ಬ್ಯಾಂಕ್ ನಲ್ಲಿ FD ಇಡೋರಿಗೆ ಗುಡ್ ನ್ಯೂಸ್; SBI ಬ್ಯಾಂಕ್ ನಲ್ಲಿ ಸಿಗಲಿದೆ ಹೆಚ್ಚಿನ ಬಡ್ಡಿ

SBI hikes FD interest Rates

ಬ್ಯಾಂಕ್ ಗಳಲ್ಲಿ ನೀವು ಮಾಡುವ ಸ್ಥಿರ ಠೇವಣಿಯ ಮೇಲೆ ನಿಮಗೂ ಕೂಡ ಉತ್ತಮ ಬಡ್ಡಿ ಬೇಕಾದರೆ, ಒಳ್ಳೆಯ ಬ್ಯಾಂಕ್ ನ ಆಯ್ಕೆ ಅಷ್ಟೇ ಮುಖ್ಯವಾಗುತ್ತದೆ. ಹೌದು ಇದಕ್ಕಾಗಿ, ಎಲ್ಲಾ ಸರ್ಕಾರಿ ಹೂಡಿಕೆ ಯೋಜನೆಗಳ ಹೊರತಾಗಿ, ನೀವು ಎಫ್‌ಡಿಯಲ್ಲಿ ಹೂಡಿಕೆ ಮಾಡಬಹುದು. ಎಫ್‌ಡಿಯಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಮಾರ್ಗಗಳಲ್ಲಿ ಒಂದಾಗಿದೆ. ಹೀಗಾಗಿ ಎಫ್ಡಿಯಲ್ಲಿ ನೀವು ಮಾಡುವ ಹೂಡಿಕೆಗೆ ಬ್ಯಾಂಕುಗಳು ವಿವಿಧ ರೀತಿಯಲ್ಲಿ ಬಡ್ಡಿಯನ್ನು ಪಾವತಿಸುತ್ತವೆ. ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ರೆಪೊ ದರ ಹೆಚ್ಚಿಸಿದಾಗಲೆಲ್ಲ ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳು ಬಡ್ಡಿ ದರ ಪರಿಷ್ಕರಿಸುವ ಮೂಲಕ ಅದನ್ನು ಗ್ರಾಹಕರಿಗೆ ವರ್ಗಾಯಿಸುವುದು ಸಾಮಾನ್ಯ. ಅದೇ ರೀತಿ ಎಸ್​ಬಿಐ ಬಡ್ಡಿ ದರ ಪರಿಷ್ಕರಣೆ ಮಾಡಿದೆ. ಇನ್ನು ಕಳೆದ ಒಂದು ವರ್ಷದಲ್ಲಿ ಆರ್‌ಬಿಐ ರೆಪೊ ದರವನ್ನು 250 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಇದಾದ ಬಳಿಕ ಬ್ಯಾಂಕ್‌ಗಳು ಕೂಡ ವೇಗವಾಗಿ ಬಡ್ಡಿದರವನ್ನು ಹೆಚ್ಚಿಸಿವೆ. ಅದರಂತೆ ಎಸ್ ಬಿ ಐ ಇದೀಗ ತನ್ನ ಬಡ್ಡಿದರವನ್ನ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಬ್ಯಾಂಕ್ ಗಳಲ್ಲಿ ಎಫ್ ಡಿ ಇಡುವ ಗ್ರಹಕರಿಗಂತೂ ಇದು ಅಂತ್ಯಂತ ಖುಷಿ ವಿಚಾರ ಅಂತಲೇ ಹೇಳಬಹುದು.

WhatsApp Group Join Now
Telegram Group Join Now

ಇನ್ನು ಮುಖ್ಯವಾಗಿ ಶೇರು ಮಾರುಕಟ್ಟೆಯಲ್ಲಿ ಕಡಿಮೆ ಅವಧಿಯಲ್ಲಿ ಹಣವನ್ನು ದ್ವಿಗುಣಗೊಳಿಸ ಬಹುದಾದರೂ ಅಲ್ಲಿ ಅಪಾಯದ ಸಾಧ್ಯತೆ ಹೆಚ್ಚಾಗಿರುತ್ತದೆ. ಯಾಕಂದ್ರೆ ಯಾವ ಸಮಯದಲ್ಲಾದರೂ ಕೂಡ ಶೇರು ಮಾರುಕಟ್ಟೆ ತಲ್ಲಣಗೊಳ್ಳಬಹುದು. ಹೀಗಾಗಿ ಶೇರು ಮಾರುಕಟ್ಟೆಯಲ್ಲಿ ಹಣವನ್ನು ಇನ್ವೆಸ್ಟ್‌ ಮಾಡುವದಕ್ಕಿಂದ ಸರ್ಕಾರಿ ಬ್ಯಾಂಕುಗಳ ಸ್ಕೀಂಗಳಲ್ಲಿ, ಅಥವಾ FD ಗಳಲ್ಲಿ ಹಣವನ್ನು ಹೂಡುವುದು ಉತ್ತಮ ಲಾಭ ಹಾಗೂ ಅಪಾಯದ ಸಮಸ್ಯೆ ಇರುವುದಿಲ್ಲ ಎಂದು ಅನೇಕರು ಅಭಿಪ್ರಾಯ ಪಡುತ್ತಾರೆ. ಹೀಗಾಗಿ ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ ಆದ SBI ಒಂದು ವಿಶೇಷವಾದ FD ಯೋಜನೆಯನ್ನು ಪರಿಚಯಿಸಿದ್ದು ಇದರಲ್ಲಿ 10 ವರ್ಷಗಳಲ್ಲಿ ಹಣವನ್ನು ದ್ವಿಗುಣಗೊಳಿಸಕೊಳ್ಳಬಹುದು. ಅಂದ್ರೆ ಎಸ್ ಬಿ ಐ ತನ್ನ ಬಡ್ಡಿ ದರವನ್ನ ಹೆಚ್ಚಿಸಿದ್ದು ಈ ಯೋಜನೆಯ ಮೂಲಕ ಗ್ರಾಹಕರು ಅತೀ ಹೆಚ್ಚಿನ ಲಾಭ ಪಡೆಯಬಹುದು ಅಂತಲೇ ಹೇಳಬಹುದು. ಹಾಗಾದ್ರೆ ಇದರಲ್ಲಿ ಅಂದ್ರೆ ಈ ಎಫ್ ಡಿ ಹೂಡಿಕೆ ಎಷ್ಟಿರಬೇಕು ಇದರಲ್ಲಿ ಸಿಗುವ ಬಡ್ಡಿ ದರವೆಷ್ಟು ಇದೆಲ್ಲವನ್ನ ಸಂಪೂರ್ಣವಾಗಿ ನೋಡೋಣ ಬನ್ನಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇಂದಿನಿಂದಲೇ ಬಡ್ಡಿ ದರದಲ್ಲಿ ಪರಿಷ್ಕರಣೆ..

ಹೌದು ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2024 ರ ಹೊಸ ವರ್ಷಕ್ಕೆ ಮುಂಚಿತವಾಗಿ ಬ್ಯಾಂಕ್‌ನ ಲಕ್ಷಗಟ್ಟಲೆ ಗ್ರಾಹಕರಿಗೆ ಪ್ರಮುಖ ಉತ್ತೇಜನವನ್ನು ನೀಡಿದೆ ಅಂತಲೇ ಹೇಳಬಹುದು. SBI ತನ್ನ ಸ್ಥಿರ ಠೇವಣಿ ಅಂದ್ರೆ FD ದರಗಳನ್ನು ರೂ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಹೆಚ್ಚಿಸಲು ಘೋಷಿಸಿದೆ. ಇನ್ನು SBI ಇತ್ತೀಚಿನ FD ದರಗಳು ಇಂದಿನಿಂದ ಅನ್ವಯವಾಗಲಿವೆ. ಹಿರಿಯ ನಾಗರಿಕರಿಗೆ ಎಫ್‌ಡಿ ದರಗಳು 5 ವರ್ಷಗಳು ಮತ್ತು 10 ವರ್ಷಗಳವರೆಗಿನ ಅವಧಿಯು ಎಸ್‌ಬಿಐ ವಿ-ಕೇರ್ ಠೇವಣಿ ಯೋಜನೆಯಡಿ 50 ಬಿಪಿಎಸ್ ಹೆಚ್ಚುವರಿ ಪ್ರೀಮಿಯಂ ಅನ್ನು ಒಳಗೊಂಡಿರುತ್ತದೆ. 7.10 % ಬಡ್ಡಿ ದರದಲ್ಲಿ 400 ದಿನಗಳು ಅಂದ್ರೆ ಅಮೃತ್ ಕಲಶ, ನಿರ್ದಿಷ್ಟ ಟೆನರ್ ಗೆ ಅನ್ವಯಿಸುತ್ತದೆ.

ಇನ್ನು ಹಿರಿಯ ನಾಗರಿಕರು 7.60% ಬಡ್ಡಿ ದರಕ್ಕೆ ಅರ್ಹರಾಗಿರುತ್ತಾರೆ. ಈ ಯೋಜನೆಯು 31-ಮಾರ್ಚ್-2024 ರವರೆಗೆ ಮಾನ್ಯವಾಗಿರುತ್ತದೆ ಎಂದು ಎಸ್‌ಬಿಐ ತಿಳಿಸಿದೆ. ಇನ್ನು SBI ಯ FD ದರ ಪರಿಷ್ಕರಣೆ RBI ಯ ದ್ವೈಮಾಸಿಕ ಹಣಕಾಸು ನೀತಿ ಘೋಷಣೆಯ ವಾರಗಳ ನಂತರ ಬರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಿದೆ. ಡಿಸೆಂಬರ್ 8 ರಂದು 6 ಸದಸ್ಯರ ಹಣಕಾಸು ನೀತಿ ಸಮಿತಿ ಸಭೆಯ ಫಲಿತಾಂಶವನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಕೇಂದ್ರ ಬ್ಯಾಂಕ್ ರೆಪೊ ದರಗಳನ್ನು ಶೇಕಡಾ 6.5 ಕ್ಕೆ ಬದಲಾಯಿಸದೆ ಇರಿಸಲು ನಿರ್ಧರಿಸಿದೆ ಎಂದು ಹೇಳಿದರು. ಆದ್ರೆ RBI ಯ 3-ದಿನಗಳ MPC ಸಭೆಯು ಡಿಸೆಂಬರ್ 6 ರಂದು ಪ್ರಾರಂಭವಾಯಿತು. ಹೀಗಾಗಿ RBI ತನ್ನ ಪ್ರಮುಖ ಬಡ್ಡಿದರಗಳಲ್ಲಿ ಬದಲಾವನಣೆಯನ್ನ ಮಾಡಿದ್ದು, FD ಮಾಡೋರಿಗೆ ಸಿಹಿಸುದ್ದಿಯನ್ನ ನೀಡಿದೆ ಅಂತಲೇ ಹೇಳಬಹುದು.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

Latest SBI FD Rates For General Public

Tenors Existing Rates For Public w.e.f 15/02/2023 Revised Rates For Public w.e.f 27/12/2023
7 Days To 45 Days 3.00 3.50
46 Days To 179 Days 4.50 4.75
180 Days To 210 Days 5.25 5.75
211 Days To Less Than 1 Year 5.75 6.00
1 Year To Less Than 2 Years 6.80 6.80
2 Years To Less Than 3 Years 7.00 7.00
3 Years To Less Than 5 Years 6.50 6.75
5 Years And Up To 10 Years 6.50 6.50

 

Latest SBI FD Rates For Senior Citizen

Tenors Existing Rates For Senior Citizen w.e.f 15/02/2023 Revised Rates For Senior Citizen w.e.f 27/12/2023
7 Days To 45 Days 3.50 4.00
46 Days To 179 Days 5.00 5.25
180 Days To 210 Days 5.75 6.25
211 Days To Less Than 1 Year 6.25 6.50
1 Year To Less Than 2 Years 7.30 7.30
2 Years To Less Than 3 Years 7.50 7.50
3 Years To Less Than 5 Years 7.00 7.25
5 Years And Up To 10 Years 7.50 7.50

ಇದನ್ನೂ ಓದಿ: ಇಂದಿನಿಂದ ನಿಮ್ಮ ಗ್ರಾಮದಲ್ಲಿ ಗೃಹಲಕ್ಷ್ಮಿ ಶಿಬಿರ; ಸ್ಥಳದಲ್ಲೇ ಸಿಗುತ್ತದೆ ಸಮಸ್ಯೆಗಳಿಗೆ ಪರಿಹಾರ

ಇದನ್ನೂ ಓದಿ: ಡಿಸೆಂಬರ್ 31ರ ಒಳಗಾಗಿ ರೇಷನ್ ಕಾರ್ಡ್ ಇದ್ದವರು ಈ ಕೆಲಸ ಕಡ್ಡಾಯವಾಗಿ ಮಾಡಿ