ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವು ಮುಂದಿನ ಶೈಕ್ಷಣಿಕ ಜೀವನಕ್ಕೆ ಇದು ಪ್ರಮುಖ ಘಟ್ಟ. ಪಿಯುಸಿ ಫಲಿತಾಂಶದ ಅನುಗುಣವಾಗಿ ಮುಂದಿನ ಶೈಕ್ಷಣಿಕ ಜೀವನ ಅವಲಂಬಿತವಾಗಿ ಇರುತ್ತದೆ. ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದಿದ್ದು ಕೀ ಉತ್ತರ ಪತ್ರಿಕೆಗಳು ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ಈಗ ಪಿಯುಸಿ ಪರೀಕ್ಷೆಯ ಫಲಿತಾಂಶವು ಯಾವಾಗ ಬರುತ್ತದೆ ಎಂದು ಕಾಯುತ್ತಾ ಇರುವ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಹೊಸದೊಂದು ಅಪ್ಡೇಟ್ ಇದೆ.
ಪಿಯುಸಿ ಫಲಿತಾಂಶ ಯಾವಾಗ ಬರಲಿದೆ?: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವು ಇದೆ ಬರುವ ಏಪ್ರಿಲ್ 3ನೇ ವಾರದಲ್ಲಿ ಪ್ರಕಟವಾಗುವ ಸಾಧ್ಯತೆ ಹೆಚ್ಚಿದೆ. ಫಲಿತಾಂಶವು ಪ್ರತಿ ವರ್ಷದಂತೆ ಆನ್ಲೈನ್ ನಲ್ಲಿ ಲಭ್ಯವಿರಲಿದೆ. ಆನ್ಲೈನ್ ಮೂಲಕ ಫಲಿತಾಂಶ ವೀಕ್ಷಣೆ ಮಾಡಲಾಗದ ವಿದ್ಯಾರ್ಥಿಗಳಿಗೆ ಮರುದಿನ ಕಾಲೇಜ್ ನ ನೋಟಿಸ್ ಬೋರ್ಡ್ ನಲ್ಲಿ ಫಲಿತಾಂಶ ನೋಡುವ ಅವಕಾಶ ಇರಲಿದೆ.
ಆನ್ಲೈನ್ ಮೂಲಕ ಫಲಿತಾಂಶ ನೋಡುವುದು ಹೇಗೆ?
ವಿದ್ಯಾರ್ಥಿಗಳು ಫಲಿತಾಂಶ ನೋಡಲು ಇಲಾಖೆ ಅಥವಾ ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.in ಅಥವಾ pue.kar.nic ಗೆ ಭೇಟಿ ನೀಡಬೇಕು. ನಂತರ ನಿಮಗೆ ವೆಬ್ಸೈಟ್ನ(Website) ಮುಖಪುಟದಲ್ಲಿ KSEAB PUC ಫಲಿತಾಂಶ 2024 ಕ್ಕಾಗಿ ಲಿಂಕ್ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಬೇಕು ನಂತರ ನಿಮ್ಮ ಹಾಲ್ ಟಿಕೆಟ್ ನಂಬರ್ ನಮುದಿಸಿದರೆ ನಿಮಗೆ ವೆಬ್ಸೈಟ್ ನಲ್ಲಿ ವಿಷಯವಾರು ಮಾರ್ಕ್ಸ್ ಗಳು ನಿಮ್ಮ percentage ಎಲ್ಲವನ್ನೂ ವೀಕ್ಷಣೆ ಮಾಡಲು ಸಾಧ್ಯವಿದೆ. ಇದನ್ನು downoad ಅಥವಾ print ತೆಗೆದುಕೊಳ್ಳಿ. ಯಾಕೆಂದರೆ ಇದು ನಿಮ್ಮ ಮುಂದಿನ ಹಂತದ ಶಿಕ್ಷಣಕ್ಕೆ ನಿಮ್ಮ ಒರಿಜಿನಲ್ ಮಾರ್ಕ್ಸ್ ಕಾರ್ಡ್ ಸಿಗುವ ವರೆಗೆ ಅನುಕೂಲ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ವಿವರ:- ಈ ವರ್ಷ ಒಟ್ಟು 3.3 ಲಕ್ಷ ಹುಡುಗರು ಮತ್ತು 3.6 ಲಕ್ಷ ಹುಡುಗಿಯರು ಪರೀಕ್ಷೆ ಬರೆದಿದ್ದಾರೆ.
2023 ರ ಉತ್ತೀರ್ಣ ಪ್ರಮಾಣ :- ಕಳೆದ ವರ್ಷ ಎಂದರೆ 2023 ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣ ಆಗಿದ್ದರ್. ಫಲಿತಾಂಶದ ಶೇಕಡಾವಾರು ನೋಡುವುದಾದರೆ ಶೇಕಡಾ 80.25% ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದರು. ಹಾಗೂ ಶೇಕಡಾ 69.05 % ವಿದ್ಯಾರ್ಥಿಗಳ ಪೈಕಿ ಉತ್ತೀರ್ಣರಾಗಿದ್ದರು. ಒಟ್ಟಾರೆ 2023ರಲ್ಲಿ ಉತ್ತೀರ್ಣ ಪ್ರಮಾಣ ಶೇಕಡಾ 74.67 % ಆಗಿತ್ತು. 2023 ರಲ್ಲಿ ಕರ್ನಾಟಕದಲ್ಲಿ ಒಟ್ಟು 7,26,195 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಪ್ರತಿ ವರ್ಷದಂತೆ ಈ ವರುಷವೂ ಸಹ ಮಂಡಳಿಯು ವಯಕ್ತಿಯಕವಾಗಿ ಫಲಿತಾಂಶಗಳನ್ನು ಬಿಡುಗಡೆ ಮಾಡುವ ಜೊತೆಗೆ ಜೊತೆಗೆ, ರಾಜ್ಯದಲ್ಲಿ ಉತ್ತೀರ್ಣದ ಪ್ರಮಾಣ, ಏಷ್ಟು? ರಾಜ್ಯಕ್ಕೆ ಹಾಗೂ ಪ್ರತಿ ಜಿಲ್ಲೆಗೆ ಟಾಪರ್ಸ್ ಯಾರು ಮತ್ತು ಪ್ರಗತಿಯ ಪ್ರಮಾಣ ಏಷ್ಟು ಎಂಬ ಎಲ್ಲಾ ಮಾಹಿತಿಗಳ ಅಂಕಿ ಅಂಶಗಳನ್ನು ಸಹ ಬಿಡುಗಡೆ ಮಾಡಲಿದೆ.
ಪಿಯುಸಿ ಫೇಲ್ ಆದರೆ ಹೋಪ್ ಕಳೆದುಕೊಳ್ಳಬಾರದು:- ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆದರೆ ಖಿನ್ನತೆಗೆ ಒಳಗಾಗಬಾರದು ಮತ್ತು ಭವಿಷ್ಯದ ಬಗ್ಗೆ ನಿರಾಶೆಗೊಳ್ಳಬಾರದು. ಜೀವನದಲ್ಲಿ ಯಶಸ್ಸು ಕಾಣಲು ಇದು ಒಂದು ಅಂತ್ಯವಲ್ಲ. ಈ ಸಂದರ್ಭದಲ್ಲಿ ಕೆಲವು ಉಪಯುಕ್ತ ಸಲಹೆಗಳು ಇಲ್ಲಿವೆ:
- ಫೇಲ್ ಆದ ವಿಷಯಗಳನ್ನು ಪರಿಶೀಲಿಸಲಾಗಿದೆ: ಯಾವ ವಿಷಯಗಳಲ್ಲಿ ಫೇಲ್ ಆಗಿರುವುದನ್ನು ಗುರುತಿಸಿ ಮತ್ತು ಏಕೆ ಫೇಲ್ ಆದೀರಿ ಎಂದು ಯೋಚಿಸಿ.
- ಮತ್ತೆ ಪರೀಕ್ಷೆ ಬರೆಯುವುದು: ಫೇಲ್ ಆದ ವಿಷಯಗಳಲ್ಲಿ ಹೆಚ್ಚುವರಿ ಪರೀಕ್ಷೆ ಬರೆಯಲು ನಿರ್ಧರಿಸಬಹುದು. ಈ ಸಂದರ್ಭದಲ್ಲಿ, ಉತ್ತಮ ತಯಾರಿಗೆ ಒಂದು ಯೋಜನೆಯನ್ನು ರೂಪಿಸಿ.
- ಪರ್ಯಾಯ ಶಿಕ್ಷಣ ಮಾರ್ಗಗಳು: ಪಿಯುಸಿ ಪರೀಕ್ಷೆಯಿಲ್ಲದೆ, ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್ ಕೋರ್ಸ್‌ಗಳಂತಹ ಉನ್ನತ ಶಿಕ್ಷಣಕ್ಕೆ ಹಲವಾರು ಪರ್ಯಾಯ ಮಾರ್ಗಗಳಿವೆ. ನಿಮ್ಮ ಆಸಕ್ತಿ ಮತ್ತು ಕೌಶಲ್ಯಕ್ಕೆ ಸರಿಹೊಂದುವ ಕೋರ್ಸ್ ಅನ್ನು ಆಯ್ಕೆ ಮಾಡಿ.
- ವೃತ್ತಿಪರ ಸಲಹೆ ಪಡೆಯಿರಿ: ಶಿಕ್ಷಣ ತಜ್ಞರು, ವೃತ್ತಿ ಸಲಹೆಗಾರರು ಅಥವಾ ಪೋಷಕರಂತಹ ಖಚಿತವಾದ ವ್ಯಕ್ತಿಗಳಿಂದ ಸಲಹೆ ಪಡೆಯಿರಿ.
ಇದನ್ನೂ ಓದಿ: ನಿಮ್ಮ ಮೊಬೈಲ್ ನಲ್ಲಿ ತರ ತರಹದ Jio ಕಾಲರ್ ಟ್ಯೂನ್ ಉಚಿತವಾಗಿ ಅಳವಡಿಸಬೇಕಾ? ಇಲ್ಲಿದೆ ನೋಡಿ ಸರಳ ಉಪಾಯ!