SBI ಬ್ಯಾಂಕ್‌ನಲ್ಲಿ ಪದವಿ ಮುಗಿಸಿದವರಿಗೆ ಸ್ಪೆಷಲಿಸ್ಟ್‌ ಕೇಡರ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ

SBI Recruitment 2024 Apply Online

ಬ್ಯಾಂಕ್ ಉದ್ಯೋಗ ಆಕಾಂಕ್ಷಿಗಳಿಗೆ ಇದು ಶುಭ ಸುದ್ದಿ. ಪದವಿ ಮುಗಿಸಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸ್ಪೆಷಲಿಸ್ಟ್‌ ಕೇಡರ್ ಆಫೀಸರ್ ಹುದ್ದೆ ಗೆ ಅರ್ಜಿ ಆಹ್ವಾನ ಮಾಡಲಾಗಿದೆ ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಯ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿಯಲು ಈ ಲೇಖನವನ್ನು ಓದಿ.

WhatsApp Group Join Now
Telegram Group Join Now

ಹುದ್ದೆಗಳ ವಿವರ :- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬರೋಬ್ಬರಿ 150 ಸ್ಪೆಷಲಿಸ್ಟ್‌ ಕೇಡರ್ ಆಫೀಸರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಕೆಲವು ಮಾನದಂಡಗಳ ಬಗ್ಗೆ ಮಾಹಿತಿ ನೀಡಿದೆ.

ಅರ್ಜಿ ಸಲ್ಲಿಸಲು ಇರಬೇಕಾದ ಕ್ವಾಲಿಫಿಕೇಷನ್ :-

  • ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪದವಿ ಪೂರ್ವ ಗೊಳಿಸಿರಬೇಕು. ಯಾವುದೇ ನಿರ್ದಿಷ್ಟ ವಿಷಯದ ಬಗ್ಗೆ ಮೆನ್ಷನ್ ಮಾಡಲಿಲ್ಲ. ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
  • ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಟ್ರೇಡ್‌ ಫೈನಾನ್ಸ್‌ ಅಥವಾ ಇಂಟರ್‌ನ್ಯಾಷನಲ್ ಬ್ಯಾಂಕಿಂಗ್ ಕೋರ್ಸ್ ಮುಗಿಸಿದ ಬಗ್ಗೆ ಸರ್ಟಿಫಿಕೇಟ್‌ ಹೊಂದಿದ್ದರೆ ಹೆಚ್ಚಿನ ಆಧ್ಯತೆ ಸಿಗಲಿದೆ ಅಥವಾ ಪದವಿ ಬಳಿಕ ಕನಿಷ್ಠ ಎರಡು ವರ್ಷ ಆದರೂ ಟ್ರೇಡ್‌ ಫೈನಾನ್ಸ್‌ ವಿಭಾಗದಲ್ಲಿ ಅಥವಾ ಕಮರ್ಷಿಯಲ್‌ ಬ್ಯಾಂಕ್‌ ಉದ್ಯೋಗ ಮಾಡಿರುವ ಅನುಭವ ಇರಬೇಕು.
  • ಜೊತೆಗೆ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಉತ್ತಮ ಸಂವಹನ ಹಾಗೂ ಪ್ರೆಸೆಂಟೇಷನ್‌ ಸ್ಕಿಲ್‌ ಹೊಂದಿರಬೇಕು.

ಇನ್ನೂ ಅರ್ಜಿ ಸಲ್ಲಿಸಲು ನೀಡಬೇಕಾದ ದಾಖಲೆಗಳು 

  • ಎಸ್ಎಸ್‌ಎಲ್‌ಸಿ ಅಂಕಪಟ್ಟಿ ಹಾಗೂ ಪಿಯುಸಿ ಹಾಗೂ ಪದವಿ ಅಂಕಪಟ್ಟಿ.
  • ಇ-ಮೇಲ್‌ ವಿಳಾಸ.
  • ಮೊಬೈಲ್‌ ಸಂಖ್ಯೆ.
  • ಪಾಸ್‌ಪೋರ್ಟ್‌ ಸೈಜ್ ಫೋಟೋ.
  • ಎಕ್ಸಪೆರಿಯನ್ಸ್ ಸರ್ಟಿಫಿಕೇಟ್.

ಇದನ್ನೂ ಓದಿ: 1.5 ಲಕ್ಷವನ್ನು 10 ಲಕ್ಷ ಮಾಡಿ! ಅಂಚೆ ಕಚೇರಿಯ ಈ ಅದ್ಭುತ ಯೋಜನೆಯ ಸಂಪೂರ್ಣ ಮಾಹಿತಿ!

ಅರ್ಜಿ ಸಲ್ಲಿಸುವ ವಿಧಾನ :-

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೊದಲು ನೀವು ನಿಮ್ಮ ವೆಬ್ ಬ್ರೌಸರ್ ಓಪನ್ ಮಾಡಿ ಎಸ್‌ಬಿಐ ನೇಮಕಾತಿ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ನಂತರ ಮುಖಪುಟದಲ್ಲಿ, ಕಾಣುವ ಹೊಸ ನೋಂದಣಿ ಅಥವಾ ಹೊಸ ನೋಂದಣಿಗಾಗಿ ಕ್ಲಿಕ್ ಮಾಡಿ ಎಂಬ ಆಪ್ಷನ್ ಕ್ಲಿಕ್ ಮಾಡಬೇಕು. ನಂತರ ನೋಂದಣಿ ಫಾರ್ಮ್‌ನಲ್ಲಿ ತೆರೆಯುತ್ತದೆ. ಫಾರ್ಮ್ ನಲ್ಲಿ ನೀವು ನಿಮ್ಮ ವೈಯಕ್ತಿಕ ವಿವರಗಳು ಹಾಗೂ ಶೈಕ್ಷಣಿಕ ಅರ್ಹತೆ, ಮತ್ತು ಉದ್ಯೋಗ ಅನುಭವದಂತಹ ಅಗತ್ಯ ಮಾಹಿತಿಯನ್ನು ನಿಖರವಾಗಿ ಭರ್ತಿ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಂತರ ನಿಮ್ಮ ಶೈಕ್ಷಣಿಕ ಪ್ರಮಾಣಪತ್ರಗಳು ಹಾಗೂ experience certificate ಮತ್ತು ಪಾಸ್ ಪೋರ್ಟ್ ಸೈಜ್ ಫೋಟೋಗಳನ್ನು ಸ್ಕ್ಯಾನ್ ಮಾಡಿ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಬೇಕು. ನಂತರ ಶುಲ್ಕ ಪಾವತಿಸಬೇಕು. ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ನೀವು ಒದಗಿಸಿದ ಎಲ್ಲಾ ಮಾಹಿತಿಯನ್ನು ಇನ್ನೊಮ್ಮೆ ಪರಿಶೀಲನೆ ಮಾಡಿ ಯಾವುದೇ ತಪ್ಪುಗಳಿಲ್ಲ ಎಂದು ಖಚಿತಪಡಿಸಿಕೊಂಡ ನಂತರವೇ ಅರ್ಜಿಯನ್ನು ಸಲ್ಲಿಸಬೇಕು.

ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳ ಮಾಹಿತಿ :- ಟ್ರೇಡ್‌ ಫೈನಾನ್ಸ್‌ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು 27-06-2024 ಕೊನೆಯ ದಿನ ಆಗಿದೆ. ಶುಲ್ಕ ಪಾವತಿಸಲು ಕೊನೆಯ ದಿನಾಂಕ 27-06-2024. ಆನ್ಲೈನ್ ಮೂಲಕವೇ ಶುಲ್ಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ :- ವಿದ್ಯಾರ್ಹತೆ ಅಂಕ ಹಾಗೂ experience ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಿ ಸಂದರ್ಶನ ನಡೆಸಿ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. 

ಅರ್ಜಿ ಸಲ್ಲಿಸಿದ ಬಗ್ಗೆ ನಿಮ್ಮ ಮೊಬೈಲ್ ಸಂಖ್ಯೆಗೆ ಮಾಹಿತಿ SMS ಬರುತ್ತದೆ.

ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಆಕರ್ಷಕ ಹೂಡಿಕೆ ಅವಕಾಶ; ಪೋಸ್ಟ್ ಆಫೀಸಿನ 5 ವರ್ಷಗಳ ಯೋಜನೆಯಲ್ಲಿ ಹೆಚ್ಚಿನ ಬಡ್ಡಿ ಮತ್ತು ತೆರಿಗೆ ಪ್ರಯೋಜನಗಳು! 

Leave a Reply

Your email address will not be published. Required fields are marked *