ಹೊಸದಾಗಿ ನೀವು SBI ಡೆಬಿಟ್ ಕಾರ್ಡ್ ತೆಗೆದುಕೊಂಡಿದ್ದರೆ ನೀವು ATM pin code ಸೆಟ್ ಮಾಡುವುದು ಹೇಗೆ ಎಂದು ಯೋಚಿಸುತ್ತಿರಿ. ಸರಳವಾಗಿ ನಿಮ್ಮ ATM Pin Code ಸೆಟ್ ಮಾಡುವ ವಿಧಾನವನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
ಯಾಕೆ ATM pin code ಸೆಟ್ ಮಾಡಬೇಕು.
ನಮ್ಮ ಬಳಿ ಇರುವ ATM card ಬಳಸಬೇಕು ಎಂದರೆ ನಾವು ಕಡ್ಡಾಯವಾಗಿ ಪಿನ್ ಕೋಡ್ ಹಾಕಬೇಕು. ಯಾಕೆ ಎಂದರೆ ನಮ್ಮ ಹಣದ ಸುರಕ್ಷತೆಯ ದೃಷ್ಟಿಯಿಂದ ಇದು ಬಹಳ ಮುಖ್ಯವಾದ ಸಂಗತಿ ಆಗಿದೆ. ನಮ್ಮ ಹಣವನ್ನು ಯಾರು ಉಪಯೋಗಿಸಬಾರದು ಎಂದರೆ ನಾವು ATM card ಗೆ ನಾಲ್ಕು ಅಥವಾ ಅರು ಅಂಕಿಗಳ ಪಿನ್ ಕೋಡ್ ಸೆಟ್ ಮಾಡಬೇಕು. ಹಾಗೆ ನಾವು ಪ್ರತಿ ಸಲವೂ ಹಣ withdraw ಮಾಡುವಾಗ ಈ ಪಿನ್ ಕೋಡ್ ನಮೂದಿಸಬೇಕು. ಇಲ್ಲದೆ ಇದ್ದರೆ ನಾವು ನಮ್ಮ ಅಕೌಂಟ್ ಇಂದ ಹಣ ತೆಗೆಯಲು ಸಾಧ್ಯವಿಲ್ಲ. ಈ ಪಿನ್ code ನಾವು ಡೆಬಿಟ್ ಕಾರ್ಡ್ ಅನ್ನು ಆನ್ಲೈನ್ ಮೂಲಕ ಬಳಸಬೇಕು ಎಂದರೂ ಇದೆ ಪಿನ್ ಕೋಡ್ ನಮೂದಿಸಿ ಹಣವನ್ನು ಬೇರೆಯವರಿಗೆ ಕಳುಹಿಸಲು ಸಾಧ್ಯ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಎಸ್ ಬಿ ಐ ನ ಕಾರ್ಡ್ ಗೆ ಪಿನ್ ಕೋಡ್ ಸೆಟ್ ಮಾಡುವುದು ಹೇಗೆ?
- SBI ATM ಗೆ ತೆರಳಿ SBI ATM ಕಾರ್ಡ್ ಪಿನ್ ಕೋಡ್ ಚೇಂಜ್ ಮಾಡಲು ಅಥವಾ ಜನರೇಟ್ ಮಾಡಲು ಸಾಧ್ಯ. ಆದ್ದರಿಂದ ನೀವು ಹತ್ತಿರ SBI ATM ಗೆ ಹೋಗಬೇಕು.
- ಎಟಿಎಂನಲ್ಲಿ ನಿಮ್ಮ ಡೆಬಿಟ್ ಕಾರ್ಡ್ ಹಾಕಬೇಕು ನಂತರ ಪಿನ್ ಜನರೇಷನ್ ಎಂಬ ಆಪ್ಷನ್ ಕ್ಲಿಕ್ ಮಾಡಬೇಕು.
- ನಂತರ ನಿಮ್ಮ ಬ್ಯಾಂಕ್ ಖಾತೆಯ 11 ನಂಬರ್ ನಮೂದಿಸಿ ಹಾಗೂ ದೃಢೀಕರಣ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಂತರ ನೀವು ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ನಂತರ ನಿಮ್ಮ ಮೊಬೈಲ್ ಗೆ ಗ್ರೀನ್ ಪಿನ್ ನಂಬರ್ ಬರುತ್ತದೆ. ಅದನ್ನು ಅಲ್ಲಿ ನಮೂದಿಸಬೇಕು.
- ನಂತರ ಗ್ರೀನ್ ಪಿನ್ ಜನರೇಟ್ ಆದ ಬಗ್ಗೆ ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಬರುತ್ತದೆ.
- ನಿಮ್ಮ ಡೆಬಿಟ್ ಕಾರ್ಡ್ ಸ್ಲಾಟ್ ನಿಂದಾ ತೆಗೆಯಬೇಕು. ನಂತರ ಮತ್ತೆ ಸ್ಲಾಟ್ ಗೆ ಡೆಬಿಟ್ ಕಾರ್ಡ್ ಹಾಕಬೇಕು. ನಂತರ ನಿಮಗೆ ಯಾವ ಭಾಷೆಯ ಮೂಲಕ ಮುಂದಿನ ಹಂತದ ಮಾಹಿತಿ ಬೇಕು ಎಂಬುದನ್ನ ಆಯ್ಕೆ ಮಾಡಿಕೊಳ್ಳಬೇಕು.
- ಮತ್ತೆ ನಿಮ್ಮ ಮೊಬೈಲ್ ಸಂಖ್ಯೆ ಯನ್ನೂ ನಮೂದಿಸಿ ಮೊಬೈಲ್ ಸಂಖ್ಯೆಗೆ ಬಂದ OTP ಹಾಕಬೇಕು.
- ನಂತರ ನಿಮಗೆ ಪಿನ್ ಚೇಂಜ್ ಮಾಡಲು ಆಯ್ಕೆ ಇರುತ್ತದೆ. ನಂತರ ನಿಮ್ಮ ಇಷ್ಟದ ನಾಲ್ಕು ಸಂಖ್ಯೆಯ ನಂಬರ್ ನಮೂದಿಸಿ. ನಿಮ್ಮ ಪಿನ್ ಕೋಡ್ ಇನ್ನೊಂದು ಬಾರಿ ಕನ್ಫರ್ಮ್ ಮಾಡಿಕೊಳ್ಳಲು ಆಪ್ಷನ್ ಕೇಳುತ್ತದೆ. ನೀವು ಹಾಕಿದ ಪಿನ್ ಕೋಡ್ ಮತ್ತೊಮ್ಮೆ ನಮೂದಿಸಿ. ನಂತರ ಈ ಪಿನ್ ಕೋಡ್ ನೆನಪು ಇಟ್ಟುಕೊಳ್ಳಿ ಮುಂದಿನ ಬಾರಿ ನೀವು ATM ಬಳಸುವಾಗ ಇದು ಬಹಳ ಮುಖ್ಯವಾಗಿರುತ್ತದೆ.
ಎಸ್ಎಂಎಸ್ ಮೂಲಕ ಪಿನ್ ಜನರೇಟ್ ಮಾಡುವುದು ಹೇಗೆ?: ನಿಮ್ಮ ಕಾರ್ಡ್‌ನ ಹಸಿರು ಪಿನ್ ರಚಿಸಲು SMS ಕೂಡ ಬಳಸಬಹುದು. 567676 ಗೆ “PIN <16-ಅಂಕೆಗಳ ಕಾರ್ಡ್ ಸಂಖ್ಯೆ>” ಎಂದು ಸಂದೇಶ ಕಳುಹಿಸಿ. OTP ಒಂದು SMS ಮೂಲಕ ನಿಮ್ಮ ಸಂಖ್ಯೆಗೆ ಬರುತ್ತದೆ. ಈ OTP ಎರಡು ದಿನಗಳ ವರೆಗೆ ಮಾನ್ಯ ಇರುತ್ತದೆ. ನಂತರ ಎರಡು ದಿನಗಳ ಒಳಗಾಗಿ ಯಾವುದೇ SBI ATM ಗೆ ಭೇಟಿ ನೀಡಿ ಮತ್ತು ಮೇಲೆ ತಿಳಿಸಲಾದ ಹಂತಗಳನ್ನು ಅನುಸರಿಸಿ.
ಇದನ್ನೂ ಓದಿ: ಕೇವಲ 10 ಲಕ್ಷದ ಒಳಗಡೆ 5 ಎಲೆಕ್ಟ್ರಿಕ್ ಸನ್ರೂಫ್ ಹೈ ಎಂಡ್ ಕಾರುಗಳನ್ನು ಖರೀದಿಸಿ!
ಇದನ್ನೂ ಓದಿ: ಈ ಸರ್ಕಾರಿ ಯೋಜನೆಯು ನಿಮ್ಮ ಕುಟುಂಬದ ಭವಿಷ್ಯವನ್ನು ಭದ್ರಪಡಿಸುತ್ತದೆ, 20 ರೂ.ಗೆ 2 ಲಕ್ಷ ಜೀವ ವಿಮೆಯ ವರದಾನ!