದೆ.
- ಹಿರಿಯ ನಾಗರಿಕರು 5 ವರ್ಷದ ಅವಧಿಗೆ FD ಯಲ್ಲಿ 10 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ನಿಮಗೆ ಸಿಗುವ ಮೊತ್ತವು 14,49,948 ರೂಪಾಯಿ ಆಗಿರುತ್ತದೆ. ನಿಮಗೆ ಸಿಗುವ ಒಟ್ಟು ಬಡ್ಡಿಯ ಮೊತ್ತ 4,49,948 ರೂಪಾಯಿಗಳು.
HDFC ಬ್ಯಾಂಕ್ ನಲ್ಲಿ 5 ವರ್ಷಗಳ ಅವಧಿಗೆ 10 ಲಕ್ಷ ರೂಪಾಯಿ FD ಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಸಿಗುವ ಮೊತ್ತ ಎಷ್ಟು?
ಸಾಮಾನ್ಯ ಗ್ರಾಹಕರಿಗೆ 5 ವರ್ಷಗಳ ಅವಧಿಗೆ FD ಯೋಜನೆಯಲ್ಲಿ HDFC bank ನಲ್ಲಿ ಹೂಡಿಕೆ ಮಾಡಿದರೆ ನೀವು ಪ್ರತಿಶತ 7.20% ಬಡ್ಡಿ ಪಡೆಯುತ್ತೀರಿ . ಹಿರಿಯ ನಾಗರಿಕರಿಗೆ 7.70 %ಬಡ್ಡಿ ಸಿಗುತ್ತದೆ. ಈ ಎಲ್ಲಾ ಬಡ್ಡಿದರಗಳು ಜೂನ್ 10 ರಿಂದ ಜಾರಿಯಲ್ಲಿ ಇವೆ. SBI bank ನಿಯಮದಂತೆಯೇ ಈ ಮೇಲಿನ ಬಡ್ಡಿದರಗಳು 2 ಲಕ್ಷ ರೂಪಾಯಿಗಿಂತಾ ಕಡಿಮೆ ಹೂಡಿಕೆಯ ಮೊತ್ತಕ್ಕೆ ಅನ್ವಯ ಆಗುತ್ತದೆ.
- ಸಾಮಾನ್ಯ ಗ್ರಾಹಕರು 5 ವರ್ಷದ ಅವಧಿಗೆ FD ಯಲ್ಲಿ 10 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ನಿಮಗೆ ಸಿಗುವ ಮೊತ್ತ ಒಟ್ಟು 14,28,747 ರೂಪಾಯಿಗಳು. FD ಯೋಜನೆಯಲ್ಲಿ 5 ವರ್ಷಗಳಲ್ಲಿ ನಿಮಗೆ ಸಿಗುವ ಒಟ್ಟು ಬಡ್ಡಿ ಮೊತ್ತ 4,28,747 ರೂಪಾಯಿ ಆಗಿರುತ್ತದೆ.
- ಹಿರಿಯ ನಾಗರಿಕರು 5 ವರ್ಷದ ಅವಧಿಗೆ FD ಯಲ್ಲಿ 10 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ನಿಮಗೆ ಸಿಗುವ ಮೊತ್ತವು 14,64,247 ರೂಪಾಯಿ ಆಗಿರುತ್ತದೆ. ನಿಮಗೆ ಸಿಗುವ ಒಟ್ಟು ಬಡ್ಡಿಯ ಮೊತ್ತ 4,64,247 ರೂಪಾಯಿಗಳು.
ಇದನ್ನೂ ಓದಿ: ಒಂದು ವರ್ಷ ಬಳಸದಿದ್ದರೆ ಆಯುಷ್ಮಾನ್ ಕಾರ್ಡ್ ರದ್ದಾಗುವ ಬಗ್ಗೆ ಸರ್ಕಾರದ ಸ್ಪಷ್ಟನೆ!