SBI ನ ವಾರ್ಷಿಕ ಠೇವಣಿಯಿಂದ ಪ್ರತಿ ತಿಂಗಳು ಹೆಚ್ಚಿನ ಆದಾಯ ಪಡೆಯಬಹುದು. ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ (ಎಸ್‌ಬಿಐ) ಮೊದಲ ಸ್ಥಾನದಲ್ಲಿದೆ. SBI ನ ಹೂಡಿಕೆದಾರರಿಗೆ ಅತ್ಯುತ್ತಮ ಉಳಿತಾಯ ಯೋಜನೆಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಉತ್ತಮ ಆದಾಯದ ಜೊತೆಗೆ ಗ್ರಾಹಕರ ಭದ್ರತೆಯನ್ನು ಖಾತ್ರಿಪಡಿಸುವ ಯೋಜನೆಗಳನ್ನು SBI ಹೊಂದಿದೆ. ಅದರಲ್ಲಿ ವಾರ್ಷಿಕ ಠೇವಣಿ ಯೋಜನೆಯು ಒಂದು.
ವಾರ್ಷಿಕ ಠೇವಣಿ ಯೋಜನೆಯ ಬಗ್ಗೆ ಕೆಲವು ಮುಖ್ಯ ಅಂಶಗಳು:-
ವಾರ್ಷಿಕ ಠೇವಣಿ ಯೋಜನೆ (FD) ಒಂದು ಜನಪ್ರಿಯ ಉಳಿತಾಯ ಯೋಜನೆಯಾಗಿದ್ದು, ನಿಮ್ಮ ಹಣವನ್ನು ಒಂದು ನಿರ್ದಿಷ್ಟ ಅವಧಿಗೆ ಬ್ಯಾಂಕ್‌ನಲ್ಲಿ ಠೇವಣಿ ಮಾಡಬಹುದಾಗಿದೆ. ಈ ಅವಧಿಯಲ್ಲಿ ನಿಮ್ಮ ಠೇವಣಿ ಮೇಲೆ ಬಡ್ಡಿ ಪಡೆಯಬಹುದಾಗಿದೆ. ವಾರ್ಷಿಕ ಠೇವಣಿಯ ಅವಧಿಯನ್ನು ನಿಮ್ಮ ಇಷ್ಟದಂತೆ 1 ವರ್ಷ, 2ವರ್ಷ, 3ವರ್ಷ, 5ವರ್ಷ ಹಾಗೂ 10 ವರ್ಷಗಳ ಅವಧಿಯಲ್ಲಿ ಹೂಡಿಕೆ ಮಾಡಬಹುದು. ಗ್ರಾಹಕರು ಈ ಯೋಜನೆಯಲ್ಲಿ ಠೇವಣಿ ಮಾಡುವ ಹಣವನ್ನು ಒಟ್ಟಿಗೆ ತುಂಬಬೇಕು. SBI ಈ ಹಣವನ್ನು ಕಂತುಗಳಲ್ಲಿ ನಿಮಗೆ ನೀಡುತ್ತದೆ. ಈ EMI ನಲ್ಲಿ ನೀವು ಹೂಡಿಕೆ ಮಾಡಿರುವ ಮೂಲ ಹಣ ಮತ್ತು ಬಡ್ಡಿದರವನ್ನು ನಿಮಗೆ ನೀಡಲಾಗುತ್ತದೆ. ಯೋಜನೆಯ ಬಡ್ಡಿದರವನ್ನು ತ್ರೈಮಾಸಿಕದ ರೂಪದಲ್ಲಿ ನೀಡಲಾಗುತ್ತದೆ ಹಾಗೂ ಪ್ರತಿ ತಿಂಗಳ ರಿಟರ್ನ್ಸ್ ನಲ್ಲಿ ಡಿಸ್ಕೌಂಟ್ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
SBI ನ ವಾರ್ಷಿಕ ಠೇವಣಿ ಯೋಜನೆಯ ವಿಶೇಷತೆಗಳು :-
- ಈ ಯೋಜನೆಗೆ ಹೂಡಿಕೆ ಮಾಡುವವರು ಭಾರತದ ಯಾವುದೇ SBI ಶಾಖೆಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಸಲ್ಲಿಸಿ ಠೇವಣಿ ಖಾತೆಯನ್ನು ತೆರೆಯಬಹುದು.
- ಯೋಜನೆಯಲ್ಲಿ ಹೂಡಿಕೆ ಮಾಡುವವರು ಕನಿಷ್ಠ 1,000 ರೂಪಾಯಿ ಹೂಡಿಕೆಯನ್ನು ಮಾಡಲೇಬೇಕು. ಗರಿಷ್ಠ ಪ್ರಮಾಣದ ಹೂಡಿಕೆಗೆ ಯಾವುದೇ ಮಿತಿಯನ್ನು ವಿಧಿಸಿಲ್ಲ.
- ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೋಮಿನಿಯನ್ನು ಮಾಡಬಹುದು. ನಿಮ್ಮ ಮರಣದ ನಂತರ ಹೂಡಿಕೆಯ ಹಣವೂ ಅವರಿಗೆ ಸಿಗುತ್ತದೆ.
- ಹಣ ಹೂಡಿಕೆಯನ್ನು ಮಾಡಿರುವ ಪ್ರೂಫ್ ಗೆ ಬ್ಯಾಂಕ್ ನವರು ನಿಮಗೆ ಪಾಸ್ ಬುಕ್ ನೀಡುತ್ತಾರೆ. ನಿಮಗೆ ಈ ಪಾಸ್ ಬುಕ್ ಹಣ ತೆಗೆಯುವಾಗ ಉಪಯೋಗಕ್ಕೆ ಬರುತ್ತದೆ.
- ಹೂಡಿಕೆದಾರರಿಗೆ ಒಂದು ವರ್ಷದಿಂದ ಹತ್ತು ವರ್ಷಗಳ ವರೆಗೆ ಡೆಪಾಸಿಟ್ ಮಾಡಲು ಅವಕಾಶ ಇದೆ.
ಇದನ್ನೂ ಓದಿ: ಯಶಸ್ವಿನಿ ಯೋಜನೆಯ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಮುಂದೂಡಲಾಗಿದೆ
ಎಸ್.ಬಿ.ಐ ಯಾಕೆ ನಂಬಿಕೆಗೆ ಅರ್ಹ ಬ್ಯಾಂಕ್ ಎಂಬುದಕ್ಕೆ ಕೆಲವು ಮುಖ್ಯ ಕಾರಣಗಳು:-
- SBI ಭಾರತ ಸರ್ಕಾರದಿಂದ ಬೆಂಬಲಿತವಾಗಿದ್ದು ಇದು ಗ್ರಾಹಕರಿಗೆ ಹೆಚ್ಚಿನ ಭದ್ರತೆಯನ್ನು ನೀಡುತ್ತದೆ.
- SBI ಉತ್ತಮ ಹಣಕಾಸಿನ ಸ್ಥಿತಿ ಹೊಂದಿದೆ ಮತ್ತು ಭಾರತೀಯ ಠೇವಣಿ ವಿಮಾ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ಯಿಂದ ವಿಮೆಯನ್ನು ಹೊಂದಿದೆ.
- ಖಾಸಗಿ ಬ್ಯಾಂಕ್ ಗಳಂತೆ ಮುಳುಗುತ್ತದೆ ಎಂಬ ಭಯ ಕಡಿಮೆ ಇದೆ.
- ದೇಶದ್ಯಂತ ಗ್ರಾಹಕರನ್ನು ಹೊಂದಿರುವುದರಿಂದ ಹಾಗೂ ರಾಷ್ಟ್ರೀಯ ಬ್ಯಾಂಕ್ ಆಗಿರುವುದರಿಂದ ಗ್ರಾಹಕರು ಮೋಸ ಹೋಗುವ ಸಂಭವ ಕಡಿಮೆ.
- ಹಲವು ರೀತಿಯ ವಿಮಾ ಯೋಜನೆಗಳು , ಬ್ಯಾಂಕ್ ಸೇವೆಗಳು, ನಿಗದಿತ ಸಮಯಕ್ಕೆ ಸಮಸ್ಯೆಯ ಪರಿಹಾರ ಹಾಗೂ ಹೂಡಿಕೆದಾರರ ಗಣನೀಯ ಏರಿಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ ಮೇಲೆ ಇನ್ನಷ್ಟು ನಂಬಿಕೆ ಬರಲು ಕಾರಣವಾಗಿದೆ.
- ಭಾರತದ ಉಳಿದ ಬ್ಯಾಂಕ್ ಗಳಿಗೆ ಹೋಲಿಸಿದರೆ ಆತು ಹೆಚ್ಚು ಶಾಖೆಯನ್ನು ಹೊಂದಿದೆ.
ಇದನ್ನೂ ಓದಿ: ಬ್ಯಾಂಕ್ ನೌಕರರಿಗೆ ವೇತನ ಹೆಚ್ಚಳ ಹಾಗೂ ವಾರದ ಎರಡು ದಿನ ರಜೆ ಘೋಷಣೆ ಮಾಡುವ ಸಾಧ್ಯತೆ ಇದೆ