Ritu Singh: ನಮ್ಮ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ವಿಭಿನ್ನ ಹಾಗೂ ವಿಶೇಷ ಧಾರವಾಹಿಗಳು ಪ್ರಸಾರವಾಗುತ್ತಲೇ ಇವೆ. ಅದ್ರಲ್ಲೂ ವೀಕ್ಷಕರಿಗಂತೂ ಕೆಲವೊಂದು ಧಾರವಾಹಿಗಳು ಬಹಳಷ್ಟು ಅಚ್ಚು ಮೆಚ್ಚಾಗಿ ಬಿಡುತ್ತವೆ. ಇದರ ಜೊತೆ ಕೆಲವೊಂದು ಪಾತ್ರಗಳನ್ನ ವೀಕ್ಷಕರು ನಿಜ ಜೀವನದ ವ್ಯಕ್ತಿಗಳಂತೆ ಪರಿಗಣಿಸಿ ಬಹಳಷ್ಟು ಮೆಚ್ಚಿಕೊಂಡು ಬಿಡುತ್ತಾರೆ. ಅದೇ ರೀತಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಪಾತ್ರ ನಮ್ಮ ವೀಕ್ಷಕರಿಗೆ ಅಲ್ದೇ ಪುಟ್ಟ ಪುಟ್ಟ ಮಕ್ಕಳಿಗೂ ಕೂಡ ಬಹಳ ಇಷ್ಟು. ಸಿಹಿಗಗಿಯೇ ಎಷ್ಟೋ ಜನ ವೀಕ್ಷಕರು ಹಾಗೂ ಚಿಕ್ಕ ಚಿಕ್ಕ ಮಕ್ಕಳು ಧಾರವಾಹಿ ನೋಡೋದು ಇದೆ. ಸದ್ಯ ಸಿಹಿ ಪಾತ್ರಕ್ಕೆ ನೇಪಾಳ ಮೂಲದ ಬಾಲನಟಿ ರಿತು ಸಿಂಗ್ ಜೀವ ತುಂಬುತ್ತಿದ್ದಾರೆ. ಹೌದು ಸಿಹಿಯ ಮಾತು, ನಟನೆ ಎಲ್ಲರಿಗೂ ಇಷ್ಟವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಹಿ ನಟನೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಸೀತಾರಾಮ ಧಾರಾವಾಹಿಯ ಪ್ರೋಮೋ ರಿಲೀಸ್ ಆದಾಗ ವೀಕ್ಷಕರು ಸಿಹಿ ಪಾತ್ರ ನೋಡಿ ಫುಲ್ ಖುಷಿಯಾದರು. ಈಗಂತೂ ದಿನದಿಂದ ದಿನಕ್ಕೆ ಸಿಹಿ ಪಾತ್ರ ವೀಕ್ಷಕರಿಗೆ ಬಹಳಷ್ಟು ಇಷ್ಟ ಆಗುತ್ತಲಿದೆ.
ಹೌದು ಸಿಹಿ ಪಾತ್ರಕ್ಕೆ ಡ್ರಾಮಾ ಜ್ಯೂನಿಯರ್ಸ್ ಶೋ ಖ್ಯಾತಿಯ ರಿತು ಸಿಂಗ್(Ritu Singh) ನೇಪಾಳ ಬಣ್ಣ ಹಚ್ಚಿದ್ದಾರೆ. ಡ್ರಾಮಾ ಜ್ಯೂನಿಯರ್ಸ್ ಶೋನಲ್ಲಿ ಮುದ್ದು ಮುದ್ದಾಗಿ ಮಾತನಾಡುತ್ತ, ಸದಾ ರವಿಚಂದ್ರನ್ ಗರ್ಲ್‌ಫ್ರೆಂಡ್ ನಾನು ಎಂದು ಹೇಳುತ್ತಿದ್ದ ಈ ಪುಟ್ಟ ಪೋರಿ ಈಗ ಸೀತಾರಾಮ ಸೀರಿಯಲ್‌ನ ಕೇಂದ್ರ ಬಿಂದು ಆಗಿದ್ದಾಳೆ. ಸದ್ಯ ನೇಪಾಳ ಮೂಲದ ರಿತು ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಇನ್ನೂ 5 ವರ್ಷ ತುಂಬದ ಈ ಪುಟ್ಟ ಪೋರಿ ನಟನೆಗೆ, ಮುದ್ದು ಮುದ್ದಾದ ಮಾತಿಗೆ ವೀಕ್ಷಕರು ಮನ ಸೋತಿದ್ದಾರೆ. ಅಲ್ದೇ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಸಿಹಿ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ಇದರಲ್ಲಿ ಬಹಳ ವಿಶೇಷ ಅಂದ್ರೆ ಕನ್ನಡವೇ ಗೊತ್ತಿಲ್ಲದ ನೇಪಾಳ ಮೂಲದ ಮಗು ಈಗ ಕನ್ನಡ ಕಲಿತು ನಾನು ಕನ್ನಡದವಳೇ ಅಂತಿರೋದು ಅಷ್ಟೇ ಅತ್ಯದ್ಭುತವಾಗಿ ನಟಿಸುತ್ತಿರೋದು. ಹಾಗಾದ್ರೆ ರಿತು ಸಿಂಗ್ ಮೂಲ ಏನು ಕನ್ನಡ ಕಲಿತದ್ದು ಹೇಗೆ ನೋಡೋಣ ಬನ್ನಿ.
ಧಾರವಾಹಿಯಲ್ಲಿ ರಿತುಸಿಂಗ್ ಪಾತ್ರದ ಹೆಸರು ಸಿಹಿ. ಹೆಸರಿನ ಹಾಗೆ ಈ ಪುಟಾಣಿ ಮಾತು, ವರ್ತನೆ, ಆಟ, ತುಂಟಾಟ, ಹಠ ಎಲ್ಲವೂ ನೋಡುವವರಿಗೆ ಸಿಹಿಯೇ. ಈ ಪುಟಾಣಿ ಈ ಕಾಲದ ಮಕ್ಕಳ ಪ್ರತಿನಿಧಿ ಅನ್ನೋದಕ್ಕೆ ಒಂದು ಮೇಜರ್ ಅಂಶವನ್ನು ತಂದಿದ್ದಾರೆ. ಅದು ಮತ್ತೇನಲ್ಲ, ಈ ಪಾಪುಗೆ ಶುಗರ್ ಇದೆ. ಈ ಕಾಲದ ಬಹಳಷ್ಟು ಮಕ್ಕಳು ಡಯಾಬಿಟಿಕ್ ಆಗಿರೋದು ಎಲ್ಲರಿಗೂ ಗೊತ್ತಿರೋದು. ಅದರಂತೆ ಈ ಪುಟಾಣಿಯೂ ಡಯಾಬಿಟಿಕ್. ಶುಗರ್‌ಗೆ ಈಕೆ ಪ್ರತಿದಿನ ಇಂಜೆಕ್ಷನ್ ತಗೋಬೇಕು. ಹಾಗೆ ಇವಳಿಗೆ ಇಂಜೆಕ್ಷನ್ ಕೊಡುವಾಗ ಇವಳ ಅಮ್ಮ ಸೀತಮ್ಮ ಅಳ್ತಾಳೆ, ಅವಳ ಜೊತೆ ಈ ಸೀರಿಯಲ್ ನೋಡೋ ಪ್ರೇಕ್ಷಕರೂ ಕಣ್ಣೀರು ಹಾಕ್ತಾರೆ. ಆದರೆ ಈ ಪುಟಾಣಿ ಮಾತ್ರ ತಾಯಂತೆ ಅಮ್ಮನನ್ನು ಸಮಾಧಾನ ಮಾಡ್ತಾಳೆ. ಇಂಥದ್ದೊಂದು ಪಾತ್ರಕ್ಕೆ ಬೇರ್ಯಾವ ಮಗು ಬಂದಿದ್ದರೂ ಇಷ್ಟು ಅದ್ಭುತವಾಗಿ ನಟಿಸುತ್ತಿತ್ತೋ ಇಲ್ವೋ ಗೊತ್ತಿಲ್ಲ. ಬಹುಶಃ ಕಷ್ಟ ಅನಿಸುತ್ತೆ. ಆದರೆ ಈ ಪುಟ್ಟ ಕಲಾವಿದೆಯ ಅಭಿನಯಕ್ಕೆ ಮಾರು ಹೋಗದವೇ ಇಲ್ಲ ಅನ್ನಬಹುದು.
ರಿತು ಸಿಂಗ್ ಮೂಲತಹ ನೇಪಾಳಿ ಆದ್ರೂ ಕನ್ನಡ ಕಲಿತದ್ದೇ ವಿಭಿನ್ನ
ಅಂದಹಾಗೆ ಈ ಪಾತ್ರಕ್ಕೆ ಬಣ್ಣ ಹಚ್ಚಿರೋ ಪುಟಾಣಿ ಇಲ್ಲಿಯವಳಲ್ಲ. ಬದಲಿಗೆ ನೇಪಾಳದವಳು. ಇವರ ಪಟ್ಟ ಫ್ಯಾಮಿಲಿ ಈಗ ಬೆಂಗಳೂರಲ್ಲಿ ವಾಸವಾಗಿದ್ದರೂ ಇವರ ಮೂಲ ಮನೆ ಇರೋದು ನೇಪಾಳದಲ್ಲಿ. ಆದ್ರೂ ರಿತು ಕನ್ನಡ ಕಿರುತೆರೆಗೆ ಕಾಲಿಟ್ಟಿದ್ದು ಬಹಳ ವಿಶೇಷ ಅನ್ನಬಹುದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿದ್ದ ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ರಿತೂ ಸಿಂಗ್ ಕನ್ನಡಿಗರ ಗಮನ ಸೆಳೆದಿದ್ದಳು. ರವಿಚಂದ್ರನ್ ಅವರನ್ನು ಬಹಳ ಬಹಳ ಇಷ್ಟಪಡ್ತಿದ್ದ ಈ ಪುಟಾಣಿ ಈಗ ಸೀತಾರಾಮದ ಕೇಂದ್ರಬಿಂದು.
ಇನ್ನು ಈ ಪುಟ್ಟ ಪೋರಿ ಸೀರಿಯಲ್‌ಗೆ ಆಯ್ಕೆ ಆದದ್ದು ಹೇಗೆ ಅನ್ನೋ ಪ್ರಶ್ನೆ ಎಲ್ಲರಿಗೂ ಇದ್ದೆ ಇರುತ್ತೆ. ಹೌದು ನೀವು ಈ ಪುಟ್ಟ ಪೋರಿಯನ್ನ ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ನೋಡಿರ್ತೀರಲ್ಲಿ, ಈ ಕಾರ್ಯಕ್ರಮದಲ್ಲಿ ಈಕೆಯ ಪರ್ಫಾಮೆನ್ಸ್ ನೋಡಿ ಈಕೆಗೆ ಸೀತಾರಾಮದಲ್ಲಿ ಸಿಹಿ ಪಾತ್ರ ಸಿಕ್ಕಿದೆ ಅಂತ ಹೇಳಲಾಗುತ್ತಿದೆ. ಸದ್ಯ ಈ ಪುಟಾಣಿ ಮೊದಲ ಅವಕಾಶದಲ್ಲೇ ಗೆದಿದ್ದು ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡಿದ್ದಾಳೆ. ಪಾತ್ರಕ್ಕೆ ಜೀವ ತುಂಬಿದ್ದು ಮಾತ್ರ ಅಲ್ಲ ಆಕೆಯಿಂದಲೇ ಸೀರಿಯಲ್ ಗೆಲ್ಲುತ್ತಿದೆ ಅನ್ನುವಷ್ಟರ ಮಟ್ಟಿಗೆ ಕನ್ನಡಿಗರಿಗೆ ಮೋಡಿ ಮಾಡಿದ್ದಾಳೆ.
ಇನ್ನು ಈಕೆ ಕನ್ನಡ ಕಲಿತಿದ್ದು ಕೂಡ ಅಷ್ಟೇ ವಿಶೇಷ ರಿತು(Ritu Singh) ಅವ್ರ ಅಪ್ಪ ಅಮ್ಮ ಕೆಲಸ ಅರಸಿ ನೇಪಾಳ ಬಿಟ್ಟು ಬಂದಾಗ ರಿತು ಚಿಕ್ಕ ಮಗು ಹಿಂದಿ ನೇಪಾಳಿ ಬಿಟ್ಟು ಬೇರೆ ಭಾಷೆ ಮಾತಾಡ್ತಿರಲಿಲ್ಲ ಆದ್ರೆ ಅಕ್ಕ ಪಕ್ಕದ ಮನೆಯ ಮಕ್ಕಳ ಜೊತೆಗೆ ಆಟವಾಡಲು ಯಾವಾಗ ರಿತು ಶುರು ಮಾಡ್ತಳೋ ಆಗ ಸ್ವಲ್ಪ ಸ್ವಲ್ಪ ಕನ್ನಡ ಕಲಿಯುತ್ತಾಳೆ ನಂತರ ಅಲ್ಲಿನ ಅಂಗಡಿಯ ಅಂಕಲ್ ಒಬ್ಬರು ರಿತುಗೆ ಕನ್ನಡ ಕಲಿಸುತ್ತಾರೆ. ಇನ್ನು ರಿತು ತಾಯಿ ಅವಳನ್ನ ಡ್ರಾಮಾ ಜೂನಿಯರ್ಸ್ ಗೆ ಕರೆದುಕೊಂಡು ಬಂದಾಗ ಇವಳ ಮಾತಿನ ಮೋಡಿಗೆ ಜಡ್ಜ್ ಸ್ ಫಿಧಾ ಆಗಿ ಸೆಲೆಕ್ಟ್ ಮಾಡ್ತಾರೆ ಅದಾದ ಬಳಿಕ ಇದೀಗ ಕಿರುತೆರೆಯಲ್ಲಿ ಮೋಡಿ ಮಾಡ್ತಿದ್ದಾಳೆ.
ಇದನ್ನೂ ಓದಿ: ಕರೆಂಟ್ ಶಾಕ್ ನಿಂದ 8ತಿಂಗಳ ಮಗು ದಾರುಣ ಸಾವು! ಮೊಬೈಲ್ ಚಾರ್ಜರ್ ಕಚ್ಚಿ ಪ್ರಾಣ ಬಿಡ್ತು ಪುಟ್ಟ ಕಂದ
ಇದನ್ನೂ ಓದಿ: ನನ್ನ ಸ್ವಂತದವರೇ ನನ್ನ ಮಧ್ಯರಾತ್ರಿ ಒಂದು ಹೆಣ್ಣುಮಗಳು ಅಂತ ನೋಡದೆ ಆಚೆ ಹಾಕಿದ್ರು ಕಹಿ ಅನುಭವ ಹಂಚಿಕೊಂಡ ನಟಿ ತನ್ವಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram