ಯಾವುದೇ ಬ್ಯಾಂಕ್ ನಲ್ಲಿ ಕೆಲಸ ಸಿಕ್ಕರೆ ಅದನ್ನ ಸುರಕ್ಷಿತ ಕೆಲಸ ಅಂತಲೇ ಹೇಳಬಹುದು. ಯಾಕಂದೇ ಇದು ಸರ್ಕಾರಿ ನೌಕರಿ ಅಂತೆ ಸುರಕ್ಷಿತ ಕೆಲಸವಾಗಿದ್ದು, ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನಲ್ಲಿ ಖಾಲಿ ಇರುವ 5280 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹೌದು ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಈ ವರ್ಷದ ನೇಮಕಾತಿ ಮುಂದುವರೆಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ನಿರ್ವಹಿಸಬೇಕು ಎನ್ನುವ ನಿಮ್ಮ ಕನಸು ನನಸಾಗುವ ದಿನ ಹತ್ತಿರದಲ್ಲೇ ಇದೆ. ಯಾಕೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬರೋಬ್ಬರಿ 5,280 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಪದವಿ ಪಡೆದ ಆಸಕ್ತರು ಅರ್ಜಿ ಸಲ್ಲಿಸಬಹುದು. ವಲಯ ಅಧಿಕಾರಿ ಮಟ್ಟದ ಹುದ್ದೆ ಇದಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ನವೆಂಬರ್ 22ರಿಂದ ಡಿಸೆಂಬರ್ 12ರ ವರೆಗೆ ಅವಕಾಶವಿದೆ. ಹಾಗಾದ್ರೆ ಅರ್ಜಿ ಸಲ್ಲಿಸೋದು ಹೇಗೆ ಬೇಕಾದ ಅಗತ್ಯ ದಾಖಲಾತಿಗಳೇನು ಸಂಬಂಧ ಪಟ್ಟ ಸಂಪೂರ್ಣ ಮಾಹಿತಿಯನ್ನ ನೋಡ್ತಾ ಹೋಗೋಣ ಬನ್ನಿ.
ಹೌದು ಈಗಾಗ್ಲೇ ಎಸ್ ಬಿ ಐ ಸಂಬಂಧಿಸಿದ ವೆಬ್ಸೈಟ್ ಮೂಲಕ ಅಧಿಸೂಚನೆ ಹೊರಡಿಸಿದ್ದು, ಆಸಕ್ತರು ಅರ್ಜಿಯನ್ನ ಸಲ್ಲಿಸುವಂತೆ ಸೂಚಿಸಿದೆ. ಇನ್ನು ಯಾರೆಲ್ಲ ಅರ್ಜಿ ಸಲ್ಲಿಸಬಹುದು ಅಂದ್ರೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು ಅಥವಾ ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ ಸೇರಿದಂತೆ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಇಲ್ಲವಾದರೆ ವೈದ್ಯಕೀಯ, ಎಂಜಿನಿಯರಿಂಗ್, ಚಾರ್ಟರ್ಡ್ ಅಕೌಂಟೆಂಟ್ ಮತ್ತು ಕಾಸ್ಟ್ ಅಕೌಂಟೆಂಟ್‌ನಂತಹ ಪದವಿ ಹೊಂದಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು ಅಂತ ತಿಳಿಸಿದೆ.
ಇನ್ನು ಅಭ್ಯರ್ಥಿಯ ಕನಿಷ್ಠ ವಯೋಮಿತಿ 21 ವರ್ಷ ಮತ್ತು ಗರಿಷ್ಠ ವಯಸ್ಸು 30 ವರ್ಷ ಮೀರಿರಬಾರದು. ಆಗೇ ಸಾಮಾನ್ಯ ವಿಭಾಗದ ಅಭ್ಯರ್ಥಿಗಳು 750 ರೂ. ಅರ್ಜಿ ಶುಲ್ಕ ಪಾವತಿಸಬೇಕು, ಇನ್ನು ಎಸ್‌ಸಿ / ಎಸ್‌ಟಿ/ ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರೋದಿಲ್ಲ. ಅವರಿಗೆ ಶುಲ್ಕ ವಿನಾಯಿತಿಯನ್ನ ನೀಡಿದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಅರ್ಜಿ ಸಲ್ಲಿಸೋದು ಹೇಗೆ ಮತ್ತು ಎಲ್ಲಿ?
ಇನ್ನು ಆಸಕ್ತರು ಅಭ್ಯರ್ಥಿಗಳು SBI CBO recruitment 2023ಕ್ಕೆ ಅರ್ಜಿ ಸಲ್ಲಿಸಲು ವೆಬ್‌ಸೈಟ್ www.sbi.co.in. ಮೇಲೆ ಕ್ಲಿಕ್ ಮಾಡಿ. ಲಿಂಕ್ ಓಪನ್ ಆದಮೇಲೆ ಎಚ್ಚರಿಕೆಯಿಂದ ಅರ್ಜಿ ಭರ್ತಿ ಮಾಡಬೇಕು ನಂತರ ಡಾಕ್ಯುಮೆಂಟ್, ಫೋಟೊಗಳನ್ನು ಅಪ್‌ಲೋಡ್ ಮಾಡಿ, ಅರ್ಜಿ ಶುಲ್ಕವನ್ನು ಪಾವತಿಸಿ ನೀವು ನೀಡಿರುವ ಮಾಹಿತಿ ಎಲ್ಲ ಸರಿಯಾಗಿದೆ ಎನ್ನುವುದನ್ನು ಖಚಿತ ಪಡಿಸಿದ ಬಳಿಕ ಅರ್ಜಿ ಸಲ್ಲಿಸಿಬೇಕು. ಅದಾದ ನಂತರ ಅರ್ಜಿಯ ಪ್ರಿಂಟ್ ಔಟ್ ತೆಗೆದಿಟ್ಟುಕೊಂಡಿರೋದು ಬಹಳಷ್ಟು ಅನುಕೂಲಕರ. ಇನ್ನು ಹೆಚ್ಚಿನ ಮಾಹಿತಿ ಬೇಕು ಅಂದ್ರೆ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ www.sbi.co.in.ಗೆ ಭೇಟಿ ನೀಡಿ ಮಾಹಿತಿಯನ್ನ ಪಡೆಯಬಹುದು.
ಇನ್ನು ಅರ್ಜಿ ಸಲ್ಲಿಕೆಯಾದ ನಂತರ ಆಯ್ಕೆ ವಿಧಾನ ಹೇಗಿರುತ್ತೆ ಅಂದ್ರೆ, ಆನ್‌ಲೈನ್ ಪರೀಕ್ಷೆ, ಸ್ಕ್ರೀನಿಂಗ್ ಟೆಸ್ಟ್, ಸಂದರ್ಶನ ಮತ್ತು ಡಾಕ್ಯುಮೆಂಟ್ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಹೌದು ಆನ್‌ಲೈನ್ ಪರೀಕ್ಷೆಯು 120 ಅಂಕಗಳ ಅಬ್ಜಕ್ಟಿವ್ ಪರೀಕ್ಷೆ ಮತ್ತು 50 ಅಂಕಗಳ ವಿವರಣಾತ್ಮಕ ಪರೀಕ್ಷೆಯನ್ನು ಒಳಗೊಂಡಿದೆ. ಅಬ್ಜಕ್ಟಿವ್ ಪರೀಕ್ಷೆ ಮುಗಿದ ತಕ್ಷಣ ವಿವರಣಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ ಮತ್ತು ಅಭ್ಯರ್ಥಿಗಳು ತಮ್ಮ ವಿವರಣಾತ್ಮಕ ಪರೀಕ್ಷಾ ಉತ್ತರಗಳನ್ನು ಕಂಪ್ಯೂಟರ್‌ನಲ್ಲಿ ಟೈಪ್ ಮಾಡಬೇಕಾಗುತ್ತದೆ. ಇನ್ನು ವಸ್ತುನಿಷ್ಠ ಪರೀಕ್ಷೆಯ ಅವಧಿ 2 ಗಂಟೆ ಮತ್ತು ಇದು ಒಟ್ಟು 120 ಅಂಕಗಳ 4 ವಿಭಾಗಗಳನ್ನು ಒಳಗೊಂಡಿರುತ್ತದೆ. ಪ್ರತಿ ವಿಭಾಗಕ್ಕೆ ಪ್ರತ್ಯೇಕ ಸಮಯ ಇರುತ್ತದೆ. ಪ್ರತಿ ವಿವರಣಾತ್ಮಕ ಪರೀಕ್ಷೆಯ ಅವಧಿ 30 ನಿಮಿಷ ನಿಗಧಿಪಡಿಸಲಾಗಿದೆ. ಇನ್ನು ಪರೀಕ್ಷೆ 2024ರ ಜನವರಿಯಲ್ಲಿ ನಡೆಯುವ ಸಾಧ್ಯತೆ ಇದೆ ಮಾಹಿತಿ ಇದ್ದು ನಿಖರ ದಿನಾಂಕ ಇನ್ನು ಕೂಡ ನಿಗಧಿಯಾಗಿಲ್ಲ. ಹೀಗಾಗಿ ಒಮ್ಮೆ ಆಸಕ್ತರು ವೆಬ್ಸೈಟ್ ಗೆ ಭೇಟಿ ನೀಡಿಬಹುದು.
ಇದನ್ನೂ ಓದಿ: ನಿಮ್ಮದು ಬ್ಯಾಂಕಿನಲ್ಲಿ ಒಂದು ಅಕೌಂಟ್ ಇದ್ದರೆ ಒಳ್ಳೆಯದ ಅಥವಾ ಒಂದಕ್ಕಿಂತ ಹೆಚ್ಚು ಅಕೌಂಟ್ ಇದ್ದರೆ ನಿಮಗೆ ಲಾಭಾನ?
ಇದನ್ನೂ ಓದಿ: FID ನಂಬರ್ ಪಡೆಯೋದು ಹೇಗೆ? ಏನ್ ಮಾಡ್ಬೇಕು? ಮನೆಯಲ್ಲೇ ಕೂತು FID ನಂಬರ್ ತಗೋಬಹುದಾ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram